Search
  • Follow NativePlanet
Share
» »ಮಕ್ಕಳ ಭಾಗ್ಯವನ್ನು ಕರುಣಿಸುವ ಮುದ್ದು ಕೃಷ್ಣನಿವನು.....

ಮಕ್ಕಳ ಭಾಗ್ಯವನ್ನು ಕರುಣಿಸುವ ಮುದ್ದು ಕೃಷ್ಣನಿವನು.....

ವಿವಾಹವಾದ ನಂತರ ಒಂದು ಪುಟ್ಟ ಮಗುವು ಮನೆಯೆಲ್ಲಾ ಓಡಾಡಿಕೊಂಡು ಇರಬೇಕು ಎಂದು ದಂಪತಿಗಳು ಅಂದುಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಕೆಲವರಿಗೆ ಮಕ್ಕಳು ಹುಟ್ಟುವುದು ವಿಳಂಬವಾದಾಗ ಆ ದಂಪತಿಗಳು ಅನೇಕ ದೇವಾಲಯಕ್ಕೆ ಹರಕೆ, ಆಸ್ಪತ್ರೆ ಎಂದೆಲ್ಲಾ ಓಡಾಡುತ್ತಾರೆ. ಆ ಕಷ್ಟಕೆಲ್ಲಾ ಪರಿಹಾರ ಒದಗಿಸುವ ಒಂದು ಮಹಿಮಾನ್ವಿತವಾದ ದೇವಾಲಯವಿದೆ. ಈ ದೇವಾಲಯಕ್ಕೆ ಭೇಟಿ ನೀಡಿ ಭಕ್ತಿಯಿಂದ ಪ್ರಾರ್ಥಿಸಿದರೆ ಅಥವಾ ಹರಕೆಯ ರೂಪದಲ್ಲಿ ಕಾಣಿಕೆಯನ್ನು ನೀಡಿದರೆ ಶೀಘ್ರದಲ್ಲಿಯೇ ದೇವರ ಕೃಪೆ ಉಂಟಾಗಿ ದಂಪತಿಗಳಿಗೆ ಸಂತಾನ ಭಾಗ್ಯ ಲಭಿಸುತ್ತದೆ ಎಂಬುದು ಭಕ್ತರ ಅಚಲವಾದ ನಂಬಿಕೆಯಾಗಿದೆ.

ಅಂತಹ ಒಂದು ನಂಬಿಕೆ ಚಾಲ್ತಿಯಲ್ಲಿರುವ ದೇವಾಲಯದ ಕುರಿತು ಪ್ರಸ್ತುತ ಲೇಖನದಲ್ಲಿ ತಿಳಿಯೋಣ.

ಮಕ್ಕಳ ಭಾಗ್ಯವನ್ನು ಕರುಣಿಸುವ ಮುದ್ದು ಕೃಷ್ಣನಿವನು.....

ಮಕ್ಕಳ ಭಾಗ್ಯವನ್ನು ಕರುಣಿಸುವ ಮುದ್ದು ಕೃಷ್ಣನಿವನು.....

ದೇವಾಲಯ ಯಾವುದು?
ಇದೊಂದು ಕೃಷ್ಣನ ದೇವಾಲಯವಾಗಿದ್ದು, ಇಲ್ಲಿ ಕೃಷ್ಣನು ಅಂಬೆಗಾಲಿಡುತ್ತಿರುವ ನವನೀತ ಕೃಷ್ಣನಾಗಿ ಪ್ರಸಿದ್ಧನಾಗಿದ್ದಾನೆ. ಆ ದೇವಾಲಯವನ್ನು ಮಳ್ಳೂರು ಕೃಷ್ಣ ದೇವಾಲಯ ಎಂದೇ ಕರೆಯಲಾಗುತ್ತದೆ. ಇದು ಬೆಂಗಳೂರಿನಿಂದ ಸಮೀಪವಾದ ಸ್ಥಳವೇ ಆಗಿದೆ. ಚಿಕ್ಕದಾಗಲಿ, ದೊಡ್ಡದಾಗಲಿ ತೊಟ್ಟಿಲನ್ನು ಕಾಣಿಕೆಯಾಗಿ ಅರ್ಪಿಸುತ್ತೇನೆ ಎಂದು ಸಂಪತಿಗಳು ಶ್ರದ್ಧೆ-ಭಕ್ತಿಯಿಂದ ಶ್ರೀ ಕೃಷ್ಣನನ್ನು ಪ್ರಾರ್ಥನೆ ಮಾಡಿಕೊಂಡರೆ ಶೀಘ್ರದಲ್ಲಿಯೇ ಸಂತಾನ ಭಾಗ್ಯ ನೀಡುತ್ತಾನಂತೆ ಇಲ್ಲಿನ ಮುದ್ದು ಕೃಷ್ಣ.

