Search
  • Follow NativePlanet
Share
» »ಈ ಯಾಗಂಟಿ ಪ್ರದೇಶದಲ್ಲಿ ಒಂದು ಕಾಗೆ ಕೂಡ ಕಾಣುವುದಿಲ್ಲ: ಇಲ್ಲಿದೆ ಸ್ಥಳ ಪುರಾಣ

ಈ ಯಾಗಂಟಿ ಪ್ರದೇಶದಲ್ಲಿ ಒಂದು ಕಾಗೆ ಕೂಡ ಕಾಣುವುದಿಲ್ಲ: ಇಲ್ಲಿದೆ ಸ್ಥಳ ಪುರಾಣ

ಭಾರತ ದೇಶದಲ್ಲಿ ಹಲವಾರು ದೇವಾಲಯಗಳು, ಮಸೀದಿ, ಚರ್ಚ್‍ಗಳು ಇವೆ. ಅವರವರಿಗೆ ಅವರದೇ ಆದ ಕೆಲವು ಕಟ್ಟು ಪಾಡುಗಳು ಇರುತ್ತವೆ. ಅಂಥಹ ಕಟ್ಟು ಪಾಡುಗಳಲ್ಲಿ ಕೆಲವೊಮ್ಮೆ ನಿಗೂಢತೆಯೂ ಕೂಡ ಅವರಿಸಿರುತ್ತದೆ. ಅವುಗಳನ್ನು ಕೆಲವರು ಮೂಢ ನಂಬಿಕೆ ಎಂದು ಕೊಂಡ

ಭಾರತ ದೇಶದಲ್ಲಿ ಹಲವಾರು ದೇವಾಲಯಗಳು, ಮಸೀದಿ, ಚರ್ಚ್‍ಗಳು ಇವೆ. ಅವರವರಿಗೆ ಅವರದೇ ಆದ ಕೆಲವು ಕಟ್ಟು ಪಾಡುಗಳು ಇರುತ್ತವೆ. ಅಂಥಹ ಕಟ್ಟು ಪಾಡುಗಳಲ್ಲಿ ಕೆಲವೊಮ್ಮೆ ನಿಗೂಢತೆಯೂ ಕೂಡ ಅವರಿಸಿರುತ್ತದೆ. ಅವುಗಳನ್ನು ಕೆಲವರು ಮೂಢ ನಂಬಿಕೆ ಎಂದು ಕೊಂಡರು ಕೂಡ ಪರೀಕ್ಷಿಸಿ ನೋಡಿದಾಗ ಅದು ಸರಿ ಎಂದು ನಂಬಲೇಕಾಗುತ್ತದೆ.

ಅಂಥಹ ಹಲವಾರು ನಿಗೂಢತೆ ಇರುವ ದೇವಾಲಯಗಳು ನಮ್ಮ ಭಾರತ ದೇಶದಲ್ಲಿದೆ. ಅಂಥಹ ರಹಸ್ಯಗಳಲ್ಲಿ ಯಾಗಂಟಿ ದೇವಾಲಯವೂ ಒಂದು. ಈ ಯಾಗಂಟಿ ಪ್ರದೇಶದ ಸುತ್ತಲೂ ನೀವು ಒಂದು ಕಾಗೆ ಕೂಡ ನಿಮ್ಮ ಕಣ್ಣಿಗೆ ಕಾಣಿಸದು. ಇದಕ್ಕೆ ಸ್ವಾರಸ್ಯಕರವಾದ ಸ್ಥಳ ಪುರಾಣವಿದೆ. ಆ ಕುತೂಹಲಕಾರಿ ಪುರಾಣವೇನು ಎಂಬ ಪ್ರಶ್ನೆಗೆ ಉತ್ತರ ಲೇಖನದ ಮೂಲಕ ಪಡೆಯಿರಿ.

ದೇವಾಲಯ ಎಲ್ಲಿದೆ?

ದೇವಾಲಯ ಎಲ್ಲಿದೆ?

ಆ ಮಾಹಿಮಾನ್ವಿತವಾದ ದೇವಾಲಯವು ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯಲ್ಲಿನ ವೀರಬ್ರಹ್ಮೇಂದ್ರ ಸ್ವಾಮಿ ನಿವಾಸಿಸಿದ್ದ ಬನಗಾನಪಲ್ಲಿಗೆ ಸುಮಾರು 12 ಕಿ.ಮೀ ದೂರದಲ್ಲಿ. ಈ ಪ್ರದೇಶದ ಸುತ್ತಲೂ ಅತ್ಯಂತ ಸುಂದರವಾದ ನಲ್ಲಮಲ ಅರಣ್ಯ ಪ್ರದೇಶವಿದೆ. ಆ ಅರಣ್ಯ ಪ್ರದೇಶದಲ್ಲಿ ಅತ್ಯಂತ ಶುಭಾಮಾನವಾಗಿರುವ ಒಂದು ಪರಮ ಪುಣ್ಯಕ್ಷೇತ್ರವಿದೆ. ಅದೇ ಯಾಗಂಟಿ ..........

ದೇವಾಲಯದಲ್ಲಿನ ಮತ್ತೊಂದು ವಿಶೇಷ

ದೇವಾಲಯದಲ್ಲಿನ ಮತ್ತೊಂದು ವಿಶೇಷ

ಈ ದೇವಾಲಯದಲ್ಲಿ ಶ್ರೀ ಉಮಾ ಮಾಹೇಶ್ವರ ಸ್ವಾಮಿಯು ಲಿಂಗಾಕಾರವಾಗಿ ಅಲ್ಲದೇ ವಿಗ್ರಹ ರೂಪದಲ್ಲಿರುವುದು ಮತ್ತೊಂದು ವಿಶೇಷವಾಗಿದೆ.

ಸ್ಥಳ ಪುರಾಣ

ಸ್ಥಳ ಪುರಾಣ

ಸ್ಥಳ ಪುರಾಣದ ಪ್ರಕಾರ ಪೂರ್ವ ಈ ಪ್ರದೇಶದಲ್ಲಿ ಅಗಸ್ತ್ಯ ಮಹಾಮುನಿ ನಿವಾಸವಿದ್ದರಂತೆ.

ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ

ಆತನು ನಿವಾಸಿಸಿದ್ದ ಆ ಪ್ರದೇಶದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ಒಂದು ದೇವಾಲಯವನ್ನು ನಿರ್ಮಾಣ ಮಾಡಬೇಕು ಎಂದು ಆತನ ಆಸೆಯಾಗಿತ್ತು. ಆದೇ ಪ್ರಕಾರವಾಗಿ ದೇವಾಲಯದ ನಿರ್ಮಾಣ ಪ್ರಾರಂಭಿಸಿದರು.

ಸ್ವಾಮಿಯ ವಿಗ್ರಹದ ಕೆತ್ತನೆ

ಸ್ವಾಮಿಯ ವಿಗ್ರಹದ ಕೆತ್ತನೆ

ಆ ದೇವಾಲಯದಲ್ಲಿ ಪ್ರತಿಷ್ಟಾಪಿಸಿದ ಸ್ವಾಮಿಯ ಮೂಲ ವಿರಾಟನನ್ನು ಸ್ವಯಂ ತನ್ನ ಕೈಯಲ್ಲಿಯೇ ಕೆತ್ತಬೇಕು ಎಂದು ಭಾವಿಸಿದ್ದರಂತೆ. ಸ್ವಾಮಿಯ ವಿಗ್ರಹವನ್ನು ಕೆತ್ತನೆ ಮಾಡುವ ಸಮಯದಲ್ಲಿ ಆತನ ಕೈಯ ಬೆರಳಿಗೆ ಗಾಯವಾಯಿತಂತೆ.

ಸಂಕಲ್ಪದಲ್ಲಿ ಲೋಪ

ಸಂಕಲ್ಪದಲ್ಲಿ ಲೋಪ

ತನ್ನ ಸಂಕಲ್ಪದಲ್ಲಿ ಲೋಪವಿರಬಹುದು ಎಂದು ಭಾವಿಸಿ ವೆಂಕಟೇಶ್ವರ ಸ್ವಾಮಿಯ ವಿಗ್ರಹವನ್ನು ಕೆತ್ತನೆ ಮಾಡುವುದನ್ನು ನಿಲ್ಲಿಸಿದರಂತೆ.

