Search
  • Follow NativePlanet
Share
» »ಭೇತಾಳನ ದೇವಾಲಯ ರಹಸ್ಯದ ಬಗ್ಗೆ ನಿಮಗೆ ಗೊತ್ತ?

ಭೇತಾಳನ ದೇವಾಲಯ ರಹಸ್ಯದ ಬಗ್ಗೆ ನಿಮಗೆ ಗೊತ್ತ?

ಸಾಮಾನ್ಯವಾಗಿ ಎಲ್ಲರೂ ತಿಳಿದಿರುವಂತೆ ಭೇತಾಳ ದೆವ್ವ ಎಂದು ಅಲ್ಲವೇ. ಆದರೆ ಅದು ತಪ್ಪು ಭೇತಾಳ ದೆವ್ವ ಅಲ್ಲ ಬದಲಾಗಿ ಆತನಿಗೂ ಕೂಡ ದೇವಾಲಯ ಇದೆ ಎಂಬುದರ ಬಗ್ಗೆ ನಿಮಗೆ ಗೊತ್ತೆ? ಆ ದೇವಾಲಯ ಎಲ್ಲಿದೆ? ಆ ದೇವಾಲಯದ ರಹಸ್ಯವಾದರು ಏನು? ಎಂಬ ಹಲವಾರು

ಸಾಮಾನ್ಯವಾಗಿ ಎಲ್ಲರೂ ತಿಳಿದಿರುವಂತೆ ಭೇತಾಳ ದೆವ್ವ ಎಂದು ಅಲ್ಲವೇ. ಆದರೆ ಅದು ತಪ್ಪು ಭೇತಾಳ ದೆವ್ವ ಅಲ್ಲ ಬದಲಾಗಿ ಆತನಿಗೂ ಕೂಡ ದೇವಾಲಯ ಇದೆ ಎಂಬುದರ ಬಗ್ಗೆ ನಿಮಗೆ ಗೊತ್ತೆ? ಆ ದೇವಾಲಯ ಎಲ್ಲಿದೆ? ಆ ದೇವಾಲಯದ ರಹಸ್ಯವಾದರು ಏನು? ಎಂಬ ಹಲವಾರು ಪ್ರೆಶ್ನೆಗಳು ಸಹಜವಾಗಿ ನಮ್ಮಗೆ ಕಾಡುವುದುಂಟು. ತಂತ್ರಶಾಸ್ತ್ರದಲ್ಲಿ ಭೇತಾಳನಿಗೆ ಒಂದು ಪ್ರತ್ಯೇಕವಾದ ಸ್ಥಾನವಿದೆ.

ಭೇತಾಳ ಎಂದಾಗ ರಾತ್ರಿಯ ಸಮಯದಲ್ಲಿ ಕಾವುಲು ಕಾಯುವವನು ಅಥವಾ ರಾತ್ರಿಯ ಸಮಯದಲ್ಲಿ ತಿರುಗುವವನು ಎಂಬ ಅರ್ಥವಿದೆ. ಇತನು ಎಲ್ಲರೂ ಅಂದುಕೊಂಡಿರುವಂತೆ ಪಿಶಾಚಿಯಲ್ಲ. ನಿಜವಾಗಿ ಹೇಳಬೇಕೆಂದರೆ ಭೇತಾಳ ಒಂದು ರಾಜ. ಆತನು
ಪರಮಶಿವನ ಸಮೀಪದಲ್ಲಿರುವ ರುದ್ರಗಣಗಳಲ್ಲಿ ಒಂದು ವರ್ಗವಾದ ಪಿಶಾಚಿ ಗಣಕ್ಕೆ ಸಂಬಂಧಿಸಿದ ಅಥಿಪತಿ. ಈ ಪಿಶಾಚಿ ವರ್ಗವನ್ನೇ ಭೇತಾಳರು ಎಂದು ಕರೆಯುತ್ತಾರೆ.

ಪ್ರಸ್ತುತ ಲೇಖನದಲ್ಲಿ ಭೇತಾಳನ ದೇವಾಲಯದ ರಹಸ್ಯದ ಬಗ್ಗೆ ತಿಳಿಯೋಣ.

ಭೇತಾಳನ ದೇವಾಲಯ

ಭೇತಾಳನ ದೇವಾಲಯ

ಭೇತಾಳರಲ್ಲಿ ಪುರುಷರು ಮಾತ್ರ ಇರುತ್ತಾರೆ. ಮಹಿಳೆಯರು ಇರುವುದಿಲ್ಲ. ಹಲವಾರು ಪ್ರದೇಶದಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಿರುತ್ತಾರೆ. ಇತನು ಗ್ರಾಮದೇವತೆಯ ಒಬ್ಬ ಸಹೋದರನಾದ ಪೋತರಾಜು ಎಂದು ಆಂಧ್ರ ಪ್ರದೇಶದಲ್ಲಿ ಹೆಸರುವಾಸಿಯಾಗಿದ್ದಾನೆ.

PC:Official site

ಭೇತಾಳನ ದೇವಾಲಯ

ಭೇತಾಳನ ದೇವಾಲಯ

ತಮಿಳುನಾಡಿನಲ್ಲಿ ಕರ್ಪಸ್ವಾಮಿಯಾಗಿ, ಕೇರಳ, ಕರ್ನಾಟಕ ರಾಜ್ಯದಲ್ಲಿಯೂ ಕೂಡ ಭೇತಾಳನನ್ನು ಬೇರೆ ಹೆಸರಿನಿಂದ ಪೂಜಿಸುತ್ತಾರೆ. ಪ್ರಸ್ತುತ ಲೇಖನದಲ್ಲಿ ಹೇಳಬಯಸುತ್ತಿರುವ ದೇವಾಲಯವಿರುವುದು ಮಹಾರಾಷ್ಟ್ರದಲ್ಲಿ.


PC:Official site

ಭೇತಾಳನ ದೇವಾಲಯ

ಭೇತಾಳನ ದೇವಾಲಯ

ಹಿಂದೂ ಧರ್ಮಶಾಸ್ತ್ರದ ಪ್ರಕಾರ ನಮ್ಮ ಸ್ವಾರ್ಥ ಪೂರಿತವಾದ ಆಲೋಚನೆಗಳು, ಬೇರೆಯವರಿಗೆ ಅನ್ಯಾಯ ಮಾಡಬೇಕು ಎಂದು ಅಂದುಕೊಳ್ಳುವುದು, ಬೇರೆಯವರ ಮೇಲೆ ಅಸೂಯೆ ಪಡುವುದರಿಂದ ನಮ್ಮಲ್ಲಿ ನಕರಾತ್ಮಕವಾಗಿ ಪರಿರ್ವತನೆಯಾಗಿ ದೀರ್ಘಕಾಲಿಕ ಆನಾರೋಗ್ಯ ಸಮಸ್ಯೆಯಿಂದ ಜೀವನದಲ್ಲಿ ಕಷ್ಟಗಳು ಸಂಭವಿಸುತ್ತದೆ.

PC:Official site

ಭೇತಾಳನ ದೇವಾಲಯ

ಭೇತಾಳನ ದೇವಾಲಯ

ಭೇತಾಳ ಪಿಶಾಚಿ ಗಣಗಳಿಗೆ ಅಧ್ಯಕ್ಷ. ಇತನು ನಮ್ಮಲ್ಲಿನ ಕೇಡು ಬುದ್ಧಿಯನ್ನು ತೊಲಗಿಸಿ ನಮ್ಮನ್ನು ಅಸೂಯೆ, ಕೋಪನಂತಹ ರ್ಧುಗುಣಗಳನ್ನು ನಾಶ ಮಾಡಿ ಒಳ್ಳೆಯ ಬುದ್ಧಿಯನ್ನು ಪ್ರಸಾಧಿಸುತ್ತಾನೆ.

PC:Official site

ಭೇತಾಳನ ದೇವಾಲಯ

ಭೇತಾಳನ ದೇವಾಲಯ

ನಮ್ಮನ್ನು ಒಳ್ಳೆಯ ದಾರಿಯಲ್ಲಿ ನಡೆಸುತ್ತಾನೆ. ಅಷ್ಟೇ ಅಲ್ಲದೇ ನಮ್ಮ ಮೇಲೆ ಅಸೂಯೆ ಪಡುತ್ತಿರುವವರಿಗೆ ಶಿಕ್ಷಿಸಿ, ಭೂತ ಪ್ರೇತ ಬಾದೆಗಳಿಂದ ಮುಕ್ತಿಯನ್ನು ನೀಡುತ್ತಾನೆ. ಅನಾರೋಗ್ಯ ಸಮಸ್ಯೆ ಇದ್ದರು ಕೂಡ ತಕ್ಷಣ ಮಾಟ, ಮಂತ್ರ ಮಾಯಗೊಳಿಸುವ ಮಾಹಿಮಾನ್ವಿತ ಈ ಭೇತಾಳ.

