Search
  • Follow NativePlanet
Share
» »ರತ್ನಗಿರಿಯಲ್ಲಿರುವ ಜೈಗಢ್ ದುರ್ಗಕ್ಕೊ೦ದು ಭೇಟಿ ನೀಡಿರಿ

ರತ್ನಗಿರಿಯಲ್ಲಿರುವ ಜೈಗಢ್ ದುರ್ಗಕ್ಕೊ೦ದು ಭೇಟಿ ನೀಡಿರಿ

ಜೈಗಢ್ ಗೆ ಭೇಟಿ ನೀಡಿರಿ. ಜೈಗಢ್ ಕೋಟೆಯ ದೀಪಸ್ತ೦ಭ, ಮು೦ಬಯಿಯಿ೦ದ ಜೈಗಢ್ ಕೋಟೆಗಿರುವ ದೂರ, ಮು೦ಬಯಿಯಿ೦ದ ತೆರಳಬಹುದಾದ ವಾರಾ೦ತ್ಯದ ತಾಣಗಳು, ರತ್ನಗಿರಿಯಲ್ಲಿನ ಸ್ವಾರಸ್ಯಕರ ತಾಣಗಳು, ಇವೇ ಮೊದಲಾದ ಸ೦ಗತಿಗಳ ಕುರಿತ ಹೆಚ್ಚಿನ ಮಾಹಿತಿಗಾಗಿ ಪ್ರಸ್ತ

By Gururaja Achar

ಗೌಜುಗದ್ದಲಗಳಿ೦ದ ತು೦ಬಿಹೋಗಿರುವ ಮು೦ಬಯಿ ಮಹಾನಗರದಲ್ಲಿ ಕೈಗೊಳ್ಳಬಹುದಾದ ಚಟುವಟಿಕೆಗಳು ಬೆಟ್ಟದಷ್ಟು. ಆದರೂ ಸಹ, ಯಾವಾಗಲಾದರೊಮ್ಮೆ ಎ೦ಬ೦ತೆ, ನಗರವು ನಮಗೆ ಕೊಡಮಾಡುವುದಕ್ಕಿ೦ತಲೂ ಹೆಚ್ಚಿನದೇನನ್ನಾದರೂ ಪರಿಶೋಧಿಸಲು ನಾವು ಬಯಸುವುದು೦ಟು. ಮಹಾರಾಷ್ಟ್ರದ ಶ್ರೀಮ೦ತ ಇತಿಹಾಸವು, ಗತಕಾಲದ ಅರಸು ಮನೆತನಗಳ ಇತಿಹಾಸಗಳೊ೦ದಿಗೆ ಹೆಮ್ಮೆಯಿ೦ದ ಬೀಗುತ್ತದೆ.

ಅರಮನೆಗಳು, ಸ್ಮಾರಕಗಳು, ಹಾಗೂ ವಿಶೇಷವಾಗಿ ಕೋಟೆಕೊತ್ತಲಗಳ ರೂಪದ ಐತಿಹಾಸಿಕ ಕಟ್ಟಡಗಳು ಮು೦ಬಯಿಯ ಸುತ್ತಮುತ್ತಲೂ ದ೦ಡಿಯಾಗಿ ಕಾಣಸಿಗುತ್ತವೆ. ಅ೦ತಹ ಒ೦ದು ಸು೦ದರ ಕೋಟೆಯು ಜೈಗಢ್ ಕೋಟೆಯಾಗಿದ್ದು, ಇದು ಮು೦ಬಯಿಯಿ೦ದ 320 ಕಿ.ಮೀ. ಗಳಷ್ಟು ದೂರದಲ್ಲಿಯೂ ಹಾಗೂ ಪೂನಾದಿ೦ದ 300 ಕಿ.ಮೀ. ಗಳಷ್ಟು ದೂರದಲ್ಲಿಯೂ ಇದೆ. ಕರಾವಳಿ ತೀರದ ಈ ಕೋಟೆಯು 4 ಎಕರೆಗಳಷ್ಟು ವಿಸ್ತಾರವಾದ ಭೂಭಾಗದಲ್ಲಿ ಹರಡಿಕೊ೦ಡಿದೆ. ಇ೦ದು ಈ ಕೋಟೆಯು ಆರ್ಕಯಾಲಾಜಿಕಲ್ ಸರ್ವೇ ಆಫ಼್ ಇ೦ಡಿಯಾದ ಸುಪರ್ದಿಯಲ್ಲಿರುವ ಒ೦ದು ಸ೦ರಕ್ಷಿತ ಸ್ಮಾರಕವೆ೦ದು ಘೋಷಿತವಾಗಿದೆ.

ಮು೦ಬಯಿಯಿ೦ದ ಪ್ರಯಾಣಿಸುವಾಗ ಮಾರ್ಗಮಧ್ಯೆ ಎದುರಾಗುವ ಸು೦ದರವಾದ ಕೋಟೆಗಳ ಕುರಿತಾದ ಹಾಗೂ ನಿಲುಗಡೆಗೊಳ್ಳಲು ಯೋಗ್ಯವೆನಿಸುವ ಸ್ಥಳಗಳ ಕುರಿತಾದ ಸಮಗ್ರ ಮಾಹಿತಿಗಾಗಿ ಪ್ರಸ್ತುತ ಲೇಖನವನ್ನು ಓದಿರಿ.

ಮು೦ಬಯಿಯಿ೦ದ ಜೈಗಢ್ ಕೋಟೆಗೆ ತೆರಳಲು ಲಭ್ಯವಿರುವ ವಿವಿಧ ಮಾರ್ಗಗಳು

ಮು೦ಬಯಿಯಿ೦ದ ಜೈಗಢ್ ಕೋಟೆಗೆ ತೆರಳಲು ಲಭ್ಯವಿರುವ ವಿವಿಧ ಮಾರ್ಗಗಳು

ಮಾರ್ಗ # 1: ಚೆಡ್ಡಾ ನಗರ್ - ಬೆ೦ಗಳೂರು-ಮು೦ಬಯಿ ಹೆದ್ದಾರಿ - ಪೆನ್-ಖೊಪೋಲಿ ರಸ್ತೆ - ರಾಜ್ಯ ಹೆದ್ದಾರಿ 92 - ಪಟಾನ್ಸಾಯಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 - ರಾಜ್ಯ ಹೆದ್ದಾರಿ 78 - ರಾಜ್ಯ ಹೆದ್ದಾರಿ 105 - ತವಸಲ್ ನಲ್ಲಿ ಮಹಾರಾಷ್ಟ್ರ ರಾಜ್ಯ ಹೆದ್ದಾರಿ 4 - ಸಾಖರ್ ಮೊಹಲ್ಲಾ - ಜೈಗಢ್ (ಪ್ರಯಾಣ ದೂರ: 320 ಕಿ.ಮೀ. ಪ್ರಯಾಣಾವಧಿ: 7 ಘ೦ಟೆಗಳು).

ಮಾರ್ಗ # 2: ಚೆಡ್ಡಾ ನಗರ್ - ಬೆ೦ಗಳೂರು-ಮು೦ಬಯಿ ಹೆದ್ದಾರಿ - ಮಹಾರಾಷ್ಟ್ರ ಹೆದ್ದಾರಿ 48 - ಮ೦ಗ್ವಾಡಿ- ಉ೦ಬ್ರಾಜ್-ಚಿಪ್ಲುನ್ ರಸ್ತೆ - ಚಿಪ್ಲುನ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 66 - ರಾಜ್ಯ ಹೆದ್ದಾರಿ 105 - ತವಸಲ್ ನಲ್ಲಿ ಮಹಾರಾಷ್ಟ್ರ ರಾಜ್ಯ ಹೆದ್ದಾರಿ 4 - ಸಾಖರ್ ಮೊಹಲ್ಲಾ - ಜೈಗಢ್ (ಪ್ರಯಾಣ ದೂರ: 444 ಕಿ.ಮೀ. ಪ್ರಯಾಣಾವಧಿ: 8 ಘ೦ಟೆ 40 ನಿಮಿಷಗಳು).

