Search
  • Follow NativePlanet
Share
» »ಬ್ರಹ್ಮ ದೇವ 9 ರೂಪದಲ್ಲಿ ದರ್ಶನವನ್ನು ನೀಡುವ ಏಕೈಕ ದೇವಾಲಯ ಯಾವುದು ಗೊತ್ತ?

ಬ್ರಹ್ಮ ದೇವ 9 ರೂಪದಲ್ಲಿ ದರ್ಶನವನ್ನು ನೀಡುವ ಏಕೈಕ ದೇವಾಲಯ ಯಾವುದು ಗೊತ್ತ?

By Sowmyabhai

ನಮಗೆ ತಿಳಿದಿರುವಂತೆ ತ್ರಿಮೂರ್ತಿಗಳಲ್ಲಿ ಒಬ್ಬನಾದ ಬ್ರಹ್ಮನು ಸಕಲ ಜೀವ ರಾಶಿಗಳಿಗೂ ಸೃಷ್ಟಿಕರ್ತನು, ಆತನಿಗೆ ಮುಡಿಪಾದ ದೇವಾಲಯಗಳು ಇರುವುದು ಕೆಲವೇ ಕೆಲವು ಎಂದೇ ಹೇಳಬಹುದು. ರಾಜಸ್ತಾನದಲ್ಲಿ ಬ್ರಹ್ಮನಿಗೆ ಮುಡಿಪಾದ ಪುಣ್ಯ ಕ್ಷೇತ್ರವಿದೆ ಎಂಬುದು ನಮಗೆಲ್ಲಾ ತಿಳಿದಿರುವ ವಿಚಾರವೇ ಆಗಿದೆ. ಅದೇ ರೀತಿ ಇಲ್ಲೊಂದು ವಿಭಿನ್ನವಾದ ಪುಣ್ಯಕ್ಷೇತ್ರವಿದೆ. ವಿಶೇಷ ಏನಪ್ಪ ಎಂದರೆ ಆ ದೇವಾಲಯದಲ್ಲಿ ಬ್ರಹ್ಮದೇವನು 9 ರೂಪದಲ್ಲಿ ಭಕ್ತರಿಗೆ ದರ್ಶನವನ್ನು ನೀಡುತ್ತಾನೆ. 9 ರೂಪದಲ್ಲಿ ಬ್ರಹ್ಮನು ದರ್ಶನವನ್ನು ನೀಡುವ ಏಕೈಕ ದೇವಾಲಯ ಇದೊಂದೇ ಎಂದೇ ಹೇಳಬಹುದು.

ಅಷ್ಟೇ ಅಲ್ಲ, ಆ ಕ್ಷೇತ್ರಕ್ಕೆ ತೆರಳಿದರೆ ದುರಾದೃಷ್ಟವನ್ನು ದೂರ ಮಾಡಿ ಅದೃಷ್ಟವನ್ನು ಒಲಿಸಿಕೊಳ್ಳಬಹುದಂತೆ. ಹಾಗಾದರೆ ಬನ್ನಿ ಆ ಕ್ಷೇತ್ರದ ಬಗ್ಗೆ ಸಂಕ್ಷೀಪ್ತವಾಗಿ ಲೇಖನದ ಮೂಲಕ ತಿಳಿದುಕೊಳ್ಳೊಣ. ಸಮಯವಿದ್ದರೆ ಒಮ್ಮೆ ಭೇಟಿ ನೀಡಿ.

1.ಸೃಷ್ಟಿಕರ್ತ

1.ಸೃಷ್ಟಿಕರ್ತ

PC:Sudeeksha10

ವೇದಗಳಿಗೆ, ಪುರಾಣಗಳಿಗೆ, ಸಕಲ ಜೀವರಾಶಿಗಳಿಗೆ ಬ್ರಹ್ಮನೇ ಸೃಷ್ಟಿಕರ್ತ ಎಂದು ಹೇಳುತ್ತಾರೆ. ಪವಿತ್ರ ಹಾಗು ಪ್ರಸಿದ್ಧ ದೇವಾಲಯಗಳಲ್ಲಿ ತೆಲಂಗಾಣ ರಾಜ್ಯದ ಮೆಹೆಬೂಬ್ ಜಿಲ್ಲೆಯಲ್ಲಿನ ಅಲಂಪುರ ಮಂಡಲದ ಶ್ರೀ ಜೋಗುಳಾಂಬ ದೇವಿ ದೇವಾಲಯವು ಒಂದು. ಇದೊಂದು ಪ್ರಸಿದ್ಧವಾದ ಕ್ಷೇತ್ರವಾಗಿದ್ದು, ಅನೇಕ ರಾಜ್ಯಗಳಿಂದ ಭೇಟಿ ನೀಡುತ್ತಿರುತ್ತಾರೆ.

2.ಬ್ರಹ್ಮನ 9 ರೂಪಗಳು

2.ಬ್ರಹ್ಮನ 9 ರೂಪಗಳು

PC:SOURCE

ಶ್ರೀ ಜೋಗುಳಾಂಬ ದೇವಿ ದೇವಾಲಯವು ತುಂಗಭದ್ರ ನದಿಯ ತೀರದಲ್ಲಿದೆ. ಇಲ್ಲಿ ಬ್ರಹ್ಮ ದೇವನು ಭಕ್ತರಿಗೆ ತನ್ನ 9 ರೂಪವನ್ನು ದರ್ಶನವನ್ನು ಅನುಗ್ರಹಿಸುತ್ತಾನೆ. ಇಲ್ಲಿ ಒಂದು ನವಬ್ರಹ್ಮ ದೇವಾಲಯವಿದೆ. ನವ ಎಂದರೆ ಒಂಭತ್ತು ಎಂದು ಅರ್ಥವಿದ್ದು, 9 ಬ್ರಹ್ಮ ಎಂಬ ಅರ್ಥವನ್ನು ನೀಡುತ್ತದೆ.

3.ಬ್ರಹ್ಮ ತಪಸ್ಸು ಮಾಡಿದ ಸ್ಥಳ

3.ಬ್ರಹ್ಮ ತಪಸ್ಸು ಮಾಡಿದ ಸ್ಥಳ

PC:Badshah56

ಈ ಪುಣ್ಯಸ್ಥಳಕ್ಕೆ ವಿಶೇಷವಾದ ಸ್ಥಳ ಪುರಾಣವಿದೆ. ಅದೆನೆಂದರೆ ಸೃಷ್ಟಿಕರ್ತ ಬ್ರಹ್ಮನು ಪರಮೇಶ್ವರನನ್ನು ಕುರಿತು ತಪಸ್ಸು ಮಾಡಿದ ಪವಿತ್ರ ಸ್ಥಳ ಎಂದು ನಂಬಲಾಗಿದೆ. ಹಾಗಾಗಿ ಇಲ್ಲಿ ಪ್ರಧಾನವಾದ ಶಿವಾಲಯಗಳಾದ ಬಾಲಬ್ರಹ್ಮೇಶ್ವರ ಜೊತೆ ಜೊತೆ ಇನ್ನು 8 ದೇವಾಲಯಗಳಿವೆ.

4.9 ಬ್ರಹ್ಮ ರೂಪಗಳ ದೇವಾಲಯ ಯಾವುವು?

4.9 ಬ್ರಹ್ಮ ರೂಪಗಳ ದೇವಾಲಯ ಯಾವುವು?

PC:SOURCE

ಆ ಬ್ರಹ್ಮ ರೂಪಗಳನ್ನು ಹೊಂದಿರುವ ದೇವಾಲಯಗಳೆಂದರೆ ಬಾಲಬ್ರಹ್ಮೇಶ್ವರ, ವಿಶ್ವಬ್ರಹ್ಮ, ಕುಮಾರ ಬ್ರಹ್ಮ, ಅರ್ಥಬ್ರಹ್ಮ, ತಾರಕ ಬ್ರಹ್ಮ, ಗರುಡಬ್ರಹ್ಮ, ಪದ್ಮಬ್ರಹ್ಮ, ಸ್ವರ್ಗ ಬ್ರಹ್ಮ, ವೀರಬ್ರಹ್ಮ ದೇವಾಲಯಗಳು ಪ್ರತ್ಯೇಕವಾಗಿ ಇರುವುದು ಇಲ್ಲಿನ ಕ್ಷೇತ್ರ ಪವಿತ್ರತೆಯನ್ನು ಮತ್ತಷ್ಟು ಹೆಚ್ಚಿಸಿವೆ.

