Search
  • Follow NativePlanet
Share
» »ಇಲ್ಲಿಗೆ ಹೋದರೆ... ಸಾವಿರ ವರ್ಷ ಬದುಕಿರುತ್ತಾರಂತೆ....

ಇಲ್ಲಿಗೆ ಹೋದರೆ... ಸಾವಿರ ವರ್ಷ ಬದುಕಿರುತ್ತಾರಂತೆ....

By Sowmyabhai

ಸುವಿಶಾಲ ಭಾರತ ದೇಶದಲ್ಲಿ ಅನೇಕ ಪ್ರವಾಸಿ ಪ್ರದೇಶಗಳು ಇವೆ. ಇದರಲ್ಲಿ ಕೆಲವು ಆಧ್ಯಾತ್ಮಿಕ ಭಾವವನ್ನು ಉಂಟುಮಾಡುವ ಇನ್ನು ಕೆಲವು ಆಹ್ಲಾದಕರವಾದ ಅನುಭೂತಿಯನ್ನು ನೀಡುತ್ತದೆ. ಇನ್ನು ಶೃಂಗಾರಕರವಾದ ಆಲೋಚನೆಗಳನ್ನು ಹೆಚ್ಚಿಸುವ ಖಜುರಾಹೋನಂತಹ ಪ್ರವಾಸಿ ಪ್ರದೇಶಕ್ಕೆ ಭಾರತ ದೇಶವು ಒಂದು ನಿಲಯವಾದ ವಿಷಯ. ಅದೇ ಸಮಯದಲ್ಲಿ ಕೆಲವು ಪ್ರವಾಸಿ ಪ್ರದೇಶಗಳಲ್ಲಿ ನಿಗೂಢ ರಹಸ್ಯಗಳಿಗೆ ನಿಲಯವಾಗಿದೆ.

ಆ ರಹಸ್ಯವನ್ನು ಛೇಧಿಸುವ ಎಷ್ಟೊ ಮಂದಿ ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಇನ್ನು ಕೆಲವು ಮಂದಿ ತಮ್ಮ ಪರಿಶೋಧನೆಗಳನ್ನು ಮಧ್ಯದಲ್ಲಿಯೇ ಬಿಟ್ಟಿರುವ ಘಟನೆಗಳು ನಡೆದಿವೆ. ಅಂತಹ ಘಟನೆಗೆ ಸೇರಿದ ಒಂದು ಪ್ರವಾಸಿ ಪ್ರದೇಶವೇ ಕಿರಾಡು. ಇದಕ್ಕೆ ಸಂಬಂಧಿಸಿದ ವಿವರಗಳು ನೇಟಿವ್ ಪ್ಲಾನೆಟ್‍ನ ಮೂಲಕ ತಿಳಿದುಕೊಳ್ಳಿ.

1.ಒಟ್ಟು 5 ದೇವಾಲಯಗಳು

1.ಒಟ್ಟು 5 ದೇವಾಲಯಗಳು

Image source

ಇನ್ನು ಚರಿತ್ರೆ, ಪುರಾವಸ್ತು ಸಂಶೋಧನೆಗಳಲ್ಲಿ ಲಭಿಸಿದ ಆಧಾರಗಳನ್ನು ಅನುಸರಿಸಿ ಕಿರಾಡುವಿನಲ್ಲಿ ಒಟ್ಟು 5 ದೇವಾಲಯಗಳು ಇತ್ತು. ಈ 5 ದೇವಾಲಯದಲ್ಲಿ ಒಂದು ವೈಷ್ಣವ ದೇವಾಲಯವಾದ್ದರಿಂದ 4 ಶಿವಾಲಯಗಳು. ಈ ದೇವಾಲಯಗಳನ್ನು ಚಾಳುಕ್ಯರ ಕಾಲದಲ್ಲಿ ನಿರ್ಮಾಣ ಮಾಡಿದರು ಎಂದು ತಿಳಿದುಬರುತ್ತದೆ.

2.ಸ್ಥಳೀಯ ಕಥೆ

2.ಸ್ಥಳೀಯ ಕಥೆ

Image source

ಸ್ಥಳೀಯ ಕಥೆಯ ಪ್ರಕಾರ, ಕಿರಾಡುವಿನಲ್ಲಿ ಮೊದಲು 5 ದೇವಾಲಯಗಳು ಇದ್ದವು. ಅನೇಕ ಕಾಲದ ಹಿಂದೆ ಒಬ್ಬ ಮುನಿ ತನ್ನ ಶಿಷ್ಯರ ಜೊತೆಗೂಡಿ ಇಲ್ಲಿಗೆ ಬಂದನು. ಶಿಷ್ಯರು ತಾವು ಇನ್ನು ಮುಂದೆ ನಡೆಯಲು ಸಾಧ್ಯವಾಗುತ್ತಿಲ್ಲವೆಂದೂ ಸ್ವಲ್ಪ ವಿಶ್ರಾಂತಿ ಬೇಕು ಎಂದು ಗುರುವಿಗೆ ಕೇಳಿಕೊಂಡರು. ಇದರಿಂದಾಗಿ ಆ ಮುನಿಯು ತನ್ನ ಶಿಷ್ಯರ ಬೃಂದವನ್ನು ಕಿರಾಡುವಿನ ದೇವಾಲಯದಲ್ಲಿ ಇರಿ ಎಂದು ಹೇಳುತ್ತಾನೆ. ಆತ್ತ ಸುತ್ತಮುತ್ತಲ ತನ್ನ ಆಶ್ರಮ ಏರ್ಪಾಟು ಮಾಡಲು ಸರಿಯಾದ ಪ್ರದೇಶವನ್ನು ಹುಡುಕಲು ಹೋಗುತ್ತಾನೆ.

3.ಒಬ್ಬ ಮಹಿಳೆ ಮಾತ್ರ..

3.ಒಬ್ಬ ಮಹಿಳೆ ಮಾತ್ರ..

Image source

ಆದರೆ ಅಲ್ಲಿರುವ ವಾತಾವರಣವು ಶಿಷ್ಯರಲ್ಲಿ ಅನೇಕ ಮಂದಿಗೆ ವಾಂತಿಗಳು. ಸುಸ್ತು ಆಗುತ್ತದೆ. ಈ ವಿಷಯವನ್ನೆಲ್ಲಾ ತಿಳಿದುಕೊಂಡ ಗ್ರಾಮ ಪ್ರಜೆಗಳು ಯಾರು ಕೂಡ ಅವರಿಗೆ ಸಾಹಯ ಮಾಡಲು ಮುಂದೆ ಬರುವುದಿಲ್ಲವಂತೆ. ಆದರೆ ಗ್ರಾಮದಲ್ಲಿದ್ದ ಒಬ್ಬ ಮಹಿಳೆ ಮಾತ್ರ ಅವರಿಗೆ ಸ್ವಲ್ಪ ಸಹಾಯ ಮಾಡಲು ಮುಂದಾಗುತ್ತಾಳೆ. ಆದರೂ ಕೂಡ ಯಾವುದೇ ಪ್ರಯೋಜನವಾಗುವುದಿಲ್ಲ.

4.ಹಿಂದೆ ತಿರಗುಬಾರದು

4.ಹಿಂದೆ ತಿರಗುಬಾರದು

Image source

ಹೊಟ್ಟೆನೋವು, ವಾಂತಿಗಳಿಂದ ಆ ಮುನಿಯ ಶಿಷ್ಯರು ಬಳಲುತ್ತಿರುತ್ತಾರೆ. ಹಿಂದುರುಗಿ ಬಂದ ಮುನಿ ವಿಷಯವನ್ನೆಲ್ಲಾ ತಿಳಿದುಕೊಂಡು ತೀವ್ರವಾಗಿ ಆಗ್ರಹವಾಗುತ್ತಾನೆ. ಕಠಿಣವಾದ ಹೃದಯವನ್ನು ಹೊಂದಿರುವ ಇವರೆಲ್ಲಾ ಶಿಲೆಗಳಾಗಿ ಮಾರ್ಪಾಟಾಗಲಿ ಎಂದು ಶಪಿಸುತ್ತಾನೆ. ಆದರೆ ಸ್ವಲ್ಪವಾದರೂ ಸಹಾಯ ಮಾಡಲು ಮುಂದಾದ ಮಹಿಳೆಗೆ ಮಾತ್ರ ನೀನು ಹಿಂದೆ ತಿರುಗಿ ಈ ಗ್ರಾಮವನ್ನು ನೋಡದೇ ಹೋದರೆ ನೀನು ಬದುಕುತ್ತಿಯಾ ಎಂದು ಹೇಳುತ್ತಾನೆ.

5.ಆ ಮಹಿಳೆ...

5.ಆ ಮಹಿಳೆ...