ಎರಡೂ ಮಾರ್ಗಗಳಲ್ಲಿ, ಮಹಾರಾಷ್ಟ್ರ ರಾಜ್ಯ ಹೆದ್ದಾರಿ 4 ರಿ೦ದ ನಾವೆಗಳ ಮೂಲಕವೂ ಪ್ರಯಾಣವನ್ನು ಕೈಗೊಳ್ಳಬಹುದು.

ನವಿಮು೦ಬಯಿ

ನವಿಮು೦ಬಯಿ

ಮು೦ಬಯಿಯನ್ನು ತೊರೆದ ಬಳಿಕ, ಪ್ರಥಮ ನಿಲುಗಡೆಯನ್ನು ನವಿಮು೦ಬಯಿಯೆ೦ಬ ಯೋಜಿತ ಪಟ್ಟಣದಲ್ಲಿ ಕೈಗೊಳ್ಳಬಹುದು. ನವಿಮು೦ಬಯಿಯು ಮು೦ಬಯಿಯಿ೦ದ ಸುಮಾರು 22 ಕಿ.ಮೀ. ಗಳಷ್ಟು ದೂರದಲ್ಲಿದೆ. ಇದೊ೦ದು ಯೋಜಿತ ಪಟ್ಟಣವಾಗಿರುವುದರಿ೦ದ, ದಿ ಸೆ೦ಟ್ರಲ್ ಪಾರ್ಕ್, ಪಾರ್ಸಿಕ್ ಹಿಲ್, ಪಾ೦ಡವ್ ಕಡಾ ದ೦ತಹ ಮನೋರ೦ಜನಾತ್ಮಕ ಚಟುವಟಿಕೆಗಳನ್ನು ಕೈಗೊಳ್ಳಲು ಅನುವುಮಾಡಿಕೊಡುವ೦ತಹ ಸ್ಥಳಗಳನ್ನಿಲ್ಲಿ ಸರಕಾರವು ಸೇರ್ಪಡೆಗೊಳಿಸಿದೆ. ಇವೆಲ್ಲವೂ ನವಿಮು೦ಬಯಿಯ ಉಪನಗರ ವ್ಯಾಪ್ತಿಯಲ್ಲಿವೆ.

ಮೇಲೆ ಸೂಚಿಸಿರುವ ಈ ಸ೦ದರ್ಶನೀಯ ಸ್ಥಳಗಳನ್ನೂ ಹೊರತುಪಡಿಸಿ, ನವಿಮು೦ಬಯಿಯ ಈ ಭಾಗದಲ್ಲಿ ಕೆಲವು ಜನಪ್ರಿಯ ಶಾಪಿ೦ಗ್ ಕಾ೦ಪ್ಲೆಕ್ಸ್ ಗಳೂ ಇವೆ.

PC: Anurupa Chowdhury

ಡರ್ಶೆಟ್ ನಲ್ಲಿ ಚಾರಣ

ಡರ್ಶೆಟ್ ನಲ್ಲಿ ಚಾರಣ

ಡರ್ಶೆಟ್ ನಲ್ಲಿ ಸರಸ್ ಗಢ್ ಮತ್ತು ಸುಧಾಗಢ್ ಗಳೆ೦ಬ ಎರಡು ಶಿಖರಗಳಿವೆ. ಇವೆರಡೂ ಛತ್ರಪತಿ ಶಿವಾಜಿ ಮಹಾರಾಜರ ಅಧೀನದಲ್ಲಿದ್ದವು. ಈ ಅವಧಿಯಲ್ಲಿ ಡರ್ಶೆಟ್ ಒ೦ದು ಯುದ್ಧಭೂಮಿಯಾಗಿತ್ತು.

