Search
  • Follow NativePlanet
Share
» »ಕಾಶಿ ವಿಶ್ವನಾಥಕ್ಕಿಂತಲೂ ಪುಣ್ಯಕ್ಷೇತ್ರವಂತೆ ಇದು

ಕಾಶಿ ವಿಶ್ವನಾಥಕ್ಕಿಂತಲೂ ಪುಣ್ಯಕ್ಷೇತ್ರವಂತೆ ಇದು

ತಮಿಳುನಾಡಿನಲ್ಲಿ ಕಾಶಿಗಿಂತಲೂ ಪುರಾತನವಾದ ಒಂದು ದೇವಾಲಯವಿದೆ. ಈ ದೇವಾಲಯದ ದರ್ಶನ ಪಡೆದ್ರೆ ಕಾಶಿ ವಿಶ್ವನಾಥನ ದರ್ಶನ ಪಡೆದಕ್ಕಿಂತಲೂ ಹೆಚ್ಚು ಪುಣ್ಯ ಲಭಿಸುತ್ತದೆ ಎನ್ನಲಾಗುತ್ತದೆ. ಇಲ್ಲಿ ನೀವು ಹುಟ್ಟಿದಾಗಿನಿಂದ ಸಾಯುವವರೆಗೂ ಮಾಡಿದ ತಪ್ಪುಗಳನನ್ನು ಕ್ಷಮಿಸಿ ಕೈಲಾಸಕ್ಕೆ ಕಳಿಸಲಾಗುತ್ತದೆ ಎನ್ನುವ ಪ್ರತೀತಿ. ಹಾಗಾಗಿ ಕಾಶಿಯಲ್ಲಿ ತಮ್ಮ ತಪ್ಪಿಗೆ ಕ್ಷಮೆ ಸಿಗದಿದ್ದರೂ ಈ ಕ್ಷೇತ್ರದಲ್ಲಿ ಕ್ಷಮೆ ಸಿಗುತ್ತದೆ. ಹಾಗಾಗಿ ಬಹುತೇಕರು ಸಾಯುವ ಕಾಲಕ್ಕೆ ಇಲ್ಲಿಗೆ ಬರುತ್ತಾರೆ.

 ವೃದ್ಧ ಕಾಶಿ

ವೃದ್ಧ ಕಾಶಿ

PC; youtube

ವೃದ್ಧಾಚಲಾವನ್ನು ವೃದ್ಧ ಕಾಶಿ ಎಂದೂ ಕರೆಯುತ್ತಾರೆ. ಕಾಶಿಯಲ್ಲಿ ಸಾವನ್ನಪ್ಪಿದರೆ ಮೋಕ್ಷ ದೊರೆಯುತ್ತದೆ ಎನ್ನಲಾಗುತ್ತದೆ. ಆದರೆ ಸ್ಥಳ ಪುರಾಣ ಪ್ರಕಾರ ವೃದ್ಧ ಕಾಶಿ ಎಂದೇ ಕರೆಯಲ್ಪಡುವ ಇಲ್ಲಿ ಸತ್ತರೆ ಕಾಶಿಯಲ್ಲಿ ಸತ್ತವರಿಗಿಂತಲೂ ಅಧಿಕ ಪುಣ್ಯ ಲಭಿಸುತ್ತದಂತೆ.

ನಂದಿಹಿಲ್ಸ್‌ನಲ್ಲಿ ಬೆಳ್ಳಂಬೆಳಗ್ಗೆ ಬೆಟ್ಟದ ಬಿರಿಯಾನಿನಂದಿಹಿಲ್ಸ್‌ನಲ್ಲಿ ಬೆಳ್ಳಂಬೆಳಗ್ಗೆ ಬೆಟ್ಟದ ಬಿರಿಯಾನಿ

ಮೋಕ್ಷ ನೀಡಲಾಗುತ್ತದೆ

ಮೋಕ್ಷ ನೀಡಲಾಗುತ್ತದೆ

PC; youtube
ವೃದ್ಧಾಚಲಾ ವೃದ್ಧಗಿರೀಶ್ವರ ದೇವಾಲಯವು ತಮಿಳುನಾಡಿನ ಕಡ್ಡಲೂರು ಜಿಲ್ಲೆಯಲ್ಲಿದೆ. ಕಾಶಿಯಲ್ಲಿರುವಂತೆ ಸಾಯುವ ವ್ಯಕ್ತಿಯ ತಲೆಯನ್ನು ತೊಡೆಯ ಮೇಲಿರಿಸುವ ಸ್ಥಳ ಇಲ್ಲೂ ಇದೆ. ಆದರೆ ಇಲ್ಲಿ ವ್ಯಕ್ತಿಯ ಕಿವಿಯಲ್ಲಿ ಶಿವನ ತಾರಕ ಮಂತ್ರವನ್ನು ಉಪದೇಶಿಸಿ ಅವರಿಗೆ ಮೋಕ್ಷ ನೀಡುತ್ತಾನೆ ಎಂದು ಹೇಳಲಾಗುತ್ತದೆ.