Image source

ಇದರಿಂದ ಆ ಮಹಿಳೆ ಗ್ರಾಮವನ್ನು ಬಿಟ್ಟು ಹೋಗುತ್ತಾ ಒಮ್ಮೆ ಹಿಂದುಗಿ ನೋಡಿದಳಂತೆ. ಇದರಿಂದಾಗಿ ಆಕೆಯು ಶಿಲೆಯಾಗಿ ಮಾರ್ಪಟಾದಳಂತೆ. ಇಂದಿಗೂ ಆ ಶಿಲೆಯನ್ನು ನಾವು ಇಲ್ಲಿ ಕಾಣಬಹುದು. ತದನಂತರ ಅತ್ಯಂತ ಕೋಪಗೊಂಡಿದ್ದ ಮುನಿಯು ಸೂರ್ಯಾಸ್ತದ ಸಮಯದಲ್ಲಿ ಶಾಂತಿಯಾಗಿ, ಗ್ರಾಮದ ಜನರೆಲ್ಲಾ ಇನ್ನು ಮುಂದೆ ಸೂರ್ಯಾಸ್ತ ಸಮಯವಾದ ನಂತರ ಶಿಲೆಯಾಗಿ ಮಾರ್ಪಟಾಗುತ್ತಾರೆ ಎಂದು ಹೇಳುತ್ತಾನೆ. ಹಾಗಾಗಿಯೇ ಗ್ರಾಮಸ್ಥರೇ ಅಲ್ಲದೇ ಪ್ರವಾಸಿಗರು ಕೂಡ ಸೂರ್ಯಾಸ್ತದ ಸಮಯದಲ್ಲಿ ಯಾರು ಕೂಡ ಅಲ್ಲಿ ಇರುವುದಿಲ್ಲ.

6.ಸಾವಿರ ವರ್ಷ..

6.ಸಾವಿರ ವರ್ಷ..

Image source

ಇನ್ನು ದೇವಾಲಯದ ಸುತ್ತಮುತ್ತ ಅನೇಕ ಕಲ್ಲುಗಳು ಕಾಣಿಸುತ್ತವೆ. ಇದನ್ನು ಅತಿಕ್ರಮಿಸಿ ರಾತ್ರಿಯ ಸಮಯದಲ್ಲಿ ಆ ದೇವಾಲಯದಲ್ಲಿದ್ದರೆ, ಶಿಲೆಯಾಗಿ ಪರಿರ್ವತನೆಯಾಗಿ ಸಾವಿರ ವರ್ಷ ಹಾಗೆಯೇ ಇದ್ದು ಬಿಡುತ್ತಾರೆ ಎಂಬುದು ಪ್ರತೀತಿ. ಇದು ಹೀಗೆ ಇದ್ದರೆ 5 ದೇವಾಲಯದಲ್ಲಿ ಪ್ರಸ್ತುತ ಇಲ್ಲಿ ಸೋಮೆಶ್ವರ ದೇವಾಲಯ ಮಾತ್ರವೇ ಶಿಥಿಲಾವಸ್ಥೆಯಲ್ಲಿ ಇದ್ದು, ಉಳಿದ ನಾಲ್ಕು ದೇವಾಲಯಗಳು ಕಾಲ ಗರ್ಭಗಳಲ್ಲಿ ಉಳಿದುಬಿಟ್ಟಿವೆ.

7.ಸೂರ್ಯಾಸ್ತ ಸಮಯದಲ್ಲಿ...

7.ಸೂರ್ಯಾಸ್ತ ಸಮಯದಲ್ಲಿ...

Image source

ಇಲ್ಲಿ ಸೂರ್ಯಾಸ್ತ ಸಮಯದ ನಂತರ ಯಾರಾದರೂ ಇದ್ದರೆ ಬೆಳಗಿನ ಸಮಯಕ್ಕೆ ಕಠಿಣ ಶಿಲೆಯಾಗಿ ಪರಿವರ್ತನೆಯಾಗುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ. ಹಾಗಾಗಿಯೇ ಪ್ರವಾಸಿಗರು ಯಾರೂ ಕೂಡ ಇಲ್ಲಿ ಸಂಜೆಯ ನಂತರ ಇರುವ ಸಾಹಸವನ್ನು ಮಾಡುವುದಿಲ್ಲ. ಕೆಲವು ವರ್ಷಗಳ ಹಿಂದೆ ಕೆಲವು ವಿದ್ಯಾರ್ಥಿಗಳು ಈ ರಹಸ್ಯವನ್ನು ಛೇಧಿಸಬೇಕು ಎಂದು ಭಾವಿಸಿ ಅಲ್ಲಿ ಸಂಜೆಯ ನಂತರ ಇದ್ದರು. ದೇವಾಲಯದ ಪರಿಸರ ಪ್ರದೇಶದಲ್ಲಿ ಆಗುತ್ತಿದ್ದ ಮಾರ್ಪಟನ್ನು ಗಮನಿಸಿ ಅಲ್ಲಿಂದ ಓಡಿಹೋದರಂತೆ. ಅಂದಿನಿಂದ ಅಲ್ಲಿಗೆ ಯಾರು ಕೂಡ ಇಲ್ಲಿ ಹೋಗಲು ಸಾಹಸ ಮಾಡುವುದಿಲ್ಲ.

8.ಕೇವಲ ಶಿಥಿಲ ದೇವಾಲಯ ಮಾತ್ರವೇ..

8.ಕೇವಲ ಶಿಥಿಲ ದೇವಾಲಯ ಮಾತ್ರವೇ..

Image source

ಹಾಗಾಗಿಯೇ ಪ್ರವಾಸಿಗರು ಅಲ್ಲಿರುವ ಶಿಥಿಲ ದೇವಾಲಯವನ್ನು ಮಾತ್ರವೇ ನೋಡುತ್ತೀರಾ. ಇನ್ನು ಸೋಮೇಶ್ವರ ದೇವಾಲಯವು ಅದ್ಭುತ ಶಿಲ್ಪ ಕಲಾ ಸಂಪತ್ತ ಅನ್ನು ಕಾಣಬಹುದು. ಪುರಾತನವಾದ ಶಾಸ್ತ್ರವೆತ್ತರು, ಶಿಲ್ಪಕಲೆಯ ಮೇಲೆ ಅಧ್ಯಯನ ಮಾಡುವವರು ತಪ್ಪದೇ ಈ ಪ್ರದೇಶಕ್ಕೆ ತೆರಳುತ್ತಿರುತ್ತಾರೆ. ಆದರೆ ಸಂಜೆ 5 ರವರೆಗೆ ಮಾತ್ರವೇ ಅಲ್ಲಿ ಇದ್ದು ತದನಂತರ ಅಲ್ಲಿಂದ ಹೊರಡುತ್ತಾರೆ.

9.ಎಲ್ಲಿದೆ?

9.ಎಲ್ಲಿದೆ?

Image source

ರಾಜಸ್ಥಾನದಲ್ಲಿನ ಬಾರ್ಮರ್ ಜಿಲ್ಲೆಯಲ್ಲಿನ ಹಾತ್ಮಾ ಎಂಬ ಗ್ರಾಮದಲ್ಲಿದೆ. ಈ ಗ್ರಾಮಕ್ಕೆ ಸುಮಾರು 5 ಕಿ.ಮೀ ದೂರದಲ್ಲಿ ಥಾರ್ ಮರಭೂಮಿಯಲ್ಲಿ ಕಿರಾಡು ದೇವಾಲಯವಿದೆ. ಈ ದೇವಾಲಯವು ಪ್ರಮುಖ ಪ್ರವಾಸಿ ಪ್ರದೇಶವು ಜೈಸಲ್ಮೆರ್‍ಗೆ ಕೂಡ ಸಮೀಪದಲ್ಲಿಯೇ ಇದೆ.

10.ಹೇಗೆ ಸೇರಿಕೊಳ್ಳಬೇಕು?

10.ಹೇಗೆ ಸೇರಿಕೊಳ್ಳಬೇಕು?

Image source

ಬಾರ್ಮರ್‍ಗೆ 35 ಕಿ.ಮೀ ದೂರದಲ್ಲಿ, ಜೈಸಲ್ಮೆರ್‍ಗೆ 157 ಕಿ.ಮೀ ದೂರದಲ್ಲಿರುವ ಕಿರಾಡುಗೆ ರಸ್ತೆ ಪ್ರಯಾಣ ಉತ್ತಮ ಎಂದೇ ಹೇಳಬಹುದು.

11.ಪ್ರವಾಸಿ ತಾಣಗಳು

11.ಪ್ರವಾಸಿ ತಾಣಗಳು

Image source

ಬಾರ್ಮರ್ ಜಿಲ್ಲೆಯಲ್ಲಿ ಕಿರಾಡುವಿನ ಜೊತೆ ಜೊತೆಗೆ ನಕೊಡ್ ಜೈನ್ ದೇವಾಲಯ, ತಿಲ್ವಾರ್ ತದಿತರ ಪ್ರದೇಶಗಳನ್ನು ನೋಡಬಹುದು. ಅಷ್ಟೇ ಅಲ್ಲ, ಥಾರ್ ಮರುಭೂಮಿ ಸೌಂದರ್ಯ ನೋಡುವುದಕ್ಕೆ ಪ್ರತ್ಯೇಕ ಪ್ಯಾಕೆಜ್‍ಗಳನ್ನು ಸರ್ಕಾರಿ ಹಾಗು ಖಾಸಗಿ ಅಪರೆಟರ್ಸ್ ಏರ್ಪಟು ಮಾಡುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more