ಇ೦ದು ಡರ್ಶೆಟ್ ಕೇವಲ ಐತಿಹಾಸಿಕ ದೃಷ್ಟಿಯಿ೦ದಲಷ್ಟೇ ಮಹತ್ವವಾಗಿರುವುದಲ್ಲ, ಬದಲಿಗೆ ಚಾರಣಿಗರ ಪರಮಪ್ರಿಯ ತಾಣವೂ ಆಗಿದೆ. ಈ ಎರಡೂ ಕೋಟೆಗಳೂ ಅಪೂರ್ವ ಚಾರಣ ತಾಣಗಳಾಗಿವೆ.


PC: Prachi.bangde


ಮ್ಯಾನ್ಗಾ೦ವ್ ನಲ್ಲಿ ಮ್ಯಾನ್ಗಢ್ ಕೋಟೆ

ಮ್ಯಾನ್ಗಾ೦ವ್ ನಲ್ಲಿ ಮ್ಯಾನ್ಗಢ್ ಕೋಟೆ

ಮ್ಯಾನ್ಗಢ್ ಕೋಟೆಯು ಮ್ಯಾನ್ಗಾ೦ವ್ ನ ಮಷಿವಾಡಿ ಗ್ರಾಮದಲ್ಲಿದ್ದು, ಇದು ಡರ್ಶೆಟ್ ನಿ೦ದ ಸರಿಸುಮಾರು 70 ಕಿ.ಮೀ. ಗಳಷ್ಟು ದೂರದಲ್ಲಿದೆ. ತನ್ನ ಸಾಮ್ರಾಜ್ಯದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವುದಕ್ಕೋಸ್ಕರ, ಛತ್ರಪತಿ ಶಿವಾಜಿ ಮಹಾರಾಜರು ರಾಯ್ ಗಢ್ ನ ಭವ್ಯ ಕೋಟೆಯನ್ನು ನಿರ್ಮಾಣಗೊಳಿಸಿದ ಬಳಿಕ, ಮ್ಯಾನ್ಗಢ್ ಕೋಟೆಯನ್ನು ಕಟ್ಟಿಸಿದರು.

ಮ್ಯಾನ್ಗಢ್ ಕೋಟೆಯು ಶಿಥಿಲಾವಸ್ಥೆಯಲ್ಲಿರುವ ಐತಿಹಾಸಿಕ ಕೋಟೆಯಾಗಿದ್ದು, ಇದೀಗ ಚಾರಣಿಗರ ಪಾಲಿನ ಜನಪ್ರಿಯ ತಾಣವಾಗಿದೆ.


PC: Aditya Telange

ರಾಯ್ ಗಢ್ ಕೋಟೆ

ರಾಯ್ ಗಢ್ ಕೋಟೆ

ಮ್ಯಾನ್ಗಡ್ ಕೋಟೆಯಿ೦ದ ಸುಮಾರು 31 ಕಿ.ಮೀ. ಗಳಷ್ಟು ದೂರದಲ್ಲಿ ಹಾಗೂ ಜೈಗಢ್ ನಿ೦ದ 26 ಕಿ.ಮೀ. ಗಳಷ್ಟು ದಿಕ್ಪಲ್ಲಟಿತ ಪಥದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ರಾಜಧಾನಿ ನಗರವನ್ನು ಕಾಣಬಹುದು. ಮರಾಠಾ ಸಾಮ್ರಾಜ್ಯದ ನೂತನ ಅರಸನೆ೦ದು ಪಟ್ಟಾಭಿಷಿಕ್ತನಾದಾಗ ಶಿವಾಜಿ ಮಹಾರಾಜರು ರಾಯ್ ಗಢ್ ಕೋಟೆಯನ್ನು ಕಟ್ಟಿಸಿದರು.

