Search
  • Follow NativePlanet
Share
» »ಈ ಮಳೆಗಾಲದಲ್ಲಿ ಗೋವಾಕ್ಕೆ ಹೋಗೋದಾದ್ರೆ ಎಲ್ಲಿಗೆಲ್ಲಾ ಹೋಗ್ಬೇಕು ?

ಈ ಮಳೆಗಾಲದಲ್ಲಿ ಗೋವಾಕ್ಕೆ ಹೋಗೋದಾದ್ರೆ ಎಲ್ಲಿಗೆಲ್ಲಾ ಹೋಗ್ಬೇಕು ?

ಗೋವಾ ನಿಜವಾಗಿಯೂ ಒಂದು ಉತ್ತಮ ಪ್ರವಾಸಿ ತಾಣವಾಗಿದೆ. ಧಾರ್ಮಿಕ ಕ್ಷೇತ್ರಗಳು, ಕಡಲ ತೀರಗಳು, ಪಾರ್ಟಿ ಸ್ಪಾಟ್‌ಗಳು ಎಲ್ಲವೂ ಗೋವಾದಲ್ಲಿದೆ. ದ್ವಿಚಕ್ರ ವಾಹನವನ್ನು ಬಾಡಿಗೆಗೆ ಪಡೆದು ಅದರ ಗ್ರಾಮೀಣ ಭಾಗಗಳನ್ನು ಅನ್ವೇಷಿಸುವುದು ಒಂದು ರೀತಿಯ ಮಜಾವನ್ನು ನೀಡುತ್ತದೆ. ಆ ಹೊಳೆಯುವ ನೈಟ್‌ಕ್ಲಬ್‌ಗಳು ಮತ್ತು ಅದರ ಕಡಲತೀರಗಳು ನಿಮ್ಮ ಮನಸ್ಸನ್ನು ಉಲ್ಲಾಸವಾಗಿಸುತ್ತದೆ.

ಮಾನ್ಸೂನ್‌ನಲ್ಲಿ ಗೋವಾ ಟೂರ್

ಮಾನ್ಸೂನ್‌ನಲ್ಲಿ ಗೋವಾ ಟೂರ್

ಈ ಮಳೆಗಾಲದಲ್ಲಿ ನೀವು ಗೋವಾವನ್ನು ಭೇಟಿ ಮಾಡಲು ಯೋಜಿಸುತ್ತಿದ್ದರೆ, ಗೋವಾನ ಸಮೃದ್ಧವಾದ ನೈಸರ್ಗಿಕ ಸೌಂದರ್ಯ, ಅಲ್ಲಿನ ಜೀವನ ಶೈಲಿ ಮತ್ತು ಬಾಯಲ್ಲಿ ನೀರೂರಿಸುವ ಗೋವಾ ಪಾಕಪದ್ಧತಿಯೂ ನಿಮ್ಮನ್ನು ಇನ್ನಷ್ಟು ದಿನ ಗೋವಾದಲ್ಲೇ ಉಳಿಯುವಂತೆ ಮಾಡುತ್ತದೆ. ಚಳಿಗಾಲಕ್ಕೆ ಹೋಲಿಸಿದರೆ ಮಳೆಗಾಲವು ಗೋವಾಕ್ಕೆ ಹೋಗಲು ಸೂಕ್ತವಾಗಿದೆ. ಜೊತೆಗೆ ಹೆಚ್ಚಿನ ಪ್ರವಾಸಿಗರೂ ಇರುವುದಿಲ್ಲ.

5 ಗಂಟೆ ನಂತರ ಇಲ್ಲಿಗೆ ಯಾರೂ ಹೋಗುವಾಗಿಲ್ಲ; ಏನಿದರ ಗುಟ್ಟು 5 ಗಂಟೆ ನಂತರ ಇಲ್ಲಿಗೆ ಯಾರೂ ಹೋಗುವಾಗಿಲ್ಲ; ಏನಿದರ ಗುಟ್ಟು

ಕಾರ್ ಬಾಡಿಗೆ ಪಡೆಯಿರಿ

ಕಾರ್ ಬಾಡಿಗೆ ಪಡೆಯಿರಿ

PC: raguleo

ಗೋವಾವನ್ನು ಸಂಪೂರ್ಣವಾಗಿ ಸುತ್ತಾಡಲು ಉತ್ತಮ ಮಾರ್ಗವೆಂದರೆ ಒಂದು ಕಾರನ್ನು ಬಾಡಿಗೆಗೆ ತೆಗೆದುಕೊಳ್ಳುವುದು. ಕಾರಿನ ಮೂಲಕ ಪಶ್ಚಿಮಘಟ್ಟಗಳ ಸುತ್ತಲೂ ಸುತ್ತಬಹುದು. ಆದ್ದರಿಂದ ಈ ಮಾನ್ಸೂನ್‌ನಲ್ಲಿ ಗೋವಾವನ್ನು ಸುತ್ತಾಡಲು ಯಾವೆಲ್ಲಾ ಸ್ಥಳಗಳಿಗೆ ಹೋಗಬೇಕು ಎನ್ನುವುದರ ಪಟ್ಟಿ ಇಲ್ಲಿದೆ.

