» »ಪಾಂಡಿಚೇರಿಯ ಅದ್ಭುತವಾದ ಬೀಚ್‍ಗಳು ಇವು.....

ಪಾಂಡಿಚೇರಿಯ ಅದ್ಭುತವಾದ ಬೀಚ್‍ಗಳು ಇವು.....

Written By:

ಪಾಂಡಿಚೇರಿ ಹಲವಾರು ಪ್ರವಾಸಿ ತಾಣಗಳು ಇವೆ. ಅವುಗಳಲ್ಲಿ ಬೀಚ್‍ಗಳು ಕೂಡ ಒಂದು. ಇಲ್ಲಿನ ಬೀಚ್‍ಗಳು ಗೋವಾದ ಬೀಚ್‍ಗಳಿಗೇನೂ ಕಡಿಮೆ ಏನೂ ಇಲ್ಲ. ಅತ್ಯಂತ ಸುಂದರವಾದ ಪಾಂಡಿಚೇರಿಯ ಈ ಬೀಚ್‍ಗಳಿಗೆ ದಿನನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಬೆಂಗಳೂರಿನಿಂದ ಪಾಂಡಿಚೇರಿಗೆ ಸುಮಾರು 316 ಕಿ.ಮೀ ದೂರದಲ್ಲಿದೆ. ಇಲ್ಲಿ ಕೇವಲ ಬೀಚ್‍ಗಳೇ ಅಲ್ಲದೇ ಪುಣ್ಯಕ್ಷೇತ್ರಗಳು, ಐತಿಹಾಸಿಕ ತಾಣಗಳು, ವಿನೂತನವಾದ ಕಲಾಕೃತಿಗಳು, ರೆಸ್ಟೋರೆಂಟ್‍ಗಳನ್ನು ಇಲ್ಲಿ ಕಾಣಬಹುದಾಗಿದೆ.

ಒಮ್ಮೆ ಪಾಂಡಿಚೇರಿಗೆ ತೆರಳಿದಾಗ ನಿಮಗೆ ಇಷ್ಟವಾಗುವ ಈ ಬೀಚ್‍ಗಳಿಗೆ ಭೇಟಿ ನೀಡಿ, ನಿಮ್ಮ ಕುಟುಂಬದವರೊಂದಿಗೆ ಏಂಜಾಯ್ ಮಾಡಿ. ಇಲ್ಲಿನ ಮೃದವಾದ ಮರಳು, ವಿಶಾಲವಾದ ಕಡಲತೀರ, ಈಜಾಡುವುದು, ಅದ್ಭುತವಾದ ಮರಳಿನ ಕೋಟೆಗಳು, ಸಾಹಸಮಯವಾದ ಜಲಕ್ರೀಡೆ ಆಡಲು ಆಹಾ ಅದ್ಭುತವಾದ ಸ್ಥಳ ಇದಾಗಿದೆ. ಹಾಗಾದರೆ ಆ ಬೀಚ್‍ಗಳು ಯಾವುವು? ಆ ಬೀಚ್‍ಗಳಿಗೆ ತೆರಳುವ ಬಗೆ ಹೇಗೆ? ಎಂಬ ಹಲವಾರು ಪ್ರಶ್ನೆಗೆ ಉತ್ತರ ಲೇಖನದ ಮೂಲಕ ತಿಳಿಯೋಣ ಬನ್ನಿ.

ಆರೋವಿಲ್ ಬೀಚ್

ಆರೋವಿಲ್ ಬೀಚ್

ಆರೋವಿಲ್ ಬೀಚ್ ಅಥವಾ ಔರೋ ಬೀಚ್ ಪಾಂಡಿಚೇರಿಯ ಪ್ರಸಿದ್ಧವಾದ ಕಡಲತೀರ ಎಂದೇ ಹೇಳಬಹುದು. ಇದು ಪಾಂಡಿಚೇರಿಯಿಂದ ಸುಮಾರು 8 ಕಿ.ಮೀ ದೂರದಲ್ಲಿದೆ. ಇದು ಸುಮಾರು 50 ದೇಶಗಳ ಜನರಿಗೆ ನೆಲೆಯಾಗಿದೆ. ಆರೋವಿಲ್ ಬೀಚ್‍ನ ಜೊತೆ ಜೊತೆಗೆ ಮಾತೃ ಮಂದಿರ್ ಕೂಡ ತನ್ನದೇ ಆದ ವಾಸ್ತುಶಿಲ್ಪದ ವೈಭವದಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಈ ಅದ್ಭುತವಾದ ಕಡಲತೀರಕ್ಕೆ ವಾರಾಂತ್ಯದ ಸಮಯದಲ್ಲಿ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಬೀಚ್‍ನಲ್ಲಿ ಅತ್ಯುತ್ತಮವಾದ ರಿಸಾರ್ಟ್‍ಗಳು ಕೂಡ ಇವೆ. ಈ ಬೀಚ್‍ನಲ್ಲಿ ಈಜುವುದು, ಸರ್ಫಿಂಗ್, ಸ್ಟ್ರೋಲಿಂಗ್ ಮತ್ತು ರಾತ್ರಿಯ ಸಮಯದಲ್ಲಿ ಪಾಂಡಿಚೇರಿ ದೀಪದ ನೋಟವನ್ನು ಕೂಡ ಆನಂದಿಸಬಹುದು.