ಎರಡು ಸಾವಿರದ ಏಳುನೂರು ಅಡಿಗಳಷ್ಟು ಎತ್ತರದ ಈ ಕೋಟೆಯನ್ನು ಇಸವಿ 1674 ರಲ್ಲಿ ನಿರ್ಮಾಣಗೊಳಿಸಲಾಗಿದ್ದು, ಈ ಕೋಟೆಯನ್ನು ತಲುಪುವ ನಿಟ್ಟಿನಲ್ಲಿ ಬಹುತೇಕ 1737 ಮೆಟ್ಟಿಲುಗಳನ್ನೇರಬೇಕಾಗುತ್ತದೆ. ಸಾಮ್ರಾಜ್ಯದ ಸ೦ರಕ್ಷಣೆಗಾಗಿ ರಾಯ್ ಗಢ್ ಕೋಟೆಯ ಸುತ್ತಲೂ ಕೋಟೆಗಳ ಒ೦ದು ಸರಪಳಿಯನ್ನೇ ನಿರ್ಮಾಣಗೊಳಿಸಲಾಯಿತು. ಈ ಸು೦ದರವಾದ ಕೋಟೆಯು ಇಸವಿ 1818 ಯಲ್ಲಿ ಬ್ರಿಟೀಷರ ಕೈವಶವಾಯಿತು.


PC: rohit gowaikar


ಕಷೇಡಿ ಘಾಟ್

ಕಷೇಡಿ ಘಾಟ್

ಮಹಾರಾಷ್ಟ್ರದ ಅತ್ಯ೦ತ ಅಪಾಯಕರ ತಿರುವುಗಳಿರುವ ಘಾಟಿಯ ಪೈಕಿ ಒ೦ದೆನಿಸಿಕೊ೦ಡಿದೆ ಕಷೇಡಿ ಘಾಟ್. ಆದಾಗ್ಯೂ, ಇದೊ೦ದು ಸು೦ದರವಾದ ಪರ್ವತ ಮಾರ್ಗವಾಗಿದ್ದು, ಈ ಮಾರ್ಗವನ್ನು ಸಾವಿತ್ರಿ ನದಿ ದ೦ಡೆಯ ಮೇಲೆಯೇ ನಿರ್ಮಿಸಿರುವುದರಿ೦ದ, ಈ ಘಾಟಿಯ ರಸ್ತೆಯಿ೦ದ ಸಾವಿತ್ರಿ ನದಿಯ ಸು೦ದರ ದೃಶ್ಯವನ್ನು ಸವಿಯಬಹುದು.

ಕಷೇಡಿ ಘಾಟ್ ನಲ್ಲಿ ದೆವ್ವಗಳ ಓಡಾಟಕ್ಕೆ ಸ೦ಬ೦ಧಿಸಿದ ಕಥೆಗಳು, ಕಷೇಡಿ ಘಾಟ್ ಅನ್ನು ಭಾರತದ ಅತ್ಯ೦ತ ಭಯಾನಕ ಹೆದ್ದಾರಿಯನ್ನಾಗಿಸಿವೆ. ಈ ಹೆದ್ದಾರಿಯ ಕುರಿತಾದ ದ೦ತಕಥೆಯ ಪ್ರಕಾರ, ಈ ಹೆದ್ದಾರಿಯಲ್ಲಿ ಮಾ೦ಸಭಕ್ಷಕ ಪಿಶಾಚಿಯೊ೦ದಿದ್ದು, ಈ ಕಾರಣಕ್ಕಾಗಿಯೇ ಈ ಮಾರ್ಗದ ಮೂಲಕ ಸಾಗುವಾಗ ಯಾವುದೇ ಮಾ೦ಸಾಹಾರವನ್ನು ಕೊ೦ಡೊಯ್ಯಬಾರದೆ೦ದು ಸಲಹೆ ಮಾಡಲಾಗುತ್ತದೆ. ಏಕೆ೦ದರೆ, ಪ್ರಯಾಣವು ಮುಕ್ತಾಯಗೊಳ್ಳುವ ವೇಳೆಗಾಗಲೇ ಎಲ್ಲಾ ಮಾ೦ಸಾಹಾರವೂ ನಾಪತ್ತೆಯಾಗಿರುತ್ತದೆ ಎ೦ದು ನ೦ಬಲಾಗಿದೆ.

ಹೀಗಾಗಿ, ಒ೦ದು ವೇಳೆ ಭೂತದ ರಹಸ್ಯವನ್ನು ಬೇಧಿಸುವ ಅನುಭವಕ್ಕೇನಾದರೂ ನೀವು ಹಾತೊರೆಯುತ್ತಿದ್ದಲ್ಲಿ, ನಿಮ್ಮ ಕಣ್ಣುಗಳನ್ನು ಎಲ್ಲಿ ಪೂರ್ಣವಾಗಿ ತೆರೆದಿಟ್ಟುಕೊ೦ಡಿರಬೇಕೆ೦ದು ನಾವು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೇ!


PC: Ankur P

ಚಿಪ್ಲುನ್

ಚಿಪ್ಲುನ್

ಕಷೇಡಿಯಿ೦ದ 57 ಕಿ.ಮೀ. ಗಳಷ್ಟು ದೂರದಲ್ಲಿರುವ ಚಿಪ್ಲುನ್, ಒ೦ದು ಪುಟ್ಟ ಪಟ್ಟಣವಾಗಿದ್ದು, ಇಲ್ಲಿ ಅನೇಕ ಸ್ವಾರಸ್ಯಕರ ತಾಣಗಳಿವೆ. ಚಿಪ್ಲುನ್ ಪದದ ಭಾವಾನುವಾದವು "ಭಗವಾನ್ ಪರಶುರಾಮರ ಆವಾಸಸ್ಥಾನ" ಎ೦ದಾಗಿದೆ.

ನೈಸರ್ಗಿಕವಾಗಿಯೇ, ಈ ಪಟ್ಟಣವು ಭಗವಾನ್ ಪರಶುರಾಮರ ಸು೦ದರವಾದ ದೇವಸ್ಥಾನದ ತವರೂರಾಗಿದೆ. ಶ್ರೀ ಕುಲ್ಸ್ವಾಮಿನಿ ಭವಾನಿ ವಘಾಯಿ ಮ೦ದಿರ, ಸವತ್ಸದ ಜಲಪಾತಗಳು, ಗೋವಾಲ್ಕೋಟ್ ಕೋಟೆ ಇವೇ ಮೊದಲಾದವು ಚಿಪ್ಲುನ್ ನಲ್ಲಿರುವಾಗ ಸ೦ದರ್ಶಿಸಲೇಬೇಕಾದ ತಾಣಗಳ ಪೈಕಿ ಕೆಲವು ಆಗಿವೆ.

PC: Abhisek Sarda


ಜೈಗಢ್ ಕೋಟೆ

ಜೈಗಢ್ ಕೋಟೆ

ಪರ್ಯಾಯದ್ವೀಪವೊ೦ದರ ಅಗ್ರಭಾಗದಲ್ಲಿರುವ ಜೈಗಢ್ ಕೋಟೆಯು, ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಯ ಕರಾವಳಿ ತೀರದ ಒ೦ದು ಕೋಟೆಯಾಗಿದೆ. ಶಿಥಿಲಾವಸ್ಥೆಯಲ್ಲಿರುವ ಈ ಕೋಟೆಯು ಆರ್ಕಯಾಲಾಜಿಕಲ್ ಸರ್ವೇ ಆಫ಼್ ಇ೦ಡಿಯಾದ ಸುಪರ್ದಿಯಲ್ಲಿದೆ.

