Search
  • Follow NativePlanet
Share
ಮುಖಪುಟ » ಸ್ಥಳಗಳು » ಉಜ್ಜಯಿನಿ » ಹವಾಮಾನ

ಉಜ್ಜಯಿನಿ ಹವಾಮಾನ

ಉಜ್ಜಯಿನಿಗೆ ಭೇಟಿ ನೀಡಲು ಅತ್ಯುತ್ತಮ ಋತುವೆಂದರೆ ಅಕ್ಟೋಬರ್  ಮತ್ತು ಮಾರ್ಚ್ ತಿಂಗಳುಗಳ ನಡುವೆ. ಉಜ್ಜಯಿನಿಗೆ ಜೂನ್ ನಿಂದ ಸೆಪ್ಟೆಂಬರ್ ತಿಂಗಳಲ್ಲಿಯೂ ಭೇಟಿ ನೀಡಬಹುದು. ಆದರೆ ಹವಾಮಾನ. ವರ್ಷದ ಈ ಸಮಯದಲ್ಲಿ ತುಂಬಾ ಆರ್ದ್ರತೆಯಿಂದ ಕೂಡಿರುತ್ತದೆ. ಹವಾಮಾನ ಅನುಕೂಲಕರವಾಗಿರುವ ಅಕ್ಟೋಬರ್ ನಿಂದ ಮಾರ್ಚ್ ತಿಂಗಳುಗಳಲ್ಲಿ ಉಜ್ಜಯಿನಿ ಭೇಟಿ ನೀಡುವುದು ಒಳ್ಳೆಯದು.

ಬೇಸಿಗೆಗಾಲ

ಉಜ್ಜಯಿನಿಯಲ್ಲಿ ಬೇಸಿಗೆ, ಮಾರ್ಚ್ ನಿಂದ ಆರಂಭವಾಗುತ್ತದೆ ಮತ್ತು ಜೂನ್ ಅಂತ್ಯದ ತನಕ ಮುಂದುವರಿಯುತ್ತದೆ. ಈ ತಿಂಗಳಲ್ಲಿ ಹವಾಮಾನ ಅತ್ಯಂತ ಕಷ್ಟದಾಯಕವಾಗಿದ್ದು, ತಾಪಮಾನ  45 ಡಿ.ಸೆಗಿಂತ ಮೇಲಕ್ಕೇರುತ್ತದೆ. ಬೇಸಿಗೆಯ ತಿಂಗಳುಗಳಲ್ಲಿ  ಮಧ್ಯಾಹ್ನ ಸಮಯದಲ್ಲಿ 'ಲೂ' (ಅತೀ ಬೇಸಿಗೆ) ಎಂದು ಕರೆಯಲ್ಪಡುವ  ಗಾಳಿ (ಧಗೆಯ ಗಾಳಿ) ಬೀಸುತ್ತದೆ.

ಮಳೆಗಾಲ

ಉಜ್ಜಯಿನಿ ನಗರದಲ್ಲಿ ಮಾನ್ಸೂನ್ ಸಮಯ, ಜೂನ್ ಮತ್ತು ಸೆಪ್ಟೆಂಬರ್ ತಿಂಗಳುಗಳ ನಡುವೆ. ಪ್ರವಾಸಿಗರು ಈ ಕಾಲದಲ್ಲಿ ಮಧ್ಯಮ ಮಳೆಯನ್ನು ನಿರೀಕ್ಷಿಸಬಹುದು. ಹಾಗೆಯೇ ಪ್ರಯಾಣಿಕರು ಈ ಸಮಯದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿನ ಸೌಂದರ್ಯವನ್ನು ಆನಂದಿಸಬಹುದು.

ಚಳಿಗಾಲ

ಉಜ್ಜಯಿನಿಯಲ್ಲಿ ಚಳಿಗಾಲ, ನವೆಂಬರ್ ತಿಂಗಳಿನಲ್ಲಿ ಪ್ರಾರಂಭವಾಗುತ್ತದೆ ಮತ್ತು ಫೆಬ್ರವರಿ ಮುಗಿಯುವವರೆಗೂ ಮುಂದುವರಿಯುತ್ತದೆ. ಪ್ರವಾಸಿಗರು ಹಗಲಿನ ಸಮಯದಲ್ಲಿ ಆಹ್ಲಾದಕರ ಮತ್ತು ಚಳಿಯ ಹವಾಮಾನವನ್ನು ಆನಂದಿಸಬಹುದು. ಚಳಿಗಾಲದ ತಿಂಗಳುಗಳಲ್ಲಿ, ಉಜ್ಜಯಿನಿಯಲ್ಲಿ ಹಗಲಿನಲ್ಲಿ 20 ಡಿಗ್ರಿ ಸೆ. ಗರಿಷ್ಠ ತಾಪಮಾನ ದಾಖಲಾಗುತ್ತದೆ.  ರಾತ್ರಿ, ಹವಾಮಾನ ಮಂಜುಗಡ್ಡೆಯಷ್ಟು ತಂಪಾಗಿರುತ್ತದೆ. ಮತ್ತು ಕನಿಷ್ಠ ತಾಪಮಾನ 3 ಡಿ.ಸೆ. ಮಟ್ಟಕ್ಕೆ ಕುಸಿಯುತ್ತದೆ.