PC:Paneendragautham

ಮಕ್ಕಳ ಭಾಗ್ಯವನ್ನು ಕರುಣಿಸುವ ಮುದ್ದು ಕೃಷ್ಣನಿವನು.....

ಮಕ್ಕಳ ಭಾಗ್ಯವನ್ನು ಕರುಣಿಸುವ ಮುದ್ದು ಕೃಷ್ಣನಿವನು.....

ಹೀಗೆ ಆ ಸ್ವಾಮಿಯನ್ನು ಬೇಡಿಕೊಂಡು ಒಳಿತನ್ನು ಕಂಡವರು ಅನೇಕ ಮಂದಿ ಪ್ರತ್ಯಕ್ಷ ಸಾಕ್ಷಿ ಇದ್ದಾರೆ ಎಂದೇ ಹೇಳಬಹುದು. ಈ ಅದ್ಭುತವಾದ ಮಳ್ಳೂರು ದೇವಾಲಯವನ್ನು ಚೋಳರ ಕಾಲದಲ್ಲಿ ನಿರ್ಮಾಣ ಮಾಡಲಾದ ದೇವಾಲಯ ಇದಾಗಿದೆ. ಈ ದೇವಾಲಯಕ್ಕೆ ಸಂಬಂಧಿಸಿದಂತೆ ಅನೇಕ ಕಥೆಗಳು ಪ್ರಚಲಿತದಲ್ಲಿವೆ. ಅಷ್ಟೇ ಅಲ್ಲ, ಇಲ್ಲಿ ಹಲವಾರು ಪವಾಡಗಳೇ ನಡೆದಿವೆ ಎಂತೆ.

PC:Brunda Nagaraj

ಮಕ್ಕಳ ಭಾಗ್ಯವನ್ನು ಕರುಣಿಸುವ ಮುದ್ದು ಕೃಷ್ಣನಿವನು.....

ಮಕ್ಕಳ ಭಾಗ್ಯವನ್ನು ಕರುಣಿಸುವ ಮುದ್ದು ಕೃಷ್ಣನಿವನು.....

ಇಲ್ಲಿನ ಶ್ರೀ ಕೃಷ್ಣನನ್ನು ಭಕ್ತರು ನವನೀತ ಕೃಷ್ಣ ಎಂದೇ ಕರೆಯುತ್ತಾರೆ. ಇಲ್ಲಿ ಸ್ವಾಮಿಯು ಅಂಬೆಗಾಲಿಡುತ್ತಿರುವ ಭಂಗಿಯಲ್ಲಿರುವುದರಿಂದ ಕೃಷ್ಣನ ವಿಗ್ರಹವು ಅತ್ಯಂತ ಆಕರ್ಷಣಿಯುತವಾಗಿದೆ.

PC:Brunda Nagaraj

ಮಕ್ಕಳ ಭಾಗ್ಯವನ್ನು ಕರುಣಿಸುವ ಮುದ್ದು ಕೃಷ್ಣನಿವನು.....

ಮಕ್ಕಳ ಭಾಗ್ಯವನ್ನು ಕರುಣಿಸುವ ಮುದ್ದು ಕೃಷ್ಣನಿವನು.....

ಪುತ್ರದೋಷ ಅಥವಾ ಶಯನದೋಷ ಇರುವ ದಂಪತಿಗಳು ಇಲ್ಲಿನ ಶ್ರೀ ಕೃಷ್ಣನನ್ನು ಪ್ರಾರ್ಥಿಸಿದರೆ ಆ ದೋಷಗಳು ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ. ಇಲ್ಲಿ ಶಯನದೋಷವೆಂದರೆ ಸತಿ-ಪತಿಗಳ ನಡುವೆ ಕಲಹವಿದ್ದು ಇಬ್ಬರೂ ದೈಹಿಕವಾಗಿ ಸೇರದೇ ಇರುವುದೇ ಆಗಿದೆ. ಈ ದೋಷವು ಸಂತಾನಹೀನತೆಗೂ ಕಾರಣವಾಗುವುದರಿಂದ ಈ ದೋಷವನ್ನು ಹೋಗಲಾಡಿಸುವುದು ಪ್ರಮುಖವಾಗುತ್ತದೆ.

PC:Brunda Nagaraj

ಮಕ್ಕಳ ಭಾಗ್ಯವನ್ನು ಕರುಣಿಸುವ ಮುದ್ದು ಕೃಷ್ಣನಿವನು.....

ಮಕ್ಕಳ ಭಾಗ್ಯವನ್ನು ಕರುಣಿಸುವ ಮುದ್ದು ಕೃಷ್ಣನಿವನು.....

ಇದೊಂದು ವೈಷ್ಣವ ಸಂಪ್ರದಾಯದ ದೇವಾಲಯವಾಗಿದ್ದರೂ ಕೂಡ ಕೃಷ್ಣನನ್ನು ಹೊರತುಪಡಿಸಿದರೆ ಇನ್ನು ಇತರೆ ದೇವತಾ ಮೂರ್ತಿಗಳನ್ನು ಕೂಡ ಇಲ್ಲಿ ದರ್ಶನ ಭಾಗ್ಯ ಪಡೆಯಬಹುದು. ಅವುಗಳೆಂದರೆ ಅರವಿಂದವಲ್ಲಿ ಮಾತೆ, ರಾಮಾನುಜ, ಆಂಜನೇಯ, ನಾಗರಾಜ ಆಳ್ವಾರ್, ವೇದಾಂತ ದೇಶಿಕರು, ಮನವಲ ಮಾಮುನಿ ಹೀಗೆ ಹಲವಾರು.

PC:Brunda Nagaraj

ಮಕ್ಕಳ ಭಾಗ್ಯವನ್ನು ಕರುಣಿಸುವ ಮುದ್ದು ಕೃಷ್ಣನಿವನು.....

ಮಕ್ಕಳ ಭಾಗ್ಯವನ್ನು ಕರುಣಿಸುವ ಮುದ್ದು ಕೃಷ್ಣನಿವನು.....

ಅಪ್ರಮೇಯಸ್ವಾಮಿ (ನಿಂತ ಭಂಗಿ) ಪದ್ಮ, ಗಧೆ, ಶಂಖ ಹಾಗು ಚಕ್ರಧಾರಿಯಾಗಿ ನೆಲೆಸಿದ್ದಾನೆ. ಒಂದು ಸ್ಥಳ ಪುರಾಣದ ಪ್ರಕಾರ ಹಿಂದೆ ಶ್ರೀ ರಾಮನು ಲಂಕೆಗೆ ತೆರಳುವ ಸಂದರ್ಭದಲ್ಲಿ ಅಪ್ರಮೇಯಸ್ವಾಮಿಯನ್ನು ಆರಾಧನೆ ಮಾಡಿದ್ದನಂತೆ. ಹೀಗಾಗಿಯೇ ಅಪ್ರಮೇಯಸ್ವಾಮಿಯನ್ನು ಪ್ರೀತಿಯಿಂದ ರಾಮಾಪ್ರೇಯಸ್ವಾಮಿ ಎಂದೂ ಸಹ ಕರೆಯುತ್ತಾರೆ.

