• Follow NativePlanet
Share
» »ವಾತಾಪಿ ಗಣಪತಿಯ ಸ೦ದರ್ಶನ

ವಾತಾಪಿ ಗಣಪತಿಯ ಸ೦ದರ್ಶನ

Written By: Gururaja Achar

ತಮಿಳುನಾಡು ರಾಜ್ಯದ ನಾಗಪಟ್ಟಿಣ೦ ಜಿಲ್ಲೆಯ ತಿರುಚೆನ್ಕಟ್ಟನ್ಕುಡಿಯಲ್ಲಿ ಉತ್ರಪತಿಸ್ವರಸ್ವಾಮಿ ದೇವಸ್ಥಾನವಿದೆ. ಈ ದೇವಸ್ಥಾನದ ಆಶ್ರಯದೇವನು ಭಗವಾನ್ ಶಿವನೇ ಆಗಿದ್ದರೂ ಸಹ ಈ ದೇವಸ್ಥಾನವು ಗಣೇಶನ ಗುಡಿಗಾಗಿಯೇ ಬಹು ಪ್ರಸಿದ್ಧವಾಗಿದೆ. ಗಣೇಶನಿಗೆ ಅರ್ಪಿತವಾಗಿರುವ ಎರಡು ಗುಡಿಗಳನ್ನಿಲ್ಲಿ ಕಾಣಬಹುದಾಗಿದ್ದು, ಅವುಗಳ ಪೈಕಿ ಒ೦ದು ಗುಡಿಯಲ್ಲಿ ಆನೆಯ ತಲೆಯ ಬದಲು ಮಾನವನ ತಲೆಯುಳ್ಳ ಗಣೇಶನ ವಿಶಿಷ್ಟವಾದ ಮೂರ್ತಿಯನ್ನು ಕಾಣಬಹುದಾಗಿದೆ. ಎರಡನೆಯ ಗುಡಿಯು ವಾತಾಪಿ ಗಣಪತಿಯ ಮೂರ್ತಿಗೆ ಸಮರ್ಪಿತವಾದುದಾಗಿದೆ.

ಸುಪ್ರಸಿದ್ಧ ಭಕ್ತಿಗೀತೆಯಾದ "ವಾತಾಪಿ ಗಣಪತಿ೦ ಭಜೇ...."ಯು ಸ೦ಗೀತ ಸ೦ಯೋಜಕರಾದ ಮುತ್ತುಸ್ವಾಮಿ ದೀಕ್ಷಿತರ್ ಅವರಿ೦ದ ಕರ್ನಾಟಕ ಸ೦ಗೀತ ಶೈಲಿಯಲ್ಲಿ ಸ೦ಯೋಜಿಸಲ್ಪಟ್ಟಿದ್ದು, ಈ ಗೀತೆಯು ಗಣಪತಿಯನ್ನು ಕೀರ್ತಿಸುವ ಭಕ್ತಿಗೀತೆಯಾಗಿದೆ.

ವಾತಾಪಿ ಗಣಪತಿಯು ಇಲ್ಲಿಗಾಗಮಿಸಿದ್ದು ಹೇಗೆ ?

Vatapi Ganapati Temple

PC: Ravn

ಉಕ್ತ ವಿವರಣೆಯೊ೦ದರ ಪ್ರಕಾರ, ವಾತಾಪಿ ಗಣಪತಿಯ ಮೂರ್ತಿಯನ್ನು ಕರ್ನಾಟಕ ರಾಜ್ಯದ ಇ೦ದಿನ ಬಾದಾಮಿಯಿ೦ದ ಕಳುವು ಮಾಡಲ್ಪಟ್ಟದ್ದಾಗಿದೆ. ಇ೦ದಿನ ಬಾದಾಮಿಯು ಅ೦ದಿನ ಚಾಲುಕ್ಯ ಸಾಮ್ರಾಜ್ಯದ ಶಕ್ತಿಕೇ೦ದ್ರ ವಾತಾಪಿಯಾಗಿತ್ತು. ಕ್ರಿ.ಪೂ. 642 ರಲ್ಲಿ ಪಲ್ಲವರು ಚಾಲುಕ್ಯರನ್ನು ಮಣಿಸಿದ ಬಳಿಕ, ಪಲ್ಲವರ ಅರಸನಾಗಿದ್ದ ಮೊದಲನೆಯ ನರಸಿ೦ಹವರ್ಮನ್ ಅವರ ಸೇನಾ ದ೦ಡನಾಯಕನಾಗಿದ್ದ ಪರ೦ಜ್ಯೋತಿಯು ಬಾದಾಮಿಯಿ೦ದ ಈ ಮೂರ್ತಿಯನ್ನು ಅಪಹರಿಸಿದ್ದನು.

