ಅಂಬಸಮುದ್ರ ಪಟ್ಟಣದ ಪಕ್ಕದಿಂದಲೇ ಹಾದುಹೋಗುವ ನದಿಯ ನೀರು ದೂರದಿಂದ ಕೊಂಚ ಕೆಂಪಗಿದೆ. ನಮ್ಮ ತುಂಗಾನದಿಯ ನೀರಿನಂತೆಯೇ ಅತಿ ಸಿಹಿಯಾಗಿರುವ ಈ ನದಿಯ ನೀರಿನ ರುಚಿಗೆ ಅದರಲ್ಲಿ ಕರಗಿರುವ ತಾಮ್ರದ ಅಂಶ ಕಾರಣ ಎಂದು ನಂಬಲಾಗಿದೆ. ಹಲವಾರು ಗಿಡಮೂಲಿಕೆ ಹಾಗೂ ವಸಸ್ಪತಿಗಳ ಆಗರವಾದ ಪೋಧಿಗೈ ಬೆಟ್ಟಗಳಿಂದ ಹಾದು ಬರುವ ಈ ನೀರಿನಲ್ಲಿ ಹಲವು...
ಈ ಜಲಪಾತವನ್ನು ಸಂದರ್ಶಿಸಲು ಪಾಪನಾಸಂ ದೇವಾಲಯದಿಂದ ಸುಮಾರು ನಾಲ್ಕು ಕಿ.ಮೀ ಯಷ್ಟು ದೂರ ಬೆಟ್ಟದ ಮೇಲೆ ಚಾರಣ ಮಾಡಬೇಕು. ಸುಮಾರು ನೂರು ಮೀಟರ್ ಎತ್ತರದಿಂದ ಧುಮುಕುವ ನದಿ ಬಂಡೆಗಳ ಮೇಲೆ ಬೀಳುವ ರಭಸಕ್ಕೆ ಇರಿಚಲನ್ನು ಉಂಟುಮಾಡುತ್ತದೆ. ಇನ್ನೂ ಕೊಂಚ ಮೇಲಕ್ಕೆ ಚಾರಣ ಮಾಡಿದರೆ ನದಿಯ ಉಗಮಸ್ಥಾನವಾದ ಕಲ್ಯಾಣತೀರ್ಥಂ ಜಲಪಾತವನ್ನೂ...
ಪೊತ್ತಿಗೈ ಬೆಟ್ಟಗಳ ತಪ್ಪಲಿನಲ್ಲಿ ತಮಿರಂಬರಣಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಅಣೆಕಟ್ಟು ಸಹಾ ಪ್ರೇಕ್ಷಣೀಯ ಸ್ಥಳವಾಗಿದೆ. ಅತಿ ವಿಸ್ತಾರದಲ್ಲಿ ಹರಡಿರುವ ಹಿನ್ನೀರು ನಡು ನಡುವೆ ದ್ವೀಪಗಳನ್ನು ಸೃಷ್ಟಿಸಿದ್ದು ಸುಂದರ ದೃಶ್ಯ್ವವನ್ನು ಸೃಷ್ಟಿಸಿದೆ. ಹಿನ್ನೀರಿನಲ್ಲಿ ದೋಣಿವಿಹಾರದ ವ್ಯವಸ್ಥೆಯೂ ಲಭ್ಯವಿದೆ. ಇಲ್ಲಿಂದ...
ಪಶ್ಚಿಮ ಘಟ್ಟಗಳ ಅತ್ಯಂತ ದಕ್ಷಿಣ ಭಾಗದಲ್ಲಿ ಸುಮಾರು ಎಂಟುನೂರು ಚದರ ಕಿ.ಮೀ ವಿಸ್ತಾರದಲ್ಲಿ ಹರಡಿಹೊಂಡಿರುವ ಈ ಅಭಯಾರಣ್ಯದಲ್ಲಿ ಹುಲಿ ಮಾತ್ರವಲ್ಲದೇ ಚಿರತೆ, ನರಿ, ಕತ್ತೆಕಿರುಬ, ಕಾಡುಬೆಕ್ಕು, ವಿವಿಧ ಪ್ರಜಾತಿಯ ಮಂಗಗಳು, ಕಾಡುಹಂದಿಗಳು ಹಾಗೂ ಕೆಲವು ವಿಧಧ ಜಿಂಕೆಗಳೂ ಆಶ್ರಯ ಪಡೆದಿವೆ. 81 ವಿಧದ ಸರೀಸೃಪಗಳು, 37 ವಿಧದ...
ಮುಂದಂತುರೈ-ಕಾಲಕಾಡ್ ಹುಲಿ ಧಾಮದ ನಡುವೆ ಇರುವ ಈ ಅಣೆಕಟ್ಟು ಅಭಯಾರಣ್ಯದ ಒಂದು ಭಾಗವೂ ಹೌದು. ಗಾತ್ರಕ್ಕೆ ಹೋಲಿಸಿದರೆ ಇತರ ಅಣೆಕಟ್ಟುಗಳಿಗಿಂತ ತೀರಾ ಚಿಕ್ಕದಿರುವ ಈ ಸ್ಥಳದ ಆಕರ್ಷಣೆ ಎಂದರೆ ದೋಣಿವಿಹಾರ. ಹದಿನೈದು ಜನರು ಕುಳಿತುಕೊಳ್ಳಬಹುದಾದ ದೋಣಿಯಲ್ಲಿ ಅರ್ಧ ಘಂಟೆಯ ಒಂದು ಸುತ್ತು ಬರಲು ಅರಣ್ಯ ಇಲಾಖೆ ವಿಧಿಸುವುದು...
