Search
  • Follow NativePlanet
Share
» »ವಿಶಾಖಪಟ್ಟಣಂನಿಂದ ಶ್ರೀಕಾಕುಳಂ-ಬೀಚ್ ಮತ್ತು ದೇವಾಲಯಗಳ ನಡುವೆ ಒಂದು ಪ್ರಯಾಣ

ವಿಶಾಖಪಟ್ಟಣಂನಿಂದ ಶ್ರೀಕಾಕುಳಂ-ಬೀಚ್ ಮತ್ತು ದೇವಾಲಯಗಳ ನಡುವೆ ಒಂದು ಪ್ರಯಾಣ

By Manjula Balaraj Tantry

ಭಾರತದ ಅತ್ಯಂತ ಜನರು ವಾಸಿಸುವ ಸ್ಥಳಗಳಲ್ಲೊಂದಾದ ಶ್ರೀಕಾಕುಳಂ ಅನೇಕ ವರ್ಷಗಳಿಂದಲೂ ಜನಪ್ರಿಯ ಪ್ರವಾಸೀ ಆಕರ್ಷಣೆಯ ಸ್ಥಳಗಳಲ್ಲೊಂದೆನಿಸಿದೆ. ಇಲ್ಲಿರುವ ದೇವಾಲಯಗಳು ಮತ್ತು ನೈಸರ್ಗಿಕ ತಾಣಗಳು ಇಲ್ಲಿಯ ಜನಪ್ರಿಯತೆಗೆ ಮುಖ್ಯ ಕಾರಣಗಳಾಗಿವೆ. ಶ್ರೀಕಾಕುಳಂ ವಿಶಾಖಪಟ್ಟಣಂ ನಲ್ಲಿಯ ಒಂದು ಅತ್ಯಂತ ಉತ್ತಮವಾದ ವಾರಾಂತ್ಯದಲ್ಲಿ ಭೇಟಿ ಕೊಡಬಹುದಾದ ಸ್ಥಳವಾಗಿದೆ.

ಅಲ್ಲದೆ ಆಂಧ್ರಪ್ರದೇಶ ರಾಜ್ಯದಲ್ಲಿ ಹೊಸತಾಗಿ ಏನನ್ನಾದರೂ ಅನ್ವೇಷಣೆ ಮಾಡುವುದನ್ನು ನೋಡುತ್ತಿದ್ದಲ್ಲಿ ನೀವು ವಿಶಾಖಪಟ್ಟಣಂ ನಿಂದ ಶ್ರೀಕಾಕುಳಂಗೆ ಪ್ರವಾಸ ಆಯೋಜಿಸಿ. ಶ್ರೀಕಾಕುಳಂ ಅನ್ನು ಸಾವಿರಾರು ವರ್ಷಗಳ ಹಿಂದೆ ಕೃಷ್ಣದೇವರ ಅಣ್ಣನಾದ ಬಲರಾಮ ದೇವರು ನಿರ್ಮಿಸಿದರು ಎಂಬ ನಂಬಿಕೆ ಇದೆ. ಆದುದರಿಂದ ಇದನ್ನು ಹಿಂದುಗಳಲ್ಲಿ ಯಾತ್ರೀಸ್ಥಳವೆಂದು ಪರಿಗಣಿಸಲಾಗುತ್ತದೆ.

