ಅಲ್ವಾರಿನ ಚರ್ಚ್ ರಸ್ತೆಯಲ್ಲಿರುವ ಗಡಿಯಾರ ಗೋಪುರವು ಒಂದು ಸ್ಮಾರಕವಾಗಿದೆ. ಗೋಪುರದ ಕೊನೆಯಲ್ಲಿ ನಾಲ್ಕೂ ಕಡೆಗೆ ಗಡಿಯಾರವಿದೆ. ಇದನ್ನು ತುಂಬಾ ದೂರದಿಂದಲೂ ನೋಡಬಹುದು ಮತ್ತು ಅಲ್ವಾರಿಗೆ ಬರುವ ಪ್ರವಾಸಿಗರಿಗೆ ಇದು ಆಕರ್ಷಕ ಸ್ಥಳವಾಗಿದೆ. ಗೋಪುರದ ಕೆಳಭಾಗವು ಸೌಂದರ್ಯಪ್ರಜ್ಞೆಯ ವಾಸ್ತುಶಿಲ್ಪವನ್ನು ಹೊಂದಿದೆ ಮತ್ತು ಮಧ್ಯಭಾಗದಲ್ಲಿ ಕೆಲವು ದೇಶಭಕ್ತಿಯ ಸಾಲುಗಳನ್ನು ಹೊಂದಿದೆ. ಈ ಪುರಾತನ ಗೋಪುರವು ಚೌರಾಹ್, ಹಳೆ ಮಾರುಕಟ್ಟೆ ಮತ್ತು ಸುತ್ತಲಿನ ಸ್ಥಳೀಯ ಭಾಗದ ಮಧ್ಯದಲ್ಲಿ ನಿಂತಿದೆ. ಪುರಾತನ ರಜಪೂತರ ವಾಸ್ತುಶಿಲ್ಪಕ್ಕೆ ಇದೊಂದು ಅತ್ಯುತ್ತಮ ಮಾದರಿಯಾಗಿದೆ.