Search
  • Follow NativePlanet
Share
ಮುಖಪುಟ » ಸ್ಥಳಗಳು» ವಾಸ್ಕೊ ಡಾ ಗಾಮಾ

ವಾಸ್ಕೊ ಡಾ ಗಾಮಾ : ಆಕರ್ಷಣೆಗಳ ಬೀಡು

7

ಮರ್ಮಗೋವಾ 'ಪೆನಿನ್ಸುಲಾ' ಭಾಗದಲ್ಲಿರುವ ಪಣಜಿಗಿಂತಲೂ ದೊಡ್ಡದಾಗಿರುವ ಪಟ್ಟಣವೆಂದರೆ ವಾಸ್ಕೊ ಡಾ ಗಾಮಾ. ಇದು ಗೋವಾದ ಆರ್ಥಿಕ ಮಾರುಕಟ್ಟೆಯ ಮುಖ್ಯ ಭಾಗವೆಂದರೂ ತಪ್ಪಾಗಲಾರದು. ಸ್ಥಳೀಯವಾಗಿ ಕೇವಲ ವಾಸ್ಕೊ ಎಂದೇ ಕರೆಯಲ್ಪಡುವ ಈ ಪಟ್ಟಣವು ವೇಗವಾಗಿ ಬೆಳೆಯುತ್ತಿರುವ ಪ್ರದೇಶವಾಗಿದ್ದು ಇದಕ್ಕೆ ಮುಖ್ಯ ಕಾರಣವೆಂದರೆ ಇದು ವಿಮಾನ ನಿಲ್ದಾಣಕ್ಕೆ ಹತ್ತಿರವಿದ್ದು ಅತಿ ನಿರರ್ಗಳವಾದ ಮಾರ್ಗ ಹೊಂದಿರುವುದಾಗಿದೆ.

ಏಕೆಂದರೆ ಗೋವಾದ ಬಹುತೇಕ ಕರಾವಳಿ ಭಾಗಗಳು ಇಕ್ಕಟ್ಟಾಗಿರುವ ರಸ್ತೆಗಳನ್ನು ಹೊಂದಿರುವುದು ಗಮನಿಸಬೇಕಾದ ವಿಷಯ. ಇಷ್ಟೆ ಅಲ್ಲ ಇದು ಹಲವಾರು 'ಬಾಲಿವುಡ್' ಚಿತ್ರಗಳಿಗೂ ಕೂಡ ಆತಿಥೇಯವಾಗಿ ಮೆರೆದಿದೆ. ಇಲ್ಲಿ ಕಾಣಬಹುದಾದ ಪ್ರಸಿದ್ಧ ಕಡಲ ತೀರಗಳೆಂದರೆ ಬೈನಾ, ಹಂಸಾ, ಬೊಗ್ಮಾಲೊ ಮತ್ತು ಅತಿ ವಿಚಿತ್ರವಾದ ಹೆಸರು ಹೊಂದಿದಂತಹ 'ಗ್ರ್ಯಾಂಡ್ ಮದರ್ಸ್ ಹೋಲ್'. ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಈ ಕಡಲ ತೀರಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ! ಬನ್ನಿ...ಇನ್ನು 'ಗ್ರ್ಯಾಂಡ್ ಮದರ್ಸ್ ಹೋಲ್'ಗೆ ಈ ರೀತಿಯಾಗಿ ಪೇಚಾಟ ಭರಿತವಾದ ಹೆಸರು ಬರಲು ಹಿಂದಿರುವ ಕಾರಣ ತಿಳಿಯೋಣ.