5.ಶಿಲ್ಪಕಲೆಗಳು

5.ಶಿಲ್ಪಕಲೆಗಳು

PC: Vikram Katta

ಈ ಶಿವಾಲಯದಲ್ಲಿನ ಶಿಲ್ಪಕಲೆಗಳು ಅತ್ಯಂತ ಅದ್ಭುತವಾಗಿದ್ದು, ಪೌರಾಣಿಕವಾದ ಕಥೆಗಳನ್ನು ಹೊಂದಿರುವ ಕೆತ್ತನೆಗಳನ್ನು ಹೊಂದಿದೆ. ಇಲ್ಲಿನ ಶಿಲ್ಪಕಲೆಗಳು ಒಂದು ಸುಂದರವಾದ ದೃಶ್ಯ ಪ್ರಪಂಚದ ಅನಾವರಣವನ್ನು ಪ್ರವಾಸಿಗರಿಗೆ ಮತ್ತು ಭಕ್ತರಿಗೆ ಒದಗಿಸುತ್ತದೆ. ಅನೇಕ ದೇಶ-ವಿದೇಶಗಳ ಚರಿತ್ರೆಕಾರರಿಗೆ ಸ್ಫೂರ್ತಿಯನ್ನು ನೀಡುವ ವಿಧವಾಗಿ ಈ ದೇವಾಲಯದ ನಿರ್ಮಾಣವು ನಡೆದಿದೆ.

6.ಅದೃಷ್ಟ ಒಲಿಸಿಕೊಳ್ಳಲು...

6.ಅದೃಷ್ಟ ಒಲಿಸಿಕೊಳ್ಳಲು...

PC:SOURCE

ಬ್ರಹ್ಮನು 9 ಶಿವಲಿಂಗವನ್ನು ಪ್ರತಿಷ್ಟಾಪನೆ ಮಾಡಿ ಪರಮೇಶ್ವರನ ಕುರಿತು ತಪಸ್ಸು ಮಾಡಿದ್ದರಿಂದ ಆ ಶಿವಲಿಂಗಗಳು ಬ್ರಹ್ಮನ ರೂಪಗಳು ಎಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲ, ಈ ಪವಿತ್ರವಾದ ದೇವಾಲಯಗಳಿಗೆ ಭೇಟಿ ನೀಡಿದರೆ ಅದೃಷ್ಟವನ್ನು ಒಲಿಸಿಕೊಳ್ಳಬಹುದು ಎಂದು ನಂಬಲಾಗಿದೆ. ಅದು ಏನೇ ಇರಲಿ ಒಮ್ಮೆ ಇಂಥಹ ಪೌರಾಣಿಕ ಸ್ಥಳ ಪುರಾಣವನ್ನು ಹೊಂದಿರುವ ದೇವಾಲಯಕ್ಕೆ ಭೇಟಿ ನೀಡಿ ಬನ್ನಿ.

7.ಹೇಗೆ ತೆರಳಬೇಕು?

7.ಹೇಗೆ ತೆರಳಬೇಕು?

PC:YOUTUBE

ತೆಲಂಗಾಣದ ಅಲಂಪುರದಲ್ಲಿನ ಜೋಗುಳಮ್ಮ ದೇವಿ ದೇವಾಲಯಕ್ಕೆ ಗದ್ವಾಲ್‍ನಿಂದ ಸುಮಾರು 54 ಕಿ.ಮೀ ದೂರದಲ್ಲಿದೆ. ರೈಲಿನ ಮುಖಾಂತರ ತೆರಳಿದರೆ ಸುಮಾರು 48 ಕಿ.ಮೀ ದೂರದಲ್ಲಿದೆ. ಸ್ವಂತ ವಾಹನದ ಮೂಲಕ ತೆರಳಿದರೆ ಸುಮಾರು 45 ಕಿ.ಮೀ ದೂರದಲ್ಲಿದೆ. ಹೈದ್ರಾಬಾದ್‍ನಿಂದ 208 ಕಿ.ಮೀ ದೂರದಲ್ಲಿದೆ. ವಿಜಯವಾಡದಿಂದ ಸುಂಆರು 289 ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more