
ಮಾಹೀಷ್‍ಮತಿ ಸಾಮ್ರಾಜ್ಯ ಎಂದ ಕೂಡಲೇ ನೆನಪಾಗುವುದು ಬಾಹುಬಲಿ ಸಿನಿಮಾ. ಈ ಸಿನಿಮಾದಲ್ಲಿರುವ ಸಾಮ್ರಾಜ್ಯದ ಹೆಸರು ಎಲ್ಲರ ಮನದಲ್ಲೂ ಅಚ್ಚಾಗಿದೆ. ಆಶ್ಚರ್ಯಕರವಾದ ಸಂಗತಿ ಏನೆಂದರೆ ನಿಜವಾಗಿಯೂ ಮಾಹೀಷ್‍ಮತಿ ಸಾಮ್ರಾಜ್ಯವು ನಮ್ಮ ಭಾರತದಲ್ಲಿನ ಮಧ್ಯೆ ಪ್ರದೇಶದಲ್ಲಿದೆ. ಈ ಮಹೀಷ್‍ಮತಿ ಸಾಮ್ರಾಜ್ಯವನ್ನು ಮಹೇಶ್ವರ ಎಂದೇ ಕರೆಯಲಾಗುತ್ತದೆ.
ಮಹಾಭಾರತದಲ್ಲಿಯೂ ಉಲ್ಲೇಖವಿರುವ ಈ ಸಾಮ್ರಾಜ್ಯ ಅತ್ಯಂತ ಮಹತ್ವವನ್ನು ಹಾಗೂ ಪೌರಾಣಿಕ ಇತಿಹಾಸವನ್ನು ಹೊಂದಿದೆ. ಸಿನಿಮಾದ ಕತೆಯಂತೆ ನಿಜವಾದ ಮಾಹೀಷ್‍ಮತಿ ಸಾಮ್ರಾಜ್ಯದ ಕಥೆಯು ಅಷ್ಟೇ ರೋಚಕವಾಗಿದೆ. ಆಂಧ್ರ ಮಹಾಭಾರತದ ಪ್ರಕಾರ ಹಾಗೂ ಮಧ್ಯೆ ಪ್ರದೇಶದ ಇತಿಹಾಸದ ಪ್ರಕಾರ ಎರಡು ವಿವಿಧ ಸುಂದರ ಕಥೆಗಳಿವೆ. ಮಧ್ಯೆ ಪ್ರದೇಶದಲ್ಲಿರುವ ಈ ಸಾಮ್ರಾಜ್ಯದ ಬಗ್ಗೆ ಪ್ರಸ್ತುತ ಲೇಖನದಲ್ಲಿ ತಿಳಿಯೋಣ.

1. ಮಾಹೀಷ್‍ಮತಿ ಸಾಮ್ರಾಜ್ಯ ಎಲ್ಲಿದೆ?
ಮಧ್ಯೆ ಪ್ರದೇಶದ ರಾಜ್ಯದಲ್ಲಿನ ಖರ್‍ಗೋನ್‍ಯಲ್ಲಿದೆ. ಈ ಪ್ರದೇಶವು ಇಂದೋರ್‍ನಿಂದ 91 ಕಿ,ಮೀದೂರದಲ್ಲಿದೆ. ಈ ಮಹೇಶ್ವರ ನಗರವು ನರ್ಮದಾ ನದಿಯ ಮೇಲಿದೆ. ಒಂದು ಕಾಲದಲ್ಲಿ ಈ ಮಹೇಶ್ವರ ನಗರವು ಮಾಲ್ವಾರ ರಾಜಧಾನಿಯಾಗಿತ್ತು. ನಂತರ ಇಂದೋರ್‍ಗೆ ರಾಜಧಾನಿಯನ್ನು ವರ್ಗಾಯಿಸಲಾಯಿತು.

2.ಮಹೇಶ್ವರದ ಇತಿಹಾಸ
ಮಹೇಶ್ವರವನ್ನು ಸ್ಥಾಪಿಸಿದ ಅರಸನೆಂದರೆ ಕಾರತವಿರ್ಯಾ ಅರ್ಜುನ. ನೀವು ಕಾರ್ತ ವೀರಾರ್ಜುನನ ಬಗ್ಗೆ ತಿಳಿಯಬೇಕಾದರೆ ಮಹಾಭಾರತ ಓದಿರಬೇಕು. ಇತನ ಬಗ್ಗೆ ಮಹಾ ಗ್ರಂಥಗಳಾದ ರಾಮಾಯಾಣ ಮತ್ತು ಮಾಹಾ ಭಾರತದಲ್ಲಿಯೂ ಉಲ್ಲೇಖವಿದೆ. ಕಾರತವಿರ್ಯಾ ಅರ್ಜುನನಿಗೆ 500 ಹೆಂಡತಿಗಳಿದ್ದರಂತೆ.
PC: Telugu Nativepalnet

3.ವನಭೋಜನ
ಕಾರತವಿರ್ಯಾ ಅರ್ಜುನನಿಗೆ ಸುಮಾರು 500 ಪತ್ನಿಯರಿದ್ದರಂತೆ. ಇತನು ತನ್ನ 500 ಮಂದಿ ಪತ್ನಿಯರ ಜೋತೆ ವನ ಭೋಜನ ಮಾಡಲು ತೆರಳಿದರು. ಆಗ ಪತ್ನಿಯಲ್ಲಿ ಒಬ್ಬಳೂ ನೀರಿನಲ್ಲಿ ಜಲ ಕ್ರೀಡೆಯಾಡ ಬೇಕು ಎಂಬ ಆಸೆಯನ್ನು ವ್ಯಕ್ತ ಪಡಿಸಿದಾಗ ಪವಿತ್ರ ನರ್ಮದಾ ನದಿಯನ್ನು ತನ್ನ 1000 ಭುಜಬಲದಿಂದ ನಿಲ್ಲಿಸಿದನಂತೆ.
PC:Sumit Surai

4.ರಾವಣ
ರಾವಣನು ತನ್ನ ಪುಷ್‍ಪಕ ವಿಮಾನದಿಂದ ಸಾಗುವಾಗ ಸುಂದರವಾದ ನರ್ಮದಾ ನದಿಯನ್ನು ಕಂಡು ಶಿವನನ್ನು ಈ ಸ್ಥಳದಲ್ಲಿ ಸ್ಥಾಪಿಸಿ ಪೂಜಿಸಬಹುದೆಂದು ಭಾವಿಸುತ್ತಾನೆ. ಶಿವಲಿಂಗವನ್ನು ಈ ಸ್ಥಳದಲ್ಲಿ ಸ್ಥಾಪಿಸಿ ಪೂಜಿಸಲು ಆರಂಭ ಮಾಡುತ್ತಾನೆ. ರಾವಣನ ಧ್ವನಿ ಕೇಳಿ ಜಲಕ್ರೀಡೆಯಲ್ಲಿ ಸಂತೋಷದಿಂದ ಮಗ್ನರಾದ ಕಾರತವಿರ್ಯಾ ಅರ್ಜುನನ ಪತ್ನಿಯರು ನದಿ ತೀರದಿಂದ ಹೊರ ಬರುತ್ತಾರೆ.
PC:Bernard Gagnon

5.ಕಾರತವಿರ್ಯಾ ಅರ್ಜುನನ ಯುದ್ಧ
ರಾಣಿಯರು ಹೋದ ತಕ್ಷಣ ನದಿಯ ನೀರು ಅಲ್ಲಿಂದ ಲಿಂಗದ ಸಮೇತ ಭಾರಿ ಗಾತ್ರದ ಅಲೆಗಳಿಂದ ಕೊಚ್ಚಿ ಹೋಗುತ್ತದೆ. ಇದರಿಂದ ರಾವಣನ ಪೂಜೆಗೆ ಭಂಗವಾಗುತ್ತದೆ. ಕಾರತವಿರ್ಯಾ ಅರ್ಜುನ ತನ್ನ 1000 ಭುಜಬಲದಿಂದ ರಾವಣನನ್ನು ಎಳೆಯುತ್ತಾನೆ.
PC:Dchandresh

6.ರಾವಣನ ಬಂಧನ
ಕಾರತವಿರ್ಯಾ ಅರ್ಜುನನು ರಾವಣನನ್ನು ಎಳೆದ ನಂತರ 10 ದೀಪಗಳನ್ನು ರಾವಣನ ಶಿರದ ಮೇಲೆ ಹಾಗೂ ಒಂದು ದೀಪವನ್ನು ಆತನ ಕೈಯ ಮೇಲೆ ಇಟ್ಟು ರಾವಣನನ್ನು ತನ್ನ ಆಸ್ಥಾನದಲ್ಲಿ ಕಟ್ಟಿ ಹಾಕುತ್ತಾನೆ. ರಾವಣನು ಕಾರತವಿರ್ಯಾ ಅರ್ಜುನನ ಬಂಧಿಯಾಗಿರುತ್ತಾನೆ.
PC:Bernard Gagnon

7.ಉಲ್ಲೇಖಗಳು
ಕಾರತವಿರ್ಯಾ ಅರ್ಜುನನ ಬಗ್ಗೆ ಮಾಹಾಭಾರತ. ರಾಮಾಯಣ, ಜಮದ್ಗನಿ ಋಷಿ, ರೇಣುಕ ದೇವಿ ಮತ್ತು ಪರಶುರಾಮನ ಚರಿತ್ರೆಗಳಲ್ಲಿ ಉಲ್ಲೇಖವಿರುವುದನ್ನು ಕಾಣಬಹುದಾಗಿದೆ.
PC:Bernard Gagnon

8.ಆಂಧ್ರ ಮಹಾಭಾರತದ ಪ್ರಕಾರ
ಆಂಧ್ರ ಮಾಹಾಭಾರತದಲ್ಲಿಯೂ ಕೂಡ ಮಹೀಷ್ ಮತಿ ಸಾಮ್ರಾಜ್ಯದ ಬಗ್ಗೆ ಸಭಾ ಪರ್ವದಲ್ಲಿ ಮಾಹಿತಿ ಇದೆ. ಇದೊಂದು ಅಗ್ನಿ ದೇವನ ವಿವಾಹದ ರೋಚಕ ಕಥೆಯನ್ನು ಆಧಾರಿಸಿದೆ.
PC:Bernard Gagnon

9.ನೀಲ ಮಾಹಾರಾಜ
ಆಂಧ್ರ ಮಾಹಾಭಾರತದ ಪ್ರಕಾರ ಮಹೀಷ್‍ಮತಿಯ ರಾಜ ನೀಲ ಇತನಿಗೆ ಸುಂದರವಾದ ಪುತ್ರಿ ಇದ್ದಳು. ಅವಳ ಅಪೂರ್ವ ಸೌಂದರ್ಯಕ್ಕೆ ಅಗ್ನಿ ದೇವ ಮರುಳಾದನು. ಈ ಸುಂದರಿಗೆ ಬೆಂಕಿ ಕಂಡರೆ ಭಯವಾದ್ದರಿಂದ ಸದಾ ತನ್ನ ತಂದೆಯ ಜೊತೆಗೆ ಇರುತ್ತಿದ್ದಳು.
PC:Bernard Gagnon

10.ಬ್ರಾಹ್ಮಣ
ಅಗ್ನಿ ದೇವನು ಯುವರಾಣಿಯನ್ನು ವರಿಸಲು ಬ್ರಾಹ್ಮಣನಾಗಿ ಭೇಟಿಯಾಗುತ್ತಿದ್ದನು. ಒಮ್ಮೆ ಈ ಜೋಡಿಯನ್ನು ಮಹಾ ರಾಜ ನೀಲನ ಕಣ್ಣಿಗೆ ಬಿತ್ತು. ಕೋಪಗೊಂಡ ಮಹಾರಾಜ ಆ ಬ್ರಾಹ್ಮಣನನ್ನು ಬಂಧಿಸಿ ತಲೆ ಕೆಳಗಾಗುವಂತೆ ಬಾಗಿಸಿದನು ಉಗ್ರ ಸ್ವರೂಪ ತಾಳಿದ ಅಗ್ನಿಯು ವೇದಗಳ ಪ್ರಕಾರ ದೇವತೆಗಳನ್ನು ದಂಡಿಸುವಂತಿಲ್ಲ ಎಂದು ನುಡಿದನು.
PC:Bernard Gagnon

11.ಕ್ಷಮೆಯಾಚಿಸಿದ ಮಾಹಾರಾಜ
ಅಗ್ನಿ ರೂಪ ತಾಳಿದ ಬ್ರಾಹ್ಮಣ. ಅಗ್ನಿ ದೇವನನ್ನು ಕುರಿತು ಮಹಾರಾಜನು ತನ್ನ ತಪ್ಪನು ಮನ್ನಿಸಿ ತನ್ನ ರಾಜ್ಯ ಸುಭೀಕ್ಷೆಯಿಂದ ಇರುವಂತೆ ಹರಸು ಎಂದು ಭೇಡಿ ಕೊಂಡನು. ಇದನ್ನು ಒಪ್ಪಿದ ಅಗ್ನಿ ಯುವರಾಣಿಯನ್ನು ವರಿಸಿದನು.
PC:Bernard Gagnon

12. ಸಮಾರಂಭಗಳು
ಮಹೇಶ್ವರ ನಗರದಲ್ಲಿ ಹಲವಾರು ಉತ್ಸವಗಳು ನಡೆಯುತ್ತವೆ. ಮುಖ್ಯವಾಗಿ ನಾಗ ಪಂಚಮಿ, ಗುಡಿ ಪಾಡವಾ, ತೀಜ್, ಮಹಾಶಿವರಾತ್ರಿ, ಸಮೋತಿ ಅಮಾವಸ್ಯೆಯಂದೂ ಅತ್ಯಂತ ವೈಭವದಿಂದ ಉತ್ಸವ ನಡೆಸಲಾಗುತ್ತದೆ.
PC:Bernard Gagnon

13.ಸಮೀಪದ ದೇವಾಲಯಗಳು
ಮಹೇಶ್ವರದ ಸಮೀಪದ ಪ್ರಸಿದ್ಧವಾದ ದೇವಾಲಯಗಳೆಂದರೆ ಅವುಗಳು ಸಾಹಸ್ರ ಅರ್ಜುನ ದೇವಾಲಯ, ವಿದ್ಯಾವಾಸಿನಿ ದೇವಾಲಯ, ಏಕ್ ಮುಖಿ ದತ್ತ ದೇವಾಲಯ.
PC:Bernard Gagnon

14.ವಿಮಾನ ಮಾರ್ಗ
ಮಹೇಶ್ವರಗೆ ತೆರಳಲು ಸಮೀಪವಾದ ವಿಮಾನ ಮಾರ್ಗವೆಂದರೇ ಅದು ಇಂದೋರ್ ವಿಮಾನ ನಿಲ್ದಾಣ ಅಥವಾ ದೇವಿ ಅಹೀಲೀಬಾಯಿ ಹೋಲ್ಕಾರ್ ಏರ್‍ಪೋರ್ಟ್. ಇಲ್ಲಿಂದ ಮಹೇಶ್ವರಗೆ ಸುಮಾರು 100 ಕಿ,ಮೀ ಅಂತರದಲ್ಲಿದೆ
PC:Bernard Gagnon

15.ಉತ್ತಮ ಸಮಯ
ಈ ಸುಂದರವಾದ ಸ್ಥಳಕ್ಕೆ ಭೇಟಿ ನೀಡಲು ಅಕ್ಟೋಬರ್ ನಿಂದ ಏಪ್ರಿಲ್‍ವರೆವಿಗೂ ಉತ್ತಮವಾದ ಸಮಯವಾಗಿದೆ.
PC:Bernard Gagnon