ಇಲ್ಲಿನ ವಿಶೇಷ

ಇಲ್ಲಿನ ವಿಶೇಷ

ಯಾಗಂಟಿ ಪ್ರದೇಶದಲ್ಲಿನ ಮತ್ತೊಂದು ವಿಶೇವೆನೆಂದರೆ ಈ ಪ್ರದೇಶದ ಸುತ್ತಲೂ ಒಂದು ಕಾಗೆ ಕೂಡ ಕಾಣಿಸುವುದಿಲ್ಲವಂತೆ. ಇದಕ್ಕೆ ಒಂದು ಸ್ವರಸ್ಯಕರವಾದ ಕಥೆ ಇದೆ. ಅದೆನೆಂದರೆ...


PC:Adeel Anwer

ಸಂಕಲ್ಪದಲ್ಲಿ ಲೋಪ

ಸಂಕಲ್ಪದಲ್ಲಿ ಲೋಪ

ಶ್ರೀ ವೆಂಕಟೇಶ್ವರ ಸ್ವಾಮಿಯ ವಿಗ್ರಹವನ್ನು ಕೆತ್ತುವ ಸಮಯದಲ್ಲಿನ ಲೋಪವನ್ನು ಕಂಡು ಹಿಡಿಯಬೇಕು ಎಂದು ಅಗಸ್ತ್ಯ ಮುನಿಗಳು ಶ್ರೀ ವೆಂಕಟೇಶ್ವರ ಸ್ವಾಮಿಯ ಮೇಲೆ ತಪಸ್ಸನ್ನು ಆಚರಿಸಿದರು.

ತಪಸ್ಸಿಗೆ ಭಂಗ

ತಪಸ್ಸಿಗೆ ಭಂಗ

ಆ ಸಮಯದಲ್ಲಿ ಅಲ್ಲಿ ಹೆಚ್ಚಾಗಿ ಇರುತ್ತಿದ್ದ ಕಾಗೆಗಳು ಆಗಸ್ತ್ಯ ಮಹಾ ಮುನಿಯ ತಪಸ್ಸಿಗೆ ಭಂಗ ಮಾಡಿದವು. ಕೋಪಗೊಂಡ ಮಹಾ ತಪಸ್ವಿಯು ಈ ಪ್ರದೇಶದಲ್ಲಿ ಒಂದೇ ಒಂದು ಕಾಗೆ ಕೂಡ ಇರಬಾದರು ಎಂದು ಶಾಪವನ್ನು ಇಟ್ಟರು.


PC:Phoenix Wolf-Ray

ಕಾಗೆಗಳು

ಕಾಗೆಗಳು

ಅದ್ದರಿಂದಲೇ ಅಂದಿನಿಂದ ಇಂದಿನವರೆವಿಗೂ ಒಂದು ಕಾಗೆಯೂ ಕೂಡ ಯುಗಂಟಿ ಪ್ರದೇಶದಲ್ಲಿ ಕಾಣಿಸುವುದಿಲ್ಲವಂತೆ ಎಂದು ಅಲ್ಲಿನ ಜನರು ತಿಳಿಸುತ್ತಾರೆ.

ಸ್ವಯಂ ಭೂ

ಸ್ವಯಂ ಭೂ

ಆಗಲೇ ದೇವಾಲಯದ ನಿರ್ಮಾಣ ಪೂರ್ತಿವಾದ ಕಾರಣ ಆ ಊರಿನಲ್ಲಿ ಮತ್ತೊಂದು ದೇವತಾ ಮೂರ್ತಿಯನ್ನು ಪ್ರತಿಷ್ಟಾಪಿಸಲು ಈ ದೇವಾಲಯಕ್ಕೆ ಕೆಲವು ದೂರದಲ್ಲಿ ಸ್ವಯಂಭೂವಾಗಿ ನೆಲೆಸಿದ್ದ ಊಮಾ ಮಾಹೇಶ್ವರ ಸ್ವಾಮಿಯ ವಿಗ್ರಹವನ್ನು ತೆಗೆದುಕೊಂಡು ಬಂದು ಪ್ರತಿಷ್ಟಾಪಿಸಿದರಂತೆ.

