Search
  • Follow NativePlanet
Share
» »ನಂದಿಹಿಲ್ಸ್‌ನಲ್ಲಿ ಬೆಳ್ಳಂಬೆಳಗ್ಗೆ ಬೆಟ್ಟದ ಬಿರಿಯಾನಿ

ನಂದಿಹಿಲ್ಸ್‌ನಲ್ಲಿ ಬೆಳ್ಳಂಬೆಳಗ್ಗೆ ಬೆಟ್ಟದ ಬಿರಿಯಾನಿ

ಬಿರಿಯಾನಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ನಾನ್‌ವೆಜ್‌ ಪ್ರೀಯರಂತೂ ನಾಲಗೆ ಚಪ್ಪರಿಸಿಕೊಂಡು ತಿನ್ನುತ್ತಾರೆ. ಬಿರಿಯಾನಿ ಅಂದ್ರೆ ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರಿಗೂ ಬಲು ಪ್ರೀಯವಾದ ಆಹಾರ ಅಂತಾನೇ ಹೇಳಬಹುದು. ನೀವು ಎಷ್ಟೇಲ್ಲಾ ವೆರೈಟಿ ಬಿರಿಯಾನಿ ತಿಂದಿರಬಹುದು. ಹೈದರಾಬಾದಿ ಬಿರಿಯಾನಿ, ಮೊಘಲೈ ಬಿರಿಯಾನಿ, ದೊನ್ನೆ ಬಿರಿಯಾಣಿ ಆದ್ರೆ ಯಾವತ್ತಾದ್ರೂ 'ಅಪ್ಪಟ ಕರ್ನಾಟಕ ಶೈಲಿ'ಯಲ್ಲಿ ಮಾಡಿರುವ ನಾಟಿ ಸ್ಟೈಲ್ ಬಿರಿಯಾನಿ ತಿಂದಿದ್ದೀರಾ?

ಬೆಟ್ಟದ ಬಿರಿಯಾನಿ

ಬೆಟ್ಟದ ಬಿರಿಯಾನಿ

ಬೆಂಗಳೂರಿನಲ್ಲಿರುವವರು ನಾನಾ ರೀತಿಯ ಬಿರಿಯಾನಿ ಸವಿದಿರುತ್ತೀರಿ, ಆದ್ರೆ ಬೆಂಗಳೂರಿನಲ್ಲಿರುವ ಬೆಟ್ಟದ ಬಿರಿಯಾನಿ ಬಗ್ಗೆ ಕೇಳಿದ್ದೀರಾ? ಇಲ್ಲ ತಿಂದಿದ್ದೀರಾ? ಈ ಬಿರಿಯಾನಿಯ ಹೆಸರೇ ಒಂಥರಾ ವಿಚಿತ್ರವಾಗಿದೆ ಅಲ್ವಾ?. ಬೆಟ್ಟದ ಬಿರಿಯಾನಿ. ಹಾಗಾದ್ರೆ ಈ ಬಿರಿಯಾನಿ ವಿಶೇಷ ಏನು? ಎಲ್ಲಿ ಸಿಗುತ್ತೆ ಅನ್ನೋದನ್ನು ತಿಳಿಯೋಣ.

ವೀಕೆಂಡ್‌ ಸ್ಪಾಟ್

ವೀಕೆಂಡ್‌ ಸ್ಪಾಟ್

ನಂದಿಹಿಲ್ಸ್‌ ಬೆಂಗಳೂರಿನ ಪ್ರಮುಖ ಪ್ರವಾಸಿ ತಾಣಗಳಲ್ಲೊಂದು. ಸಾಕಷ್ಟು ಜನ ಇಲ್ಲಿ ಸೂರ್ಯಾಸ್ತ ಹಾಗೂ ಸೂರ್ಯೋದಯವನ್ನು ನೋಡಲು ಬರುತ್ತಾರೆ. ಬೆಂಗಳೂರಿಗರಿಗೆ ನಂದಿಹಿಲ್ಸ್‌ ಒಂಥರಾ ವೀಕೆಂಡ್‌ ಸ್ಪಾಟ್ ಅಂತಾನೇ ಹೇಳಬಹುದು. ಇದೀಗ ನಂದಿಬೆಟ್ಟಕ್ಕೆ ಒಬ್ಬಬ್ಬರೇ ಹೋಗೋದನ್ನು ಬ್ಯಾನ್ ಮಾಡಿದ್ದಾರೆ ಅದು ಬೇರೆ ವಿಷ್ಯ ಬಿಡಿ. ಆದ್ರೆ ಫ್ರೆಂಡ್ಸ್‌ ಗ್ಯಾಂಗ್‌ ಜೊತೆ ಕಾಲಕಳೆಯಲು ಹೋಗುವವರಿಗೆ ಯಾವುದೇ ನಿರ್ಬಂಧವಿಲ್ಲ.

