Search
  • Follow NativePlanet
Share
ಮುಖಪುಟ » ಸ್ಥಳಗಳು » ವಾಸ್ಕೊ ಡಾ ಗಾಮಾ » ಆಕರ್ಷಣೆಗಳು » ಮರ್ಮಗೋವಾ ಕೋಟೆ

ಮರ್ಮಗೋವಾ ಕೋಟೆ, ವಾಸ್ಕೊ ಡಾ ಗಾಮಾ

1

1624 ರಲ್ಲಿ ಪೋರ್ಚುಗೀಸರಿಂದ ನಿರ್ಮಾಣ ಮಾಡಲ್ಪಟ್ಟ ಸಮುದ್ರ ತೀರದ ಈ ಕೋಟೆಯು, ಸಮುದ್ರ ದಾಳಿಗಳ ವಿರುದ್ಧ ಪೋರ್ಚುಗೀಸರಿಗಿದ್ದ ಪ್ರಾಬಲ್ಯವನ್ನು ಮೇರೆಯುತ್ತಿದೆ ಮತ್ತು ಆಕರ್ಷಣಿಯ ತಾಣವಾದ ವರ್ಕಾ ಬೀಚನ ಹತ್ತಿರವಿದೆ. ವಾಸ್ಕೊ ಡಾ ಗಾಮಾ, ಮಾರ್ಗೊ ಮತ್ತು ದಿ ಪೊರ್ಟ್ ಆಫ್ ಮಾರ್ಗೊಗೂ ಕೂಡ ಇದು ಸನೀಹದಲ್ಲಿದೆ. ಈ ಕೋಟೆಯು ಭೌಗೋಳಿಕವಾಗಿ, ಪ್ರಸಿದ್ಧವಾದ 'ಸಾಲ್ಸೆಟ್'ನ ವಾಯವ್ಯ ಭಾಗದಲ್ಲಿದೆ.

ಐತಿಹಾಸಿಕ ಮಹತ್ವ

ಪೊರ್ಟ್ ಆಫ್ ಮಾರ್ಗೊದ ಸುತ್ತಮುತ್ತಲಿರುವ ಸ್ಥಳಗಳನ್ನು ರಕ್ಷಿಸುವ ಉದ್ದೇಶದಿಂದ ಪೋರ್ಚುಗೀಸರಿಂದ ಮರ್ಮಗೋವಾ ಕೋಟೆಯ ನಿರ್ಮಾಣವಾಯಿತು. ಈ ಕೋಟೆಯ ಪ್ರವೇಶ ಸ್ಥಳದಲ್ಲಿ ಅಂದಿನ 'ವೈಸರಾಯ್'ನ ಸ್ಮರಣಾರ್ಥವಾಗಿ ಡೊಮ ಫ್ರಾನ್ಸಿಸ್ಕೊ ಡಾ ಗಾಮಾ ಮತ್ತು ರಾಜನಾದ ಡೊಮ್ ಫಿಲಿಪರ ಹೆಸರುಗಳನ್ನು ಕೆತ್ತಲ್ಪಟ್ಟಿದೆ.1703 ರಲ್ಲಿ ಅಂದಿನ ವೈಸರಾಯ್ ರಾಜಧಾನಿಯಾಗಿದ್ದ ಮಾರ್ಗೊಗೆ ತೆರಳಿದ. ಹಲವಾರು ಪ್ರಯತ್ನಗಳ ಬಳಿಕ ಕೊನೆಯದಾಗಿ ಇದನ್ನು ಪೋರ್ಚುಗೀಸರು ಮರಾಠರಿಗೆ ಒಪ್ಪಿಸಿ ಹಳೆಯ ಗೋವಾವನ್ನು ತಮ್ಮಲ್ಲಿ ಉಳಿಸಿಕೊಂಡರು. ಇಂದು ಈ ಕೋಟೆಯಲ್ಲಿ ಸಂರಕ್ಷಿಸಲ್ಪಟ್ಟ 3ಮ್ಯಾಗಜೀನಗಳು, 5 ಜೈಲು ಕೊಠಡಿಗಳು, 20 ರಕ್ಷಣಾ ವ್ಯವಸ್ಥೆಗಳು, ಒಂದು ಚರ್ಚ ಮತ್ತು ಕಾವಲುಗಾರರಿಗಿದ್ದ ವಸತಿ ವ್ಯವಸ್ಥೆಯನ್ನು ಕಾಣಬಹುದು. ಈ ಕೋಟೆಯು ಬೃಹತ್ತಾಗಿದ್ದು ಅದರ ಸುತ್ತಳತೆಯು 10 ಕಿ.ಮೀ ವರೆಗಿದೆ. ಸಾಂಪ್ರದಾಯಿಕ ಶೈಲಿಯ ಕಟ್ಟಿಗೆಯ ದೋಣಿಗಳನ್ನು ಕಾಣಬಹುದಾದ ವರ್ಕಾ ಬೀಚವು ಈ ಕೋಟೆಗೆ ಬಹು ಹತ್ತಿರದಲ್ಲಿದೆ. ಬೇಸಿಗೆ ಕಾಲವು ಈ ಕೋಟೆಗೆ ಭೇಟಿ ನೀಡಲು ಸೂಕ್ತವಾಗಿದೆ.ವಾಸ್ಕೊ ನಗರದಿಂದ 4 ಕಿ.ಮೀ ದೂರದಲ್ಲಿರುವ ಮರ್ಮಗೋವಾವು ದಾಬೋಲಿಮ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿದೆ. ಕ್ಯಾಬ, ಬಸ್ಸು, ಬೈಕ್ ಇಲ್ಲವೆ ರಿಕ್ಷಾಗಳ ಮೂಲಕ ಈ ಕೋಟೆಯನ್ನು ತಲುಪಬಹುದು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat