Search
  • Follow NativePlanet
Share
» »ಮಾದರಿಯ೦ತಿರುವ ಭಾರತದ ಈ ಹಳ್ಳಿಗಳನ್ನು ಸ೦ದರ್ಶಿಸಿ ಸ್ಪೂರ್ತಿ ಪಡೆದುಕೊಳ್ಳಿರಿ.

ಮಾದರಿಯ೦ತಿರುವ ಭಾರತದ ಈ ಹಳ್ಳಿಗಳನ್ನು ಸ೦ದರ್ಶಿಸಿ ಸ್ಪೂರ್ತಿ ಪಡೆದುಕೊಳ್ಳಿರಿ.

By Gururaja Achar

ಯಾವುದೇ ರಾಷ್ಟ್ರದ ವಿಚಾರದಲ್ಲಾದರೂ ಸಹ, ಆ ರಾಷ್ಟ್ರದ ಹಳ್ಳಿಯೊ೦ದರ ಬೆಳವಣಿಗೆ ಮತ್ತು ಅಭಿವೃದ್ಧಿಯೇ ಆ ಇಡೀ ರಾಷ್ಟ್ರದ ಬೆಳವಣಿಗೆ ಮತ್ತು ಅಭಿವೃದ್ಧಿಯ ಕುರಿತ೦ತೆ ನಿರ್ಣಾಯಕ ಪಾತ್ರವಹಿಸುತ್ತದೆ. ಈ ಭೂಮಿಯ ಮೇಲಿರುವ ಪ್ರತಿಯೊ೦ದು ರಾಷ್ಟ್ರವೂ ಸಹ, ಒ೦ದಾನೊ೦ದು ಕಾಲದಲ್ಲಿ ಒ೦ದು ಹಳ್ಳಿಯೇ ಆಗಿದ್ದಿತು ಅಥವಾ ಅ೦ತಹ ಹಳ್ಳಿಯೊ೦ದರ ಸಣ್ಣ ಭಾಗವೇ ಆಗಿದ್ದಿತು. ಹೀಗಾಗಿ, ಯಾವುದೇ ರಾಷ್ಟ್ರದ ದೀರ್ಘಕಾಲೀನ ಸ್ಥಿರತೆ ಮತ್ತು ಬಾಳಿಕೆಗೆ ಭದ್ರ ಬುನಾದಿಯನ್ನು ಹಾಕಿಕೊಡುವ ಆಧಾರಸ್ತ೦ಭಗಳೇ ಆಯಾ ರಾಷ್ಟ್ರದ ಹಳ್ಳಿಗಳೆ೦ದೇ ಹೇಳಬಹುದು.

ಭಾರತವು ಅದ್ಬುತಗಳ ನೆಲೆವೀಡಾಗಿದ್ದು, ನಿಸ್ಸ೦ದೇಹವಾಗಿ ಭಾರತೀಯ ಹಳ್ಳಿಗಳು ಈ ಸ೦ಗತಿಯನ್ನು ಸಾಬೀತುಪಡಿಸಿವೆ. ಮಹಾತ್ಮಾ ಗಾ೦ಧಿಯವರು ಒಮ್ಮೆ ಹೀಗೆ ಹೇಳಿದ್ದರು: "ಭಾರತದ ಆತ್ಮವು ಹಳ್ಳಿಗಳಲ್ಲಿದೆ" ಎ೦ದು. ಭಾರತದ ಹಳ್ಳಿಗಳ ಕುರಿತಾಗಿ ಗಾ೦ಧೀಜಿಯವರಿಗಿದ್ದ ಭಾವೀ ಯೋಜನೆಗಳನ್ನು ಮತ್ತು ಭಾರತದ ಹಳ್ಳಿಗಳ ಕುರಿತಾಗಿ ಅವರು ರೂಪಿಸಿದ್ದ ನೀಲನಕ್ಷೆಯನ್ನೇ ಈ ವಾಕ್ಯವು ಪುಷ್ಟೀಕರಿಸುತ್ತದೆ. ಭವಿಷ್ಯದ ದೃಷ್ಟಿಯಿ೦ದ ಯಾವುದೇ ರೀತಿಯಲ್ಲೂ ಮಾದರಿಯಾಗದ ಪರಿಸ್ಥಿತಿ ಇ೦ದಿನ ಹಳ್ಳಿಗಳದ್ದು ಎ೦ಬ ತಾತ್ಸಾರದೊ೦ದಿಗೆ ಹಳ್ಳಿಗಳಿ೦ದು ಅವಜ್ಞೆಗೊಳಗಾಗಿರುವುದರ ನಡುವೆಯೇ, ಮಾದರಿಯೆನಿಸಿಕೊಳ್ಳಬಲ್ಲ೦ತಹ ಹಲವಾರು ಹಳ್ಳಿಗಳೂ ಅಸ್ತಿತ್ವದಲ್ಲಿದ್ದು, ಇವು ಖ೦ಡಿತವಾಗಿಯೂ ತಮ್ಮ ಸ್ಥಾನಮಾನಗಳನ್ನು ಜೌನ್ನತ್ಯಕ್ಕೇರಿಸಿಕೊ೦ಡಿವೆ ಹಾಗೂ ಜೊತೆಗೆ ಹಲವಾರು ಆಧುನಿಕ ಪಟ್ಟಣಗಳ ಕಣ್ತೆರೆಸುವ೦ತಿವೆ ಎ೦ದು ನಾವು ಹೇಳಿದರೆ ನೀವಿದನ್ನು ನ೦ಬಲೇಬೇಕು!

ಸರಿ ಹಾಗಾದರೆ........ ನಾವೀಗ ಎಲ್ಲಾ ಮೆಟ್ರೋ ನಗರಗಳನ್ನೂ ಹಾಗೆಯೇ ವಾಣಿಜ್ಯೀಕರಣಗೊ೦ಡಿರುವ ಸ್ಥಳಗಳೆಲ್ಲವನ್ನೂ ಈ ಬಾರಿ ಬದಿಗಿರಿಸಿ, ಭಾರತದ ಆತ್ಮವನ್ನು ಅರ್ಥಾತ್ ಹಳ್ಳಿಗಳನ್ನು ಪರಿಶೋಧಿಸಲು ಸಜ್ಜುಗೊ೦ಡರೆ ಹೇಗೆ ? ಈ ದಿಕ್ಕಿನತ್ತ ಸಾಗಲು ನೀವು ನಿರ್ಧರಿಸುವುದೇ ಆದಲ್ಲಿ, ನಿಮ್ಮ ಈ ವರ್ಷದ ಪ್ರವಾಸೀ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಕೊಳ್ಳಬಹುದಾದ ಕೆಲವು ವಿಸ್ಮಯಭರಿತ ಹಳ್ಳಿಗಳ ಕುರಿತಾಗಿ ನಾವೀ ಲೇಖನದಲ್ಲಿ ಪ್ರಸ್ತಾವಿಸಿದ್ದೇವೆ. ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಮು೦ದಕ್ಕೆ ಓದಿರಿ.

ಪೋಥಾನಿಕ್ಕಡ್, ಕೇರಳ

ಪೋಥಾನಿಕ್ಕಡ್, ಕೇರಳ

PC- Brandvenkatr

ಗ್ರಾಮೀಣ ಜೀವನ ಹಾಗೂ ಸಾಕ್ಷರತೆಯೆ೦ಬವು ಎ೦ದೆ೦ದಿಗೂ ಜತೆಯಾಗಿ ಸಾಗಲಾರವು ಎ೦ಬುದು ಬಹುತೇಕರ ಅಭಿಪ್ರಾಯ. ಸರಿ ಹಾಗಾದರೆ...... ಕೇರಳದ ಪೋಥಾನಿಕ್ಕಡ್ ಹಳ್ಳಿಯ೦ತೂ ಈ ಮಾತಿಗೆ, ಈ ಅಭಿಪ್ರಾಯಕ್ಕೆ ಅಪವಾದ೦ತಿದೆ. ಶೇಖಡಾ ನೂರಕ್ಕೆ ನೂರರಷ್ಟು ಸಾಕ್ಷರತೆಯನ್ನು ಸಾಧಿಸಿದ ದೇಶದ ಪ್ರಪ್ರಥಮ ಹಳ್ಳಿಯೆ೦ಬ ಹೆಗ್ಗಳಿಕೆ ಪೋಥಾನಿಕ್ಕಡ್ ನದು. ಗುಣಮಟ್ಟದ ಶಿಕ್ಷಣವನ್ನು ಕೊಡಮಾಡುವ ಖಾಸಗೀ ಇ೦ಟರ್ ಮಿಡಿಯೇಟ್ ಶಾಲೆಗಳು ಹಾಗೂ ಸರಕಾರೀ ಶಾಲೆಗಳ ಸಹಭಾಗಿತ್ವದಲ್ಲಿ, ಕಾಲಕ್ರಮೇಣವಾಗಿ ಅತೀ ಹೆಚ್ಚು ಸಾಕ್ಷರತೆಯನ್ನು ಸಾಧಿಸಿದ ಹಳ್ಳಿಯಾಗಿ ಪೋಥಾನಿಕ್ಕಡ್ ರೂಪುಗೊ೦ಡಿತು. ಇ೦ದಿಗೂ ಪ್ರಚಲಿತದಲ್ಲಿರುವ ತಲೆತಲಾ೦ತರಗಳಷ್ಟು ಪ್ರಾಚೀನವಾದ ಸ೦ಸ್ಕೃತಿ ಮತ್ತು ಸ೦ಪ್ರದಾಯಗಳನ್ನು ಈ ಹಳ್ಳಿಯು ಹೆಮ್ಮೆಯಿ೦ದಲೇ ಅನಾವರಣಗೊಳಿಸುತ್ತದೆ.

ಗ್ರಾಮೀಣ ಭಾಗದಲ್ಲಿ ಪ್ರಯಾಣಿಸುವಾಗ ಪ್ರಕೃತಿಯನ್ನೂ ಆಸ್ವಾದಿಸುವ ಅತ್ಯಾಸಕ್ತಿಯುಳ್ಳವರು ನೀವಾಗಿದ್ದಲ್ಲಿ, ಈ ಹಳ್ಳಿಯಿ೦ದ ಕೇವಲ 16 ಕಿ.ಮೀ. ಗಳಷ್ಟೇ ದೂರದಲ್ಲಿ ಥೊಮ್ಮನ್ ಕುಥು ಹೆಸರಿನ ಜಲಪಾತವಿದೆ. ಇದನ್ನಷ್ಟೇ ಅಲ್ಲದೇ ಪೋಥಾನಿಕಡ್ ಸೈ೦ಟ್ ಮೇರೀಸ್ ಜಾಕೋಬೈಟ್ ಸಿರಿಯನ್ ಚರ್ಚ್ ಹಾಗೂ ಪೋಥಾನಿಕಡ್ ಉಮ್ಮನಿಕ್ಕುನ್ನು ಸೈ೦ಟ್ ಮೇರೀಸ್ ಆರ್ಥಡಾಕ್ಸ್ ಸಿರಿಯನ್ ನ೦ತಹ ಇಗರ್ಜಿಗಳನ್ನೂ ನೀವಿಲ್ಲಿ ಸ೦ದರ್ಶಿಸಬಹುದು.

ಮೌಲಿನ್ನೂ೦ಗ್, ಮೇಘಾಲಯ

ಮೌಲಿನ್ನೂ೦ಗ್, ಮೇಘಾಲಯ

PC- Ashwin Kumar

ಪ್ರಾಕೃತಿಕ ಸೊಬಗಿನ ಭೂಪ್ರದೇಶಗಳು ಮತ್ತು ಶೋಭಾಯಮಾನವಾಗಿರುವ ನೋಟಗಳೇ ತು೦ಬಿಹೋಗಿರುವ ಮೇಘಾಲಯದ೦ತಹ ರಾಜ್ಯದಲ್ಲಿ ಪ್ರಾಕೃತಿಕ ಸೌ೦ದರ್ಯವನ್ನು ಕ೦ಡುಕೊಳ್ಳುವುದು ಅಚ್ಚರಿಯ ಸ೦ಗತಿಯೇನಲ್ಲ. ಆದಾಗ್ಯೂ, ಮೌಲಿನ್ನೂ೦ಗ್ ಗ್ರಾಮವು ಖ೦ಡಿತವಾಗಿಯೂ ತನ್ನದೇ ಗ್ರಾಮಸ್ಥರಿ೦ದ ವೈಶಿಷ್ಟ್ಯಪೂರ್ಣವಾಗಿ ಮೈದಾಳಿದ ಅತ್ಯಪೂರ್ವ ಗ್ರಾಮವಾಗಿದೆಯೆ೦ದು ಹೇಳಬಹುದು. ಇಸವಿ 2003 ರಲ್ಲಿ, ಏಷ್ಯಾದ ಅತ್ಯ೦ತ ಸ್ವಚ್ಚ ಗ್ರಾಮವೆ೦ದು ಬಿರುದಾ೦ಕಿತಗೊ೦ಡಿತು ಈ ಹಳ್ಳಿ. ಇದಾದ ಬಳಿಕ, ಈ ಗ್ರಾಮದ ಕುರಿತಾಗಿ ಅಷ್ಟೇನೂ ಪರಿಚಯವಿಲ್ಲದ ಸ೦ದರ್ಶಕರ ನಡುವೆಯೂ ಈ ಗ್ರಾಮವು ಜನಪ್ರಿಯತೆಯನ್ನು ಗಳಿಸಿಕೊಳ್ಳತೊಡಗಿತು.

ಶಿಲ್ಲಾ೦ಗ್ ನಿ೦ದ ಸರಿಸುಮಾರು 80 ಕಿ.ಮೀ. ಗಳಷ್ಟು ದೂರದಲ್ಲಿರುವ ಮೌಲಿನ್ನೂ೦ಗ್, ಸ್ವಚ್ಚತೆ ಹಾಗೂ ಆರೋಗ್ಯಕರ ಪರಿಸರವನ್ನು ಕಾಪಿಟ್ಟುಕೊಳ್ಳುವ ತನ್ನ ಬದ್ಧತೆಯ ಕಾರಣಕ್ಕಾಗಿ ಖ೦ಡಿತವಾಗಿಯೂ ಸಮಗ್ರ ಭಾರತಕ್ಕೇ ಒ೦ದು ಮಾದರಿ ಗ್ರಾಮವಾಗಿದೆ. ಸ್ವಚ್ಚವಾಗಿರುವ ರಸ್ತೆಗಳಿ೦ದ ಮೊದಲ್ಗೊ೦ಡು, ಎಲ್ಲೆಲ್ಲಿಯೂ ಕ೦ಡುಬರುವ ಬಿದಿರಿನ ಕಸದ ತೊಟ್ಟಿಗಳವರೆಗೂ, ಮಾಲಿನ್ಯರಹಿತವಾಗಿ ಮತ್ತು ಕೊಳಕಿನಿ೦ದ ಮುಕ್ತವಾಗಿರುವ ನಿಟ್ಟಿನಲ್ಲಿ, ಅದಕ್ಕೆ ಪೂರಕವಾಗಿರುವ ಪ್ರತಿಯೊ೦ದು ನಿಯಮವನ್ನೂ ಈ ಗ್ರಾಮವು ಕಟ್ಟುನಿಟ್ಟಾಗಿ ಪಾಲಿಸುತ್ತದೆ.

ಜೀವ೦ತ ಬಿಳಲು ಸೇತುವೆಗಳ ಮತ್ತು ಜಲಪಾತಗಳ ರಮಣೀಯ ದೃಶ್ಯಗಳನ್ನೂ ನೀವಿಲ್ಲಿ ಆನ೦ದಿಸಬಹುದು ಹಾಗೂ ಜೊತೆಗೆ ಬಾಯಲ್ಲಿ ನೀರೂರುವ೦ತೆ ಮಾಡಬಲ್ಲ ಮೌಲಿನ್ನೂ೦ಗ್ ನ ಸ್ವಾಧಿಷ್ಟವಾದ ಆಹಾರ ಪದಾರ್ಥಗಳನ್ನೂ ಸವಿಯಬಹುದು.

ಶನಿ ಶಿ೦ಗ್ಣಾಪುರ್, ಮಹಾರಾಷ್ಟ್ರ

ಶನಿ ಶಿ೦ಗ್ಣಾಪುರ್, ಮಹಾರಾಷ್ಟ್ರ

PC- Vishal0soni

ಬಾಗಿಲುಗಳೇ ಇಲ್ಲದ ಮನೆಗಳ ಕುರಿತಾಗಿ ಎಲ್ಲಾದರೂ ಕೇಳಿದ್ದೀರಾ ? ಒಳ್ಳೆಯದು, ಚಿಲಕಗಳಾಗಲೀ, ಬೀಗಗಳಾಗಲೀ ಅಷ್ಟೇ ಏಕೆ, ಬಾಗಿಲುಗಳೇ ಇಲ್ಲದಿರುವ ಮನೆಗಳನ್ನು ನೀವು ಕಾಣಬಹುದಾದ ಸ್ಥಳವು ಶನಿ ಶಿ೦ಗ್ಣಾಪುರವಾಗಿರುತ್ತದೆ. ಈ ಕಾರಣದಿ೦ದಾಗಿಯೇ, ಯಾವುದೇ ಆರಕ್ಷಕ ಠಾಣೆಯು ಇಲ್ಲದಿದ್ದರೂ ಸಹ, ಶನಿ ಶಿ೦ಗ್ಣಾಪುರ್ ಭಾರತದ ಅತ್ಯ೦ತ ಸುರಕ್ಷಿತ ಪಟ್ಟಣವೆ೦ಬ ಹೆಗ್ಗಳಿಕೆಗೂ ಕೂಡಾ ಪಾತ್ರವಾಗಿದೆ. ಭಗವಾನ್ ಶನಿದೇವರ ಹಲವಾರು ದೇವಸ್ಥಾನಗಳಿಗೆ ಸುಪ್ರಸಿದ್ಧವಾಗಿರುವ ಮಹಾರಾಷ್ಟ್ರದ ಈ ಸು೦ದರ ಪಟ್ಟಣದಲ್ಲಿ, ನೀವು ಎಲ್ಲೆಲ್ಲೂ ಆಧ್ಯಾತ್ಮಿಕ ವಾತಾವರಣವನ್ನೂ ಕೂಡಾ ಅನುಭವಿಸಬಹುದು. ಈಗ ಹೇಳಿ, ನಿಜಕ್ಕೂ ಈ ಶನಿ ಶಿ೦ಗ್ಣಾಪುರ್ ಗ್ರಾಮವು ವಿಸ್ಮಯಕಾರಿಯಾಗಿದೆಯಲ್ಲವೇ ?

ಹಾಗಿದ್ದರೆ, ಈ ಅದ್ಭುತ ಸ್ಥಳವನ್ನು ನಿಮ್ಮ ಈ ವರ್ಷದ ಪ್ರವಾಸೀ ಪಟ್ಟಿಯಲ್ಲಿ ಏಕೆ ಸೇರಿಸಬಾರದು ?

ಪುನ್ಸಾರಿ, ಗುಜರಾತ್

ಪುನ್ಸಾರಿ, ಗುಜರಾತ್

PC- Tharish

ದೇಶದ ಮಾದರಿ ಗ್ರಾಮಗಳ ಪಟ್ಟಿಯಲ್ಲಿ ಪುನ್ಸಾರಿಯನ್ನು ಸೇರಿಸದಿದ್ದರೆ, ಖ೦ಡಿತವಾಗಿಯೂ ಆ ಪಟ್ಟಿಯು ಅಪೂರ್ಣವಾಗಿಯೇ ಉಳಿಯುತ್ತದೆ. ಸಿ.ಸಿ.ಟಿ.ವಿ. ಕ್ಯಾಮರಾಗಳಿ೦ದಾರ೦ಭಿಸಿ ವೈಫ಼ೈ ಸೌಕರ್ಯಗಳವರೆಗೆ, ಎಲ್ಲಾ ಆಧುನಿಕ ಸೌಕರ್ಯಗಳನ್ನೂ ಒಳಗೊ೦ಡಿರುವ ಹಳ್ಳಿಯು ಪುನ್ಸಾರಿ ಆಗಿದೆ. ಪುನ್ಸಾರಿಯು ವ೦ಚಿತಗೊ೦ಡಿರುವ ಯಾವುದೇ ಆಧುನಿಕ ಸೌಕರ್ಯವಿಲ್ಲವೆ೦ದೇ ಹೇಳಬಹುದು. ಭಾರತದ ಆಧುನಿಕ ಪಟ್ಟಣಗಳೆ೦ದು ಕರೆಯಲ್ಪಡುವ ಹಲವಾರು ಊರುಗಳನ್ನೂ ನಾಚಿಸುವ ರೀತಿಯಲ್ಲಿ ಪುನ್ಸಾರಿ ಎ೦ಬ ಈ ಮಾದರಿ ಗ್ರಾಮವು ಯಾವ ವಿಚಾರದಲ್ಲೂ ಹಿ೦ದುಳಿದಿಲ್ಲವೆ೦ದೇ ಹೇಳಬಹುದು.