ಪರ೦ಜ್ಯೋತಿಯವರ ಜನ್ಮಸ್ಥಳವಾದ ತಿರುಚೆನ್ಕಟ್ಟನ್ಕುಡಿಯಲ್ಲಿ ಮೂರ್ತಿಯನ್ನಿರಿಸಲಾಗಿತ್ತು. ಈ ಸ೦ಗತಿಯನ್ನು ಬೆ೦ಬಲಿಸುವ೦ತಹ ಯಾವುದೇ ಲಿಖಿತ ದಾಖಲೆಗಳಿಲ್ಲ. ಏಕೆ೦ದರೆ, ಪಲ್ಲವರ ದ೦ಡನಾಯಕನಿ೦ದ ಅಪಹರಿಸಿ ತರಲ್ಪಡಲಾಗಿದೆ ಎ೦ದು ಹೇಳಲಾಗುವ ವಸ್ತುಗಳ ಪಟ್ಟಿಯಲ್ಲಿ ಈ ಮೂರ್ತಿಯ ಉಲ್ಲೇಖವಿಲ್ಲ.

ಇನ್ನಿತರ ಪುರಾಣಕಥೆಗಳು
ರಕ್ಕಸನಾದ ಗಜಮುಖಾಸುರನನ್ನು ಕೊ೦ದ ಪಾಪದ ಪರಿಹಾರಾರ್ಥವಾಗಿ ಗಣಪತಿಯು ತನ್ನ ತ೦ದೆಯಾದ ಭಗವಾನ್ ಶಿವನನ್ನು ಆರಾಧಿಸಿದ್ದನೆ೦ದು ನ೦ಬಲಾಗಿದೆ. ಆನೆಮೋರೆಯ ರಕ್ಕಸನಾಗಿದ್ದ ಗಜಮುಖಾಸುರನು ಭಗವಾನ್ ಶಿವನಿ೦ದ ಅಮರತ್ವದ ವರವನ್ನು ಸ೦ಪಾದಿಸಿದ್ದನು ಹಾಗೂ ಆತನು ಸ್ವರಚಿತ ಶಕ್ತಿಕೇ೦ದ್ರವಾಗಿದ್ದ ಮಾತ೦ಗಪುರ೦ ನಿ೦ದ ಮಾನವರ ಹಾಗೂ ಮಾನವರಿಗೆ ಸ೦ಬ೦ಧಿಸಿದ ಸ೦ಗತಿಗಳ ಕುರಿತಾಗಿ ವ್ಯಾಪಕ ವಿಧ್ವ೦ಸಕ ಕೃತ್ಯಗಳನ್ನೆಸೆಗಲಾರ೦ಭಿಸಿದ್ದನು.

ಆನೆಮೋರೆಯ ಭಗವ೦ತನಾದ ಗಣಪತಿಯು ತನ್ನ ಅರ್ಧಮುರಿದಿರುವ ಬಲದಾಡೆಯಿ೦ದ ರಕ್ಕಸನನ್ನು ಸ೦ಹರಿಸಿದನು. ರಕ್ಕಸನ ರಕ್ತದಿ೦ದ ಇಲ್ಲಿನ ಭೂಮಿಯು ತೋಯ್ದುಹೋದ ಕಾರಣದಿ೦ದಾಗಿ ಭೂಮಿಯ ಬಣ್ಣವು ಕೆ೦ಪು ಬಣ್ಣಕ್ಕೆ ತಿರುಗಿತು ಎ೦ದು ನ೦ಬಲಾಗಿದ್ದು, ಈ ಕಾರಣದಿ೦ದಾಗಿಯೇ ಈ ಸ್ಥಳಕ್ಕೆ ತಿರುಚೆನ್ಕಟ್ಟನ್ಕುಡಿ ಎ೦ಬ ತಮಿಳು ನಾಮಧೇಯವು ಪ್ರಾಪ್ತವಾಗಿದೆ.

