» »ಇಲ್ಲಿನ ಸುಂದರವಾದ ಸ್ಥಳಗಳನ್ನು ನೋಡಿಯೇ ಆನಂದಿಸಬೇಕು......

ಇಲ್ಲಿನ ಸುಂದರವಾದ ಸ್ಥಳಗಳನ್ನು ನೋಡಿಯೇ ಆನಂದಿಸಬೇಕು......

Written By:

ಸುಂದರವಾದ ಸ್ಥಳ ನೋಡಲು ಯಾವುದಾದರೇನು ಅಲ್ಲಿನ ಸೌಂದರ್ಯವನ್ನು ಕಾಣ್ಣಾರೆ ಕಂಡೇ ಸವಿಯಬೇಕು. ಮಕ್ಕಳೊಂದಿಗೆ ಹಾಗೂ ಕುಟುಂಬದವರೊಂದಿಗೆ ಒಂದು ಸುಂದರವಾದ ಪ್ರವಾಸ ಕೈಗೊಳ್ಳಬೇಕು ಎಂದು ಇದ್ದರೆ ಉತ್ತರ ಪ್ರದೇಶದಲ್ಲಿನ ಕಾನ್ಪೂರ ನಗರದ ಸೊಬಗನ್ನು ಒಮ್ಮೆ ಕಂಡುಬನ್ನಿ.

ಇಲ್ಲಿ ಹಲವಾರು ನವೀನ ಕಟ್ಟಡಗಳು, ಐತಿಹಾಸಿಕವಾದ ಕಟ್ಟಡಗಳು, ಅಭಯಾರಣ್ಯಗಳು, ದೇವಾಲಯಗಳಿಗೆ ಒಮ್ಮೆ ಭೇಟಿ ಕೊಡಿ. ಉತ್ತರ ಪ್ರದೇಶ ರಾಜ್ಯದಲ್ಲಿನ ಕಾನ್ಪೂರದ ಶ್ರೀಮಂತವಾದ ಸಂಸ್ಕøತಿ ಮತ್ತು ಇತಿಹಾಸವನ್ನು ಹೊಂದಿದೆ. ಇದು 1857ರ ದಂಗೆಯ ಕೇಂದ್ರವಾಗಿತ್ತು. ಆನೇಕ ಸೂಫಿ ಸಂತರ ಮನೆ ಕೂಡ ಆಗಿತ್ತು.

ಉತ್ತರ ಪ್ರದೇಶದ ಕಾನ್ಪೂರದಲ್ಲಿ ಭೇಟಿ ನೀಡಲು 5 ಅತ್ಯುತ್ತಮವಾದ ಸ್ಥಳಗಳೆಂದರೆ ........

ಅಲೆನ್ ಫಾರೆಸ್ಟ್ ಝೂ

ಅಲೆನ್ ಫಾರೆಸ್ಟ್ ಝೂ

ನೈರ್ಗಿಕವಾದ ಕಾಡಿನಲ್ಲಿ ಹಲವಾರು ಪ್ರಾಣಿ ಸಂಗ್ರಾಹಲಯವನ್ನು ಇಲ್ಲಿ ಕಾಣಬಹುದಾಗಿದೆ. ಈ ಪ್ರದೇಶವು ವನ್ಯಜೀವಿ ಪ್ರಾಣಿಗಳ ಅವಾಸಸ್ಥಾನವಾಗಿತ್ತು. ಇವುಗಳನ್ನು ಹೆಚ್ಚಿನದಾಗಿ ಝೂನ ಒಳಗೆ ಸಂರಕ್ಷಿಸಿ ಇಡಲಾಗಿದೆ.