ನಂದಿಹಿಲ್ಸ್‌ಗೆ ಪ್ರಯಾಣ

ನಂದಿಹಿಲ್ಸ್‌ಗೆ ಪ್ರಯಾಣ

ಇನ್ನು ವೀಕೆಂಡ್‌ನಲ್ಲಿ ಫ್ರೆಂಡ್ಸ್‌ ಜೊತೆ ಬೈಕ್ ರೈಡ್‌ನಲ್ಲಿ ನಂದಿಹಿಲ್ಸ್‌ಗೆ ಹೋಗೋದಂದ್ರೆ ಅದೇ ಒಂಥರಾ ಮಜಾ. ಈಗ ನಾವು ನಂದಿಹಿಲ್ಸ್‌ ಬಗ್ಗೆ ಯಾಕೆ ಹೇಳ್ತಿದ್ದೇವಂದ್ರೆ. ಬೆಂಗಳೂರಿನಲ್ಲಿರುವವರಿಗೆ, ನಂದಿಬೆಟ್ಟಕ್ಕೆ ಹೋಗುವವರಿಗೆ ಈ ಬೆಟ್ಟದ ಬಿರಿಯಾನಿ ಮುಂಜಾನೆಯೇ ಟೇಸ್ಟ್‌ ಮಾಡೋ ಅವಕಾಶ ಸಿಗುತ್ತದೆ.

ಎಲ್ಲಿದೆ ಈ ಬಿರಿಯಾನಿ

ಎಲ್ಲಿದೆ ಈ ಬಿರಿಯಾನಿ

ಈ ಬೆಟ್ಟದ ಬಿರಿಯಾನಿಯು ನಂದಿ ಬೆಟ್ಟಕೆ ಹೋಗುವ ದಾರಿ ಮದ್ಯ , ಮೌಂಟ್ palazzo ಹೋಟೆಲ್ ಎದುರಿಗೆ , ನೀವು ಗೂಗಲ್ ಮ್ಯಾಪ್ಸ್ ನಲ್ಲಿ bettad biryani ಅಂತ ಟೈಪ್ ಮಾಡಿದರೆ ಅದೇ ದಾರಿ ತೋರಿಸುತ್ತೆ.. . ನಂದಿಹಿಲ್ಸ್‌ಗೆ ಬರುವ ಪ್ರವಾಸಿಗರ ಹೊಟ್ಟೆ ತುಂಬಿಸೋಕೆ ಒಳ್ಳೆಯ ಸ್ಪಾಟ್ ಇದಾಗಿದೆ.

ಏನಿದರ ವಿಶೇಷ

ಏನಿದರ ವಿಶೇಷ

ಈ ಬಿರಿಯಾನಿ ಅಡ್ಡದ ವಿಶೇಷ ಅಂದ್ರೆ ಇದು ನಿಮಗೆ ಪ್ರತಿದಿನ ಸಿಗೋದಿಲ್ಲ. ಬದಲಾಗಿ ಬರೀ ಭಾನುವಾರದಂದು ಸಿಗುತ್ತದೆ. ಉಳಿದ ಸಮಯದಲ್ಲಿ ನೀವಲ್ಲಿಗೆ ಹೋದ್ರೆ ಬರೀ ಬೆಟ್ಟವನ್ನು ನೋಡಿಕೊಂಡು ಬರಬೇಕಷ್ಟೇ.

ಬಿರಿಯಾನಿ ಮಿಸ್‌ ಆಗಲ್ಲ

ಬಿರಿಯಾನಿ ಮಿಸ್‌ ಆಗಲ್ಲ

ನೀವು ಬೆಳಗ್ಗಿನ ಸೂರ್ಯೋದಯವನ್ನಾದ್ರೂ ಮಿಸ್‌ ಮಾಡಬಹುದು ಆದ್ರೆ ನಮ್ಮ ಬಿರಿಯಾನಿಯನ್ನು ಮಿಸ್ ಮಾಡಲು ಸಾಧ್ಯವಿಲ್ಲ ಎನ್ನುವ ಅಡಿಬರಹದ ಅಡಿಯಲ್ಲಿ ಎಂಜಿನೀರಿಂಗ್ ಮುಗಿಸಿರೋ ಹುಡುಗರ ಗುಂಪೊಂದು ಈ ಬೆಟ್ಟದ ಬಿರಿಯಾನಿ ಬಡಿಸುತ್ತಿದ್ದಾರೆ.

ಯಾವಾಗ ತೆರೆದಿರುತ್ತದೆ

ಯಾವಾಗ ತೆರೆದಿರುತ್ತದೆ

ಈ ಬಿರಿಯಾನಿಯ ಇನ್ನೊಂದು ವಿಶೇಷ ಅಂದ್ರೆ ಇದು ಇತರ ಬಿರಿಯಾನಿ ಹೋಟೆಲ್‌ಗಳಂತೆ ಇಡೀ ದಿನ ಓಪನ್ ಇರೋದಿಲ್ಲ. ಬರೀ ಭಾನುವಾರದಂದು ಬೆಳಗ್ಗಿನ ಹೊತ್ತಿನಲ್ಲಷ್ಟೇ ಓಪನ್ ಇರುತ್ತದೆ. ಅದೂ ಕೂಡಾ ಬೆಳಗ್ಗೆ 6 ಗಂಟೆಗೆ ತೆರೆದರೆ ಮಧ್ಯಾಹ್ನ12 ಗಂಟೆಗೆ ಮುಚ್ಚುತ್ತದೆ. ನಿಮಗೆ ಬಿರಿಯಾನಿ ಬೇಕಂದ್ರೆ ಅಷ್ಟರೊಳಗಡೆ ಹೋಗಬೇಕು.