ದೂಧ್ ಸಾಗರ್

ದೂಧ್ ಸಾಗರ್

PC: Hsp wiki

ದೂಧ್ ಸಾಗರ್ ಜಲಪಾತವು ಗೋವಾದಲ್ಲಿರುವ ನಲವತ್ತು ಜಲಪಾತಗಳಲ್ಲಿ ಒಂದಾಗಿದೆ. ಗೋವಾವನ್ನು ದೂಧ್ ಸಾಗರ್ ಜಲಪಾತದ ನೆಲೆಯಾಗಿದೆ. ಇದು ದುದ್ದಸಾಗರದಲ್ಲಿದೆ, ಮಾಂಡೋವಿ ನದಿಯಿಂದ ಸಂಪೂರ್ಣ ರಭಸದಲ್ಲಿ ಧುಮ್ಮುಕ್ಕುತ್ತದೆ. ಹಾಗಾಗಿ ಕೊಂಕಣ ಮಾನ್ಸೂನ್‌ಗಳು ಉತ್ತುಂಗದಲ್ಲಿದ್ದಾಗ ನೀವು ಗೋವದಲ್ಲಿದ್ದರೆ, ನಂತರ ದುಧ್ಸಾಗರ್ ಜಲಪಾತದ ಭವ್ಯತೆಯನ್ನು ಸಾಕ್ಷಿಯಾಗಬಹುದಾಗಿದೆ. ಈ ಜಲಪಾತವು ಮಹಾವೀರ್ ವನ್ಯಜೀವಿ ಅಭಯಾರಣ್ಯದಲ್ಲಿ ನೆಲೆಗೊಂಡಿದೆ. ಇದು ಜಲಪಾತದ ತಳದಲ್ಲಿ ಹೋಗಲು ಅರಣ್ಯದ ಮೂಲಕ ಚಾರಣ ಮಾಡಲು ನಿಮಗೆ ಅವಕಾಶ ನೀಡುತ್ತದೆ. ಈ ಜಲಪಾತದ ಮೂಲಕ ಹಾದು ಹೋಗುವ ರೈಲನ್ನೂ ನೀವು ಎರಬಹುದು. ಈ ಮೂಲಕ ಜಲಪಾತದ ರಮಣೀಯ ಸೃಶ್ಯವನ್ನು ಕಣ್ತುಂಬಿಸಿಕೊಳ್ಳಬಹುದು.

ಈ ದೇವಸ್ಥಾನದಲ್ಲಿ ಸ್ಟ್ಯಾಂಪ್ ಪೇಪರ್‌ನಲ್ಲಿ ತಮ್ಮ ಬೇಡಿಕೆಯನ್ನು ಬರೆತ್ತಾರಂತೆ ಜನಈ ದೇವಸ್ಥಾನದಲ್ಲಿ ಸ್ಟ್ಯಾಂಪ್ ಪೇಪರ್‌ನಲ್ಲಿ ತಮ್ಮ ಬೇಡಿಕೆಯನ್ನು ಬರೆತ್ತಾರಂತೆ ಜನ

ದಕ್ಷಿಣದಲ್ಲಿ ನದಿ ನದಿಗಳ ಮೂಲಕ ರಾಫ್ಟ್

ದಕ್ಷಿಣದಲ್ಲಿ ನದಿ ನದಿಗಳ ಮೂಲಕ ರಾಫ್ಟ್

ಮಳೆಗಾಲದಲ್ಲಿ ನದಿಗಳು ನೀರಿನಿಂದ ತುಂಬಿರುತ್ತದೆ. ಮತ್ತು ಇದು ನದಿಯ ರಾಫ್ಟಿಂಗ್‌ಗೆ ಹೆಚ್ಚು ಸೂಕ್ತವಾಗಿದೆ. ಮತ್ತು ದಟ್ಟವಾದ ಉಷ್ಣವಲಯದ ಕಾಡುಗಳ ಮೂಲಕ ಹಾದುಹೋಗುವ ಮಹಾದಾಯಿ ನದಿಯ ಬಲವಾದ ಪ್ರವಾಹಗಳಲ್ಲಿ ರಾಫ್ಟಿಂಗ್ ನ್ನು ಎಂದಾದರೂ ಅನುಭವಿಸಿದ್ದೀರಾ. ಇದು ಅತ್ಯಂತ ಸಾಹಸ ಮತ್ತು ರೋಮಾಂಚಕಾರಿಯಾಗಿರುವುದರಲ್ಲಿ ಸಂದೇಹವೇ ಇಲ್ಲ.

