Search
  • Follow NativePlanet
Share
» »ಬ್ರಿಟೀಷರು ತಮ್ಮ ದೇಶಕ್ಕೆ ಸಾಗಿಸಬೇಕು ಎಂದು ಕೊಂಡ ದೇವಾಲಯ...ಆದರೆ....

ಬ್ರಿಟೀಷರು ತಮ್ಮ ದೇಶಕ್ಕೆ ಸಾಗಿಸಬೇಕು ಎಂದು ಕೊಂಡ ದೇವಾಲಯ...ಆದರೆ....

ಭಾರತ ದೇಶವು ದೇವಾಲಯಗಳ ನಿಲಯ. ಕೆಲವು ದೇವಾಲಯಗಳು ಪುರಾಣ, ಚಾರಿತ್ರಾತ್ಮಕ ಪ್ರಧಾನ್ಯತೆಯನ್ನು ಹೊಂದಿದ್ದರೆ, ಇನ್ನು ಕೆಲವು ದೇವಾಲಯಗಳು ಅದರಲ್ಲೂ ಶಿಲ್ಪಕಲಾ ಸಂಪತ್ತುಗಳಿಂದಾಗಿಯೇ ಪ್ರಪಂಚ ವ್ಯಾಪ್ತಿಯಾಗಿ ಹೆಸರುವಾಸಿಯಾಗಿರುತ್ತವೆ. ಅಂಥಹ ಅತ್ಯದ್ಭುತವಾದ ದೇವಾಲಯವು ತಮಿಳುನಾಡಿನಲ್ಲಿದೆ.

ಈ ದೇವಾಲಯದಲ್ಲಿನ ಅಪೂರ್ವವಾದ ಶಿಲ್ಪಸಂಪತ್ತನ್ನು ಕಂಡು ಮಂತ್ರಮುಗ್ಧರಾದ ಬ್ರಿಟೀಷ್ ಆಳ್ವಿಕೆಗಾರರು ಪೂರ್ತಿ ದೇವಾಲಯವನ್ನು ಚಿಕ್ಕ-ಚಿಕ್ಕ ಭಾಗಗಳಾಗಿ ಮಾಡಿ ಲಂಡನ್‍ಗೆ ತೆಗೆದುಕೊಂಡು ಹೋಗಬೇಕು ಎಂದು ಭಾವಿಸಿದರಂತೆ. ಇದಕ್ಕಾಗಿಯೇ ಪ್ರತ್ಯೇಕವಾದ ದೋಣಿಯನ್ನು ಕೂಡ ಸಿದ್ಧ ಮಾಡಿದರಂತೆ. ಆದರೆ ಆ ದೇವರ ದಯೆಯಿಂದಾಗಿ ಆ ದೇವಾಲಯವನ್ನು ಬ್ರಿಟೀಷರು ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲವಂತೆ.

ಇದರಿಂದಾಗಿ ಆ ದೇವಾಲಯವು ನಮ್ಮ ದೇಶದಲ್ಲಿಯೇ ಉಳಿಯಿತು. ಹಾಗೆಯೇ ಅಪೂರ್ವವಾದ ಶಿಲ್ಪ ಸಂಪತ್ತನ್ನು ಕಣ್ಣಾರೆ ಕಾಣುವ ಸಲುವಾಗಿ ವಿವಿದ ದೇಶಗಳಿಂದ ಪ್ರವಾಸಿಗರು ನಮ್ಮ ದೇಶಕ್ಕೆ ಭೇಟಿ ನೀಡುತ್ತಿದ್ದಾರೆ.

ಲೇಖನದ ಮೂಲಕ ಬ್ರಿಟೀಷರನ್ನು ಅಷ್ಟಾಗಿ ಮೋಹಿತಗೊಳಿಸಿದ ಆ ವಿಶೇಷವಾದ ದೇವಾಲಯವನ್ನು ನಾವು ಲೇಖನದ ಮೂಲಕ ಸಂಕ್ಷೀಪ್ತವಾಗಿ ಮಾಹಿತಿಯನ್ನು ಪಡೆಯೋಣ.

1.ಅಪೂರ್ವವಾದ ಶಿಲ್ಪಸಂಪತ್ತು

1.ಅಪೂರ್ವವಾದ ಶಿಲ್ಪಸಂಪತ್ತು

PC:YOUTUBE

ದಕ್ಷಿಣ ಭಾರತ ದೇಶದಲ್ಲಿ ವಿಜಯನಗರ ಶಿಲ್ಪಕಲೆ ಇಲ್ಲದೇ ಇರುವ ದೇವಾಲಯವೆಂದರೆ ಅತಿಶಯೋಕ್ತಿ ಅಲ್ಲ. ಅನೇಕ ದೇವಾಲಯವನ್ನು ಯಾರು ನಿರ್ಮಾಣ ಮಾಡಿದರು ಎಂಬ ಪ್ರಶ್ನೆ ಪೂರ್ತಿಯಾಗದ ಮುಂಚೆಯೇ ಶ್ರೀ ಕೃಷ್ಣ ದೇವರಾಯರು ದೇವಾಲಯವನ್ನು ನಿರ್ಮಾಣ ಮಾಡಿದರು ಎಂಬ ಉತ್ತರ ಬರುತ್ತದೆ.

2.ಕಲ್ಯಾಣ ಮಂಟಪ

2.ಕಲ್ಯಾಣ ಮಂಟಪ

PC:YOUTUBE

ವಿಜಯ ನಗರ ರಾಜರು ನಿರ್ಮಿಸಿದ ದೇವಾಲಯಗಳಲ್ಲಿ ಅಸಮಾನ್ಯ ಶಿಲ್ಪಕಲೆಯು ಅತ್ಯಂತ ಉತ್ತುಂಗದಲ್ಲಿರುತ್ತದೆ. ಮುಖ್ಯವಾಗಿ ದೇವಾಲಯದಲ್ಲಿನ ಕಲ್ಯಾಣ ಮಂಟಪಗಳ ಶಿಲ್ಪಕಲೆಯು ತನ್ನದೇ ಆದ ವಿಶೇಷ ಸೌಂದರ್ಯವನ್ನು ಹೊಂದಿದ್ದು, ವರ್ಣಿಸಲು ಪದಗಳೇ ಸಾಲದು ಎಂದೇ ಹೇಳಬಹುದು. ಅಂತಹ ಅದ್ಭುತವಾದ ಕಲಾಮಂಟಪಗಳು ಇರುವ ದೇವಾಲಯಗಳಲ್ಲಿ ನಮ್ಮ ಕರ್ನಾಟಕದಲ್ಲಿನ ಹಂಪಿಯ ವಿಠಲ ದೇವಾಲಯವು ಒಂದು.

3.ಜಲಕಂಠೇಶ್ವರ ದೇವಾಲಯ

3.ಜಲಕಂಠೇಶ್ವರ ದೇವಾಲಯ

PC:YOUTUBE

ಅದೇ ವಿಧವಾಗಿ ಮಧುರೈನಲ್ಲಿನ ಸಾವಿರ ಸ್ತಂಭಗಳ ದೇವಾಲಯ, ತಿರುನಲ್ವೇಲಿಯಲ್ಲಿನ ದೇವಾಲಯ ತಕ್ಷಣ ನೆನಪಿಗೆ ಬರುವ ಆಲಯಗಳು. ಅದೇ ಸ್ಥಳಕ್ಕೆ ಸೇರಿದ ಅಂದರೆ ತಮಿಳುನಾಡಿನ ಕೊಯಂಬತ್ತೂರಿನ ಸಮೀಪದಲ್ಲಿರುವ ರಾಯ ವೆಲೂರು ಕೋಟೆಯಲ್ಲಿನ ಜಲಕಂಠೇಶ್ವರ ದೇವಾಲಯವು ಭಾರತ ದೇಶದಲ್ಲಿಯೇ ಅತ್ಯಂತ ಪುರಾತನವಾದ ದೇವಾಲಯಗಳಲ್ಲಿ ಒಂದು.

4.ಸದಾಶಿವರಾಯರ ಕಾಲದಲ್ಲಿ

4.ಸದಾಶಿವರಾಯರ ಕಾಲದಲ್ಲಿ

PC:YOUTUBE

ಈ ದೇವಾಲಯವನ್ನು ವಿಜಯನಗರ ಸಾಮ್ರಾಜ್ಯವನ್ನು ಆಳ್ವಿಕೆ ಮಾಡಿದ ಸದಾಶಿವರಾಯರ ಕಾಲದಲ್ಲಿ ನಿರ್ಮಿಸಲಾಗಿತ್ತು. ಈ ಕಲ್ಯಾಣ ಮಂಟಪವು ದೇವಾಲಯದ ಪ್ರಧಾನ ಗೋಪುರಕ್ಕೆ ಪಕ್ಕದಲ್ಲಿಯೇ ಇದೆ. ಒಟ್ಟು ಮೂರು ಭಾಗಗಳಾಗಿರುವ ಈ ಕಲ್ಯಾಣ ಮಂಡಪದಲ್ಲಿ ಒಟ್ಟು 46 ಸ್ತಂಭಗಳನ್ನು ಕಾಣಬಹುದು.

5.ದೇವತೆಗಳ ಚಿತ್ರಗಳು

5.ದೇವತೆಗಳ ಚಿತ್ರಗಳು

PC:YOUTUBE

ಈ ಸ್ತಂಭಗಳ ಮೇಲೆ ಅನೇಕ ದೇವತೆಗಳ ಶಿಲ್ಪಕಲೆಗಳನ್ನು ಕಾಣಬಹುದು. ವಿನಾಯಕ, ವಿಷ್ಣು, ಬ್ರಹ್ಮ, ಭೂದೇವಿ, ಶ್ರೀ ದೇವಿ, ಸರಸ್ವತಿ, ಪಾರ್ವತಿ ಮೊದಲಾದ ಶಿಲ್ಪಗಳನ್ನು ಅತ್ಯಂತ ಮನೋಹರವಾಗಿ ಕೆತ್ತನೆ ಮಾಡಿದ್ದಾರೆ. ಇವೆ ಅಲ್ಲದೇ, ನಾಟ್ಯಭಂಗಿಯನ್ನು ಹೊಂದಿರುವ ಶಿಲ್ಪಗಳು, ಸಂಗೀತ ಕಲಾಕಾರರ ಚಿತ್ರಗಳು ಕೂಡ ಇಲ್ಲಿ ಕಾಣಬಹುದು.

6.ಪುರಾಣ

6.ಪುರಾಣ

PC:YOUTUBE

ಅದೇ ವಿಧವಾಗಿ ಪ್ರತಿ ಸ್ತಂಭದ ಮೇಲೆ ನಮ್ಮ ಪುರಾಣದಲ್ಲಿನ ಯಾವುದಾದರು ಒಂದು ಘಟ್ಟವನ್ನು ಅತ್ಯಂತ ರಮಣೀಯವಾದ ಶಿಲ್ಪಗಳ ರೂಪದಲ್ಲಿ ಕೆತ್ತನೆ ಮಾಡಿರುವ ಕೈಚಳಕ ಅಮೋಘ. ಈ ದೇವಾಲಯದಲ್ಲಿನ ಒಂದು ಶಿಲ್ಪ ಕಲೆಯು ನಮ್ಮ ಸಂಸ್ಕøತಿಗೆ ನಿದರ್ಶನ.

7.ಅಂಥಹ ಶಿಲ್ಪವೇ

7.ಅಂಥಹ ಶಿಲ್ಪವೇ

PC:YOUTUBE

ಒಂದೇ ವಿಗ್ರಹದಲ್ಲಿ ಆನೆ, ಎತ್ತು ಇರುತ್ತದೆ. ಈ ಇವೆರಡರ ತಲೆ ಮಾತ್ರ ಒಂದೇ. ಎತ್ತಿನ ಶರೀರವನ್ನು ಕಂಡರೆ ಆನೆ ಕಾಣಿಸುತ್ತದೆ. ಅದೇ ವಿಧವಾಗಿ ಆನೆಯ ಶರೀರವನ್ನು ಕಂಡರೆ ಎತ್ತಿನ ಆಕಾರವು ಕಾಣಿಸುತ್ತದೆ. ಇಂಥಹ ಚಿತ್ರವನ್ನು ನಾವು ಹಂಪಿಯಲ್ಲಿನ ಅಚ್ಯುತ ರಾಮಾಲಯದಲ್ಲಿಯೂ ಕೂಡ ಕಾಣಬಹುದು.

8.ಮುಸ್ಲಿಂ ರಾಜರ ಕೈಯಲ್ಲಿ

8.ಮುಸ್ಲಿಂ ರಾಜರ ಕೈಯಲ್ಲಿ

PC:YOUTUBE

ವಿಜಯನಗರದ ಪತನದ ನಂತರ ಈ ಕೋಟೆಯು, ಅದರಲ್ಲಿಯೂ ದೇವಾಲಯವು ಮುಸ್ಲಿಂ ರಾಜರ ಕೈಗೆ ವಶವಾಯಿತು. ಹಾಗೆ ಜಲಕಂಠೇಶ್ವರ ದೇವಾಲಯ ಕೂಡ ವೆಲ್ಲೂರು ಕೋಟೆ ಪ್ರದೇಶವನ್ನು ಆಳ್ವಿಕೆ ಮಾಡುತ್ತಿದ್ದ ನವಾಬನ ಕೈಗೆ ಹೋಯಿತು.

9.ಮಸೀದಿಯ ನಿರ್ಮಾಣ

9.ಮಸೀದಿಯ ನಿರ್ಮಾಣ

PC:YOUTUBE

ಆ ಸಮಯದಲ್ಲಿ ದೇವಾಲಯದಲ್ಲಿನ ಅನೇಕ ಶಿಲ್ಪಕಲೆಗಳನ್ನು ಧ್ವಂಸ ಮಾಡಿ ದೇವಾಲಯದ ಅವರಣದಲ್ಲಿರುವ ಒಂದು ಜಾಗದಲ್ಲಿ ಹಾಕಿದರು. ಇಂದಿಗೂ ಆ ಸ್ಥಳದಲ್ಲಿ ಆ ಶಿಲ್ಪಕಲೆಗಳು ದೊರೆಯುತ್ತವೆ. ಅಷ್ಟೇ ಅಲ್ಲದೇ, ಕೋಟೆಯ ಒಳಗೆ ದೇವಾಲಯಕ್ಕೆ ಸಮೀಪದಲ್ಲಿ ಮಸೀದಿಯನ್ನು ಕೂಡ ನಿರ್ಮಾಣ ಮಾಡಿದರು.

10.ಬ್ರಿಟೀಷ್ ಆಳ್ವಿಕೆಗಾರರು

10.ಬ್ರಿಟೀಷ್ ಆಳ್ವಿಕೆಗಾರರು

PC:YOUTUBE

ಇನ್ನು ಮುಸ್ಲಿಂ ರಾಜರ ನಂತರ ಈ ದೇವಾಲಯವು ಬ್ರಿಟೀಷ್‍ರ ಕೈಗೆ ವಶವಾಯಿತು. ಈ ಶಿಲ್ಪಕಲಾ ಸಂಪತ್ತನ್ನು ಕಂಡು ಮಂತ್ರಮುಗ್ಧರಾಗಿ ಅಂದಿನ ಬ್ರಿಟೀಷ್‍ರು ಈ ದೇವಾಲಯವೆಲ್ಲಾ ತಮ್ಮ ದೇಶಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಅಲೋಚಿಸಿದರು.

11.ಲಂಡನ್

11.ಲಂಡನ್

PC:YOUTUBE

ಇದಕ್ಕಾಗಿ ಪ್ರತಿ ಸ್ತಂಭವನ್ನು ಅತ್ಯಂತ ಜಾಗರೂಕತೆಯಿಂದ ಸಾಗಿಸಿ ಮತ್ತೆ ಲಂಡನ್‍ನಲ್ಲಿ ಪುನರ್ ಪ್ರತಿಷ್ಟಾಪಿಸಬೇಕು ಎಂದು ಭಾವಿಸಿದರು. ಅದಕ್ಕೆ ಪ್ರತಿಯಾಗಿ ಒಂದು ಕಲ್ಲಿನ ಸ್ತಂಭವನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಲು ಮರದ ಪೆಟ್ಟಿಗೆಯನ್ನು ಸಿದ್ಧಗೊಳಿಸಿದರು.