1. ಚಿಂತಾಪಲ್ಲಿ

1. ಚಿಂತಾಪಲ್ಲಿ

ಚಿಂತಾಪಲ್ಲಿಯು ವಿಶಾಖಪಟ್ಟಣಂ ನಿಂದ 85ಕಿಮೀ ಮತ್ತು ಶ್ರೀಕಾಕುಳಂನಿಂದ 45ಕಿ.ಮೀ ಅಂತರದಲ್ಲಿದೆ ಇದೊಂದು ಸಣ್ಣ ಹಳ್ಳಿಯಾಗಿದ್ದು, ಇದು ಸ್ಥಳೀಯರಲ್ಲಿ ಮಾತ್ರ ಜನಪ್ರಿಯತೆಯನ್ನು ಗಳಿಸಿದೆ. ಇದು ಆಪ್ಭೀಟ್ ಪ್ರವಾಸಿಗರಿಗೂ ಹೆಚ್ಚಾಗಿ ಪರಿಚಿತವಾಗಿಲ್ಲ. ಆದುದರಿಂದ ಚಿಂತಾಪಲ್ಲಿಯನ್ನು ನಿಮ್ಮ ಭೇಟಿಕೊಡುವ ತಾಣವೆಂದು ನೀವು ಪರಿಗಣಿಸಬೇಕು ಮತ್ತು ಇಲ್ಲಿಯ ವಿರಳ ಜನಸಂದಣಿ ಇರುವ ಬೀಚ್ ಗಳು ಮತ್ತು ಪ್ರಶಾಂತವಾದ ಪರಿಸರದಲ್ಲಿ ವಿಶ್ರಾಂತಿಯನ್ನು ಪಡೆಯಬಹುದಾಗಿದೆ.

ಇಲ್ಲಿಯ ಶಾಂತಿಯುತವಾದ ವಾತಾವರಣವು ನಿಮ್ಮ ಮೈ ಮನಗಳನ್ನು ಅಹ್ಲಾದಗೊಳಿಸುವುದರಲ್ಲಿ ಸಂಶಯವೇ ಇಲ್ಲ. ಇಲ್ಲಿಯ ಪ್ರಮುಖ ಭೇಟಿ ಕೊಡುವ ಸ್ಥಳಗಳಲ್ಲಿ ಚಿಂತಾಪಲ್ಲಿ ಬೀಚ್ ಮತ್ತು ಶಿವ ದೇವಾಲಯಗಳು ಸೇರಿವೆ.

2. ಅಂತಿಮ ಗಮ್ಯಸ್ಥಾನ - ಶ್ರೀಕಾಕುಳಂ

2. ಅಂತಿಮ ಗಮ್ಯಸ್ಥಾನ - ಶ್ರೀಕಾಕುಳಂ

ಶ್ರೀಕಾಕುಳಂ ವಿಶಾಖಪಟ್ಟಣಂ ನಿಂದ ಕೇವಲ 110 ಕಿ.ಮೀ ಅಂತರದಲ್ಲಿರುವುದರಿಂದ ಇದೊಂದು ಉತ್ತಮವಾದ ವಾರಾಂತ್ಯದಲ್ಲಿ ಭೇಟಿ ಕೊಡಬಹುದಾದ ಸ್ಥಳವಾಗಿದೆ. ಇದು ಅನೇಕ ಪ್ರವಾಸಿ ತಾಣಗಳಿಂದ ಕೂಡಿದ್ದರೂ ಹೆಚ್ಚಾಗಿ ಭೇಟಿ ಕೊಡಲ್ಪಡುವ ಸ್ಥಲಗಳಲ್ಲಿ ದೇವಾಲಯಗಳು, ಐತಿಹಾಸಿಕ ಸ್ಥಳಗಳು, ಮತ್ತು ಬೀಚ್ ಗಳು ಸೇರಿವೆ. ಈ ಕೆಳಗಿನ ಕೆಲವು ಪ್ರಮುಖ ಸ್ಥಳಗಳು ನೀವು ಶ್ರೀಕಾಕುಳಂ ನಲ್ಲಿರುವಾಗ ಭೇಟಿ ಕೊಡಲು ಮರೆಯಲೇ ಬಾರದೆನಿಸುವಂತವುಗಳು.

3. ಅರಸವಲ್ಲಿ ಸೂರ್ಯ ದೇವಾಲಯ

3. ಅರಸವಲ್ಲಿ ಸೂರ್ಯ ದೇವಾಲಯ

Pavanpatnaik

ನಿಸ್ಸಂದೇಹವಾಗಿ ಶ್ರೀಕಾಕುಳಂ ನಲ್ಲಿ ಅತ್ಯಂತ ಹೆಚ್ಚಾಗಿ ಗುರುತಿಸಲ್ಪಡುವ ಸ್ಥಳವೆಂದರೆ ಅದು ಅರಸವಲ್ಲಿ ಸೂರ್ಯ ದೇವಾಲಯ ಈ ದೇವಾಲಯವು 7 ನೇ ಶತಮಾನದ್ದಾಗಿದ್ದು ಇದನ್ನು ಕಾಳಿಂಗ ಸಾಮ್ರಾಜ್ಯದ ದೊರೆ ದೇವೇಂದ್ರ ವರ್ಮನಿಂದ ನಿರ್ಮಿಸಲ್ಪಟ್ಟಿತು. ತದನಂತರದಿಂದ ಇದು ಶ್ರೀಕಾಕುಳಂನ ಪ್ರಮುಖ ಪೂಜಾಸ್ಥಳವೆನಿಸಿದೆ.

