ಮೊರ್ದಾನಾ ಜಲಾಶಯ ವೆಲ್ಲೂರಿನಲ್ಲಿದ್ದು ಗುಡಿಯಥಂ ನಿಂದ 8 ಕಿ.ಮೀ ದೂರದಲ್ಲಿದೆ. ಗುಡಿಯಥಂ ವೆಲ್ಲುರು ಜಿಲ್ಲೆಯ ಒಂದು ಸ್ಥಳವಾಗಿದ್ದು ವೆಲ್ಲೂರಿನಿಂದ 31 ಕಿ.ಮೀ ದೂರದಲ್ಲಿದೆ. ಇದು 220 ಮೀಟರ್ ಉದ್ದ ಹಾಗೂ 33 ಮಿಟರ್ ಎತ್ತರವಿದೆ. ಇದನ್ನು ನಿರ್ಮಾಣ ಮಾಡಬೇಕೆಂದಿದ್ದ ಗುರಿಗಿಂತ ಹತ್ತು ತಿಂಗಳು ಮೊದಲೇ 2000 ದಲ್ಲಿ ಇದನ್ನು ನಿರ್ಮಿಸಲಾಯಿತು. ಇದು ನಿಸರ್ಗ ಸಹಜ ಸೌಂದರ್ಯ ಸವಿಯಲು ಸೂಕ್ತ ಸ್ಥಳವಾಗಿದೆ. ಇದು ಎರಡು ಬೆಟ್ತಗಳ ಮಧ್ಯೆ ಕಟ್ಟಿದ ಜಲಾಶಯವಾಗಿದೆ. ಕೌಂಡಿನ್ಯ ವನ್ಯಿಜೀವಿ ಅಭಯಾರಣ, ವೆಂಕಟೇಶ್ವರ ಸ್ವಾಮೀ ದೇವಾಲಯ, ಮತ್ತು ಕಾನಿಪಕ್ಕಂ ಇಲ್ಲಿಗೆ ಸಮೀಪ ಇರುವ ಭೇಟಿ ನೀಡಬಹುದಾದ ಸ್ಥಳಗಳಾಗಿವೆ.


Click it and Unblock the Notifications