ಮೂಲತಹವಾಗಿ ಇದೊಂದು ಚಿಕ್ಕದಾದ ನೈಸರ್ಗಿಕ ಕಡಲ ತೀರವಾಗಿದ್ದು ಇದನ್ನು ತಲುಪಲು 'ಫೊರ್ಟಾಲೆಜಾ ಸಾಂಟಾ ಕ್ಯಾಥರೀನಾ' ಕೋಟೆಯ ಅವಶೇಷಗಳ ಮಧ್ಯೆ ಇಕ್ಕಟ್ಟಾಗಿರುವ ಜಾಗದ ಮುಖಾಂತರ ತೆವಳಿಕೊಂಡು ಹೋಗಬೇಕು. ದಂತಕಥೆಯ ಪ್ರಕಾರ 'ಗ್ರ್ಯಾಂಡಮಾ' ಅಂದರೆ ಅಜ್ಜಿಯು ಕಡಲ ತೀರದಲ್ಲಿ ಚಟುವಟಿಕೆಯಲ್ಲಿ ನಿರತ ಮಕ್ಕಳ ಹಿಂದಿರುವಿಕೆಗೆ ಈ ಜಾಗದಲ್ಲಿ ಕಾಯುತ್ತಿದ್ದಳು. ಅದರಿಂದ ಇದಕ್ಕೆ ಈ ರೀತಿಯಾಗಿ ಹೆಸರು ಬಂತೆಂದು ಹೇಳಲಾಗುತ್ತದೆ.ಇಲ್ಲಿಯ ಬೊಗ್ಮಾಲೊ ಬೀಚ್ ನ ಹತ್ತಿರವಿರುವ 'ನವಲ್ ಅವಿಯೇಷನ್' ಸಂಗ್ರಹಾಲಯವು ಅಪರಾಹ್ನದ ಸಮಯ ಕಳೆಯಲು ಪ್ರಶಸ್ತವಾಗಿದೆ.

ಇಲ್ಲಿ ಗೋವಾದ ಅಂದಿನ ಪೋರ್ಚುಗೀಸರ ಕಾಲದಿಂದ ಹಿಡಿದು ಇಂದಿನ ವರೆಗಿನ ನೌಕಾ ಪಡೆಯ ಇತಿಹಾಸವನ್ನು ಕಾಣಬಹುದು. ಈ ಸಂಗ್ರಹಾಲಯವು ಭಾರತೀಯ ನೌಕಾ ಪಡೆಯ ನಿಮಾನುಗಳ ಬೆಳವಣಿಗೆಯನ್ನೂ ಸಹ ಅದ್ಭುತವಾಗಿ ಪ್ರದರ್ಶಿಸುತ್ತದೆ.   ವರ್ಕಾ ಕಡಲ ತೀರದ ಹತ್ತಿರದಲ್ಲಿ, 1624 ರಲ್ಲಿ ನಿರ್ಮಿತವಾದ ಮರ್ಮಗೋವಾ ಕೋಟೆಯಿದ್ದು ಇದನ್ನು ಮಾರ್ಗೊ ಬಂದರಿನಿಂದಲೂ ಸಹ ಕಾಣಬಹುದಾಗಿದೆ.

ಐತಿಹಾಸಿಕವಾಗಿ ಮಹತ್ವವನ್ನು ಪಡೆದಿರುವ ಈ ಕೋಟೆಯಲ್ಲಿ ಉತ್ತಮವಾಗಿ ಸಂರಕ್ಷಿಸಲ್ಪಟ್ಟ ಬರಹಗಳನ್ನು ಕಾಣಬಹುದಾಗಿದ್ದು ಕಡಲ ತೀರಗಳ ಹೊರತಾಗಿ ಅನ್ವೇಷಿಸಬಲ್ಲ ಯೋಗ್ಯ ಸ್ಥಳವಾಗಿದೆ. ಹೆಚ್ಚಿನ ಮಾಹಿತಿಗಳೇನಾದರು ಬೇಕಾದಲ್ಲಿ ಗೈಡ್ ಗಳಿಗೇನೂ ಇಲ್ಲಿ ಕೊರತೆಯಿಲ್ಲ. ಇನ್ನು ಮರಾಠರ ನಾಯಕನಿಗೆ ಸಮರ್ಪಿತವಾದ ಶಿವಾಜಿ ಕೋಟೆಯು ಕೂಡ ವಾಸ್ಕೊದಲ್ಲಿದ್ದು ಇಲ್ಲಿಂದ ಅದ್ಭುತವಾದ ನಗರದ ದೃಶ್ಯಗಳನ್ನು ವೀಕ್ಷಿಸಬಹುದು.

'ಗ್ರ್ಯಾಂಡ್ ಮದರ್ಸ್ ಹೋಲ್' ಬೀಚ್ ನಿಂದ ಯಾವಾಗಲೂ ಜನದಟ್ಟಣೆಯಿಂದ ಕೂಡಿರುವ, ಶಾಪಿಂಗ್ ಗೆ ಹೆಸರುವಾಸಿಯಾದ ಡೊನಾ ಪೌಲಾಗೆ ಫೆರ್ರಿಯ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ವಾಸ್ಕೊಗೆ ಹೋಗುವುದು ಬಹಳ ಸುಲಭವಾಗಿದೆ. ವಾಸ್ಕೊ ಡಾ ಗಾಮಾ ರೈಲು ನಿಲ್ದಾಣವು ಹಲವು ರೈಲುಗಳ ಉತ್ತಮ ಸಂಪರ್ಕ ಹೊಂದಿದೆ.

ಇನ್ನು ದಾಬೋಲಿಮ್ ವಿಮಾನ ನಿಲ್ದಾಣವು ಇಲ್ಲಿಂದ 4 ಕಿ.ಮೀ ಅಂತರದಲ್ಲಿದ್ದು ಅಲ್ಲಿಂದ ಮುಂಬೈ, ದೆಹಲಿಯಂತಹ ದೊಡ್ಡ ಶೆಹರುಗಳಿಗೆ ವಿಮಾನಗಳು ದೊರೆಯುತ್ತವೆ. ಪಣಜಿಯಿಂದ ದಾಬೋಲಿಮ್ ಗೆ ಹೋಗಲು ಅಥವಾ ಬರಲು ವೊಲ್ವೊ ಬಸ್ಸಿನಿಂದ ಹಿಡಿದು ಕ್ಯಾಬಗಳೂ ಸಹ ಲಭ್ಯವಿವೆ.

ವಾಸ್ಕೊ ಡಾ ಗಾಮಾ ಪ್ರಸಿದ್ಧವಾಗಿದೆ

ವಾಸ್ಕೊ ಡಾ ಗಾಮಾ ಹವಾಮಾನ

ಉತ್ತಮ ಸಮಯ ವಾಸ್ಕೊ ಡಾ ಗಾಮಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ವಾಸ್ಕೊ ಡಾ ಗಾಮಾ

  • ರಸ್ತೆಯ ಮೂಲಕ
    ಪ್ರಸಿದ್ಧ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ರ ಮೂಲಕ ಗೋವಾ ತಲುಪಬಹುದು. ಆದರೆ ಇತ್ತಿಚೆಗೆ, ಈ, ಟು ಲೇನ್ ಹೆದ್ದಾರಿಯು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಕುಖ್ಯಾತಿಗೊಳಗಾಗಿದ್ದು, ಮುಂಬೈನಿಂದ ಪುಣೆ, ಸತಾರಾ ಹಾಗು ಸಾವಂತವಾಡಿಯ ಮೂಲಕ ಪ್ರಯಾಣಿಸಬಹುದಾಗಿದೆ. ಮುಂಬೈ, ಪುಣೆಗಳಿಂದ ಹಲವಾರು ಬಸ್ ಸೇವೆಗಳು ಕೂಡ ಗೋವಾಗೆ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಗೋವಾ, ಭಾರತದ ಉತ್ತರ, ದಕ್ಷಿಣ ಮತ್ತು ಕೇಂದ್ರ ಭಾಗಗಳಿಗೆ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ. ಮುಂಬೈ ನಿಂದ ಗೋವಾಗೆ ಅನುಕೂಲಕರವಾದ ಆಗಮನ ಮತ್ತು ನಿರ್ಗಮನ ವೇಳೆಗಳನ್ನು ಹೊಂದಿದ ಹಲವಾರು ರೈಲುಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣವು ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಸಾಕಷ್ಟು ಕ್ಯಾಬ್ ಗಳು ದೊರೆಯುತ್ತವೆ. ಮತ್ತೊಂದು ಸಂಗತಿಯೆಂದರೆ ಈ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ನಿಲ್ದಾಣವಿಲ್ಲದ್ದರಿಂದ, ಹೊರದೇಶದ ಪ್ರವಾಸಿಗರು ಮುಂಬೈ ಅಥವಾ ದೆಹಲಿಗೆ ಬಂದು ಇಲ್ಲಿ ಬರಬೇಕಾಗುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
09 May,Sat
Return On
10 May,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 May,Sat
Check Out
10 May,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 May,Sat
Return On
10 May,Sun