Search
  • Follow NativePlanet
Share
» »ಈ ಎರಡು ರೀತಿಯ ಪ್ರವಾಸಿಗರು ನಿಮಗೆ ಗೊತ್ತೆ?

ಈ ಎರಡು ರೀತಿಯ ಪ್ರವಾಸಿಗರು ನಿಮಗೆ ಗೊತ್ತೆ?

By Vijay

ಸಾಮಾನ್ಯವಾಗಿ ಪ್ರವಾಸಿಗರಲ್ಲಿ ಎರಡು ರೀತಿಯ ಪ್ರವಾಸಿಗರಿರುತ್ತಾರೆ. ಇವರ ಮುಖ್ಯ ಲಕ್ಷಣ ಪ್ರವಾಸ ಮಾಡುವುದೆ ಆಗಿದ್ದರೂ ಸಹ ಒಬ್ಬರಿಗಿಂತ ಇನ್ನೊಬ್ಬರು ಅತಿ ವಿಶಿಷ್ಟ ಹಾಗು ಬಲು ಭಿನ್ನ. ಎರಡೂ ರೀತಿಯ ಪ್ರವಾಸಿಗರು ಒಂದೆ ಸ್ಥಳಕ್ಕೆ ಹೋದರೂ ಸಹ ಅವರಿಬ್ಬರು ಪಡೆಯುವ ಅನುಭವವೆ ಬೇರೆ ಬೇರೆ.

ವನ್ಯಜೀವನ ಛಾಯಾಚಿತ್ರ ಕಲೆ ನಿಮ್ಮಲ್ಲೂ ಇರಬಹುದೆ?

ಹಾಗಾದರೆ, ಈ ಎರಡು ರೀತಿಯ ಪ್ರವಾಸಿಗರ್ಯಾರು ಎಂಬ ಪ್ರಶ್ನೆ ನಿಮಗೆ ಈಗಾಗಲೆ ಕಾಡುತ್ತಿದೆಯಲ್ಲವೆ? ಹಾಗಿದ್ದರೆ ಕೇಳಿ ಒಬ್ಬರು ಬ್ಯಾಗ್ ಪ್ಯಾಕರ್ ಪ್ರವಾಸಿಗರಾದರೆ ಇನ್ನೊಬ್ಬರು ಯೋಜನಾಬದ್ಧ ಪ್ರವಾಸಿಗರು. ತಮ್ಮ ಬೆನ್ನಿನ ಮೇಲೆ ದೊಡ್ಡದಾದ ಮೂಟೆ ರೀತಿಯ ಚೀಲವೊಂದನ್ನೂ ಅದರಲ್ಲಿ ತಮಗೆ ನಿತ್ಯ ಬೇಕಾದ ಸಾಮಾನು ಸರಂಜಾಮುಗಳನ್ನು ಹಾಕಿಕೊಂಡು ಸ್ವತಂತ್ರವಗಿ ತಿರುಗುವವರೆ ಬ್ಯಾಕ್ ಪ್ಯಾಕರ್ಸ್.

ಈ ಎರಡು ರೀತಿಯ ಪ್ರವಾಸಿಗರು ನಿಮಗೆ ಗೊತ್ತೆ?

ಚಿತ್ರಕೃಪೆ: Javi Sánchez de la viña

ಇತ್ತೀಚೆಗೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಬ್ಯಾಕ್ ಪ್ಯಾಕರ್ಸ್ ಎಂಬ ವಿಧಾನದ ಪ್ರವಾಸ ಬಲು ಜನಪ್ರೀಯವಾಗುತ್ತಿದೆ. ಇದೊಂದು ರೀತಿಯ ನೈಜ ಪ್ರವಾಸ ಎಂತಲೆ ವ್ಯಾಖ್ಯಾನಿಸಬಹುದು. ಇಲ್ಲಿ ಪ್ರವಾಸಿಗನ ಮುಖ್ಯ ಉದ್ದೇಶ ಸ್ಥಳದ ಕುರಿತು ವಿವರವಾದ ಮಾಹಿತಿ, ಪ್ರದೇಶದ ಸಂಸ್ಕೃತಿ-ಸಂಪ್ರದಾಯಗಳನ್ನು ಹತ್ತಿರದಿಂದು ನೊಡುವುದು, ಜನರ ಆಚಾರ-ವಿಚಾರಗಳನ್ನು ತಿಳಿಯುವುದು ಮುಖ್ಯವಾಗಿರುತ್ತದೆ.