ಇಂದು ಪ್ರತೀವರ್ಷ ಸರಾಸರಿ ಸಾವಿರಾರು ಜನ ಪ್ರವಾಸಿಗರು ಮತ್ತು ಹಿಂದೂ ಭಕ್ತರಿಂದ ಸಾಮಾನ್ಯವಾಗಿ ಭೇಟಿ ಕೊಡಲ್ಪಡುತ್ತದೆ. ಇದು ವಾಸ್ತುಶಿಲ್ಪ ಸೌಂದರ್ಯತೆಯನ್ನೂ ತನ್ನಲ್ಲಿ ಹೊಂದಿದೆ. ದೇವಾಲಯದ ಆವರಣದಲ್ಲಿ ಒಂದು ಸಣ್ಣ ತೊಟ್ಟಿಯಿದ್ದು ಇದನ್ನು ಇಂದ್ರ ಪುಷ್ಕರಣಿ ಎಂದು ಕರೆಯಲಾಗುತ್ತದೆ ಇಲ್ಲಿಗೆ ಭಕ್ತರು ತಮ್ಮ ಪಾಪಗಳನ್ನು ಕಳೆದುಕೊಳ್ಳಲು ಮತ್ತು ಆತ್ಮಶುದ್ದಿಗಾಗಿ ಬರುತ್ತಾರೆ.

4. ಶ್ರೀಕೂರ್ಮಮ್

4. ಶ್ರೀಕೂರ್ಮಮ್

రహ్మానుద్దీన్

ಇನ್ನೊಂದು ಧಾರ್ಮಿಕ ಸ್ಥಳವಾದ ಶ್ರೀಕುರ್ಮಮ್. ಇದು ಶ್ರೀಕಾಕುಳಂ ಜಿಲ್ಲೆಯಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದ್ದು, ಕೂರ್ಮನಾಥಸ್ವಾಮಿ ದೇವಸ್ಥಾನಕ್ಕೆ ಜನಪ್ರಿಯವಾಗಿದೆ. ಇದನ್ನು 2 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ ಮತ್ತು ವಿಷ್ಣುವಿನ ಎರಡನೇ ಅವತಾರವಾದ ಕೂರ್ಮನಿಗೆ ಸಮರ್ಪಿಸಲಾಗಿದೆ.ಆಂಧ್ರಪ್ರದೇಶದ ಅತ್ಯಂತ ಹಳೆಯ ದೇವಾಲಯವಾದ ಇದು ಹಿಂದಿನಿಂದಲೂ ವೈಷ್ಣವ ಪಂಥದವರ ಪ್ರಮುಖ ಯಾತ್ರೀ ಸ್ಥಳವಾಗಿದೆ. ನೀವು ಏಕಾಂತವಾಗಿ ದೈವತ್ವದ ಮೂಲತತ್ವವನ್ನು ಅನುಭವಿಸಲು ಬಯಸಿದರೆ, ನೀವು ಶ್ರೀಕೂರ್ಮಮ್ ಗೆ ಪ್ರವಾಸವನ್ನು ಕೈಗೊಳ್ಳಲೇಬೇಕು.

5. ಸಲಿಹುಂದಮ್

5. ಸಲಿಹುಂದಮ್

రహ్మానుద్దీన్

ಭಾರತದ ಹಳೆಯ ಬೌದ್ಧ ಸ್ಥಳಗಳಲ್ಲಿ ಒಂದಾದ ಸಲೀಹುಂದಂ ಶ್ರೀಕಾಕುಳಂನಲ್ಲಿರುವ ಒಂದು ಐತಿಹಾಸಿಕ ಸ್ಥಳವಾಗಿದ್ದು, ಇದು ಪ್ರಾಚೀನ ಬೌದ್ಧ ಸ್ತೂಪಗಳಿಗೆ ಹೆಸರುವಾಸಿಯಾಗಿದೆ ಮತ್ತು ಇದು 2 ನೇ ಮತ್ತು 3 ನೇ ಶತಮಾನದಷ್ಟು ಹಿಂದಿನದು. ಇದು ಇತಿಹಾಸಕಾರರಿಗೆ ಒಂದು ಮಹತ್ವವಾದ ಸ್ಥಳವಾಗಿದೆ ಆದುದರಿಂದ ಆಂಧ್ರಪ್ರದೇಶದ ಪ್ರಾಚೀನ ವಿಷಯಗಳ ಅಧ್ಯಯನ ಮಾಡ ಬಯಸುವ ಪ್ರತಿಯೊಬ್ಬ ಪ್ರಯಾಣಿಕರೂ ಭೇಟಿಕೊಡಲೇ ಬೇಕಾದ ಸ್ಥಳವಾಗಿದೆ.

6. ಕಲ್ಲೇಪಲ್ಲಿ ಬೀಚ್

6. ಕಲ್ಲೇಪಲ್ಲಿ ಬೀಚ್

ಶ್ರೀಕಾಕುಳಂಗೆ ಭೇಟಿ ನೀಡುವ ಮತ್ತೊಂದು ಬೀಚ್ ಆಗಿದ್ದು, ಕಲ್ಲೆಪಲ್ಲಿ ಬೀಚ್ ಮುಖ್ಯ ಪಟ್ಟಣದಿಂದ ಸುಮಾರು 9 ಕಿ.ಮೀ ದೂರದಲ್ಲಿದೆ. ಆದ್ದರಿಂದ ಸುಲಭವಾಗಿ ತಲುಪಬಹುದು.ಕಡಲ ತೀರವು ವರ್ಷದುದ್ದಕ್ಕೂ ಜನಸಂದಣಿಯು ಕಡಿಮೆ ಇರುವುದರಿಂದ, ನೀವು ಖಂಡಿತವಾಗಿ ಇಲ್ಲಿ ಶಾಂತಿಯುತ ಮತ್ತು ಪ್ರಶಾಂತ ವಾತಾವರಣವನ್ನು ಅನುಭವಿಸಬಹುದು

7. ಇನ್ನಿತರ ಆಸಕ್ತಿದಾಯಕ ಸ್ಥಳಗಳು

7. ಇನ್ನಿತರ ಆಸಕ್ತಿದಾಯಕ ಸ್ಥಳಗಳು


ಶ್ರೀಕಾಕುಳಂನ ಮೇಲಿನ ಪ್ರವಾಸಿ ಆಕರ್ಷಣೆಗಳಲ್ಲದೆ, ನಾಗವಲಿ ನದಿಯಲ್ಲಿರುವ ಬುದ್ಧ ಪ್ರತಿಮೆ, ಶ್ರೀಕಾಕುಳಂ ಬೆಟ್ಟಗಳು, ಮತ್ತು ಕಬ್ಬಿಣ ಯುಗದ ತಾಣವಾದ ಅಮುಡಲವಲಸ ಸಹ ನೀವು ನೋಡಬಹುದು ಅಲ್ಲದೆ ಬರುವಾ ಬೀಚ್ ಮತ್ತು ಕಾಳಿಂಗಪಟ್ಟಣಂ ಅನ್ನು ಕೂಡಾ ನೋಡಬಹುದಾಗಿದೆ.