ನಟರಾಜ ರೂಪ

ನಟರಾಜ ರೂಪ

PC; youtube
ಹಾಗೆಯೇ, ಶಿವ ನಟರಾಜ ರೂಪದಲ್ಲಿ ತನ್ನ ನೃತ್ಯಕ್ಕೆ ಹೆಸರುವಾಸಿಯಾಗಿದ್ದಾನೆ. ಇಲ್ಲಿ ಶಿವನು ತನ್ನ ಸಂತೋಷಕ್ಕಾಗಿ ನೃತ್ಯ ಮಾಡುತ್ತಿದ್ದಾನೆ ಎಂದು ಹೇಳಲಾಗುತ್ತದೆ.

ಕಳಸದಲ್ಲಿ ಒಡಮೂಡಿರುವ ಮೂಡಿಗೆರೆಯ ಕಳಶೇಶ್ವರನ ದರ್ಶನ ಮಾಡಿದ್ದೀರಾ?ಕಳಸದಲ್ಲಿ ಒಡಮೂಡಿರುವ ಮೂಡಿಗೆರೆಯ ಕಳಶೇಶ್ವರನ ದರ್ಶನ ಮಾಡಿದ್ದೀರಾ?

ವಿವಿಧ ಹೆಸರುಗಳಿವೆ

ವಿವಿಧ ಹೆಸರುಗಳಿವೆ

PC; youtube
ಈ ಪ್ರಾಂಗಣದಲ್ಲಿ ಐದು ದೇವರ ಮೂರ್ತಿಗಳಿವೆ. ವಿನಾಯಕ, ಶಕ್ತಿ, ಬೈರವ, ಸುಬ್ರಹ್ಮಣ್ಯೇಶ್ವರ, ಶಿವ. ಇಲ್ಲಿ ಶಿವನನ್ನು ಐದು ಹೆಸರಿನಿಂದ ಕರೆಯಲಾಗುತ್ತದೆ. ಗಿರೀಶ್ವರ, ಪಜಮಲಿನಾಧರ್, ವಿರುಧಚಲೇಶ್ವರ, ಮುದುಕೊಂಡೃರಿಸ್ವರ, ವೃದ್ಧಗಿರೀಶ್ವರ.

ಐದು ಬಾರಿ ಪೂಜೆ

ಐದು ಬಾರಿ ಪೂಜೆ

PC; youtube
ಈ ದೇವಾಲಯವು ಐದು ಗೋಪುರಗಳನ್ನು ಹೊಂದಿದೆ. ಐದು ಕಂಚುಗಳು ಐದು ನಂದಿಗಳಿವೆ. ಮುಂಜಾವಿನಿಂದ ರಾತ್ರಿಯವರೆಗೆ ಐದು ಬಾರಿ ಪೂಜಿಸಲಾಗುತ್ತದೆ.

ಇಲ್ಲಿ ತಮ್ಮ ಕೋರಿಕೆ ಈಡೇರಿದರೆ ಮಣ್ಣಿನ ಗೊಂಬೆಯನ್ನು ಹರಕೆ ಸಲ್ಲಿಸುತ್ತಾರೆ ಭಕ್ತರುಇಲ್ಲಿ ತಮ್ಮ ಕೋರಿಕೆ ಈಡೇರಿದರೆ ಮಣ್ಣಿನ ಗೊಂಬೆಯನ್ನು ಹರಕೆ ಸಲ್ಲಿಸುತ್ತಾರೆ ಭಕ್ತರು

ಐದು ರಥಗಳಿವೆ

ಐದು ರಥಗಳಿವೆ

PC; youtube
ಯಾವುದೇ ದೇವಾಲಯದಲ್ಲಿ ಐದು ರಥಗಳಿರುತ್ತವೆ. ಇಲ್ಲಿಯೂ ಐದು ರಥಗಳು ಇವೆ. ಇಲ್ಲಿ ಶಿವನಿಗೆ ಪ್ರಾರ್ಥನೆ ಮಾಡಿದರೆ ಮನಃಶಾಂತಿ ದೊರೆಯುತ್ತದೆ. ಹಾಗೆಯೇ ದೇಹದ ಅನಾರೋಗ್ಯ ದೂರವಾಗುತ್ತದೆ ಎನ್ನಲಾಗುತ್ತದೆ.

