Search
  • Follow NativePlanet
Share
ಮುಖಪುಟ » ಸ್ಥಳಗಳು » ವಯನಾಡ್ » ಆಕರ್ಷಣೆಗಳು » ಸರಪಣಿ ಮರ

ಸರಪಣಿ ಮರ, ವಯನಾಡ್

2

ಸರಪಣಿ ಮರವು ವಯನಾಡಿನ ಜನಪ್ರಿಯ ಪ್ರವಾಸಿ ತಾಣವಾಗಿದೆ. ಅದರಲ್ಲಿಯು ಈ ಸ್ಥಳಕ್ಕೆ ತಳುಕು ಹಾಕಿಕೊಂಡಿರುವ ಕಥೆಯಿಂದಾಗಿ ಇದು ಮತ್ತಷ್ಟು ಜನಪ್ರಿಯವಾಗಿದೆ. ಇಲ್ಲೊಂದು ಬೃಹತ್ತಾದ ಫೈಕಸ್ ಮರವಿದ್ದು, ಅದು ಪ್ರಪಂಚದ ಎಲ್ಲೆಡೆಯಿಂದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ.

ದಂತಕಥೆಗಳ ಪ್ರಕಾರ ಬ್ರಿಟೀಷ್ ಇಂಜಿನಿಯರೊಬ್ಬನು ಕಡಿದಾದ ಬೆಟ್ಟಗಳನ್ನು ಹಾದು ವಯನಾಡಿಗೆ ತಲುಪಲು ಕರಿಂದಂಡನ್ ಎಂಬ ಸ್ಥಳೀಯ ಮಾರ್ಗದರ್ಶಿಯನ್ನು ಗೊತ್ತುಮಾಡಿಕೊಂಡನು. ಇವರಿಬ್ಬರು ವಯನಾಡಿಗೆ ತಲುಪಿದ ಮೇಲೆ ಆ ಇಂಜಿನಿಯರ್, ವಯನಾಡನ್ನು ಕಂಡುಹಿಡಿದ ಸಂಪೂರ್ಣ ಪ್ರಶಂಸೆಯನ್ನು ಮತ್ತು ಖ್ಯಾತಿಯನ್ನು ತಾನೆ ಗಳಿಸಬೇಕೆಂಬ ದುರಾಸೆಯಿಂದ  ಮಾರ್ಗದರ್ಶಿಯನ್ನು ಕೊಂದು ಹಾಕಿದನು. ಆ ನಂತರ ಆ ಮಾರ್ಗದರ್ಶಿಯ ಆತ್ಮವು ಆತನನ್ನು ಮತ್ತು ಇತರ ಪ್ರವಾಸಿಗರನ್ನು ಕಾಡಲು ಶುರುಮಾಡಿತು. ಕಡೆಯದಾಗಿ ಒಬ್ಬ ಪೂಜಾರಿಯು ಒಂದು ಸರಪಣಿಯನ್ನು ತೆಗೆದುಕೊಂಡು ಆ ಆತ್ಮವನ್ನು ಬಂಧಿಸಿ ಈ ಮರಕ್ಕೆ ಕಟ್ಟಿದನಂತೆ. ಹಾಗಾಗಿ ಈ ಮರಕ್ಕೆ ಸರಪಣಿ ಮರ ಎಂಬ ಹೆಸರು ಬಂದಿತು. ಈಗಲು ಈ ಫೈಕಸ್ ಮರದಲ್ಲಿ ಸರಪಣಿ ನೇತಾಡುತ್ತಿರುವುದನ್ನು ನೀವು ಗಮನಿಸಬಹುದು. ಹೀಗೆ ಈ ಸರಪಣಿಯು ಸಾವಿರಾರು ಪ್ರವಾಸಿಗರನ್ನು ಪ್ರತಿ ವರ್ಷ ತನ್ನತ್ತ ಆಕರ್ಷಿಸುತ್ತಿದೆ.

ನೀವು ದೆವ್ವ ಭೂತಗಳ ಕಥೆಗಳನ್ನು ನಂಬದಿದ್ದರು ಇಲ್ಲಿನ ನಯನ ಮನೋಹರ ಪರಿಸರದ ನೋಟವನ್ನು ಸವಿಯುವ ಸಲುವಾಗಿಯಾದರು ನೀವು ಒಮ್ಮೆ ಇಲ್ಲಿಗೆ ಭೇಟಿಕೊಡಬೇಕು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed