ಚೌಕೋರಿ ಕಣ್ಮನ ಸೆಳೆಯುವ ಸೌಂದರ್ಯವನ್ನು ಹೊಂದಿರುವ ಪರ್ವತ ಪ್ರದೇಶ. ಇದು ಸಮುದ್ರಮಟ್ಟದಿಂದ 2010 ಮೀಟರ್ ಎತ್ತರದಲ್ಲಿರುವ ಉತ್ತರಾಖಂಡ ರಾಜ್ಯದ ಪಿಥೋರಘರ್‌ನಲ್ಲಿದೆ. ಪಶ್ಚಿಮ ಹಿಮಾಲಯ ಸರಣಿಯ ಈ ಬೆಟ್ಟ ಸಾಲು ಟಿಬೇಟ್‌ನ ಉತ್ತರ ಹಾಗೂ ಟೇರೈನ ದಕ್ಷಿಣ ಗಡಿಭಾಗವೂ ಆಗಿದೆ.
ಹಸಿರು ಪೈನ್, ಓಕ್, ರೋಡೋಡೆನ್ಡ್ರೋನ್ ಮರಗಳಿಂದ ಆವರಿಸಿರುವ ವಿಶೀಷ್ಟ ಕಾಡು ಇಲ್ಲಿನ ವಿಶೇಷ. ಸುಂದರ ತೋಟಗಳು ಇಲ್ಲಿನ ಸೊಬಗನ್ನು ಮತ್ತಷ್ಟು ಹೆಚ್ಚಿಸಿವೆ. ಚೌಕೋರಿಯಲ್ಲಿ ಅನೇಕ ಪುರಾತನ ದೇವಾಲಯಗಳೂ ಇವೆ. ಬೇರಿನಾಗ್ ಹಳ್ಳಿಯಲ್ಲಿರುವ ನಾಗಮಂದಿರ್ ಭೇಟಿ ನೀಡಲೇಬೇಕಾದ ಮಹತ್ವದ ದೇವಾಲಯ. ಸರ್ಪದ ಈ ದೇವಾಲಯವನ್ನು ಬೇನಿವಂಡಲದ ರಾಜ ನಾಗವೇಣಿ ನಿರ್ಮಿಸಿದನೆಂಬ ನಂಬಿಕೆ ಚಾಲ್ತಿಯಲ್ಲಿದೆ.
ಸಮುದ್ರ ಮಟ್ಟದಿಂದ 1350 ಮೀಟರ್ ಎತ್ತರದಲ್ಲಿರುವ ಪಾತಾಳ ಭುವನೆಶ್ವರ ದೇವಾಲಯವನ್ನೂ ಪ್ರವಾಸಿಗರು ವೀಕ್ಷಿಸಬಹುದು. ಈ ಗುಹಾಂತರ ದೇವಾಲಯದಲ್ಲಿ ಹಿಂದೂ ದೇವರು ಶಿವನನ್ನು ಆರಾಧಿಸಲಾಗುತ್ತದೆ. ಚೌಕೋರಿಯು, ಮಹಾಕಾಳಿ ದೇವಾಲಯದಿಂದ ಮತ್ತಷ್ಟು ಪ್ರಸಿದ್ಧಿ ಪಡೆದಿದೆ.
ಭಾರದತ ಕಾಳಿ ಶಕ್ತಿ ಪೀಠಗಳ ಪೈಕಿ ಈ ದೇವಾಲಯವೂ ಒಂದಾಗಿದ್ದು, ಆದಿಗುರು ಶಂಕರಾಚಾರ್ಯರ ಕಾಲದಲ್ಲಿ ಈ ದೇವಾಲಯ ಪ್ರವರ್ಧಮಾನಕ್ಕೆ ಬಂತು ಎನ್ನಲಾಗುತ್ತದೆ. ಇಲ್ಲಿ ಇಂದೂ ದೇವತೆ ಕಾಳಿಯನ್ನು ಆರಾಧಿಸಲಾಗುತ್ತದೆ. ಪಿತೋರ್‌ಘರ್ - ಚಂಡಕ್ ಮೋಟರ್ ರಸ್ತೆಗೆ ಹೊಂದಿಕೊಂಡಿರುವ ಪ್ರವಾಸಿಗರ ವಿಶ್ರಾಂತಿ ತಾಣದ ಬಳಿಯೇ ಇರುವ ಉಲ್ಕಾ ದೇವಿ ದೇವಸ್ಥಾನಕ್ಕೂ ಭೇಟಿ ನೀಡಬಹುದು.
ವಿವಿಧ ದೇವತೆಗಳ ಕಲ್ಲಿನ ಪ್ರತಿಮೆಗಳನ್ನು ನೋಡುವ ಬಯಕೆ ನಿಮ್ಮದಾಗಿದ್ದರೆ ಗುಣಸೇರಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಬಹುದು. ಕಾಮಾಕ್ಷ ದೇವಾಲಯ, ಕೇದಾರ ದೇವಾಲಯ ಮುಂತಾದವು ಚೌಕೋರಿಯ ಪ್ರಸಿದ್ಧ ಶ್ರದ್ಧಾ ಭಕ್ತಿಯ ಕೇಂದ್ರಗಳು.
ಪ್ರವಾಸಿಗರು ಈ ಪ್ರದೇಶಕ್ಕೆ ರೈಲು, ವಿಮಾನ ಹಾಗೂ ರಸ್ತೆ ಮಾರ್ಗಗಳ ಮೂಲಕ ಬರಬಹುದು. ಪಂತನಗರ್ ವಿಮಾನ ನಿಲ್ದಾಣ ಚೌಕೋರಿಗೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣ. ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣ ಸಮೀಪದಲ್ಲೇ ಇರುವ ಮತ್ತೊಂದು ವಿಮಾನ ನಿಲ್ದಾಣ. ರೈಲಿನಲ್ಲಿ ಬರುವುದಾದರೆ ಕಾತ್ಗೊಂಡಮ್ ರೈಲು ನಿಲ್ದಾಣ ಚೌಕೋರಿಗೆ ಸಮೀಪದಲ್ಲಿದೆ. ಇಲ್ಲಿಂದ ಮುಂದೆ ಟ್ಯಾಕ್ಸಿ ಮತ್ತಿತರ ಖಾಸಗಿ ಬಸ್‌ಗಳ ಮೂಲಕ ಸಂಚರಿಸಬೇಕು. ಸುತ್ತಮುತ್ತಲ ಪ್ರಮುಖ ನಗರಗಳಿಂದ ಸಾಕಷ್ಟು ಬಸ್‌ಗಳು ಚೌಕೋರಿಗೆ ಓಡಾಡುತ್ತವೆ. ಸುಂದರವಾದ ಈ ಪರ್ವತ ಪ್ರದೇಶಕ್ಕೆ ಬೇಸಿಗೆ ಅವಧಿಯಲ್ಲಿ ಬಂದು ಆರಾಮಾಗಿ ಸುತ್ತಾಡಬಹುದು.


Click it and Unblock the Notifications