ಬೇಡಿಕೆ ಈಡೇರುತ್ತದೆ

ಬೇಡಿಕೆ ಈಡೇರುತ್ತದೆ

PC; youtube
ಇಲ್ಲಿರುವ ದುರ್ಗಾದೇವಿಯನ್ನು ಪೂಜಿಸಿದ್ರೆ ವಿವಾಹ ಭಾಗ್ಯ, ಸಂತಾನ ಭಾಗ್ಯ ಹಾಗೂ ಇನ್ನಿತರ ಕೋರಿಕೆಗಳು ಈಡೇರುತ್ತವೆ ಎನ್ನಲಾಗುತ್ತದೆ. ಇಲ್ಲಿ ದೇವರು ಸ್ವಯಂ ಭೂ ಆಗಿದ್ದಾನೆ.

ನಾಣ್ಯಗಳು ನದಿಯಲ್ಲಿ ತೇಲುತ್ತವೆ

ನಾಣ್ಯಗಳು ನದಿಯಲ್ಲಿ ತೇಲುತ್ತವೆ

PC; youtube
ಈ ವೃದ್ದಾಚಲದಲ್ಲಿ ನದಿಗೆ ಹಾಕಿದ ನಾಣ್ಯಗಳು ಪುಷ್ಕರಿಣಿಯಲ್ಲಿ ತೇಲುತ್ತವೆ ಎಂದು ಹೇಳಲಾಗುತ್ತದೆ. ಈ ವಿಷಯದ ಬಗ್ಗೆ ಅನೇಕ ಸಂಶೋಧನೆಗಳನ್ನು ನಡೆಸಲಾದರೂ ಯಾರೂ ಅದರ ಮರ್ಮವನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ.

ಸುಬ್ರಹ್ಮಣ್ಯೇಶ್ವರ ದೇವಾಲಯ

ಸುಬ್ರಹ್ಮಣ್ಯೇಶ್ವರ ದೇವಾಲಯ

PC; youtube
ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯವು ಇಲ್ಲಿದೆ. ದೇವಾಲಯದ ಮೇಲೆ ಚಕ್ರವಿದೆ. ಅದನ್ನು ಶ್ರೀ ಚಕ್ರ, ಸುಬ್ರಹ್ಮಣ್ಯ ಚಕ್ರ, ಎನ್ನಲಾಗುತ್ತದೆ. ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ, ಈ ಚಕ್ರಗಳು ಕಾಣಸಿಗುವುದು ಬಹಳ ಕಡಿಮೆ. ಅಂತಹ ದೇವಾಲಯಗಳಲ್ಲಿ ಇದೂ ಒಂದು.

28 ಶಿವಲಿಂಗಗಳು

28 ಶಿವಲಿಂಗಗಳು

PC; youtube
ಹಾಗಾಗಿ ಇಲ್ಲಿ ಕೋರಿದ ಕೋರಿಕೆಗಳೂ ಬಹು ಬೇಗನೇ ಈಡೇರುತ್ತವೆ. ಶೈವ ಸಿದ್ದಾಂತದ ಪ್ರಕಾರ ೨೮ ಆಗಮ ಶಾಖೆಗಳು ಇವೆ. ೨೮ ಸಿದ್ಧಾಂತಕ್ಕೆ ಸಂಬಂಧಿಸಿದಂತೆ ೨೮ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ.

ದರ್ಶನದ ಸಮಯ

ದರ್ಶನದ ಸಮಯ

PC; youtube
ಈ ವಿಶೇಷ ದೇವಾಲವನ್ನು ಆಗಮ ದೇವಾಲಯ ಎಂದೂ ಕರೆಯುತ್ತಾರೆ. ಇಲ್ಲಿ ಪ್ರತಿದಿನ ಬೆಳಗ್ಗೆ ೬ ಗಂಟೆಯಿಂದ ಮಧ್ಯಾಹ್ಮ ೧೨ ಗಂಟೆ ವರೆಗೂ ಮಧ್ಯಾಹ್ನ ೩.೩೦ ಗಂಟೆಯಿಂದ ರಾತ್ರಿ ೯ ಗಂಟೆ ವರೆಗೂ ತೆರೆದಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X