ಪ್ರೋಮೆನೇಡ್ ಬೀಚ್

ಪ್ರೋಮೆನೇಡ್ ಬೀಚ್

ವಿಶಿಷ್ಟವಾದ ಕಲ್ಲಿನ ಬೀಚ್ ಎಂದೇ ಪ್ರಸಿದ್ದವಾಗಿದೆ ಈ ಸುಂದರವಾದ ಪ್ರೋಮೆನೇಡ್ ಬೀಚ್. ವಾಯುವಿಹಾರಕ್ಕೆ ಸೂಕ್ತವಾದ ಪಾಂಡಿಚೇರಿಯ ಬೀಚ್‍ನಲ್ಲಿ ಈ ಪ್ರೋಮೆನೇಡ್ ಬೀಚ್ ಕೂಡ ಒಂದಾಗಿದೆ. ಇದು 1.5 ಕಿ.ಮೀ ಉದ್ದದ ಬೀಚ್ ಆಗಿದೆ. ಈ ಅದ್ಭುತವಾದ ಬೀಚ್‍ಗೆ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರು ಜಾಗಿಂಗ್, ವಾಕಿಂಗ್ ಮಾಡುತ್ತಾರೆ. ವಾಹನದ ಪ್ರವೇಶವನ್ನು ಬೀಚ್ ಮುಂಭಾಗದ ಪ್ರದೇಶದಲ್ಲಿ ನಿಷೇಧಿಸಲಾಗಿದೆ. ಇಲ್ಲಿ ಅನೇಕ ಕೆಫೆಗಳು, ರೆಸ್ಟೋರೆಂಟ್‍ಗಳು, ಆಹಾರದ ಕಾರ್ಟ್‍ಗಳು ಇರುತ್ತವೆ.

ಈ ಸುಂದರವಾದ ಬೀಚ್‍ನ ಬಳಿ ಯುದ್ಧದ ಸ್ಮಾರಕಗಳು, ಡ್ಯುಪ್ಲೆಕ್ಸ್ ಪಾರ್ಕ್‍ಗಳಿಗೆ ಭೇಟಿ ನೀಡಬಹುದು. ನೀವು ಬೀಚ್‍ನಲ್ಲಿ ಯೋಗ, ಸ್ಕೇಟಿಂಗ್ ಕೂಡ ಮಾಡಬಹುದು. ಇಲ್ಲಿ ರುಚಿ-ರುಚಿಯಾದ ಸಮುದ್ರದ ಆಹಾರಗಳು ಕೂಡ ಲಭಿಸುತ್ತದೆ.

PC: Sarath Kuchi

ಪ್ಯಾರಡೈಸ್ ಬೀಚ್

ಪ್ಯಾರಡೈಸ್ ಬೀಚ್

ಪ್ಯಾರಡೈಸ್ ಬೀಚ್, ಪಾಂಡಿಚೇರಿಯ ಪ್ರತಿ ಸಮುದ್ರ ಪ್ರೇಮಿಗೆ ಅತ್ಯಂತ ಮೋಡಿ ಮತ್ತು ಶಾಂತಿಯನ್ನು ನೀಡುವ ಬೀಚ್ ಇದಾಗಿದೆ. ಈ ಬೀಚ್ ಕೆಲವು ಆಸಕ್ತಿದಾಯಕ ಜಲ ಕ್ರೀಡೆಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಇದೊಂದು ಸಂಪೂರ್ಣ ಸೌಂದರ್ಯವನ್ನು ಹೊಂದಿರುವ ಬೀಚ್‍ಗಳಲ್ಲಿ ಒಂದು. ಈ ಬೀಚ್‍ಗೆ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಕಾರಣ ಈಜಲು ಬಯಸುವವರಿಗೆ ಶವರ್ ಕೊಠಡಿಗಳು, ಬಟ್ಟೆ ಬದಲಾವಣೆ ಮಾಡಿಕೊಳ್ಳಲು ವಿಶೇಷವಾದ ಕೊಠಡಿಗಳ ವ್ಯವಸ್ಥೆ ಇಲ್ಲಿದೆ.

ನಿಮಗೆ ಗೊತ್ತ? ಈ ಬೀಚ್ ಅನ್ನು ಚುನ್ನಂಬಾರ್ ರೆಸಾರ್ಟ್‍ನಿಂದ ನಿರ್ವಹಿಸಲ್ಪಡುತ್ತಿರುವ ಪಾಂಡಿಚೇರಿಯಲ್ಲಿರುವ ಸ್ವಚ್ಛ ಮತ್ತು ಅತ್ಯುತ್ತಮ ಬೀಚ್‍ಗಳಲ್ಲಿ ಒಂದಾಗಿದೆ. ಬೋಟಿಂಗ್ ಕೂಡ ಇಲ್ಲಿ ಆನಂದಿಸಬಹುದು. ದೋಣಿ ವಿಹಾರಕ್ಕೆ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವೆರೆಗೆ ಅವಕಾಶವಿರುತ್ತದೆ.