ಇಲ್ಲಿ ಸಸ್ಯಗಳಿಂದ ಅವೃತ್ತಗೊಂಡಿರುವ ತೋಟಗಳು, ಸರೋವರಗಳು, ಪಂಜರಗಳು ಮತ್ತು ಅಕ್ವೇರಿಯಂಗಳನ್ನು ಇಲ್ಲಿ ಕಾಣಬಹುದಾಗಿದೆ. ಪ್ರವಾಸಿಗರಿಗೆ ಇದೊಂದು ಸುಂದರವಾದ ಪ್ರಕೃತಿಯ ಆಕರ್ಷಣೆಯಾಗಲಿದೆ.


PC:

ಜೈನ ಗ್ಲಾಸ್ ದೇವಾಲಯ

ಜೈನ ಗ್ಲಾಸ್ ದೇವಾಲಯ

ಜೈನ್ ಗ್ಲಾಸ್ ದೇವಾಲಯ ಮಹೇಶ್ವರಿ ಮಹಲ್‍ನಲ್ಲಿದೆ. ಇಲ್ಲಿನ ದೇವಾಲಯವು ಜೈನ ಧರ್ಮಕ್ಕೆ ಸಮರ್ಪಿತವಾದ ಪ್ರಮುಖವಾದ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿನ ಜೈನ ದೇವಾಲಯವನ್ನು ಗಾಜಿನಿಂದ ವಿನ್ಯಾಸಗಳಿಂದ ಅಲಂಕರಿಸಲಾಗಿದೆ.

ದೇವಾಲಯದ ಒಳಗೆ ಮತ್ತು ಹೊರಗೆ ಇರುವ ವಿವಿಧ ಗಾಜಿನ ಭಿತ್ತಿಚಿತ್ರಗಳು ಜೈನ ತತ್ವಶಾಸ್ತ್ರವನ್ನು ವಿವರಿಸುತ್ತದೆ. ಮಹಾವೀರ ಮತ್ತು 23 ತೀರ್ಥಂಕರರ ಪ್ರತಿಮೆಯನ್ನು ಸಹ ಇಲ್ಲಿ ಒಳಗೊಂಡಿದೆ.


PC:Hiroki Ogawa

ಬುದ್ಧ ಬಾರ್ಗಡ್ (ಆಲದ ಮರ)

ಬುದ್ಧ ಬಾರ್ಗಡ್ (ಆಲದ ಮರ)

ಬುದ್ಧ ಬರ್ಗಡ್ ಎನ್ನುವುದು ಅಕ್ಷರಶಃ ಆಲದ ಮರ ಎಂಬ ಅರ್ಥ. ಕಾನ್ಪುರದ ಪ್ರಮುಖವಾದ ಐತಿಹಾಸಿ ಸ್ಮಾರಕಗಳಲ್ಲಿ ಇದು ಪ್ರಮುಖವಾದುದು. ಈ ಸ್ಥಳವು 1857ರ ಕ್ರಾಂತಿಯ ಕೇಂದ್ರವಾಗಿತ್ತು ಮತ್ತು 144 ಭಾರತೀಯ ಕ್ರಾಂತಿಕಾರಿಗಳನ್ನು ಗಲ್ಲಿಗೇರಿಸಿದ ಸ್ಥಳವಾಗಿತ್ತು.

ಈ ಸ್ಥಳವು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ತನ್ನ ಆಯಕಟ್ಟಿನ ಸ್ಥಾನವನ್ನು ಹೊಂದಿತ್ತು. ಮಿಲಿಟರಿ ಸ್ಥಾಪನೆಯ ಕೇಂದ್ರ ಕೂಡ ಇದಾಗಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ನಗರದ ಪ್ರಮುಖ ಸ್ಥಳ ಇದಾಗಿದೆ.

