» »ಆ ಕೋಟೆಯಲ್ಲಿರುವ ಸಂಪತ್ತಿಗೆ ಸರ್ಪವೇ ಕಾವಲು....

ಆ ಕೋಟೆಯಲ್ಲಿರುವ ಸಂಪತ್ತಿಗೆ ಸರ್ಪವೇ ಕಾವಲು....

Posted By:

ಪುರಾತನವಾದ ಕಾಲದಲ್ಲಿ ರಾಜರು ಶತ್ರುಗಳ ಭಾದೆಯಿಂದ ರಕ್ಷಣೆಯನ್ನು ಪಡೆಯುವ ಸಲುವಾಗಿಭದ್ರವಾದ ಕೋಟೆಗಳನ್ನು ನಿರ್ಮಾಣ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಅವರ ರಾಜ್ಯದಸಂಪತ್ತನ್ನು ಕಾಪಾಡುವ ಸಲುವಾಗಿ ರಹಸ್ಯವಾಗಿ ಅಡಗಿಸಿ ಇಡುತ್ತಿದ್ದರು. ಆದರೆ ಪ್ರಸ್ತುತಅಂತಹ ಕೋಟೆ ಬೆಳಕಿಗೆ ಬಂದಿದೆ. ನಮ್ಮ ದೇಶದಲ್ಲಿ ಅನೇಕ ಅಂತಹ ಕೋಟೆಗಳನ್ನು ನೀವು ನೋಡೆ ಇರುತ್ತಿರಾ.

ಒಂದೊಂದು ಕೋಟೆ ತನ್ನದೇ ಆದ ಮಹತ್ವವನ್ನು ಹಾಗು ಚರಿತ್ರೆಯನ್ನು ಹೊಂದಿದೆ. ಹಲವಾರುಕೋಟೆಗಳಲ್ಲಿ ಸಾಕಷ್ಟು ಸಂಪತ್ತುಗಳು ದೊರೆತಿರುವುದು ನಮಗೆಲ್ಲಾ ತಿಳಿದಿರುವ ಸಂಗತಿಯೇಆಗಿದೆ. ಹಾಗಾದರೆ ಬನ್ನಿ ಅಂತಹ ಕೋಟೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಲೇಖನದ ಮೂಲಕಸಂಕ್ಷೀಪ್ತವಾಗಿ ತಿಳಿದುಕೊಳ್ಳೊಣ.

1.ಎಲ್ಲಿದೆ?

1.ಎಲ್ಲಿದೆ?

ಹಿಮಾಚಲ ಪ್ರದೇಶದಲ್ಲಿನ ಕಾಂಗ್ರಾ ಜಿಲ್ಲೆಯಲ್ಲಿ ನೆಲೆಸಿರುವ ಕೋಟೆಯೇ ಕಾಂಗ್ರಾ ಕೋಟೆ.ಸುಮಾರು 500 ವರ್ಷಗಳ ಹಿಂದೆ ನಿರ್ಮಾಣವಾದ ಈ ಕೋಟೆಯಲ್ಲಿ ಬಗೆಹರಿಸಲಾಗದ ರಹಸ್ಯಗಳುಅಡಗಿವೆ. ಕೋಟೆ ಗೋಡೆ ಪ್ರಾಕಾರಗಳು ಗೋಡೆಗಳ ಮಧ್ಯೆ ಶಿಥಿಲವಾದ ಸ್ತಂಭಗಳನ್ನು ಕಾಣಬಹುದಾಗಿದೆ.

2.ಆ ಕೋಟೆಯಲ್ಲಿರುವ ಸಂಪತ್ತಿಗೆ ಸರ್ಪವೇ ಕಾವಲು....

2.ಆ ಕೋಟೆಯಲ್ಲಿರುವ ಸಂಪತ್ತಿಗೆ ಸರ್ಪವೇ ಕಾವಲು....