PC:Brunda Nagaraj

ಮಕ್ಕಳ ಭಾಗ್ಯವನ್ನು ಕರುಣಿಸುವ ಮುದ್ದು ಕೃಷ್ಣನಿವನು.....

ಮಕ್ಕಳ ಭಾಗ್ಯವನ್ನು ಕರುಣಿಸುವ ಮುದ್ದು ಕೃಷ್ಣನಿವನು.....

ರಾಮನು ಇಲ್ಲಿಯೇ ತಂಗಿದ್ದನಂತೆ ಹಾಗು ಇಲ್ಲಿನ ಪ್ರಕೃತಿಯ ಮೈಸಿರಿಗೆ ಮಾರು ಹೋಗಿದ್ದನಂತೆ. ಹಾಗೆಯೇ ತನ್ನ ಅಯೋದ್ಯೆ ನಗರದಂತೆಯೇ ಇದನ್ನು ಕೂಡ ಪ್ರೀತಿಸುತ್ತಿದ್ದನಂತೆ. ಆ ಕಾರಣವಾಗಿಯೇ ಇದನ್ನು ದಕ್ಷಿಣ ಅಯೋದ್ಯೆ ಎಂತಲೂ ಕರೆಯುವುದುಂಟು.

PC:Brunda Nagaraj

ಮಕ್ಕಳ ಭಾಗ್ಯವನ್ನು ಕರುಣಿಸುವ ಮುದ್ದು ಕೃಷ್ಣನಿವನು.....

ಮಕ್ಕಳ ಭಾಗ್ಯವನ್ನು ಕರುಣಿಸುವ ಮುದ್ದು ಕೃಷ್ಣನಿವನು.....

ಈ ಕ್ಷೇತ್ರಕ್ಕೆ ಸಾಕಷ್ಟು ಪ್ರಾಚೀನ ಇತಿಹಾಸವಿದೆ. ಒಂದು ಅದ್ಭುತವಾದ ಹಿನ್ನೆಲೆಯ ಪ್ರಕಾರ ಒಂದೊಮ್ಮೆ ಇಲ್ಲಿ ನಾಲ್ಕೂ ವೇದಗಳನ್ನು ಓದಿ ಪಾಂಡಿತ್ಯ ಪಡೆದವರು ಮಾತ್ರ ಇಲ್ಲಿ ನೆಲೆಸಿದ್ದರಂತೆ ಇದಕ್ಕೆ ಚರ್ತುವೇದ ಮಂಗಳಪುರ ಎಂಬ ಹೆಸರು ಕೂಡ ಇತ್ತಂತೆ!.

PC:Brunda Nagaraj

ಮಕ್ಕಳ ಭಾಗ್ಯವನ್ನು ಕರುಣಿಸುವ ಮುದ್ದು ಕೃಷ್ಣನಿವನು.....

ಮಕ್ಕಳ ಭಾಗ್ಯವನ್ನು ಕರುಣಿಸುವ ಮುದ್ದು ಕೃಷ್ಣನಿವನು.....

ಅದೇ ನಂಬಿಕೆಯಂತೆ ಇಂದಿಗೂ ಕಪಿಲ ಹಾಗು ಕಣ್ವ ಮಹರ್ಷಿಗಳು ಈ ದೇವಾಲಯದಲ್ಲಿಯೇ ನೆಲೆಸಿದ್ದಾರೆ ಎಂದು ಪ್ರತೀತಿ ಕೂಡ ಇದೆ. ಕೆಲವರ ಪ್ರಕಾರ ರಾತ್ರಿ ದೇವಾಲಯದ ಅರ್ಚಕನು ಕೆಲಸ ಕಾರ್ಯಗಳನ್ನೆಲ್ಲಾ ಮುಗಿದ ನಂತರ ಬಾಗಿಲು ಹಾಕಿರುವ ಸಮಯದಲ್ಲಿ ಘಂಟೆಗಳ ನಾದ, ಗರ್ಭಗುಡಿ ಬಾಗಿಲು ತೆರೆಯುವ ಸದ್ದು ಕೇಳಿಬರುತ್ತಿದ್ದವಂತೆ.

PC:Brunda Nagaraj

ಮಕ್ಕಳ ಭಾಗ್ಯವನ್ನು ಕರುಣಿಸುವ ಮುದ್ದು ಕೃಷ್ಣನಿವನು.....

ಮಕ್ಕಳ ಭಾಗ್ಯವನ್ನು ಕರುಣಿಸುವ ಮುದ್ದು ಕೃಷ್ಣನಿವನು.....

ಈ ರೀತಿಯಾಗಿ ಮಳ್ಳೂರು ವಾಸಿಗರಿಗೆ ಈ ದೇವಾಲಯವು ಸಾಕಷ್ಟು ಪ್ರಭಾವ ಬೀರಿದ್ದು ಅವರೆಲ್ಲಾ ನಾರಾಯಣನ ದಿವ್ಯ ಉಪಸ್ಥಿತಿಯಿಂದ ಆನಂದಭರಿತರಾಗಿದ್ದಾರೆ. ಈ ದೇವಾಲಯಕ್ಕೆ ಒಂದು ರೋಚಕವಾದ ಕಥೆಯು ಕೂಡ ಇದೆ.

PC:Brunda Nagaraj

ಮಕ್ಕಳ ಭಾಗ್ಯವನ್ನು ಕರುಣಿಸುವ ಮುದ್ದು ಕೃಷ್ಣನಿವನು.....

ಮಕ್ಕಳ ಭಾಗ್ಯವನ್ನು ಕರುಣಿಸುವ ಮುದ್ದು ಕೃಷ್ಣನಿವನು.....

ಮಳ್ಳೂರನ್ನು ದೊಡ್ಡ ಮಳ್ಳೂರು ಎಂದು ಕೂಡ ಕರೆಯುತ್ತಾರೆ. ಈ ಸ್ಥಳವು ಚೆನ್ನಪಟ್ಟಣದಿಂದ ಕೇವಲ ಮೂರು ಕಿ.ಮೀ ಗಳಷ್ಟು ದೂರದಲ್ಲಿದೆ. ಬೆಂಗಳೂರಿನಿಂದ ಇದು ಒಟ್ಟಾರೆಯಾಗಿ 60 ಕಿ.ಮೀ ಗಳಷ್ಟು ದೂರದಲ್ಲಿದೆ. ಹಾಗೆಯೇ ತಲುಪಲು ಕೂಡ ಸುಲಭವಾಗಿಯೇ ಇದೆ.

ಮಕ್ಕಳ ಭಾಗ್ಯವನ್ನು ಕರುಣಿಸುವ ಮುದ್ದು ಕೃಷ್ಣನಿವನು.....

ಮಕ್ಕಳ ಭಾಗ್ಯವನ್ನು ಕರುಣಿಸುವ ಮುದ್ದು ಕೃಷ್ಣನಿವನು.....

ದೇವಾಲಯವು ಭಕ್ತರಿಗೆಂದು ಪ್ರತಿ ದಿನ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12:30 ರವರೆಗೆ ಹಾಗು ಸಂಜೆ 5:30 ರಿಂದ ರಾತ್ರಿ 8:30 ರವರೆಗೆ ತೆರೆದಿರುತ್ತಾರೆ. ಕೃಷ್ಣ ಜಯಂತಿ, ವೈಕುಂಠ ಏಕಾದಶಿ ಮುಂತಾದ ಉತ್ಸವಗಳನ್ನು ಬಲು ಅದ್ಧೂರಿಯಿಂದ ಇಲ್ಲಿ ಆಚರಿಸಲಾಗುತ್ತದೆ.

PC:Paneendragautham

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more