8. ಶ್ರೀಕಾಕುಳಂ ಭೇಟಿಕೊಡಲು ಸೂಕ್ತ ಸಮಯ

8. ಶ್ರೀಕಾಕುಳಂ ಭೇಟಿಕೊಡಲು ಸೂಕ್ತ ಸಮಯ

ಶ್ರೀಕಾಕುಳಂ ಬೇಸಿಗೆಯಲ್ಲಿ ತಾಪಮಾನವು ವಿಪರೀತವಾಗಿರುವುದರಿಂದ ಹೆಚ್ಚಿನ ಪ್ರಮಾಣದ ಪ್ರವಾಸಿಗರು ಇಲ್ಲಿಗೆ ಚಳಿಗಾಲದಲ್ಲಿ ಭೇಟಿ ಕೊಡಲು ಇಚ್ಚಿಸುತ್ತಾರೆ. ಆದುದರಿಂದ ಶ್ರೀಕಾಕುಳಂಗೆ ಭೇಟಿ ಕೊಡಲು ಸೂಕ್ತ ಸಮಯವೆಂದರೆ ಅದು ಸೆಪ್ಟೆಂಬರ್ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ. ಈ ಸಮಯದಲ್ಲಿ ಹವಾಮಾನವು ಅನುಕೂಲಕರವಾಗಿರುವುದರಿಂದ ನೀವು ಇಲ್ಲಿಯ ಸೌಂದರ್ಯತೆಯನ್ನು ಆರಾಮವಾಗಿ ಅನ್ವೇಷಣೆ ಮಾಡಬಹುದಾಗಿದೆ.

9. ವಿಶಾಖಪಟ್ಟಣಂ ನಿಂದ ಶ್ರೀಕಾಕುಳಂಗೆ ತಲುಪುವುದು ಹೇಗೆ?

9. ವಿಶಾಖಪಟ್ಟಣಂ ನಿಂದ ಶ್ರೀಕಾಕುಳಂಗೆ ತಲುಪುವುದು ಹೇಗೆ?

ವಾಯು ಮಾರ್ಗ: ಶ್ರೀಕಾಕುಳಂಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಅದು ವಿಶಾಖಪಟ್ಟಣದಲ್ಲಿಯ ವಿಮಾನ ನಿಲ್ದಾಣವಾಗಿದ್ದು ಇದು 110 ಕಿ.ಮೀ ದೂರದಲ್ಲಿದೆ. ಹಾಗಾಗಿ, ವಿಶಾಖಪಟ್ಟಣಂನಿಂದ ಶ್ರೀಕಾಕುಳಂ ತಲುಪುವ ಬೇರೆ ಯಾವುದೇ ಮಾರ್ಗವಿಲ್ಲ.

ಮಾರ್ಗ: ಶ್ರೀಕಾಕುಳಂ ತನ್ನದೇ ರೈಲು ನಿಲ್ದಾಣವನ್ನು ಹೊಂದಿದೆ ಮತ್ತು ಆದ್ದರಿಂದ ನೀವು ವಿಶಾಖಪಟ್ಟಣಂನಿಂದ ಶ್ರೀಕಾಕುಳಂ ರೈಲ್ವೆ ನಿಲ್ದಾಣಕ್ಕೆ ನೇರ ರೈಲು ಮೂಲಕ ಪ್ರಯಾಣಿಸಬಹುದು. ರೈಲು ಮೂಲಕ ಹೋದಲ್ಲಿ ನಿಮ್ಮ ಗಮ್ಯಸ್ಥಾನವನ್ನು ತಲುಪಲು ನಿಮಗೆ 2 ಗಂಟೆಗಳ ಅಂದಾಜು ಸಮಯವನ್ನು ತೆಗೆದುಕೊಳ್ಳುತ್ತದೆ.

ರಸ್ತೆಯ ಮೂಲಕ: ಶ್ರೀಕಾಕುಳಂ ನಗರದಿಂದ ಇತರ ಎಲ್ಲಾ ನಗರಗಳಿಗೆ ಮತ್ತು ಪಟ್ಟಣಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ ಆದ್ದರಿಂದ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು.

ಮಾರ್ಗ: ವಿಶಾಖಪಟ್ಟಣಂ - ಚಿಂತಪಲ್ಲಿ - ಶ್ರೀಕಾಕುಳಂ

ನೀವು ಇಲ್ಲಿಯ ದಾರಿಯಲ್ಲಿ ಪ್ರಯಾಣ ಪ್ರಾರಂಭಿಸಿದ ಮೇಲೆ ನೀವು ಚಿಂತಪಲ್ಲಿಯಲ್ಲಿ ವಿಶ್ರಾಂತಿ ಪಡೆಯಬಹುದು ಮತ್ತು ಇಲ್ಲಿಯ ಸುಂದರವಾದ ಬೀಚ್ ಮತ್ತು ಸುತ್ತಮುತ್ತಲಿನ ಪ್ರಕೃತಿಯ ಅನ್ವೇಷಣೆ ಮಾಡಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X