ಕೋಟೆಯ ಸುತ್ತ 7 ದ್ವಾರಗಳು, ಪ್ರಾಚೀನವಾದ ನಿರ್ಮಾಣಗಳು ಪ್ರಸ್ತುತ ಪ್ರವಾಸಿಪ್ರದೇಶವಾಗಿದೆ. ಕಣ್ಣಿಗೆ ಕಾಣದ ಅದೆಷ್ಟೊ ಅದ್ಭುತಗಳನ್ನು ಇಲ್ಲಿ ಕಾಣಬಹುದು. ಒಂದುಕಾಲದಲ್ಲಿ ದಟ್ಟವಾದ ಅರಣ್ಯದ ಮಧ್ಯೆ ನೆಲೆಸಿದ್ದ ಕಾಂಗ್ರಾ ಕೋಟೆಯು 7 ದ್ವಾರಗಳಿಂದಅದ್ಭುತವಾಗಿ ನಿರ್ಮಾಣ ಮಾಡಿದ್ದರು. ಯಾವ ದಿಕ್ಕಿನಿಂದ ನೋಡಿದರು ಕೂಡ ಕಾಂಗ್ರಾ ಕೋಟೆ ಸುಂದರವಾಗಿ ಕಾಣುತ್ತದೆ.

3.ಆ ಕೋಟೆಯಲ್ಲಿರುವ ಸಂಪತ್ತಿಗೆ ಸರ್ಪವೇ ಕಾವಲು....

3.ಆ ಕೋಟೆಯಲ್ಲಿರುವ ಸಂಪತ್ತಿಗೆ ಸರ್ಪವೇ ಕಾವಲು....

ಸುಂದರವಾದ ಪ್ರಕೃತಿಯ ಒಡಿಲಲ್ಲಿ, ಅಂದವಾದ ಈ ಕಟ್ಟಡದ ಮೇಲೆ ಅನೇಕ ಮಂದಿ ಪರಿಶೋಧನೆಗಳುಮಾಡಿದರು ಕೂಡ ಆ ರಹಸ್ಯ ಮಾತ್ರ ಬಗೆಹರಿಸಲಾಗುತ್ತಿಲ್ಲ. ಕೋಟೆಯ ಸುತ್ತ ಇರುವ ಕಲ್ಲಿನಗೋಡೆಯು ಸುಮಾರು 30 ಕಿ.ಮೀ ದೂರ ವಿಸ್ತರಿಸಿರಬಹುದು ಎಂದು ಭಾವಿಸಲಾಗುತ್ತುದೆ.

4.ಆ ಕೋಟೆಯಲ್ಲಿರುವ ಸಂಪತ್ತಿಗೆ ಸರ್ಪವೇ ಕಾವಲು....

4.ಆ ಕೋಟೆಯಲ್ಲಿರುವ ಸಂಪತ್ತಿಗೆ ಸರ್ಪವೇ ಕಾವಲು....

ಆ ಕಲ್ಲಿನ ಗೋಡೆಯನ್ನು ದಾಡಿದರೆ ವಿಶಾಲವಾದ ಪ್ರದೇಶ ಕಾಣಿಸುತ್ತದೆ. ಇಲ್ಲಿ ಒಂದು ಕೊಳಕುಡ ಇದೆ ಎಂದು ಕೆಲವು ಹೇಳುತ್ತಾರೆ. ಅದಕ್ಕೆ ಪುಷ್ಟಿ ಎಂಬಂತೆ ಸಿಂಹದ ಬಾಯಿಯಿಂದ 356ದಿನಗಳು ನಿರಂತರವಾಗಿ ನೀರು ಸುರಿಯುತ್ತಿರುತ್ತದೆ. ಆ ನೀರು ಸ್ವಚ್ಛವಾದ ನೀರಾಗಿರುವುದು ವಿಶೇಷ.

5.ಆ ಕೋಟೆಯಲ್ಲಿರುವ ಸಂಪತ್ತಿಗೆ ಸರ್ಪವೇ ಕಾವಲು....

5.ಆ ಕೋಟೆಯಲ್ಲಿರುವ ಸಂಪತ್ತಿಗೆ ಸರ್ಪವೇ ಕಾವಲು....