PC:Official site

ಭೇತಾಳನ ದೇವಾಲಯ

ಭೇತಾಳನ ದೇವಾಲಯ

ನಮಗೆ ಅರಿವೇ ಇಲ್ಲದೆಯೇ ಭೇತಾಳನನ್ನು ಆರಾಧಿಸುತ್ತಿದ್ದೇವೆ. ಅದಕ್ಕೆ ಉದಾಹರಣೆಯಾಗಿ ಯಾರಾದರು ಹೊಸ ಮನೆ ನಿರ್ಮಾಣ ಮಾಡಿ ದೃಷ್ಟಿ ದೋಷ ತಗಲಬಾರದು ಎಂದು ಭೇತಾಳನ ಮುಖವನ್ನು ದೃಷ್ಟಿಬೊಂಬೆಯ ರೂಪದಲ್ಲಿ ಇಡುತ್ತಾರೆ.

PC:Official site

ಭೇತಾಳನ ದೇವಾಲಯ

ಭೇತಾಳನ ದೇವಾಲಯ

ಅಂದರೆ ನಮಗೆ ತಿಳಿಯದೇನೆ ನಾವು ಭೇತಾಳನಿಗೆ ಇಂದಿಗೂ ಪೂಜಿಸುತ್ತಿದ್ದೇವೆ. ಕೆಲವು ಮಂದಿ ತಮ್ಮ ಜಾತಕದಲ್ಲಿನ ದೋಷಗಳು, ಭವಿಷ್ಯದಿಂದ ತೆಗೆದುಕೊಂಡ ಭೈರವ ಸಾಧನೆಗಳು ಮಾಡುವ ಜ್ಯೋತಿಷಿಯ ಬಳಿ ಭೇಟಿ ನೀಡುತ್ತಿರುತ್ತೇವೆ.

PC:Official site

ಭೇತಾಳನ ದೇವಾಲಯ

ಭೇತಾಳನ ದೇವಾಲಯ

ಭೈರವ ಸಾಧನೆಯನ್ನು ಮಾಡುವ ಜ್ಯೋತಿಷಿಗಳು ಭೇತಾಳನ ಪ್ರೆಶ್ನೆ ಎಂಬ ಪದ್ಧತಿಯಲ್ಲಿ ಪ್ರಶ್ನೆ ಕೇಳಲು ಬಂದಿರುವವರನ್ನು ಏನು ಕೇಳದಯೇ ಅವರು ಎಲ್ಲಿಂದ ಬಂದಿದ್ದಾರೆ?, ಯಾಕೆ ಬಂದಿದ್ದಾರೆ? ಎಂಬ ಹಲವಾರು ವಿವಿರಗಳು ಅವರಿಗೆ ತಿಳಿದುಬಿಡುತ್ತದೆ.

PC:Official site

ಭೇತಾಳನ ದೇವಾಲಯ

ಭೇತಾಳನ ದೇವಾಲಯ

ಆದರೆ ಪ್ರಖ್ಯಾತವಾದ ಜ್ಯೋತಿಷ್ಯಿಗಳು ಬಂದಿರುವವರ ವಿವರಗಳನ್ನು ಹಾಗು ಭವಿಷ್ಯವನ್ನು ಒಂದು ಪಿಶಾಚಿಯ ಮೂಲಕ ತಿಳಿದುಕೊಳ್ಳುತ್ತಾರೆ. ಪಿಶಾಚಿಯು ಅವರ ಬಗ್ಗೆ ಗ್ರಹಿಸಿಕೊಂಡಿರುವ ವಿಷಯವನ್ನು ಜ್ಯೋತಿಷ್ಯಿಯ ಹತ್ತಿರ ಹೇಳುತ್ತದೆ. ಹಾಗಾಗಿಯೇ ಆ ಪಿಶಾಚಿಯನ್ನು ಕರ್ಣ ಪಿಶಾಚಿ ಎಂದು ಕರೆಯುತ್ತಾರೆ.


