ಪುರಾತನ ಹಿಂದು ಸಂಸ್ಕೃತಿಯ ಅತ್ಯಂತ ಸುಂದರವಾದ ದೇವಾಲಯ ಈ ಕಾಲ ಭೈರವ ದೇವಾಲಯವಾಗಿದೆ. ತಂತ್ರ ಪಂಥದೊಂದಿಗೆ ಈ ದೇವಾಲಯ ಸಂಬಂಧ ಹೊಂದಿದೆ ಎನ್ನಲಾಗಿದೆ. ಕಾಲ ಭೈರವನನ್ನು ಶಿವ ದೇವರ ಒಂದು ಅಭಿವ್ಯಕ್ತಿ ರೂಪ ಎಂದು ನಂಬಲಾಗಿದೆ. ಇಲ್ಲಿ ಹೆಚ್ಚಿನ ಮಂದಿ ಪ್ರತಿದಿನ ಬಂದು ಪೂಜೆ ಸಲ್ಲಿಸುವುದನ್ನು ನೀವು ಕಾಣಬಹುದಾಗಿದೆ. ಇಲ್ಲಿ ಮೈಗೆ ಬೂದಿಯನ್ನು ಲೇಪಿಸಿಕೊಂಡ ಅನೇಕ ಸಾಧು ಸಂತರನ್ನು ನೀವು ಕಾಣಬಹುದಾಗಿದೆ. ಇಲ್ಲಿ ಅನೇಕ ದೀಪದ ಸ್ತಂಭಗಳನ್ನು ಕಾಣಬಹುದು. ಇಲ್ಲಿ ಆಲದ ಮರವಿದ್ದು ಅದರ ಬುಡದಲ್ಲಿ ಶಿವಲಿಂಗವಿದೆ. ಇದು ನಂದಿಯ ಮೂರ್ತಿಯ ವಿರುದ್ಧ ದಿಕ್ಕಿನಲ್ಲಿದೆ. ಇಲ್ಲಿನ ಜನರ ನಂಬಿಕೆಯ ಪ್ರಕಾರ ಯಾರೇ ಮನಪೂರ್ವಕ ಏನೇ ಬೇಡಿಕೊಂಡರೂ ಇಲ್ಲಿನ ಸ್ಥಳದಲ್ಲಿ ಅದನ್ನು ನಿಜವಾಗಿಸುವ ಶಕ್ತಿ ಇದೆ. ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ ಹಾಗೂ ವೈಭವೋಪೇರಿತ ಜಾತ್ರೆಯೂ ನಡೆಯುತ್ತದೆ.


Click it and Unblock the Notifications