PC: Rupam Dey


ಮಾಹೆ ಬೀಚ್

ಮಾಹೆ ಬೀಚ್

ಮಾಹೆ ದಕ್ಷಿಣ ಭಾರತದ ಪಾಂಡಿಚೇರಿಯ ಕೇಂದ್ರಾಡಳಿತ ಪ್ರದೇಶದಲ್ಲಿದೆ. ಮಾಹೆ ಬೀಚ್ ಅತ್ಯಂತ ಹೆಸರುವಾಸಿಯಾದ ಬೀಚ್ ಆಗಿದ್ದು, ಬೋಟ್ ಹೌಸ್, ಸ್ಪೀಡ್ ಬೋಟ್‍ಗಳು, ಪೆಡಲ್ ದೋಣಿಗಳು ಮುಖ್ಯವಾದ ಆಕರ್ಷಣೆಗಳಾಗಿವೆ. ಈ ಬೀಚ್ ಮುಖ್ಯವಾಗಿ ಶಾಂತಿ ಹುಡುಕುವವರಿಗೆ ಹಾಗು ಛಾಯಚಿತ್ರಕಾರರಿಗೆ ಉತ್ತಮವಾದ ತಾಣವೆಂದೇ ಹೇಳಬಹುದು. ಪಾಂಡಿಚೇರಿಯ ಏಕಾಂತ ಮತ್ತು ಸುಂದರವಾದ ಬೀಚ್‍ಗಳಲ್ಲಿ ಇದು ಕೂಡ ಒಂದಾಗಿದೆ.

ಇಲ್ಲಿ ಪ್ರವಾಸಿಗರು ಛಾಯಚಿತ್ರಗಳನ್ನು ತೆಗೆದುಕೊಳ್ಳಲು, ಸೂರ್ಯಾಸ್ತವನ್ನು, ಮೀನುಗಾರಿಗೆ ಪ್ರಯತ್ನಿಸುವುದು, ದೋಣಿ ವಿಹಾರಗಳಂತಹ ಚಟುವಟಿಕೆಗಳನ್ನು ಆನಂದಿಸಬಹುದು. ಮಾಹೆಗೆ ಭೇಟಿ ನೀಡಲು ಅತ್ಯುತ್ತಮವಾದ ಸಮಯವೆಂದರೆ ಅದು ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ ಅತ್ಯುತ್ತಮವಾದ ಕಾಲಾವಧಿಯಾಗಿದೆ.

ಕಾರೈಕಲ್ ಬೀಚ್

ಕಾರೈಕಲ್ ಬೀಚ್

ಪಾಂಡಿಚೇರಿಯ ನೈಸರ್ಗಿಕ ಸೌಂದರ್ಯವನ್ನು ಹೊಂದಿರುವ ಬೀಚ್‍ಗಳಲ್ಲಿ ಕಾರೈಕಲ್ ಬೀಚ್ ಕೂಡ ಒಂದು. ಈ ಬೀಚ್ ಪ್ರೇಮಿಗಳಿಗೆ ಏಕಾಂತತೆಯನ್ನು ಮತ್ತು ಪ್ರಶಾಂತತೆಯನ್ನು ಒದಗಿಸುತ್ತದೆ. ಈ ಬೀಚ್ ಮುಖ್ಯವಾಗಿ ಜಲಕ್ರೀಡೆಗೆ ಹೆಸರುವಾಸಿಯಾಗಿದೆ. ಇಲ್ಲಿ ಪ್ಯಾಡಲ್ ದೋಣಿಗಳು, ಮೋಟಾರ್ ದೋಣಿಗಳು ಮತ್ತು ರೋಯಿಂಗ್ ದೋಣಿಗಳನ್ನು ಪ್ರವಾಸಿಗರು ಆನಂದಿಸಬಹುದು. ಇಷ್ಟೇ ಅಲ್ಲದೇ ಮಕ್ಕಳ ಪಾರ್ಕ್, ಕೆಲವು ಬೀಚ್ ರೆಸ್ಟೋರೆಂಟ್‍ಗಳು ಮತ್ತು ಟೆನ್ನಿಸ್ ಕೋರ್ಟ್‍ಗಳು ಕೂಡ ಇವೆ. ಪ್ರವಾಸಿಗರು ಈ ಬೀಚ್‍ನ ಸೂರ್ಯೋದಯ ಅಥವಾ ಸೂರ್ಯಾಸ್ತದ ಅನುಭವವನ್ನು ಅನುಭವಿಸಲು ಸೂಕ್ತವಾದ ಸಮಯವಾಗಿದೆ.

PC: Jassimjazz