ಆ ಬೆಟ್ಟದ 4 ದಿಕ್ಕುಗಳಿಂದ ನೋಡಿದರೂ ಕೂಡ ಕಾಣಿಸುವ ವಿಧವಾಗಿ ನಿರ್ಮಾಣ ಮಾಡಿದ್ದಾರೆ.ಕೋಟೆಯ ಯಾವ ದಿಕ್ಕಿನಿಂದ ನೋಡಿದರು ದ್ವಾರಗಳನ್ನು ಸುಲಭ ರೀತಿಯಲ್ಲಿ ನಿರ್ಮಾಣಮಾಡಿದ್ದಾರೆ. ಕೋಟೆಯ ಮೇಲೆ ದಾಳಿಗೆ ಬರುವ ಶತ್ರುಗಳನ್ನು ಗುರುತಿಸುವ ಹಾಗೆ ಕೋಟೆ ನಿರ್ಮಿತವಾಗಿದೆ.

6.ಆ ಕೋಟೆಯಲ್ಲಿರುವ ಸಂಪತ್ತಿಗೆ ಸರ್ಪವೇ ಕಾವಲು....

6.ಆ ಕೋಟೆಯಲ್ಲಿರುವ ಸಂಪತ್ತಿಗೆ ಸರ್ಪವೇ ಕಾವಲು....

ಕೋಟೆಯ ಒಳಗೆ ಆಶ್ಚರ್ಯವನ್ನು ಉಂಟುಮಾಡುವ ಅನೇಕ ಅವಷೇಶಗಳು ಹಲವಾರು ಕಾಣಿಸುತ್ತವೆ. ಸಹಜಸರಿಹದ್ದುವಿನಲ್ಲಿರುವ ದಟ್ಟವಾದ ಅರಣ್ಯ, ಸುತ್ತಲಿನ ಎತ್ತರವಾದ ಬೆಟ್ಟಗಳು ಕೋಟೆಗೆರಕ್ಷಣೆಯಾಗಿ ನಿಂತಿದೆ. ಕಾಂಗ್ರಾ ಕೋಟೆಯ ಸಂಪತ್ತು ಅಡಗಿದೆ ಎಂದು ನಂಬಿಕೆಯಿದೆ.

7.ಆ ಕೋಟೆಯಲ್ಲಿರುವ ಸಂಪತ್ತಿಗೆ ಸರ್ಪವೇ ಕಾವಲು....

7.ಆ ಕೋಟೆಯಲ್ಲಿರುವ ಸಂಪತ್ತಿಗೆ ಸರ್ಪವೇ ಕಾವಲು....

ಸಾಕಷ್ಟು ನಿಧಿ ಇರುವುದರಿಂದ ಅನೇಕ ಮಂದಿ ಆ ನಿಧಿಗಾಗಿ ಭೇಟೆ ಮಾಡಿರುವುದು ಅನೇಕಉದಾಹರಣೆಗಳಿವೆ ಎಂದು ಹೇಳುತ್ತಾರೆ ಸ್ಥಳೀಯರು. ಕಾಂಗ್ರಾ ಕೋಟೆಯಲ್ಲಿ ಸಾಕಷ್ಟುನಿಧಿ-ನಿಕ್ಷೇಪಗಳು ಇವೆ ಎಂದು ಹೇಳುತ್ತಾರೆ ಸ್ಥಳೀಯರು. ಎಕರೆಗಳಷ್ಟು ವಿಸ್ತಾರಹೊಂದಿರುವ ಈ ಕೋಟೆಯಲ್ಲಿ ಎಷ್ಟೇ ವರ್ಷಗಳು ಉರುಳಿದರು ಕೂಡ ನಿಧಿಯನ್ನು ಮಾತ್ರ ಕಂಡುಹಿಡಿಯಲು ಆಗುತ್ತಿಲ್ಲ ಎಂದು ಅಭಿಪ್ರಾಯಗಳು ಇವೆ.

8.ಆ ಕೋಟೆಯಲ್ಲಿರುವ ಸಂಪತ್ತಿಗೆ ಸರ್ಪವೇ ಕಾವಲು....

8.ಆ ಕೋಟೆಯಲ್ಲಿರುವ ಸಂಪತ್ತಿಗೆ ಸರ್ಪವೇ ಕಾವಲು....

ಕೋಟೆಯ ಒಂದು ಭಾಗದಲ್ಲಿ ಒಂದು ಮೂಲೆಯಲ್ಲಿ ಕಲ್ಲಿನ ಕೆಳಗೆ ನಿಧಿಯನ್ನು ರಾಜರುಅಡಗಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕೇರಳದ ಅನಂತ ಪದ್ಮನಾಭ ಸ್ವಾಮಿ ದೇವಾಲಯದಲ್ಲಿ6ನೇ ಕೊಠಡಿಗೆ ನಾಗಬಂಧವಿರುವ ಹಾಗೆ ಇಲ್ಲಿಯೂ ಕೂಡ ಅಂತಹ ಬಂಧವಿದೆ ಎಂದುಗುರುತಿಸಲಾಗಿದೆ. ಆದರೆ ಅದನ್ನು ಮಂತ್ರಗಳಿಂದ ದಿಗ್ಭಂಧನವಾಗಿರದೆ ಸರ್ಪವೇ ಕಾವಲುಕಾಯುತ್ತಿದೆ ಎಂದು ಇನ್ನು ಕೆಲವು ನಂಬುತ್ತಾರೆ.

9.ಆ ಕೋಟೆಯಲ್ಲಿರುವ ಸಂಪತ್ತಿಗೆ ಸರ್ಪವೇ ಕಾವಲು....

9.ಆ ಕೋಟೆಯಲ್ಲಿರುವ ಸಂಪತ್ತಿಗೆ ಸರ್ಪವೇ ಕಾವಲು....

250 ವರ್ಷಗಳಿಂದ ಆ ನಿಧಿಯನ್ನು ಸರ್ಪವು ಕಾಪಾಡುತ್ತಿದೆ ಎಂದು ಹೇಳುತ್ತಿದ್ದಾರೆ.ಕಾಂಗ್ರಾ ಕೋಟೆ ಕಾಣಿಸುವ ಅದ್ಭುತವೇ ಅಲ್ಲ, ನಮಗೆ ಕಾಣಿಸದ ಅನೇಕ ರಹಸ್ಯಗಳು ಕೂಡ ಇವೆ.ಒಂದು ಕಾಲದಲ್ಲಿ ಪ್ರವಾಸಕ್ಕೆ ದೂರವಾಗಿದ್ದ ಈ ಕಾಂಗ್ರಾ ಕೋಟೆಯು ಪ್ರಸ್ತುತ ಪ್ರವಾಸಿ ಸ್ಥಳವಾಗಿ ಮಾರ್ಪಾಟಾಗಿದೆ.

10.ತಲುಪುವ ಬಗೆ ಹೇಗೆ?

10.ತಲುಪುವ ಬಗೆ ಹೇಗೆ?

ಕಂಗ್ರಾ ಕೋಟೆಯು ಧರ್ಮಶಾಲಾದಿಂದ 20 ಕಿ.ಮೀ ದೂರದಲ್ಲಿ ಕಾಂಗ್ರಾ ಪಟ್ಟಣದಪ್ರಾರಂಭದಲ್ಲಿದೆ. ದೆಹಲಿ, ಶಿಮ್ಲಾ ಮತ್ತು ಚಂಡೀಗಢ ನಗರಗಳಿಂದ ರಸ್ತೆ ಮಾರ್ಗವಾಗಿಧರ್ಮಶಾಲಾಗೆ ಸುಲಭವಾಗಿ ತಲುಪಬಹುದಾಗಿದೆ. ಕಾಂಗ್ರಾ ಪಟ್ಟಣಕ್ಕೆ ತಲುಪಿದ ನಂತರ,ಕೋಟೆಯನ್ನು ಆಟೋ-ರಿಕ್ಷಾ ಅಥವಾ ಕಾರ್‍ನ ಮೂಲಕ ಸಾರಿಗೆ ಮೂಲಕ ತಲುಪಬಹುದು.