ನೀಲೇಶ್ವರಂ, ಬೇಕಲ್ ನಿಂದ 12 ಕೀ.ಮಿ ದೂರದಲ್ಲಿ ಅಂತರದಲ್ಲಿದೆ. ನೀಲೇಶ್ವರಂ ಈ ಪದವು ’ನೀಲಕಂಠ ಹಾಗೂ ’ಈಶ್ವರ’ ಎಂಬ ಪದದಿಂದ ಉತ್ಪತ್ತಿಯಾಗಿದೆ. ಈ ಸ್ಥಳವು ಪುರಾತನ ಕಾಲದಲ್ಲಿ ನೀಲೇಶ್ವರ ರಾಜರ ಸಾಮ್ರಾಜ್ಯವಾಗಿತ್ತು ಎಂದು ಹೇಳಲಾಗುತ್ತದೆ. ಈ ಸ್ಥಳವು ಸಾಂಸ್ಕೃತಿಕ ಕೇಂದ್ರ ಎಂದು ಗುರುತಿಸಲ್ಪಡುತ್ತದೆ. ಇಲ್ಲಿನ ಪ್ರಮುಖ ಆಕರ್ಷಣೆ ಯೆಂದರೆ ಇಲ್ಲಿನ ಅರಮನೆ. ಈ ಅರಮನೆಯನ್ನು ಪ್ರಾಚ್ಯಶಾಸ್ತ್ರ ಇಲಾಖೆಗೆ ಸೇರಿಸಲಾಗಿದೆ.
ಎಲ್ಲದಕ್ಕಿಂತ ಹೆಚ್ಚಾಗಿ, ನೀಲೇಶ್ವರಂ ಸ್ಥಳವು ಅಲ್ಲಿನ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ನೀವು ಬೆಕಲ್ ಗೆ ಪ್ರವಾಸಕ್ಕಾಗಿ ಬಂದರೆ ಇಲ್ಲಿಗೊಮ್ಮೆ ಭೇಟಿ ನೀಡಿ. ಇಲ್ಲಿನ ಯೋಗ ಹಾಗೂ ಸಂಸ್ಕೃತಿ ಕೇಂದ್ರಗಳಲ್ಲಿ ನಿಮ್ಮ ನ್ನು ನೀವು ಮರೆತು ನಿಮ್ಮ ಯೌವನವನ್ನು ಮರಳಿ ಪಡೆದಂತೆ ಹರ್ಷಗೊಳ್ಳುತ್ತೀರಿ. ಇಲ್ಲಿನ ಹರ್ಬಲ್ (ನೈಸರ್ಗಿಕ) ಹಾಗೂ ಮಣ್ಣಿನ (ಮಡ್) ಸ್ನಾನ ಅತ್ಯಂತ ಹೆಸರುವಾಸಿ ಅಲ್ಲದೇ ದೇಹಕ್ಕೆ ವಿಶ್ರಾಂತಿ ದೊರೆಯುವಂತಹ ನೈಸರ್ಗಿಕ ಚಿಕಿತ್ಸೆಗಳೂ ಇಲ್ಲಿ ದೊರೆಯುತ್ತವೆ. ಪೂರ್ವ ತಡದಲ್ಲಿರುವ ಪಶ್ಚಿಮಘಟ್ಟಗಳು, ಪಶ್ವಿಮದ ಲಕ್ಷದ್ವೀಪ ಇವೆಲ್ಲವೂ ನೀಲೇಶ್ವರಂ ಅನ್ನು, ಪ್ರಕೃತಿಯ ಮಡಿಲಲ್ಲಿರುವಂತೆ ಸೌಂದರ್ಯಗೊಳಿಸಿವೆ. ಹಿನ್ನೀರಿನ ಹರಿವನ್ನೂ ಕೂಡಾ ನೀವಿಲ್ಲಿ ಅನುಭವಿಸಬಹುದು.


Click it and Unblock the Notifications