Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿರಾಪುಂಜಿ » ಆಕರ್ಷಣೆಗಳು » ಮವ್‍ಸ್ಮೈ ಜಲಪಾತ

ಮವ್‍ಸ್ಮೈ ಜಲಪಾತ, ಚಿರಾಪುಂಜಿ

2

ಮವ್‍ಸ್ಮೈ ಜಲಪಾತವು ಮೇಘಾಲಯದ ಅತ್ಯಂತ ನಯನ ಮನೋಹರವಾದ ಜಲಪಾತವಾಗಿದೆ. ಇದು ಚಿರಾಪುಂಜಿಗೆ ಹೋಗುವ ಹಾದಿಯಲ್ಲಿ, ಮವ್‍ಸ್ಮೈ ಗ್ರಾಮಕ್ಕೆ ಸಮೀಪದಲ್ಲಿ ನೆಲೆಗೊಂಡಿದೆ. ಮವ್‍ಸ್ಮೈ ಜಲಪಾತವು ನೊಹ್ಸಿಂಗಿತಿಯಾಂಗ್ ಜಲಪಾತವೆಂದು ಸಹ ಕರೆಯಲ್ಪಡುತ್ತದೆ. 315 ಮೀಟರ್ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತವು ಭಾರತದ ನಾಲ್ಕನೆಯ ಎತ್ತರವಾದ ಜಲಪಾತವಾಗಿದೆ. ಈ ಜಲಪಾತವು " ಸೆವೆನ್ ಸಿಸ್ಟರ್ ಫಾಲ್ಸ್" ಎಂದೆ ಜನಜನಿತವಾಗಿದೆ. ಏಕೆಂದರೆ ಇಲ್ಲಿ ಏಳು ಚಿಕ್ಕ ಚಿಕ್ಕ ಜಲಪಾತಗಳು ಸುಣ್ಣದ ಕಲ್ಲಿನಿಂದ ಕೂಡಿದ ಬೆಟ್ಟದ ತುದಿಯಿಂದ ಕೆಳಗೆ ಧುಮ್ಮಿಕ್ಕುತ್ತವೆ.

ಬಿಸಿಲಿನಿಂದ ಕೂಡಿದ ಮಳೆ ರಹಿತ ದಿನಗಳಲ್ಲಿ ಈ ಜಲಪಾತವು ನೋಡುಗರ ಕಣ್ಣಿಗೆ ಆನಂದವನ್ನುಂಟು ಮಾಡುತ್ತದೆ. ಆಗ ಇಲ್ಲಿ ಧುಮ್ಮಿಕ್ಕುವ ನೀರು ತನ್ನ ವಿರುದ್ಧ ದಿಕ್ಕಿನಲ್ಲಿ ಬಣ್ಣ ಬಣ್ಣದ ಚಿತ್ತಾರವನ್ನು ಮೂಡಿಸುತ್ತದೆ. ಹಾಗೆಂದು ಮಳೆ ಬೀಳುವಾಗ ಈ ಜಲಪಾತವು ಸುಂದರವಾಗಿ ಕಾಣುವುದಿಲ್ಲ ಎಂದು ಭಾವಿಸಬೇಡಿ. ಆಗ ಜಲಪಾತದ ಬಳಿಯಲ್ಲಿ ಅಥವಾ ನಿಮ್ಮ ಕಾಲ ಅಡಿಯಲ್ಲಿಯೇ ಮೋಡಗಳು ಹಾದು ಹೋಗುವ ಸೋಜಿಗವನ್ನು ನೀವು ಇಲ್ಲಿ ನೋಡಬಹುದು. ಶಿಲ್ಲಾಂಗ್‍ನಿಂದ ಬಸ್ ಅಥವಾ ಕ್ಯಾಬ್ ಮಾಡಿಕೊಂಡು ಬರುವುದು ಇಲ್ಲಿಗೆ ತಲುಪಲು ಅತ್ಯುತ್ತಮ ಮಾರ್ಗವಾಗಿದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue