Search
  • Follow NativePlanet
Share
» »ಹೀಗೂ ಉಂಟೇ: ಈ ಹಳ್ಳಿಯಲ್ಲಿ ಯಾರೊಬ್ಬರು ಕೂಡ ಬಟ್ಟೆ ಧರಿಸದೇ ನಗ್ನರಾಗಿರುತ್ತಾರೆ!    

ಹೀಗೂ ಉಂಟೇ: ಈ ಹಳ್ಳಿಯಲ್ಲಿ ಯಾರೊಬ್ಬರು ಕೂಡ ಬಟ್ಟೆ ಧರಿಸದೇ ನಗ್ನರಾಗಿರುತ್ತಾರೆ!    

ಒಂದೊಂದು ಸ್ಥಳಗಳಲ್ಲಿ ಒಂದೊಂದು ರೀತಿ ವಿಶಿಷ್ಟ ಸಂಪ್ರದಾಯಗಳಿರುತ್ತವೆ. ಇಂತಹ ವಿಚಾರಗಳನ್ನು ತಿಳಿದಾಗ ನಮಗೆ ಆಶ್ಚರ್ಯವಾಗುತ್ತದೆ. ಈಗ ನಾವಿಲ್ಲಿ ಹೇಳಲು ಹೊರಟಿರುವ ಹಳ್ಳಿಯ ಬಗ್ಗೆ, ಅಲ್ಲಿನ ಸಂಸ್ಕೃತಿಯ ಬಗ್ಗೆ ಕೇಳಿದರೂ ನಿಮಗೆ ಹಾಗೆ ಅನಿಸುತ್ತದೆ. ಜಗತ್ತಿನ ಅನೇಕ ಕಡೆ ಜನರು ವಿಚಿತ್ರ ಸಂಪ್ರದಾಯವನ್ನು ಅನುಸರಿಸುತ್ತಾರೆ.

ಈ ಹಳ್ಳಿಯಲ್ಲಿಯೂ ಸುಮಾರು 90 ವರ್ಷಗಳಿಂದ ಇಂತಹ ವಿಚಿತ್ರ ಸಂಪ್ರದಾಯವನ್ನು ಅನುಸರಿಸುತ್ತಿದ್ದಾರೆ ಜನರು. ಹೌದು, ಬ್ರಿಟನ್‌ನ ಹಳ್ಳಿಯೊಂದರಲ್ಲಿ ಜನರು ಕಳೆದ 90 ವರ್ಷಗಳಿಂದ ಬಟ್ಟೆ ಹಾಕದೆ ಜೀವನ ನಡೆಸುತ್ತಿದ್ದಾರೆ. ಇದನ್ನು ಕೇಳಿದರೆ ಎಂಥವರೂ ಬೆರಗಾಗದೆ ಇರಲಾರರು. ಯುಕೆ (ಯುನೈಟೆಡ್ ಕಿಂಗ್ಡಮ್) ಹಳ್ಳಿಯೊಂದರಲ್ಲಿ ನಿವಾಸಿಗಳು ಸಂಪೂರ್ಣವಾಗಿ ನಗ್ನವಾಗಿ ವಾಸಿಸುತ್ತಾರಂತೆ.

ಕಳೆದ 90 ವರ್ಷಗಳಿಂದಲೂ ಅವರು ಹೀಗೆ ನಗ್ನರಾಗಿಯೇ ಜೀವನ ನಡೆಸುತ್ತಿದ್ದಾರೆ. ಈಜುವಾಗ, ತೋಟದ ಕೆಲಸ... ಹೀಗೆ ಇವರು ತಮ್ಮ ತಮ್ಮ ಮನೆಗಳಲ್ಲಿ ದೈನಂದಿನ ಕೆಲಸಗಳನ್ನು ನಿರ್ವಹಿಸುವಾಗ ಮಾತ್ರ ನಗ್ನರಾಗಿರುವುದಿಲ್ಲ, ಯಾವುದಾದರೂ ಸಭೆ-ಸಮಾರಂಭ, ಪಾರ್ಟಿಗೆ ಹಾಜರಾಗುವಾಗಲೂ ಯಾವುದೇ ಉಡುಗೆಯನ್ನು ಧರಿಸದೆ ಹಾಜರಾಗುತ್ತಾರೆ. ನೀವು ಇಲ್ಲಿ ವಾಸಿಸಬೇಕೆಂದರೆ ನಗ್ನರಾಗಿ ಇರಬೇಕಾಗಿಲ್ಲವಾದರೂ, ನೀವು ನಗ್ನರಾಗಿ ಇರದಿದ್ದರೆ ಬಹುಶಃ ನಿವಾಸಿಗಳು ನಿಮಗೆ ಮನೆಯನ್ನು ಮಾರಾಟ ಮಾಡುವುದಿಲ್ಲ.

