Search
  • Follow NativePlanet
Share
ಮುಖಪುಟ » ಸ್ಥಳಗಳು » ವೆಸ್ಟ್ ಗಾರೊ ಹಿಲ್ಸ್ » ಆಕರ್ಷಣೆಗಳು » ತುರಾ

ತುರಾ, ವೆಸ್ಟ್ ಗಾರೊ ಹಿಲ್ಸ್

1

ತುರಾವು ಪಶ್ಚಿಮ ಗರೊ ಬೆಟ್ಟಗಳ ಜಿಲ್ಲಾ ಕೇಂದ್ರವಾಗಿದೆ. ಇದು ಮೇಘಾಲಯದ ಎರಡನೆ ಅತಿ ದೊಡ್ಡ ಪಟ್ಟಣವಾಗಿದೆ. ಈ ಪಟ್ಟಣವು ತುರಾ ಶೃಂಗದ ಕೆಳಗೆ ನೆಲೆಗೊಂಡಿರುವ ಟುರ ಬೆಟ್ಟಗಳ ಮೇಲೆ ನೆಲೆಗೊಂಡಿದೆ. ಈ ಬೆಟ್ಟಗಳಿಗೆ ಇಲ್ಲಿನ ಸ್ಥಳೀಯ ದೇವತೆಯಾದ ಡುರಮದಿಂದಾಗಿ ತುರಾ ಎಂಬ ಹೆಸರು ಬಂದಿದೆ. ಈ ದೇವತೆಯು ಈ ಬೆಟ್ಟಗಳಲ್ಲಿ ವಾಸಿಸುತ್ತ, ಇಲ್ಲಿನ ಜನಗಳಿಗೆ ತನ್ನ ಆಶೀರ್ವಾದವನ್ನು ನೀಡುತ್ತ ಬರುತ್ತಿದ್ದಾಳೆ ಎಂಬ ನಂಬಿಕೆ ಇಲ್ಲಿ ನೆಲೆಗೊಂಡಿದೆ. ಡುರಮ ಎಂಬ ಹೆಸರು ಇಲ್ಲಿನ ಆಡಳಿತದ ಚುಕ್ಕಾಣಿ ಹಿಡಿದ ಬ್ರಿಟೀಷರ ಬಾಯಿಯಲ್ಲಿ ಅಪಭ್ರಂಶದ ರೂಪ ತಾಳಿ ಕ್ರಮೇಣ ತುರಾ ಎಂದು ಬದಲಾಯಿತು.

ಈ ಸುಂದರವಾದ ಪಟ್ಟಣವು ತನ್ನ ಸುತ್ತಲೂ ಚಿಕ್ಕ ಚಿಕ್ಕದಾದ ಮತ್ತು ಹಚ್ಚ ಹಸಿರಿನಿಂದ ಕೂಡಿದ ಕಣಿವೆಗಳಿಂದ ಕೂಡಿ ನಯನ ಮನೋಹರವಾಗಿ ಕಾಣುತ್ತದೆ. ಈ ಪಟ್ಟಣವು ಬಲ್ಪಕ್ರಂ, ನೊಕ್ರೆಕ್ ಮತ್ತು ಸಿಜು ಗುಹೆಗಳಂತಹ ಬಗೆ ಬಗೆಯ ಪ್ರವಾಸಿ ತಾಣಗಳಿಂದ ಆಗಮಿಸುವವರಿಗೆ ಅತ್ಯಂತ ಪ್ರಶಸ್ತವಾದ ನೆಲೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಪಟ್ಟಣದ ಸುತ್ತ ಮುತ್ತ ಹಲವಾರು ಜಲಪಾತಗಳು ನೆಲೆಗೊಂಡಿದ್ದು, ವರ್ಷಪೂರ್ತಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿರುತ್ತದೆ. ಇದರ ಜೊತೆಗೆ ಪಶ್ಚಿಮ ಗರೊ ಬೆಟ್ಟಗಳಲ್ಲಿ ತಯಾರಿಸಿದ ಸ್ಥಳೀಯ ಕರಕುಶಲ ವಸ್ತುಗಳು ಮತ್ತು ಆಭರಣಗಳನ್ನು ಖರೀದಿಸಲು ಈ ಪಟ್ಟಣವು ಹೇಳಿ ಮಾಡಿಸಿದ ತಾಣವಾಗಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu