Search
  • Follow NativePlanet
Share
» »ಕರ್ನಾಟಕದಲ್ಲಿನ ಈ ಬೀಚ್‍ಗೆ ಭೇಟಿ ನೀಡಿದ್ದೀರಾ...

ಕರ್ನಾಟಕದಲ್ಲಿನ ಈ ಬೀಚ್‍ಗೆ ಭೇಟಿ ನೀಡಿದ್ದೀರಾ...

ಬೀಚ್ ಎಂದರೆ ಸಾಮಾನ್ಯವಾಗಿ ನೆನಪಿಗೆ ಬರುವುದೇ ಗೋವಾ. ಆದರೆ ಗೋವಾಕ್ಕಿಂತ ಅದ್ಭುತವಾದ ಹಾಗು ಸುಂದರವಾದ ಬೀಚ್ ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಇದೆ. ಬೀಚ್ ಎಂದರೆ ಕೇವಲ ಯುವಕರೇ ಅಲ್ಲದೇ ಎಲ್ಲರಿಗೂ ಅಚ್ಚು-ಮೆಚ್ಚು ಎಂದೇ ಹೇಳಬಹುದು. ಬೀಚ್‍ನಲ್ಲಿ ಹ

By Sowmyabhai

ಬೀಚ್ ಎಂದರೆ ಸಾಮಾನ್ಯವಾಗಿ ನೆನಪಿಗೆ ಬರುವುದೇ ಗೋವಾ. ಆದರೆ ಗೋವಾಕ್ಕಿಂತ ಅದ್ಭುತವಾದ ಹಾಗು ಸುಂದರವಾದ ಬೀಚ್ ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಇದೆ. ಬೀಚ್ ಎಂದರೆ ಕೇವಲ ಯುವಕರೇ ಅಲ್ಲದೇ ಎಲ್ಲರಿಗೂ ಅಚ್ಚು-ಮೆಚ್ಚು ಎಂದೇ ಹೇಳಬಹುದು. ಬೀಚ್‍ನಲ್ಲಿ ಹೆಚ್ಚಾಗಿ ಜಲಕ್ರೀಡೆಗಳನ್ನು ಆಡುತ್ತಾ, ವಿನೋದ ಮಾಡುತ್ತಾ ಕಾಲಕಳೆಯುವುದು ಇಷ್ಟವಾದ ಚಟುವಟಿಕೆ. ಬೀಚ್‍ಗಳಲ್ಲಿ ಕೇವಲ ಯುವ ಪ್ರೇಮಿಗಳು ಅಡ್ಡಾಡುವುದು, ಜಲಕ್ರೀಡೆಯಾಡುವುದೇ ಅಲ್ಲದೇ ಸಮುದ್ರದ ತಿನಿಸುಗಳು ಕೂಡ ಆನಂದಿಸಬಹುದು.

ಗೋವಾ ಪಕ್ಕದ ರಾಜ್ಯವಾಗಿದ್ದರು ಕೂಡ ಸಮೀಪದಲ್ಲಿಯೇ ಇರುವ ಬೀಚ್‍ಗಳಿಗೆ ಭೇಟಿ ನೀಡಿ ಬರಬೇಕು ಎಂಬುದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ಇತರ ರಾಜ್ಯಗಳಂತೆ ನಮ್ಮ ಕರ್ನಾಟಕದಲ್ಲಿಯೂ ಪ್ರಶಾಂತವಾದ ಹಾಗು ಸ್ವಚ್ಛವಾದ ಬೀಚ್‍ಗಳಿವೆ. ಆ ಬೀಚ್‍ಗಳು ಯಾವುವು? ಅಲ್ಲಿಗೆ ತೆರಳುವ ಬಗೆ ಹೇಗೆ? ಎಂಬ ಹಲವಾರು ಮಾಹಿತಿಯನ್ನು ಲೇಖನದ ಮೂಲಕ ತಿಳಿಯೋಣ.

1.ಗೋಕರ್ಣ ಬೀಚ್

1.ಗೋಕರ್ಣ ಬೀಚ್

PC:Venkasub

ಬೆಂಗಳೂರಿನಿಂದ ಸುಮಾರು 484 ಕಿ.ಮೀ ದೂರದಲ್ಲಿದೆ.

ಇದೊಂದು ಹಾರಾಮದಾಯಕವಾದ ಪ್ರವಾಸಿ ತಾಣ. ಈ ಬೀಚ್‍ಗೆ ಅನೇಕ ಪ್ರದೇಶಗಳಿಂದ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ವಿಭಿನ್ನವಾದ ತಿನಿಸುಗಳನ್ನು ಪ್ರಯೋಗಿಸಲು ಅಥವಾ ದೋಣಿ ಸವಾರಿ ಮಾಡುವುದನ್ನು ಹೆಚ್ಚಾಗಿ ಆನಂದಿಸುತ್ತಾರೆ. ಇದೊಂದು ಆಧ್ಯಾತ್ಮಿಕ ತಾಣ ಕೂಡ ಹೌದು. ಇಲ್ಲಿ ಮಹಾಬಲೇಶ್ವರನ ಪ್ರಾಚೀನವಾದ ಶಿವಾಲಯವು ಕೂಡ ಇದೆ. ಈ ದೇವಾಲಯದಲ್ಲಿ ಮುಖ್ಯವಾಗಿ ಮಹಾಶಿವನನ್ನು ಆರಾಧಿಸುತ್ತಾರೆ. ಶಿವರಾತ್ರಿಯಂದು ವಿಶೇಷವಾಗಿ ಉತ್ಸವಗಳನ್ನು ನೆರವೇರಿಸುತ್ತಾರೆ.

2.ಓಂ ಬೀಚ್

2.ಓಂ ಬೀಚ್

PC:Axis of eran

ಬೆಂಗಳೂರಿನಿಂದ ಸುಮಾರು 488 ಕಿ.ಮೀ ದೂರದಲ್ಲಿದೆ.

ಓಂ ಬೀಚ್ ಅಥವಾ ಕಡಲ ತೀರವು ಮಂಗಳಕರವಾದ ಓಂ ಚಿಹ್ನೆಯ ಆಕಾರದಲ್ಲಿದೆ. ಇದರ ಔಟ್ಲೈನ್ ಸ್ಪಷ್ಟವಾಗಿ ಗೋಚರಿಸುವಂತಹ ಬಂಡೆಯ "ರಾಕ್ ಆಫ್ ಪೀಸ್" ಇದೆ. ಅದು ನೋಡುವುದಕ್ಕೆ ಸಾಕಷ್ಟು ಸುಂದರವಾಗಿ ಕಾಣುತ್ತದೆ. ಇಲ್ಲಿ ಅನೇಕ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಸಮುದ್ರದ ಸಮೀಪದಲ್ಲಿ ಬೀಯಿಂಗ್ ಖಂಡಿತವಾಗಿಯೂ ಶಾಂತಗೊಳಿಸುವ ಪರಿಣಾಮವನ್ನು ಹೊಂದಿದೆ. ಆದರೆ ಸರ್ಫಿಂಗ್, ಸ್ಕೀಯಿಂಗ್ ಇನ್ನು ಅನೇಕ ವಿನೋದದ ಚಟುವಟಿಕೆಗಳನ್ನು ಇಲ್ಲಿ ಆನಂದಿಸಬಹುದು. ಈ ಬೀಚ್ ಕೂಡ ಗೋಕರ್ಣದಲ್ಲಿಯೇ ಇದ್ದು, ಒಮ್ಮೆ ಭೇಟಿ ನೀಡಿ ಬನ್ನಿ.

3.ಪ್ಯಾರಡೈಸ್ ಬೀಚ್

3.ಪ್ಯಾರಡೈಸ್ ಬೀಚ್

PC:Hari Prasad Nadig

ಬೆಂಗಳೂರಿನಿಂದ ಸುಮಾರು 312 ಕಿ.ಮೀ ದೂರದಲ್ಲಿದೆ.

ಪ್ಯಾರಡೈಸ್ ಬೀಚ್ ತಲುಪಲು, ಜನರು ಕಾಡಿನ ಮೂಲಕ ಟ್ರೆಕ್ಕಿಂಗ್ ಮೂಲಕ ತೆರಳಬಹುದು. ಇದನ್ನು ಫುಲ್ ಮೂನ್ ಬೀಚ್ ಎಂದು ಕರೆಯಲಾಗುತ್ತದೆ. ನೀವೂ ಈಗಾಗಲೇ ಊಹಿಸಿದಂತೆ ಇದೊಂದು ಅದ್ಭುತವಾದ ಬೀಚ್ ಆಗಿದೆ. ವಿಶ್ರಾಂತಿಯಾಗಿ, ಮೋಜು, ಮಸ್ತಿಯನ್ನು ಆನಂದಿಸಬೇಕು ಎಂದು ಬಯಸುವವರು ಈ ಬೀಚ್‍ಗೆ ತೆರಳಬಹುದು. ಇಲ್ಲಿಗೆ ಅನೇಕ ಮಂದಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಈ ಬೀಚ್‍ನ ಸೌಂದರ್ಯವನ್ನು ಕಾಣುತ್ತಾ ಮೈಮರೆಯಬಹುದು.

4.ಮುರುಡೇಶ್ವರ ಬೀಚ್

4.ಮುರುಡೇಶ್ವರ ಬೀಚ್

ಬೆಂಗಳೂರಿನಿಂದ ಸುಮಾರು 512 ಕಿ.ಮೀ ದೂರದಲ್ಲಿದೆ.

ಮುರುಡೇಶ್ವರ ಬೀಚ್ ಒಂದು ಆಧ್ಯಾತ್ಮಿಕವಾದ ಬೀಚ್‍ಗಳಲ್ಲಿ ಒಂದಾಗಿದೆ. ಇಲ್ಲಿ ಹೆಚ್ಚಾಗಿ ದೇವಾಲಯಕ್ಕೆ ಹಾಗು ಬೀಚ್‍ನಲ್ಲಿ ತಮ್ಮ ಸುಮಧುರ ಕ್ಷಣವನ್ನು ಕಳೆಯಲು ಭೇಟಿ ನೀಡುತ್ತಿರುತ್ತಾರೆ. ಮುಖ್ಯವಾಗಿ ಸ್ಕೂಬಾ ಡ್ರೈವಿಂಗ್ ಪ್ರಸಿದ್ಧವಾಗಿದೆ. ಮುರುಡೇಶ್ವರದಲ್ಲಿ ಮತ್ತೊಂದು ಪ್ರಮುಖವಾದ ಆಕರ್ಷಣೆ ಎಂದರೆ ಶಿವನ ಪ್ರತಿಮೆಯೇ ಆಗಿದೆ. ಇದು ವಿಶ್ವದ ಎರಡನೇ ಎತ್ತರದ ಪ್ರತಿಮೆ ಇದಾಗಿದೆ. ಕುಟುಂಬದವರೊಡನೆ, ಸ್ನೇಹಿತರೊಂದಿಗೂ ಕೂಡ ಇಲ್ಲಿಗೆ ಭೇಟಿ ನೀಡಿ ಆನಂದಿಸಬಹುದು.

5.ಮಲ್ಪೆ ಬೀಚ್

5.ಮಲ್ಪೆ ಬೀಚ್

ಬೆಂಗಳೂರಿನಿಂದ ಸುಮಾರು 410 ಕಿ,ಮೀ ದೂರದಲ್ಲಿದೆ.

ಮಲ್ಪೆ ಬೀಚ್ ಮಂಗಳೂರಿನ ಉಡುಪಿ ಜಿಲ್ಲೆಯ ಹತ್ತರವಿದೆ. ಮಲ್ಪೆ ಬೀಚ್ ನೈಸರ್ಗಿಕ ಬಂದರು ಮತ್ತು ಪ್ರವಾಸಿಗರಿಗೆ ಪ್ರಕೃತಿ ಸೌಂದರ್ಯವನ್ನು ಒದಗಿಸುತ್ತದೆ. ಈ ಬೀಚ್ ಅದರ ಪ್ರಶಾಂತತೆ ಮತ್ತು ಸೌಂದರ್ಯಕ್ಕೆ ಪ್ರಸಿದ್ಧವಾಗಿದೆ. ಪ್ರವಾಸಿಗರು ರಜಾದಿನಗಳಿಗೆ ಹಾಗು ಪಿಕ್ನಿಕ್‍ಗಳಿಗೆ ಸೂಕ್ತವಾದ ಸ್ಥಳ ಇದಾಗಿದೆ. ಭೌಗೋಳಿಕ ಶಾಸ್ತ್ರಜ್ಞರ ಆಸಕ್ತಿಯನ್ನು ಹೊಂದಿರುವ ಜ್ವಾಲಾಮುಖಿ ಶಿಲೆಗಳಿಂದ ಈ ಬೀಚ್ ಅನ್ನು ರಚಿಸಲಾಗಿದೆ. ಇದರ ಜೊತೆಗೆ ಮಲ್ಪೆ ಬೀಚ್ ಕಡಲ ತೀರವು ಮೀನುಗಾರಿಗೆ, ಈಜು, ದೋಣಿ ವಿಹಾರವನ್ನು ಕೂಡ ಆನಂದಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X