ಹೊರಗಿನವವರು ಬಂದಾಗ ಹೇಗಿರುತ್ತದೆ ಪ್ರತಿಕ್ರಿಯೆ?

ಹೊರಗಿನವವರು ಬಂದಾಗ ಹೇಗಿರುತ್ತದೆ ಪ್ರತಿಕ್ರಿಯೆ?

ಮೂಲಗಳ ಪ್ರಕಾರ, ಈ ಗ್ರಾಮಕ್ಕೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ವಿಶೇಷವೆಂದರೆ ಸಂದರ್ಶಕರು ಕೂಡ ಸಹ ಹಳ್ಳಿಯ ನಿಯಮವನ್ನು ಪಾಲಿಸುತ್ತಾರೆ ಮತ್ತು ಡ್ರೆಸ್ ಧರಿಸದೆ ನಿವಾಸಿಗಳೊಂದಿಗೆ ಸಂವಹನ ನಡೆಸಲು ಪ್ರಯತ್ನಿಸುತ್ತಾರೆ. ಆದರೆ ಅಲ್ಲಿಗೆ ಉಡುಗೆ ಧರಿಸಿ ಭೇಟಿ ನೀಡಿದರೂ ಸಮಸ್ಯೆಯಾಗುವುದಿಲ್ಲ.

ಕುತೂಹಲಕಾರಿ ಸಂಗತಿಯೆಂದರೆ ಸಾಮಾನ್ಯವಾಗಿ ಬಟ್ಟೆ ಧರಿಸಿರುವ ನೆರೆಹೊರೆಯವರು, ಪೋಸ್ಟ್‌ಮ್ಯಾನ್‌ಗಳು ಮತ್ತು ಸೂಪರ್‌ಮಾರ್ಕೆಟ್ ಡೆಲಿವರಿ ಡ್ರೈವರ್‌ಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಆಗ ಗ್ರಾಮಸ್ಥರು ನಗ್ನರಾಗಿರುವುದನ್ನು ವೀಕ್ಷಿಸುತ್ತಾರೆ. ಆದರೆ ಆ ಹಳ್ಳಿಯವರು ಮಾತ್ರ ಹೊರಗಿನರನ್ನು ನೋಡಿ ಸ್ವಲ್ಪವು ವಿಚಲಿತರಾದಂತೆ ಕಾಣುವುದಿಲ್ಲ.

ಇದೇ ನೋಡಿ ಆ ಹಳ್ಳಿ

ಇದೇ ನೋಡಿ ಆ ಹಳ್ಳಿ

ಬ್ರಿಟನ್ನಿನ ಈ ಹಳ್ಳಿಯಲ್ಲಿ ಮಕ್ಕಳಿಂದ ಹಿಡಿದು ಮುದುಕರವರೆಗೆ ಯಾರೂ ಬಟ್ಟೆ ಧರಿಸುವುದಿಲ್ಲ. ಈ ಗ್ರಾಮ ಬಹಳ ಸುಂದರವಾಗಿದ್ದು, ಗ್ರಾಮದ ನಿವಾಸಿಗಳು ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದಾರೆ. ಇಲ್ಲಿ ಉತ್ತಮ ಮನೆಗಳಷ್ಟೇ ಅಲ್ಲ, ಸುಂದರವಾದ ಈಜುಕೊಳಗಳು, ಕುಡಿಯಲು ಬಿಯರ್‌ನಂತಹ ಸೌಲಭ್ಯಗಳೂ ಇವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಸೂಪರ್ ಮಾರ್ಕೆಟ್‌ನಿಂದ ಈ ಗ್ರಾಮಕ್ಕೆ ಕೆಲವು ವಸ್ತುಗಳನ್ನು ಡೆಲಿವರಿ ಕೂಡ ಮಾಡಲಾಗುತ್ತದೆ. ಅಂದಹಾಗೆ ಈ ಹಳ್ಳಿಯ ಹೆಸರು ಯುಕೆಯ ಹರ್ಟ್‌ಫೋರ್ಡ್‌ಶೈರ್‌ನಲ್ಲಿರುವ ಸ್ಪೀಲ್‌ಪ್ಲಾಟ್ಜ್ .