ಸುಂದರ ಟೀ ಎಸ್ಟೇಟುಗಳಿಂದ ತುಂಬಿರುವ ಬೆಟ್ಟಗಳ ಶೃಂಗಭಾಗದಲ್ಲಿದೆ ಮಂಜೊಳೈ ಗಿರಿಧಾಮ. ಸಮುದ್ರಮಟ್ಟದಿಂದ 1162 ಮೀಟರ್ ಎತ್ತರವಿರುವ ಈ ಸ್ಥಳ ಬೇಸಿಗೆಯ ಹೊರತು ಸದಾ ತಂಪಾಗಿರುತ್ತದೆ. ಅನತಿದೂರದಲ್ಲಿರುವ ಬೆಟ್ಟದ ಅಂಚಿನ ಸ್ಥಳವಾದ ಕುತಿರವೆಟ್ಟಿ ಎಂಬಲ್ಲಿ ರಭಸವಾಗಿ ಬೀಸುವ ಗಾಳಿ ವಿಭಿನ್ನ ಅನುಭವ ನೀಡುತ್ತದೆ. ಈ...
ಅಗಸ್ತಿಯರ್ ಜಲಪಾತದ ಬಳಿ ಇರುವ ಈ ಊರಿಗೆ ಜನರು ಕಿರಿದಾಗಿ ವಿಕೆ ಪುರಂ ಎಂದೂ ಕರೆಯುತ್ತಾರೆ. (ನಮ್ಮಲ್ಲಿ ನರಸಿಂಹರಾಜಪುರ ಎನ್ನಾರ್ ಪುರ ಆಗಿಲ್ಲವೇ ಹಾಗೇ). ಈ ಊರಿನಲ್ಲಿ ವಿವಿಧ ಧರ್ಮದ ಜನರು ಸಹಬಾಳ್ವೆ ನಡೆಸುತ್ತಾ ಬಂದಿದ್ದಾರೆ. ಅಂತೆಯೇ ಈ ಊರಿನಲ್ಲಿ ಹಲವಾರು ದೇವಾಲಯಗಳ ಜೊತೆಗೆ ಸುಂದರ ಚರ್ಚುಗಳೂ ಇವೆ. ಶಿವನ್ ದೇವಾಲಯ,...
ಮೆಲಸೇವಲ್ ಗ್ರಾಮದಲ್ಲಿ ಒಟ್ಟು ಮೂರು ದೇವಾಲಯಗಳಿವೆ. ನವನೀತಕೃಷ್ಣನ್ ದೇವಾಲಯದ ಹೊರತಾಗಿ ಇರುವ ಈ ಎರಡು ದೇವಾಲಯಗಳ ಬಗ್ಗೆ ಯಾವುದೇ ಮಾಹಿತಿ ಇದುವರೆಗೆ ತಿಳಿದುಬಂದಿಲ್ಲ.
ಮೆಲಸೇವಲ್ ಗ್ರಾಮದಲ್ಲಿ ಒಟ್ಟು ಮೂರು ದೇವಾಲಯಗಳಿವೆ. ನವನೀತಕೃಷ್ಣನ್ ದೇವಾಲಯದ ಹೊರತಾಗಿ ಇರುವ ಈ ಎರಡು ದೇವಾಲಯಗಳ ಬಗ್ಗೆ ಯಾವುದೇ ಮಾಹಿತಿ ಇದುವರೆಗೆ ತಿಳಿದುಬಂದಿಲ್ಲ.
1942ರಲ್ಲಿ ಕೃಷಿಬಳಕೆಯ ಉದ್ದೇಶದಿಂದ ಕಟ್ಟಲಾದ ಈ ಅಣೆಕಟ್ಟಿನಲ್ಲಿ ಬಳಿಕ, ಅಂದರೆ 1944ರಿಂದ 1951ರ ವರೆಗೆ ನಾಲ್ಕು ಫ್ರಾನ್ಸಿಸ್ ಟರ್ಬೈನ್ ಗಳನ್ನು ಅಳವಡಿಸುವ ಮೂಲಕ ಜಲವಿದ್ಯುತ್ ಉತ್ಪಾದನೆಯನ್ನೂ ನಡೆಸಲಾಗುತ್ತಿದೆ. ಪ್ರಸ್ತುತ 32 ಮೆಗಾವ್ಯಾಟುಗಳಷ್ಟು ವಿದ್ಯುತ್ತನ್ನು ಉತ್ಪಾದಿಸಲಾಗುತ್ತಿದೆ. ಅಣೆಕಟ್ಟಿನ ನೀರಿನಿಂದ...
ಅಂಬಸಮುದ್ರಂ ಪಕ್ಕದಲ್ಲಿರುವ ಪಶ್ಚಿಮಘಟ್ಟಗಳಲ್ಲಿರುವ ಪೊತ್ತಿಗೈ ಬೆಟ್ಟಗಳ ಮೂಲಕ ಹರಿದುಬರುವ ತಮಿರಂಬರಣಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಅಣೆಕಟ್ಟು. ಈ ಪ್ರದೇಶದಲ್ಲಿ ಸಂತ ಅಗಸ್ತಿಯರ್ ರಿಗೆ ಶಿವ ಪಾರ್ವತಿಯರು ಪ್ರತ್ಯಕ್ಷರಾಗಿದ್ದರು ಎಂಬ ಪ್ರಪೀತಿಯಿರುವುದರಿಂದ ಧಾರ್ಮಿಕ ಮಹತ್ವವನ್ನೂ ಪಡೆದುಕೊಂಡಿದೆ. ಈ ಭೇಟಿಯ ಕುರುಹಾಗಿ...