PC:Official site

ಭೇತಾಳನ ದೇವಾಲಯ

ಭೇತಾಳನ ದೇವಾಲಯ

ಹೀಗೆ ಭೇತಾಳ ಸಾಧನದ ಮೂಲಕ ಕೆಲವುಮಂದಿ ಮಾನವರಿಗೆ ಹಿಂಸೆಯನ್ನು ನೀಡಿ ಮಾರ್ಗಗಳನ್ನು ಉಪಯೋಗಿಸುತ್ತಿರುತ್ತದೆ. ಕಾಶಿ ಎಂಥಹ ಕ್ಷೇತ್ರದಲ್ಲಿ ಕೆಲವುಮಂದಿ ತಾಂತ್ರಿಕರು ಶವಭೇತಾಳ ಅಥವಾ ಶವಸಾಧನದಂತಹ ಪ್ರಕ್ರಿಯೆಯ ಮೂಖಾಂತರ ಭವಿಷ್ಯವನ್ನು ಹಾಗು ಭೂತಕಾಲವನ್ನು ತಿಳಿದುಕೊಳ್ಳುತ್ತಿರುತ್ತಾರೆ.

PC:Official site

ಭೇತಾಳನ ದೇವಾಲಯ

ಭೇತಾಳನ ದೇವಾಲಯ

17 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾದ ಈ ಭೇತಾಳನ ದೇವಾಲಯ ಮಹಾರಾಷ್ಟ್ರ ರಾಜ್ಯದ ಕೊಂಕಣ್ ತೀರದಲ್ಲಿನ ಸಿಂಧುದುರ್ಗ ಜಿಲ್ಲೆ, ವೆಂಗುರ ತಾಲ್ಲೂಕು, ಆರಾವಳಿ ಎಂಬ ಗ್ರಾಮದಲ್ಲಿ ಇದೆ.

ಭೇತಾಳನ ದೇವಾಲಯ

ಭೇತಾಳನ ದೇವಾಲಯ

ಪೂರ್ವದಲ್ಲಿ ಈ ಗ್ರಾಮವನ್ನು ಹಾರವಲ್ಲಿ ಎಂದು ಕರೆಯುತ್ತಿದ್ದರಂತೆ. ಸಂಸ್ಕøತ ಪದದಲ್ಲಿ ಹಾರ ಎಂದರೆ ಶಿವ ಎಂಬ ಅರ್ಥವನ್ನು ಹಾಗು ವಲ್ಲಿ ಎಂದರೆ ಗ್ರಾಮ ಎಂಬ ಅರ್ಥವನ್ನು ಸೂಚಿಸುತ್ತದೆ. ಅಂದರೆ ಶಿವನು ನೆಲೆಸಿರುವ ಗ್ರಾಮ ಎಂಬುದೇ ಆಗಿದೆ.

ಭೇತಾಳನ ದೇವಾಲಯ

ಭೇತಾಳನ ದೇವಾಲಯ

ಶಿವನು ನೆಲೆಸಿರುವ ಸ್ಥಳದಲ್ಲಿ ರುದ್ರಗಣಗಳು ಇಲ್ಲದೇ ಇರುತ್ತದೆಯೇ? ಅದ್ದರಿಂದ ಅವುಗಳಲ್ಲಿ ಒಂದು ಗಣವಾದರೂ ಪಿಶಾಚಿ ಗಣಕ್ಕೆ ಅಧ್ಯಕ್ಷನಾದ ಭೇತಾಳ ಈ ಗ್ರಾಮಕ್ಕೆ ಕಾವಲುಗಾರನಾಗಿ ಇರುತ್ತಾನೆ. ಪ್ರತಿ ದಿನ ರಾತ್ರಿ ಈ ಗ್ರಾಮಕ್ಕೆ ಕಾವಲು ಕಾಯುತ್ತಾನೆ ಎಂದು ಅಲ್ಲಿನ ಸ್ಥಳೀಯರ ನಂಬಿಕೆಯಾಗಿದೆ.