ಅವರು ಯಾರೂ ಬಡವರಲ್ಲ

ಅವರು ಯಾರೂ ಬಡವರಲ್ಲ

ಸ್ಪೀಲ್‌ಪ್ಲಾಟ್ಜ್ ಗ್ರಾಮವು ಹರ್ಟ್‌ಫೋರ್ಡ್‌ಶೈರ್ ಮತ್ತು ಬಿಕೆಟ್‌ವುಡ್ ಬಳಿ ಇದೆ. ಬಟ್ಟೆ ಧರಿಸುವುದಿಲ್ಲ ಎಂಬ ಮಾತ್ರಕ್ಕೆ ಇವರ ಬಳಿ ಬಟ್ಟೆ ಕೊಳ್ಳು ಹಣವಿಲ್ಲವೇ ಅಂದುಕೊಳ್ಳಬೇಡಿ. ಇಲ್ಲಿ ಮೂಲ ಸೌಕರ್ಯಗಳಿಗೆ ಕೊರತೆ ಇಲ್ಲ. ಈ ಗ್ರಾಮದ ಜನರು ಬಡವರೇನು ಅಲ್ಲ, ಗ್ರಾಮದಲ್ಲಿ ಪಬ್‌ಗಳು, ಹೋಟೆಲ್‌ಗಳು, ಮೋಟೆಲ್‌ಗಳು, ಈಜುಕೊಳಗಳಂತಹ ಎಲ್ಲಾ ರೀತಿಯ ಸೌಕರ್ಯಗಳೂ ಇವೆ.

ಹಾಗೆ ನೋಡಿದರೆ ಬೇಸಿಗೆಯಲ್ಲಿ, ಸಂದರ್ಶಕರಿಗೆ ಬಾಡಿಗೆ ನೀಡಲು 3 ಮನೆಗಳನ್ನು ವಿನ್ಯಾಸಗೊಳಿಸಲಾಗಿದೆ. ಹೆಚ್ಚಿನ ಜನರು ಎರಡು ಕೋಣೆಯಿರುವ ಬಂಗಲೆಯಲ್ಲಿ ವಾಸಿಸುತ್ತಾರೆ. ಬೃಹತ್ ಕ್ಲಬ್ ಹೌಸ್ ಕೂಡ ಆಕರ್ಷಕವಾಗಿದೆ. ಆದರೆ ಸಂಪ್ರದಾಯಗಳು ಮತ್ತು ನಂಬಿಕೆಗಳನ್ನು ನಂಬುವ ಜನರು ಬಟ್ಟೆ ಇಲ್ಲದೆ ಬದುಕುತ್ತಾರೆ.

ಗ್ರಾಮದ ಜನರಿಗೂ ಗೊತ್ತಿಲ್ಲ!

ಗ್ರಾಮದ ಜನರಿಗೂ ಗೊತ್ತಿಲ್ಲ!

ಎಡಿ 9 ರಲ್ಲಿ ಐಸೊಲಿತ್ ರಿಚರ್ಡ್‌ಸನ್ ಅವರ ತಂದೆ ಚಾರ್ಲಿ ಮೆಕ್‌ಕಾಸ್ಕಿ ಅವರು ಈ ಗ್ರಾಮವನ್ನು ಕಂಡುಹಿಡಿದರು. ಅವರು ಇಲ್ಲಿ 5 ಎಕರೆ ಭೂಮಿಯನ್ನು 1 ಪೌಂಡ್‌ಗೆ ಖರೀದಿಸಿದರು. ಅವರು ಭೂಮಿ ಖರೀದಿಸುವ ಮೊದಲು ಈ ಗ್ರಾಮದ ಬಗ್ಗೆ ಅವರಿಗೆ ಏನೂ ತಿಳಿದಿರಲಿಲ್ಲ. ಬಟ್ಟೆ ಧರಿಸದ ಸಂಪ್ರದಾಯ ಹೇಗೆ ಆರಂಭವಾಯಿತು ಎಂಬುದು ಗ್ರಾಮದ ಜನರಿಗಂತೂ ಗೊತ್ತಿಲ್ಲ. ನೈಸರ್ಗಿಕ ಜೀವನಕ್ಕೆ ಹತ್ತಿರವಾಗಿ ಬದುಕಲು ಅವರು ಬಟ್ಟೆಗಳನ್ನು ತ್ಯಜಿಸಿದ್ದಾರೆ ಎಂದು ಹಲವರು ಹೇಳುತ್ತಾರೆ. ಒಟ್ಟಾರೆ ಇಂದು ಈ ಗ್ರಾಮದಲ್ಲಿ ಹೆಂಗಸರು, ಗಂಡಸರು ಬಟ್ಟೆ ಒಗೆಯದ ಸ್ಥಿತಿಯಂತೂ ಇದೆ.

