• Follow NativePlanet
Share
» »ಮಹಿಳೆಯರ ಪ್ರತ್ಯೇಕವಾದ ಶಬರಿಮಲೈ ದೇವಾಲಯವಿದು....

ಮಹಿಳೆಯರ ಪ್ರತ್ಯೇಕವಾದ ಶಬರಿಮಲೈ ದೇವಾಲಯವಿದು....

Written By:

ಶಬರಿಮಲೈ ದಕ್ಷಿಣ ಭಾರತದಲ್ಲಿನ ಪ್ರಸಿದ್ಧವಾದ ಪುಣ್ಯಕ್ಷೇತ್ರವೇ ಆಗಿದೆ. ಜನವರಿ ತಿಂಗಳಿನಲ್ಲಿ ಶಬರಿಮಲೈ ದೇವಾಲಯಕ್ಕೆ ಅನೇಕ ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಅವರಲ್ಲಿ ಮಹಿಳೆಯರು ಮಾತ್ರ ಕಡಿಮೆ. ಏಕೆಂದರೆ ದೇವರ ದರ್ಶನಕ್ಕಾಗಿ ಮಹಿಳೆಯರಿಗೆ ದರ್ಶನವನ್ನು ನೀಡುವುದಿಲ್ಲ. ಶಬರಿಮಲೈ ಒಂದು ಪ್ರಸಿದ್ಧವಾದ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದ್ದು, ಭಾರತ ದೇಶದಲ್ಲಿಯೇ ಅತಿ ಹೆಚ್ಚು ಜನರಿಂದ ಭೇಟಿ ನೀಡಲ್ಪಡುವ ಅತಿ ಪ್ರಮುಖವಾದ ತೀರ್ಥಕ್ಷೇತ್ರಗಳ ಪೈಕಿ ಇದು ಕೂಡ ಒಂದಾಗಿದೆ. ಸ್ವರ್ಣ ದೇವಾಲಯ ಎಂದೇ ಖ್ಯಾತಿಯಾಗಿರುವ ದೇವಾಲಯದಲ್ಲಿ ಹರಿಹರ ಸುತನಾದ ಅಯ್ಯಪ್ಪ ಸ್ವಾಮಿಯು ನೆಲೆಸಿದ್ದಾನೆ.

ಮಹಿಳೆಯರ ಪ್ರತ್ಯೇಕವಾದ ಶಬರಿಮಲೈ ದೇವಾಲಯವಿದು....

ಮಹಿಳೆಯರ ಪ್ರತ್ಯೇಕವಾದ ಶಬರಿಮಲೈ ದೇವಾಲಯವಿದು....

ಇಲ್ಲಿ ಮಹಿಳೆಯರಿಗೆ ಪ್ರವೇಶವನ್ನು ನೀಡುವುದಿಲ್ಲ. ಆದರೆ ನಿಮಗೆ ಗೊತ್ತೆ ಕೇರಳ ರಾಜ್ಯದಲ್ಲಿರುವ ಒಂದು ಚಿಕ್ಕದಾದ ಗುಡ್ಡವೊಂದರ ಮೇಲೆ ಅಯ್ಯಪ್ಪ ಸ್ವಾಮಿಯ ದೇವಾಲಯವಿದೆ. ಆ ಮಹಿಮಾನ್ವಿತವಾದ ದೇವಾಲಯಕ್ಕೆ ಮಹಿಳೆಯರು ಕೂಡ ಯಾವುದೇ ಅಡೆ-ತಡೆಗಳು ಇಲ್ಲದೆ ಪ್ರವೇಶಿಸುತ್ತಾರೆ.

PC:ARUN

ಮಹಿಳೆಯರ ಪ್ರತ್ಯೇಕವಾದ ಶಬರಿಮಲೈ ದೇವಾಲಯವಿದು....

ಮಹಿಳೆಯರ ಪ್ರತ್ಯೇಕವಾದ ಶಬರಿಮಲೈ ದೇವಾಲಯವಿದು....

ಮಹಿಳೆಯರು ಕೂಡ ಭೇಟಿ ನೀಡಬಹುದಾದ ಈ ದೇವಾಲಯಕ್ಕೆ ಮಹಿಳೆಯರ ಶಬರಿ ಮಲೆ ಅಥವಾ ಶಬರಿಮಲೈ ಎಂದೇ ಕರೆಯುತ್ತಾರೆ. ಈ ದೇವಾಲಯವು ಚಿಕ್ಕದಾದ ಗುಡ್ಡವೊಂದರೆ ಮೇಲೆ ನೆಲೆಸಿದ್ದು, ಸುತ್ತಲೂ ದಟ್ಟವಾದ ಹಸಿರಿನಿಂದ ಕೂಡಿದೆ.

ಮಹಿಳೆಯರ ಪ್ರತ್ಯೇಕವಾದ ಶಬರಿಮಲೈ ದೇವಾಲಯವಿದು....

ಮಹಿಳೆಯರ ಪ್ರತ್ಯೇಕವಾದ ಶಬರಿಮಲೈ ದೇವಾಲಯವಿದು....

ಪ್ರಕೃತಿಯ ರಮಣೀಯತೆಯ ಮಧ್ಯೆ ಇರುವ ಈ ದೇವಾಲಯಕ್ಕೆ ಅನೇಕ ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಭಕ್ತರ ಜೊತೆ ಜೊತೆಗೆ ನಿಸರ್ಗ ಪ್ರಿಯರ ನೆಚ್ಚಿನ ತಾಣವಾಗಿರುವುದರಿಂದ ವಾರಾಂತ್ಯದ ಸಮಯದಲ್ಲಿ ಪ್ರವಾಸಿಗರ ದಂಡೇ ಇಲ್ಲಿ ಆಗಮಿಸುತ್ತದೆ.