ಭೇತಾಳನ ದೇವಾಲಯ

ಭೇತಾಳನ ದೇವಾಲಯ

ಭೇತಾಳ ಸ್ವಾಮಿ ಈ ದೇವಾಲಯದಲ್ಲಿ ಭೇತಾಳವಾಗಿ ಮತ್ತು ನ್ಯಾಯವಾದ, ಸುಂದರ ಎತ್ತರದಲ್ಲಿ ಅಂದರೆ ಸುಮಾರು 9 ಅಡಿ ಎತ್ತರದಲ್ಲಿದ್ದಾನೆ. ದೇವಾಲಯದ ಭೇತಾಳನ ಮೂರ್ತಿಯೂ ಪಂಚಲೋಹದಿಂದ ಮಾಡಲಾದ ವಿಗ್ರಹದ ರೂಪದಲ್ಲಿ ದರ್ಶನ ನೀಡುತ್ತಾನೆ.

ಭೇತಾಳನ ದೇವಾಲಯ

ಭೇತಾಳನ ದೇವಾಲಯ

ಸ್ವಾಮಿ ಬಲಗೈನಲ್ಲಿ ಕತ್ತಿಯನ್ನು ಹಾಗು ಎಡಗೈನಲ್ಲಿ ಅಗ್ನಿಯ ಪಾತ್ರೆಯನ್ನು ಹಿಡಿದಿರುವುದು ಕಾಣಬಹುದಾಗಿದೆ. ಪ್ರಪಂಚದ ಮೂಲೆ ಮೂಲೆಯಿಂದ ಪರಿಷ್ಕಾರವಾಗಿರದ ಭೂತಪ್ರೇತ ಪಿಶಾಚಿ ಭಾದೆಗಳನ್ನು ತೊಲಗಿಸುವ ದೇವತ ಮೂರ್ತಿಯಾಗಿ ಈ ದೇವಾಲಯದಲ್ಲಿ ನೆಲೆಸಿದ್ದಾನೆ.

ಭೇತಾಳನ ದೇವಾಲಯ

ಭೇತಾಳನ ದೇವಾಲಯ

ಈ ಸ್ವಾಮಿಗೆ ಬಾಳೆಹಣ್ಣು ಎಂದರೆ ಹೆಚ್ಚು ಪ್ರಿಯವಾದುದು. ಅದ್ದರಿಂದಲೇ ಭಕ್ತರು ಇಲ್ಲಿ ಬಾಳೆಹಣ್ಣನ್ನು ನೈವೇದ್ಯವಾಗಿ ಸಮರ್ಪಿಸುತ್ತಾರೆ.

ಭೇತಾಳನ ದೇವಾಲಯ

ಭೇತಾಳನ ದೇವಾಲಯ

ಇಲ್ಲಿಗೆ ಭೇಟಿ ನೀಡುವ ಭಕ್ತರಿಗೆ ತಮ್ಮ ಕೋರಿಕೆಗಳನ್ನು ತೀರಿದ ನಂತರ ಸ್ವಾಮಿಗೆ ಹೊಸದಾದ ಚಪ್ಪಲಿಯನ್ನು ಇಲ್ಲಿ ಸಮರ್ಪಿಸುತ್ತಾರೆ. ಆ ದೇವಾಲಯದಲ್ಲಿ ಒಂದು ದಿನ ರಾತ್ರಿ ಸ್ವಾಮಿಗೆ ಚಪ್ಪಲಿಯನ್ನು ಇಟ್ಟು ಮರುದಿನ ಬೆಳ್ಳಗೆ ಚಪ್ಪಲಿಯನ್ನು ಪರೀಕ್ಷಿಸಿದರೆ ಚಪ್ಪಲಿಯು ಯಾರೊ ಧರಿಸಿ ಹಳೆಯದಾಗಿದೆ ಎಂಬಂತೆ ಕಾಣುತ್ತದೆ ಎಂತೆ.

ಭೇತಾಳನ ದೇವಾಲಯ

ಭೇತಾಳನ ದೇವಾಲಯ

ಸ್ವಾಮಿಯು ಇಂದಿಗೂ ಕೂಡ ಈ ಗ್ರಾಮವನ್ನು ಕಾವಲು ಕಾಯುತ್ತಿದ್ದಾರೆ ಎಂದು ಭಕ್ತರು ನಂಬುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X