ವೆಂಕಟೇಶ್ವರ ಸ್ವಾಮಿ ವಿಗ್ರಹ

ವೆಂಕಟೇಶ್ವರ ಸ್ವಾಮಿ ವಿಗ್ರಹ

ವೆಂಕಟೇಶ್ವರ ಸ್ವಾಮಿ ವಿಗ್ರಹವನ್ನು ಆ ದೇವಾಲಯದಲ್ಲಿನ ಒಂದು ಗುಹೆಯಲ್ಲಿ ಪ್ರತಿಷ್ಟಾಪಿಸಿದರು.

ಗುಹೆ

ಗುಹೆ

ಇಂದಿಗೂ ಈ ಪರ್ವತದ ಗುಹೆಯಲ್ಲಿ ನಮ್ಮ ವೆಂಕಟೇಶ್ವರ ಸ್ವಾಮಿ ವಿಗ್ರಹವಿದೆ. ಅಲ್ಲಿ ಸ್ವಾಮಿಯ ದರ್ಶನವನ್ನು ಪಡೆಯಬಹುದಾಗಿದೆ.

ಪುಷ್ಕರಣಿ

ಪುಷ್ಕರಣಿ

ಈ ದೇವಾಲಯದ ಎದುರು ಪವಿತ್ರವಾದ ಒಂದು ಪುಷ್ಕರಣಿ ಇದೆ.

ಅಗಸ್ತ್ಯ ಪುಷ್ಕರಣಿ

ಅಗಸ್ತ್ಯ ಪುಷ್ಕರಣಿ

ಆ ಪುಷ್ಕರಣಿ ನೀರು ಅಲ್ಲಿನ ನಂದಿ ಬಾಯಿಯಿಂದ ಬರುತ್ತದೆ. ಪೂರ್ವದಲ್ಲಿ ಈ ಪುಷ್ಕರಣಿಯಲ್ಲಿ ಅಗಸ್ತ್ಯ ಮಹಾ ಮುನಿಯು ಸ್ನಾನ ಮಾಡುತ್ತಿದ್ದರಂತೆ. ಹಾಗಾಗಿ ಈ ಪುಷ್ಕರಣಿಯನ್ನು ಅಗಸ್ತ್ಯ ಪುಷ್ಕರಣಿ ಎಂದು ಕರೆಯುತ್ತಾರೆ.

ಯಾಗಂಟಿ ಕ್ಷೇತ್ರ ದೇವಾಲಯ ಪ್ರವೇಶ ವೇಳೆ

ಯಾಗಂಟಿ ಕ್ಷೇತ್ರ ದೇವಾಲಯ ಪ್ರವೇಶ ವೇಳೆ

ಬೆಳಗ್ಗೆ 7 ಗಂಟೆಯಿಂದ 11 ಗಂಟೆ ಹಾಗು ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಪ್ರವಾಸಿಗರು, ಭಕ್ತರು ದೇವಾಲಯಕ್ಕೆ ತೆರಳಬಹುದಾಗಿದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಈ ಕ್ಷೇತ್ರವು ಆಂಧ್ರ ಪ್ರದೇಶದ ಕರ್ನೂಲ್‍ನಿಂದ ಸುಮಾರು 100 ಕಿ.ಮೀ ದೂರದಲ್ಲಿದೆ. ಕರ್ನೂಲ್, ಬನಗಾನ ಪಲ್ಲಿ, ನಂದ್ಯಾಲದಿಂದ ಯಾಗಂಟಿ ಕ್ಷೇತ್ರಕ್ಕೆ ಬಸ್ಸುಗಳ ಸೌಕರ್ಯವಿದೆ.

ಮೊದಲು ಬೆಂಗಳೂರಿನಿಂದ ಹೈದ್ರಾಬಾದಿಗೆ ತೆರಳಿ ಅಲ್ಲಿಂದ ಕರ್ನೂಲ್‍ಗೆ ಸುಮಾರು 5 ಗಂಟೆಯ ಪ್ರಯಾಣ ಮಾಡಬೇಕಾಗುತ್ತದೆ.

More News

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+