ಮಸಾಲೆ ತೋಟ

ಮಸಾಲೆ ತೋಟ

ಗೋವಾದಲ್ಲಿರುವ ಅನೇಕ ಮಸಾಲೆ ತೋಟಗಳಲ್ಲಿ ಒಂದನ್ನು ಭೇಟಿ ನೀಡುವುದು ಉತ್ತಮವಾಗಿದೆ. ವಿವಿಧ ಮಸಾಲೆಗಳ ಮಾದಕ ದ್ರವ್ಯಗಳು ತಂಪಾದ ಗಾಳಿಯಲ್ಲಿ ಕಾಲಹರಣ ಮಾಡುತ್ತವೆ. ನೀವು ಮಸಾಲೆ ಕೃಷಿ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದು ಮತ್ತು ಸ್ಮಾರಕಗಳ ಹೆಸರಿನಲ್ಲಿ ಕೆಲವು ಮಸಾಲೆಗಳು ಮತ್ತು ತೈಲಗಳನ್ನು ಖರೀದಿಸಬಹುದು. ಉದ್ಯಾನಗಳಲ್ಲಿ ಸ್ವಾಗತಾರ್ಹ ಊಟವನ್ನು ತಪ್ಪಿಸಿಕೊಳ್ಳಬೇಡಿ.

ವನ್ಯಜೀವಿ ಅಭಯಾರಣ್ಯ

ವನ್ಯಜೀವಿ ಅಭಯಾರಣ್ಯ

ಮಳೆಗಾಲದಲ್ಲಿ ಗೋವಾ ಸುತ್ತಲೂ ಅನೇಕ ವನ್ಯಜೀವಿ ಅಭಯಾರಣ್ಯಗಳನ್ನು ಭೇಟಿ ಮಾಡಬಹುದು. ಭಗವಾನ್ ಮಹಾವೀರ ಅಭಯಾರಣ್ಯ, ಮೊಲೆಮ್ ರಾಷ್ಟ್ರೀಯ ಉದ್ಯಾನ ಮತ್ತು ಮಹಾದಾಯಿ ವನ್ಯಜೀವಿ ಅಭಯಾರಣ್ಯ ಗಳು ಗೋವಾದ ರಾಜಧಾನಿ ಪಣಜಿಯಿಂದ ಒಂದು ಗಂಟೆಗಳ ಅಂತರದಲ್ಲಿದೆ. ಈ ಅಭಯಾರಣ್ಯದಲ್ಲಿ ಮಾನ್ಸೂನ್ ಕಾಡೆಮ್ಮೆ, ಕೋತಿಗಳು, ಜಿಂಕೆಗಳ ಹಿಂಡು, ಇತ್ಯಾದಿ ಪ್ರಾಣಿಗಳಿವೆ. ಅಪರೂಪಕ್ಕೆ ಸಿಮಹಗಳು ನಿಮ್ಮ ಕಣ್ಣಿಗೆ ಬೀಳುವುದೂ ಇದೆ.

 ಬೋಟ್ ವಿಹಾರ

ಬೋಟ್ ವಿಹಾರ

ಒಂದು ಐಷಾರಾಮಿ ಬೋಟ್‌ ವಿಹಾರದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬಹುದು. ಇನ್ನೂ ಮಾನ್ಸೂನ್ ನಲ್ಲಿ ಗೋವಾದ ಮಾಂಡೋವಿ ನದಿಯಲ್ಲಿ ಸಂಜೆ ಸಮಯದಲ್ಲಿ 2 ಗಂಟೆ ವಿಹಾರ ಮಾಡಬಹುದು. ದೋಣಿಯು ಬೆರಗುಗೊಳಿಸುವ ದೀಪಗಳಿಂದ ಪ್ರಕಾಶಿಸುವಂತೆ ಅದ್ಭುತ ಭಾಸವಾಗುತ್ತದೆ. ಹಡಗಿನಲ್ಲಿ ನಡೆಯುವ ಚಟುವಟಿಕೆಗಳಲ್ಲಿ ಕ್ಯಾಸಿನೊ, ನೃತ್ಯ ಮತ್ತು ಸಂಗೀತ ಪ್ರದರ್ಶನಗಳು, ತಿಂಡಿಗಳು ಇವೆಲ್ಲವೂ ನಿಮ್ಮನ್ನು ಸುಖದಲ್ಲಿ ತೇಲುವಂತೆ ಮಾಡುತ್ತದೆ. ಈ ಭಾರಿ ಮಳೆಗಾಲದಲ್ಲಿ ನೀವು ಗೋವಾ ವಿಹಾರದಲ್ಲಿ ಸಂಪೂರ್ಣ ಆನಂದವನ್ನು ಪಡೆಯಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X