ಬ್ಯಾಕ್ ಪ್ಯಾಕರ್ಸ್ ಸಾಹಸಿ ಪ್ರವೃತ್ತಿಯುಳ್ಳವರೆ ಆಗಿರುತ್ತಾರೆ. ಇವರು ಆದಷ್ಟು ಕಡಿಮೆ ವಚ್ಚದಲ್ಲಿ ಪ್ರವಾಸ ಕೈಗೊಳ್ಳುತ್ತಾರೆ. ತೆರಳಲು ಅದೆ ಬೇಕು, ಇದೆ ಬೇಕು ಅಂತೇನಿಲ್ಲ. ಸಿಕ್ಕ ಸಿಕ್ಕ ವಾಹನಗಳಲ್ಲಿ ಜನರ ಮಧ್ಯೆ, ಜನರಿಂದ ಸಹಾಯ ಪಡೆಯುತ್ತ ಯಾವ ರೀತಿಯ ವಾಹನಗಳಲ್ಲಾದರೂ ಸರಿ ಪ್ರವಾಸ ಮಾಡುವ ವ್ಯಕ್ತಿತ್ವದವರಾಗಿರುತ್ತಾರೆ.

ಈ ಎರಡು ರೀತಿಯ ಪ್ರವಾಸಿಗರು ನಿಮಗೆ ಗೊತ್ತೆ?

ಚಿತ್ರಕೃಪೆ: roger.williams

ಗುಂಪುಗಳಿವೆಯಾದರೂ ಸಾಮಾನ್ಯವಾಗಿ ಬ್ಯಾಕ್ ಪ್ಯಾಕರ್ಸ್ ಸ್ವತಂತ್ರ ಪ್ರವಾಸಿಗರು. ಹೋಟೆಲ್ ಬುಕ್ಕಿಂಗ್ ಆಗಲಿ, ಟಿಕೆಟ್ ಗಳನ್ನು ಮುಂಗಡವಾಗಿ ಬುಕ್ ಮಾಡುವುದಾಗಲಿ ಇಲ್ಲವೆ ಇಲ್ಲ. ಆಯಾ ಸಂದರ್ಭದಲ್ಲಿ ಯಾವ ವಾಹನಗಳು ದೊರೆಯುತ್ತದೊ ಅದೆ ಮಾರ್ಗವಾಗಿ ಪ್ರವಾಸ ಮಾಡಬಯಸುತ್ತಾರೆ. ಇವರಿಗೆ ಗೊತ್ತು ಗುರಿಯಿಲ್ಲದ ಸ್ಥಳಗಳಿಗೆ ಹೋಗಿ ಅಲ್ಲಿ ಅನ್ವೇಷಿಸುವುದೆಂದರೆ ಬಲು ಇಷ್ಟ. ಹಾಗಾಗಿ ಇವರು ಒಂದು ರೀತಿಯ ಸಾಹಸಿಗರೆ ಹೌದು.

ಮೊದಲ ಈ ವಿಷಯಗಳನ್ನು ತಿಳಿಯಿರಿ ನಂತರ ಪ್ರವಾಸ ಮಾಡಿ

ಇನ್ನೂ ಎರಡನೇಯ ಕೆಟಗರಿಯವರು ಯೋಜನಾಬದ್ಧ ಪ್ರವಾಸಿಗರು. ಇವರು ಮುಂಚಿತವಾಗಿಯೆ ಎಲ್ಲಿ ಹೊರಡಬೇಕೆಂದು, ಅಲ್ಲಿ ತಂಗಲು ಇರುವ ವ್ಯವಸ್ಥೆ, ಮುಂತಾದ ವಿಷಯಗಳನ್ನು ಪರಿಶೀಲಿಸಿ ಬುಕ್ಕಿಂಗ್ ಮಾಡಿ ಯಾವ ರೀತಿಯ ತೊಂದರೆಗಳೂ ಆಗದ ಹಾಗೆ ಪ್ರವಾಸ ಮಾಡಬಯಸುತ್ತಾರೆ. ತಮ್ಮ ಯೋಜನಾಬದ್ಧ ಪ್ರವಾಸದಿಂದಾಗಿ ಇವರು ತಮ್ಮ ಪ್ರತಿ ಸ್ಥಳಗಳ ನಿರ್ದಿಷ್ಟ ಆಕರ್ಷಣೆಗಳನ್ನು ನೋಡಿ ಆನಂದಿಸುತ್ತಾರೆ.