PC:ARUN

ಮಹಿಳೆಯರ ಪ್ರತ್ಯೇಕವಾದ ಶಬರಿಮಲೈ ದೇವಾಲಯವಿದು....

ಮಹಿಳೆಯರ ಪ್ರತ್ಯೇಕವಾದ ಶಬರಿಮಲೈ ದೇವಾಲಯವಿದು....

ಈ ಪುಟ್ಟದಾದ ಗುಡ್ಡದ ಮೇಲೆ ಅಯ್ಯಪ್ಪನ ದೇವಾಲಯವಿದ್ದು, ಇನ್ನು ಅನೇಕ ದೇವತೆ-ದೇವರುಗಳ ಮೂರ್ತಿಗಳನ್ನು ಕೂಡ ಇಲ್ಲಿ ಕಾಣಬಹುದಾಗಿದೆ. ಗುಡ್ಡದ ಸುತ್ತ-ಮುತ್ತ ಅನೇಕ ದೇವಾಲಯಗಳು ಕೂಡ ಇವೆ. ಆ ದೇವಾಲಯದ ಹೆಸರು ಅರವೇಶ್ವರ ದೇವಾಲಯ.

ಮಹಿಳೆಯರ ಪ್ರತ್ಯೇಕವಾದ ಶಬರಿಮಲೈ ದೇವಾಲಯವಿದು....

ಮಹಿಳೆಯರ ಪ್ರತ್ಯೇಕವಾದ ಶಬರಿಮಲೈ ದೇವಾಲಯವಿದು....

ಇಲ್ಲಿರುವ ಇತರೆ ದೇವತೆಗಳಿಂದರೆ ಶಿವ, ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ ಹಾಗು ವಿಷ್ಣು ಮೂರ್ತಿಗಳು. ಇನ್ನು ಅಯ್ಯಪ್ಪಸ್ವಾಮಿಯ ಜೊತೆಗೆ ಇನ್ನು 6 ದೇವತೆಗಳ ಇಲ್ಲಿ ನೆಲೆಸಿದ್ದಾರೆ. ಹಾಗಾಗಿಯೇ ಈ ದೇವಾಲಯವನ್ನೇ ಆರೇಶ್ವರ ದೇವಾಲಯ ಎಂದು ಕರೆಯುತ್ತಾರೆ. ಮಹಿಳೆಯರು ಈ ದೇವಾಲಯಕ್ಕೆ ಭೇಟಿ ನೀಡುವುದರಿಂದ ಇದಕ್ಕೆ ಮಹಿಳೆಯರ ಶಬರಿಮಲೈ ಎಂದೂ ಕೂಡ ಕರೆಯುತ್ತಾರೆ.

PC:ARUN

ಮಹಿಳೆಯರ ಪ್ರತ್ಯೇಕವಾದ ಶಬರಿಮಲೈ ದೇವಾಲಯವಿದು....

ಮಹಿಳೆಯರ ಪ್ರತ್ಯೇಕವಾದ ಶಬರಿಮಲೈ ದೇವಾಲಯವಿದು....

ಈ ಅಯ್ಯಪ್ಪನ ದೇವಾಲಯವು ಸಾಕಷ್ಟು ಪ್ರಶಾಂತವಾದ ವಾತಾವರಣದಲ್ಲಿದೆ. ಅಷ್ಟೇ ಅಲ್ಲದೇ ಇಲ್ಲಿ ಸಾಕಷ್ಟು ಗುಹೆಗಳನ್ನು ಕೂಡ ಕಾಣಬಹುದಾಗಿದೆ. ಆ ಗುಹೆಗಳನ್ನು ಪುನರ್ಜನಿ ಗುಹೆಗಳೆಂದು ಕರೆಯುತ್ತಾರೆ. ಅಷ್ಟಕ್ಕೂ ಈ ದೇವಾಲಯ ಇರುವುದಾದರೂ ಎಲ್ಲಿ ಎಂದು ಯೋಚಿಸುತ್ತಿದ್ದೀರಾ?

ಮಹಿಳೆಯರ ಪ್ರತ್ಯೇಕವಾದ ಶಬರಿಮಲೈ ದೇವಾಲಯವಿದು....

ಮಹಿಳೆಯರ ಪ್ರತ್ಯೇಕವಾದ ಶಬರಿಮಲೈ ದೇವಾಲಯವಿದು....

ಈ ದೇವಾಲಯವು ಕೇರಳ ರಾಜ್ಯದ ತ್ರಿಶ್ಯೂರ್ ಜಿಲ್ಲೆಯ ವಾಸುಪುರ ಎಂಬಲ್ಲಿ ಒಂದು ಗುಡ್ಡದ ಮೇಲೆ ಇದೆ. ಈ ವಾಸುಪುರವು ಕೊಡಗರಾ-ವೆಳ್ಳಿಕುಲಂಗಾರಾ ರಸ್ತೆಯಲ್ಲಿ ಬರುತ್ತದೆ. ವಾಸುಪುರದಲ್ಲಿ ಕಾಣಬಹುದಾದ ಕೊಡಶೇರಿಮಲ ಎಂಬ ಸುಂದರವಾದ ಗುಡ್ಡವೊಂದರ ಮೇಲೆ ಈ ದೇವಾಲಯವನ್ನು ಕಾಣಬಹುದು.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