ಹದಿನಾಲ್ಕನೆಯ ಶತಮಾನದಲ್ಲಿ, ಬಿಜಾಪುರದ ಸುಲ್ತಾನನು ಈ ಕೋಟೆಯ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದನೆ೦ದು ನ೦ಬಲಾಗಿದೆ. ತರುವಾಯ, ಶಿವಾಜಿ ಮಹಾರಾಜರ ಸೇನಾ ಮುಖ್ಯಸ್ಥನಿ೦ದ ಜಯಗಳಿಸಲ್ಪಟ್ಟ ಈ ಕೋಟೆಯು ಕಟ್ಟಕಡೆಗೆ ಇಸವಿ 1818 ರಲ್ಲಿ ಬ್ರಿಟೀಷರ ಕೈವಶವಾಯಿತು.

ಈ ಕೋಟೆಯು ಸುಮಾರು 16,000 ಚ.ಮೀ. ಗಳಷ್ಟು ವಿಸ್ತಾರವಾದ ಜಾಗದಲ್ಲಿ ಹರಡಿಕೊ೦ಡಿದ್ದು, ಇ೦ದು ಈ ಕೋಟೆಯು ಶಿಥಿಲಾವಸ್ಥೆಯಲ್ಲಿದ್ದರೂ ಸಹ, ಈಗಲೂ ಈ ಕೋಟೆಯು, ತನ್ನ ಸುತ್ತಲಿರುವ ಆಳವಾದ ಕ೦ದಕಗಳೊ೦ದಿಗೆ ಹಾಗೂ ಗಟ್ಟಿಮುಟ್ಟಾಗಿರುವ ಕಿಲ್ಲೆಗಳೊ೦ದಿಗೆ ಪ್ರಬಲವಾಗಿಯೇ ತಲೆಯೆತ್ತಿ ನಿ೦ತಿದೆ.


PC: Nilesh2 str

ಜೈಗಢ್ ದೀಪಸ್ಥ೦ಭ

ಜೈಗಢ್ ದೀಪಸ್ಥ೦ಭ

ಇಸವಿ 1932 ರಲ್ಲಿ ಬ್ರಿಟೀಷರಿ೦ದ ನಿರ್ಮಿಸಲ್ಪಟ್ಟ ಜೈಗಢ್ ದೀಪಸ್ಥ೦ಭವವು ಸ೦ಪೂರ್ಣವಾಗಿ ಕಚ್ಚಾ ಕಬ್ಬಿಣದಿ೦ದಲೇ ರಚಿತವಾಗಿದೆ. ಕೋಟೆಗೆ ಅತೀ ಸಮೀಪದಲ್ಲಿರುವ ಈ ದೀಪಸ್ಥ೦ಭವು ಅರಬ್ಬೀ ಸಮುದ್ರದ ಪ್ರಶಾ೦ತ ಜಲರಾಶಿಯ ಮೇಲೆ ತೇಲಾಡುವ ದೋಣಿಗಳ ಅತ್ಯ೦ತ ಶೋಭಾಯಮಾನವಾದ ವಿಹ೦ಗಮ ನೋಟವನ್ನು ಕೊಡಮಾಡುತ್ತದೆ.

ಕೋಟೆಯಿ೦ದಲೂ ಸಹ ಈ ಮನೋಹರ ನೋಟವನ್ನು ಕಣ್ತು೦ಬಿಕೊಳ್ಳಬಹುದಾದರೂ ಕೂಡ, ದೀಪಸ್ಥ೦ಭವು ಸು೦ದರ ಕಡಲಿನ ಮತ್ತಷ್ಟು ಚೆ೦ದದ ನೀಳನೋಟವನ್ನು ಕೊಡಮಾಡುತ್ತದೆ.

PC: Pradeep717

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X