ಸಾಮಾನ್ಯವಾಗಿ ಇಂದು ಬಹುತೇಕರು ದುಡಿಯುವ ವರ್ಗದವರಾಗಿರುವುದರಿಂದ ತಮಗೆ ಸಿಗುವ ರಜೆಗಳ ಲೆಕ್ಕ ಹಾಕಿ, ವ್ಯಯಿಸಬಹುದಾದ ಸಮಯದ ಕುರಿತು ಆಲೋಚಿಸಿ ಮೊದಲೆ ಎಲ್ಲವನ್ನೂ ಆಯೋಜಿಸಿ ಸಿಕ್ಕ ಸಮಯದಲ್ಲೆ ಪ್ರವಾಸಿ ತಾಣಗಳ ಅನುಭವವನ್ನು ಪಡೆಯುತ್ತಾರೆ ಹಾಗೂ ಹುರುಪುಗೊಳ್ಳುತ್ತಾರೆ. ವಿಶೇಷವೆಂದರೆ ಬಹುತೇಕ ಜನರಿಗೆ ಈ ರೀತಿಯ ಪ್ರವಾಸವೆ ಬಲು ಇಷ್ಟವಾಗುತ್ತದೆ.

ಈ ಎರಡು ರೀತಿಯ ಪ್ರವಾಸಿಗರು ನಿಮಗೆ ಗೊತ್ತೆ?

ಇಂದು ಪ್ರವಾಸ ಎಂಬುವುದು ಒಂದು ಸಂತಸ ನೀಡುವ ಚಟುವಟಿಕೆಯಾಗಿದ್ದು ಅದನ್ನು ಸ್ನೇಹಿತರೊಂದಿಗೆ ಹಾಗೂ ಕುಟುಂಬದವರೊಂದಿಗೆ ಅದ್ಭುತವಾಗಿ ಅನುಭವಿಸಬಹುದಾಗಿದೆ. ಇತ್ತ ದುಡಿಯುವ ಜೀವನವೂ ಇರುವುದರಿಂದ ಆಗಾಗ ಸಮಯ ಸಿಕ್ಕಾಗ ಈ ರೀತಿಯ ಯೋಜನಾಬದ್ಧ ಪ್ರವಾಸ ಮಾಡುವುದೆ ಬಹುತೇಕರಿಗೆ ಉತ್ತಮವಾದ ಆಯ್ಕೆಯಾಗಿದೆ.

ಇನ್ನೂ ಮದುವೆ ಆಗಿಲ್ಲವೆಂದರೆ ಈ ಸಾಹಸಮಯ ಟ್ರೆಕ್ ಗಳನ್ನೊಮ್ಮೆ ಮಾಡಿ ನೋಡಿ

ಆದಾಗ್ಯೂ ನೀವೊಬ್ಬ ಪ್ರಬುದ್ಧ ಮನಸ್ಸಿನ ನೈಜ ಪ್ರವಾಸಿಗ, ಅನ್ವೇಷಕನಾಗಿದ್ದಲ್ಲಿ, ಹಲವು ಸಂಸ್ಕೃತಿ-ಸಂಪ್ರದಾಯಗಳನ್ನು ಅತಿ ಹತ್ತಿರದಿಂದ ನೋಡಬೇಕೆನ್ನುವ ಹಂಬಲ ನಿಮ್ಮಲ್ಲಿದ್ದಲ್ಲಿ, ಅಲ್ಲದೆ ನಿಮಗೆ ಯಾವ ರೀತಿಯ ಸಮಯದ ಅಭಾವ ಇಲ್ಲದಿದ್ದಲ್ಲಿ ಬ್ಯಾಗೊಂದನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಪ್ರವಾಸಕ್ಕೆಂದು ಹೊರಟು ಬಿಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X