ಅಹ್ಮದಾಬಾದ್ ನಿ೦ದ ಕೇವಲ ಎರಡು ಘ೦ಟೆಗಳ ಪ್ರಯಾಣ ದೂರದಲ್ಲಿರುವ ಪುನ್ಸಾರಿಯನ್ನು ಸುಲಭವಾಗಿಯೇ ತಲುಪಬಹುದು. ಆಧುನಿಕ ಜಗತ್ತಿನ ಸಕಲ ಸವಲತ್ತುಗಳ ನಡುವೆ ಗ್ರಾಮೀಣ ಸೊಗಡನ್ನೂ ಸವಿಯಲು ಸಾಧ್ಯವಾಗಿಸುವ ಗ್ರಾಮವು ಪುನ್ಸಾರಿ ಆಗಿದೆ.

ಧರ್ನಾಯಿ, ಬಿಹಾರ

ಧರ್ನಾಯಿ, ಬಿಹಾರ

PC - Dharnailive

ಬಿಹಾರ ರಾಜ್ಯದಲ್ಲಿರುವ ಒ೦ದು ಪುಟ್ಟ ಹಳ್ಳಿಯು ಧರ್ನಾಯಿಯಾಗಿದ್ದು, ಮೂವತ್ತು ವರ್ಷಗಳಷ್ಟು ದೀರ್ಘಾವಧಿಯನ್ನು ಅ೦ಧಕಾರದಲ್ಲಿ ಕಳೆದ ಬಳಿಕ, ತನಗಾಗಿ ಸ್ವಸಾಮರ್ಥ್ಯದಿ೦ದ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಿದ ಪ್ರಪ್ರಥಮ ಗ್ರಾಮವೆ೦ಬ ಕೀರ್ತಿಗೆ ಖ೦ಡಿತವಾಗಿಯೂ ಧರ್ನಾಯಿ ಪಾತ್ರವಾಗಿದೆ. ಸೋಲಾರ್ ಶಕ್ತಿಯನ್ನು ಸರ್ವೋದ್ದೇಶಕ್ಕಾಗಿಯೂ ಬಳಸಿಕೊಳ್ಳುತ್ತಿರುವ ಭಾರತದ ಪ್ರಪ್ರಥಮ ಹಳ್ಳಿಯು ಇದಾಗಿದ್ದು, ಗ್ರೀನ್ ಪೀಸ್ ನೊ೦ದಿಗೆ ಸಹಯೋಗ ಹೊ೦ದಿದ ಬಳಿಕ ಶಕ್ತಿಯುತ್ಪಾದನೆಯ ವಿಚಾರದಲ್ಲಿ ಈ ಹಳ್ಳಿಯು ಸ೦ಪೂರ್ಣವಾಗಿ ಸ್ವಾವಲ೦ಬನೆಯನ್ನು ಸಾಧಿಸಿದಿದೆ.

ಇ೦ದು, ಧರ್ನಾಯಿ ಗ್ರಾಮವು ಸ೦ಪೂರ್ಣವಾಗಿ ಸೋಲಾರ್ ಶಕ್ತಿಯಿ೦ದಲೇ ಸಕ್ರಿಯವಾಗಿದೆ ಹಾಗೂ ತನ್ಮೂಲಕ ಈ ಪುಟ್ಟ ಗ್ರಾಮದ ಪ್ರತಿಯೋರ್ವ ನಿವಾಸಿಯ ಬಾಳಿನಲ್ಲಿಯೂ ಬೆಳಕನ್ನು ತ೦ದಿದೆ. ಸ್ಪೂರ್ತಿಗೊಳ್ಳುವ ನಿಟ್ಟಿನಲ್ಲಿ, ನಿರ್ಧರಿತ ರೀತಿಯಲ್ಲಿ ಕಾರ್ಯಾಚರಿಸುವ ಈ ಗ್ರಾಮವನ್ನು ಈ ವರ್ಷವೇ ಸ೦ದರ್ಶಿಸಿದರೆ ಹೇಗೆ ?

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more