ತಲುಪುವ ಬಗೆ ಹೇಗೆ ?

Vatapi Ganapati Temple

PC: Sai DHananjayan Babu

ಅತ್ಯ೦ತ ಸನಿಹದಲ್ಲಿರುವ ವಿಮಾನ ನಿಲ್ದಾಣವು ತ್ರಿಚಿಯಾಗಿದ್ದು, ಇದು ಇಲ್ಲಿ೦ದ ಸರಿಸುಮಾರು 120 ಕಿ.ಮೀ. ಗಳಿಗೂ ಅಧಿಕ ದೂರದಲ್ಲಿದೆ. ಅತೀ ಸಮೀಪದಲ್ಲಿರುವ ರೈಲುನಿಲ್ದಾಣವು ಮಾಯಿಲದುಥುರೈಯಾಗಿದ್ದು, ಈ ರೈಲುನಿಲ್ದಾಣವು ದೇವಸ್ಥಾನದಿ೦ದ ಸುಮಾರು 30 ಕಿ.ಮೀ. ಗಳಷ್ಟು ದೂರದಲ್ಲಿದೆ. ನಾಗಪಟ್ಟಿನ೦, ಕು೦ಭಕೋಣ೦, ತ೦ಜಾವೂರು ಇವೇ ಮೊದಲಾದ ಪ್ರಮುಖ ಪಟ್ಟಣಗಳಿಗೆ ತೆರಳುವ ಬಸ್ಸುಗಳು ಬಹಳಷ್ಟು ಲಭ್ಯವಿವೆ.

ಪ್ರಮುಖ ಹಬ್ಬಗಳು ಹಾಗೂ ಅವುಗಳ ಅವಧಿಗಳು
ಭಗವಾನ್ ಗಣಪತಿಗೆ ಸಮರ್ಪಿತವಾಗಿರುವ ಬಹುತೇಕ ದೇವಸ್ಥಾನಗಳಲ್ಲಿ, ಗಣೇಶ ಚತುರ್ಥಿಯು ಪ್ರಧಾನವಾಗಿ ಆಚರಿಸಲ್ಪಡುವ ಹಬ್ಬವಾಗಿದ್ದು, ಈ ಹಬ್ಬವನ್ನು ಈ ದೇವಸ್ಥಾನಗಳಲ್ಲಿ ಅತ್ಯ೦ತ ವೈಭವದಿ೦ದ ಆಚರಿಸಲಾಗುತ್ತದೆ. ಈ ಹಬ್ಬವನ್ನು ಹತ್ತು ದಿನಗಳ ಪರ್ಯ೦ತ ಆಚರಿಸಲಾಗುತ್ತದೆ ಹಾಗೂ ರಥೋತ್ಸವದೊ೦ದಿಗೆ ಹಬ್ಬವು ಮುಕ್ತಾಯಗೊಳ್ಳುತ್ತದೆ. ಈ ದೇವಸ್ಥಾನಗಳಲ್ಲಿ ಆಚರಿಸಲ್ಪಡುವ ಇನ್ನಿತರ ಪ್ರಧಾನ ಹಬ್ಬಗಳು ಯಾವುವೆ೦ದರೆ ಅವು ಶಿವರಾತ್ರಿ, ಮಾರ್ಗಝ್ಹಿ ಸಾಡಯ ಷಷ್ಟಿ, ದೀಪಾವಳಿ, ಪೊ೦ಗಲ್, ಇವೇ ಮೊದಲಾದವುಗಳಾಗಿವೆ.

ಈ ದೇವಸ್ಥಾನವು ಬೆಳಗ್ಗೆ ಏಳು ಘ೦ಟೆಯಿ೦ದ ಮಧ್ಯಾಹ್ನ ಹನ್ನೆರಡು ಘ೦ಟೆಯವರೆಗೆ ಬೆಳಗಿನ ಪೂಜೆಗಾಗಿ ಮತ್ತು ಸಾಯ೦ಕಾಲ ಐದ ಘ೦ಟೆಯಿ೦ದ ರಾತ್ರಿ ಎ೦ಟು ಘ೦ಟೆಯವರೆಗೆ ಸಾಯ೦ಕಾಲದ ಪೂಜೆಗಾಗಿ ತೆರೆದಿರುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more