PC:Kiran Gopi

ಭಿತ್ತರ್ಗಾಂವ್ ದೇವಾಲಯ

ಭಿತ್ತರ್ಗಾಂವ್ ದೇವಾಲಯ

ಭಿತ್ತರ್ಗಾಂವ್ ದೇವಾಲಯವು ಸುಮಾರು 15.41 ಮೀಟರ್ ಎತ್ತರ ಹೊಂದಿರುವ ಇತಿಹಾಸ ಪೂರ್ವ ದೇವಾಲಯವಾಗಿದೆ. ದೊಡ್ಡ ದೊಡ್ಡ ಇಟ್ಟಿಗೆಗಳಿಂದ ಶೃಂಗಾರಗೊಳಿಸ ಸುಂದರವಾದ ದೇವಾಲಯವಿದು. ಈ ದೇವಾಲಯವನ್ನು ಗುಪ್ತರ ಕಾಲದಲ್ಲಿ ನಿರ್ಮಿಸಲಾಗಿದ್ದು ಎಂದು ಇತಿಹಾಸವಿದೆ.

ಇದರಿಂದಲೇ ಅತ್ಯುತ್ತಮವಾದ ವಾಸ್ತು ಶಿಲ್ಪ ಹಾಗೂ ವಿನ್ಯಾಸವನ್ನು ಕಾಣಬಹುದಾಗಿದೆ. ದೇವಾಲಯದ ಸಂಕೀರ್ಣವಾದ ಕೆತ್ತನೆಗಳಿಂದ ಸರಳವಾಗಿ ಹಾಗೂ ಸುಂದರವಾಗಿ ಪ್ರಶಂಸನೀಯವಾಗಿದೆ.


PC:Theasg sap

ಫೂಲ್ ಬಾಗ್

ಫೂಲ್ ಬಾಗ್

ಇದು ಮಾಲ್ ರಸ್ತೆಯಲ್ಲಿರುವ ಕಾನ್ಪುರದ ಪ್ರಾಚೀನವಾದ ಉದ್ಯಾನವನವಾಗಿದೆ. ಇಲ್ಲಿ ಗಣೇಶ ಶಂಕರ್ ವಿದ್ಯಾರ್ಥಿ ಸ್ಮಾರಕ ಹಾಲ್, ಕೆ,ಇ,ಎಂ ಹಾಲ್ ಮತ್ತು ಗಣೇಶ ಉದ್ಯಾನದ ಕಟ್ಟಡದ ಸುತ್ತಲೂ ಕಾಣಬಹುದಾಗಿದೆ.

ವಿಶೇಷವೆನೆಂದರೆ ಮೊದಲನೇ ಜಾಗತಿಕ ಯುದ್ಧದ ಸಮಯದಲ್ಲಿ ಗಣೇಶ್ ಉದ್ಯಾನವನವನ್ನು ಮೂಳೆ ಆಸ್ಪತ್ರೆಯಾಗಿ ಸ್ಥಾಪಿಸಲಾಯಿತು.

PC:Manojrajput1983

ತಲುಪುವ ಬಗೆ?

ತಲುಪುವ ಬಗೆ?

ವಿಮಾನ ಮಾರ್ಗದ ಮೂಲಕ: ಈ ಸುಂದರವಾದ ಸ್ಥಳಗಳಿಗೆಲ್ಲಾ ಒಮ್ಮೆ ಭೇಟಿ ನೀಡಲು ಸಮೀಪವಾದ ವಿಮಾನ ನಿಲ್ದಾಣವೆಂದರೆ ಕಾನ್ಪುರದ ಅದು ಚಿಕ್ಕೇರಿ ಏರ್ ಫೋರ್ಸ್ ಸ್ಟೇಷನ್.

ಬೆಂಗಳೂರಿನಿಂದ ಕಾನ್ಪುರಕ್ಕೆ ಸುಮಾರು 1807 ಕಿ,ಮೀ ದೂರದಲ್ಲಿದೆ. ರಸ್ತೆಯ ಮೂಲಕ ಸಾಗಿದರೆ ಸುಮಾರು 1807 ಕಿ,ಮೀ ಹಾಗೂ ರೈಲಿನ ಮೂಲಕ 2182 ಕಿ,ಮೀ ಹಾಗೂ ವಿಮಾನದ ಮೂಲಕ 1521 ಕಿ,ಮೀ ದೂರದಲ್ಲಿದೆ.


PC:GOOLE MAP