ಪ್ರಚಾರದಿಂದ ದೂರವಿದ್ದ ಜನರು

ಪ್ರಚಾರದಿಂದ ದೂರವಿದ್ದ ಜನರು

ಮೊದಲು ಸ್ಪಿಲ್‌ಪ್ಲಾಟ್ಜ್ ಗ್ರಾಮದ ಜನರು ಉಪದೇಶ ಮತ್ತು ಪ್ರಚಾರದಿಂದ ದೂರವಿದ್ದರು. ಆದರೆ ಕ್ರಮೇಣ ಮಾಧ್ಯಮ ಛಾಯಾಗ್ರಾಹಕರಿಗೆ ಅಥವಾ ವರದಿಗಾರರಿಗೆ ಅಪರೂಪಕ್ಕೆ ಪ್ರವೇಶವನ್ನು ನೀಡಲಾಯಿತು. ಹಾಗೆಯೇ ಅವರು ಟಿವಿ ಶೋನಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು. ಹಾಗೆ ನೋಡಿದರೆ ಇಂತಹ ವಿಶೇಷವಾದ ಗ್ರಾಮದಲ್ಲಿ ವಾಸಿಸುತ್ತಿರುವುದಕ್ಕೆ ಈ ಗ್ರಾಮದ ಹಿರಿಯರು ಹೆಮ್ಮೆ ಪಡುತ್ತಾರೆ.

ಪ್ರಪಂಚದ ಯಾವುದೇ ಮೂಲೆಯಲ್ಲಿಯಾದರೂ ಬಟ್ಟೆಯನ್ನು ಹಾಕದೆ ಜನರು ವಾಸಿಸುವುದು ವಿರಳಾತಿವಿರಳ. ಆದರೆ ಸ್ಪಿಲ್‌ಪ್ಲಾಟ್ಜ್ ಗ್ರಾಮದ ಜನರಿಗೆ ಇದು ಸಾಮಾನ್ಯ ಮತ್ತು ಸರಳವಾದ ಜೀವನ. ನೈಸರ್ಗಿಕ ಬೆಳಕು ನೇರವಾಗಿ ಚರ್ಮಕ್ಕೆ ತಾಕಿ ಎರಡು ಮೂರು ಜನರಿಗೆ ಅಲರ್ಜಿಯಾಗಿದೆ. ಹಾಗಾಗಿ ಅವರು ಮಾತ್ರ ದೇಹವನ್ನು ಮುಚ್ಚಲು ಅನುಮತಿಸಲಾಗಿದೆ.

ಸ್ಪಿಲ್‌ಪ್ಲಾಟ್ಜ್ ಕುರಿತು ಕಿರುಚಿತ್ರಗಳೂ ಬಂದಿವೆ

ಸ್ಪಿಲ್‌ಪ್ಲಾಟ್ಜ್ ಕುರಿತು ಕಿರುಚಿತ್ರಗಳೂ ಬಂದಿವೆ

ಹರ್ಟ್‌ಫೋರ್ಡ್‌ಶೈರ್‌ನ ಈ ಗ್ರಾಮವು ಯುಕೆಯ ಅತ್ಯಂತ ಹಳೆಯ ಕಾಲೋನಿಗಳಲ್ಲಿ ಒಂದಾಗಿದೆ. 90 ವರ್ಷಕ್ಕೂ ಹೆಚ್ಚು ಕಾಲದಿಂದ ಜನರು ಇಲ್ಲಿ ವಾಸಿಸುತ್ತಿದ್ದು, ಪ್ರಪಂಚದಾದ್ಯಂತ ಜನರು ಇಲ್ಲಿಗೆ ಬಂದು ಈ ಹಳ್ಳಿಯ ಮೇಲೆ ಅನೇಕ ಡಾಕ್ಯುಮೆಂಟರಿಗಳು ಮತ್ತು ಕಿರುಚಿತ್ರಗಳನ್ನು ಮಾಡಿದ್ದಾರೆ. ನೆರೆಹೊರೆ ಹಳ್ಳಿಯವರು, ಪೋಸ್ಟ್‌ಮ್ಯಾನ್ ಮತ್ತು ಡೆಲಿವರಿ ಜನರು ಆಗಾಗ್ಗೆ ಇಲ್ಲಿಗೆ ಬರುತ್ತಲೇ ಇರುತ್ತಾರೆ. ಈ ಹಳ್ಳಿಯ ಜನರ ಪ್ರಕಾರ, ಸ್ಪಿಲ್‌ಪ್ಲಾಟ್ಜ್ ಎಂದರೆ ಆಟದ ಮೈದಾನ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X