ಬೆಲೆ ಎಷ್ಟು?

ಬೆಲೆ ಎಷ್ಟು?

ಬೆಟ್ಟದ ಬಿರಿಯಾನಿ ಒಂದು ಪ್ಲೇಟ್‌ಗೆ ಕೇವಲ 80 ರೂ. ರುಚಿನೂ ಚೆನ್ನಾಗಿದೆ. ನಂದಿ ಬೆಟ್ಟ ಹತ್ತಿ ಇಳಿದು ಸುಸ್ತಾಗಿರುವ ದೇಹಕ್ಕೆ, ಹಸಿದ ಹೊಟ್ಟೆಗೆ ಬಿರಿಯಾನಿ ಬೀಳುವಾಗ ನಿಮ್ಮ ಆಯಾಸವೆಲ್ಲಾ ದೂರವಾಗುತ್ತದೆ. ಹೆಚ್ಚಾಗಿ ನಂದಿಬೆಟ್ಟದ ಸುತ್ತಮುತ್ತ ಎಲ್ಲೂ ಹೊಟ್ಟೆ ತುಂಬಿಸಿಕೊಳ್ಳುವಂತಹ ಸ್ಪಾಟ್‌ ಕಾಣಿಸೋದೇ ಇಲ್ಲ. ಅದ್ರಲ್ಲೂ ನಾನ್ ವೆಜ್ ಹೋಟೆಲ್‌ಗಳು ಇಲ್ಲವೇ ಇಲ್ಲ. ಕೆಫೆ ತರಹ ರೆಸ್ಟೋರೆಂಟ್‌ ಗಳಲ್ಲಿ ಊಟದ ಬೆಲೆ ಬೆಟ್ಟಗಿಂತ ಮೇಲಿರುತ್ತದೆ. ಬೆಟ್ಟದ ಬಿರಿಯಾನಿ ಹೋಟೆಲ್ ನಲ್ಲಿ ಕೇವಲ 80 ರೂಪಾಯಿ ಗಳಿಗೆ ಹೊಟ್ಟೆ ತುಂಬುವಷ್ಟು ಬಿರಿಯಾನಿ ಸಿಗುವುದು.

ಸಂಡೇ ಮಾರ್ನಿಂಗ್

ಸಂಡೇ ಮಾರ್ನಿಂಗ್

ಅಷ್ಟು ಬೆಳಂಬೆಳಗ್ಗೆ ಯಾರು ಈ ಬಿರಿಯಾನಿ ತಿಂತಾರೇ ಅಂತ ನಿಮಗನಿಸಬಹುದು ಆದ್ರೆ ಅದುವೇ ಇಲ್ಲಿನ ಸ್ಪೆಶಾಲಿಟಿ. ಸಂಡೇ ಮಾರ್ನಿಂಗ್ ಬೆಟ್ಟದ ಬಿರಿಯಾನಿ ಎಂಥವರನ್ನಾದ್ರೂ ತನ್ನತ್ತ ಸೆಳೆಯುತ್ತದೆ. ನಂದಿಹಿಲ್ಸ್‌ಗೆ ಭೇಟಿ ನೀಡುವವರು ಹೆಚ್ಚಿನವರು ಮುಂಜಾನೆಯ ಸಮಯದಲ್ಲೇ ಭೇಟಿ ನೀಡುತ್ತಾರೆ. ಹಾಗಾಗಿ ಮುಂಜಾನೆ ನಂದಿಬೆಟ್ಟಕ್ಕೆ ಭೇಟಿ ನೀಡುವವರು ಈ ಬಿರಿಯಾನಿಯನ್ನು ಸವಿಯಬಹುದು.

ಬಿರಿಯಾನಿ ಟೇಸ್ಟ್ ಮಾಡೋದನ್ನು ಮರೆಯಬೇಡಿ

ಬಿರಿಯಾನಿ ಟೇಸ್ಟ್ ಮಾಡೋದನ್ನು ಮರೆಯಬೇಡಿ

ವೀಕೆಂಡ್‌ ಪ್ರವಾಸಿಗರಿಗಾಗಿಯೇ ತೆರೆಯಲಾಗಿರುವ ಈ ಬಿರಿಯಾನಿಯನ್ನು ನಂದಿ ಬೆಟ್ಟದ ಕಡೆ ಯಾವತ್ತಾದ್ರೂ ನೀವು ನಿಮ್ಮ ಸ್ನೇಹಿತರ ಜೊತೆ ಸುತ್ತಾಡಲು ಹೋಗೋದಾದ್ರೆ ಈ ಬೆಟ್ಟದ ಬಿರಿಯಾನಿಯ ಸವಿಯನ್ನು ಮಾತ್ರ ಮರೆಯದಿರಿ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+