12.ಭಾರತ ದೇಶ

12.ಭಾರತ ದೇಶ

PC:YOUTUBE

ಈ ಕಲ್ಲಿನ ಮಂಟಪವನ್ನು ಲಂಡನ್‍ಗೆ ಸಾಗಿಸಲು ಲಂಡನ್ ದೇಶದಿಂದ ಒಂದು ದೊಡ್ಡದಾದ ದೋಣಿಯನ್ನು ಭಾರತ ದೇಶಕ್ಕೆ ಕಳುಹಿಸಿದರು. ಆದರೆ ಮಾರ್ಗ ಮಧ್ಯದಲ್ಲಿ ಆ ದೋಣಿಯು ಸಮುದ್ರದೊಳಗೆ ಮುಳುಗಿ ಹೋಯಿತು. ಹೇಗಾದರು ಮಾಡಿ ಇಲ್ಲಿನ ಮಂಟಪವನ್ನು ಸಾಗಿಸಬೇಕು ಎಂದು ಅಂದುಕೊಂಡಿರುವವರಿಗೆ ಏನಾದರು ಒಂದು ಅವಾಂತರವು ಎದುರಾಗುತ್ತಿತ್ತು.

13.ದೇವಾಲಯ

13.ದೇವಾಲಯ

PC:YOUTUBE

ಇದರಿಂದಾಗಿ ಈ ದೇವಾಲಯವನ್ನು ಸಾಗಿಸುವ ಕೆಲಸವು ಕೈಬಿಟ್ಟರು. ಇನ್ನು ಬ್ರಿಟೀಷರು ಈ ಕೋಟೆಯನ್ನು, ದೇವಾಲಯವನ್ನು ಮದ್ದುಗುಂಡು ಭದ್ರಪಡಿಸುವ ಸಲುವಾಗಿ ಉಪಯೋಗಿಸಿದರಂತೆ. ಕೆಲವು ಕಾಲದ ನಂತರ ದೇವಾಲಯ, ದೇವಾಲಯದ ಕಲ್ಯಾಣ ಮಂಡಪದಲ್ಲಿನ ಶಿಲ್ಪಕಲೆಯನ್ನು ಅಲ್ಲಿಗೆ ಭೇಟಿ ನೀಡಿದ ಬ್ರಿಟೀಷ್ ಅಧಿಕಾರಿಗಳು ಮತ್ತೆ ಭದ್ರಪಡಿಸಿದರಂತೆ.

14. ಅಂದಿನಿಂದ ಪೂಜೆಗಳು ಇಲ್ಲ

14. ಅಂದಿನಿಂದ ಪೂಜೆಗಳು ಇಲ್ಲ

PC:YOUTUBE

1921 ರಲ್ಲಿಯೇ ರಾಯ ವೆಲೂರು ಕೋಟೆಯನ್ನು, ಅದರಲ್ಲಿನ ಜಲಕಂಠೇಶ್ವರ ದೇವಾಲಯವನ್ನು ಗುರುತಿಸಿ ಅದರ ಜವಾಬ್ದಾರಿಯನ್ನು ಪುರಾವಸ್ತುಶಾಖೆಯವರಿಗೆ ಒಪ್ಪಿಸಿದರಂತೆ. ಇದರಿಂದಾಗಿ 1921 ರಿಂದ ಸ್ವಾತಂತ್ರ್ಯ ಬರುವವರೆವಿಗೂ ಈ ದೇವಾಲಯದಲ್ಲಿ ಯಾವುದೇ ಪೂಜೆಗಳು ನಡೆಯುತ್ತಿರಲಿಲ್ಲ.

15.ಪೂಜೆ

15.ಪೂಜೆ

PC:YOUTUBE

ಇನ್ನು ಸ್ವತಂತ್ರ್ಯದ ನಂತರ ಸ್ಥಳೀಯ ಪ್ರಜೆಗಳು ಆ ದೇವಾಲಯದಲ್ಲಿನ ಜಲಕಂಠೇಶ್ವರನಿಗೆ ಮತ್ತೆ ಪೂಜಾದಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು. ಇನ್ನು ಇಲ್ಲಿರುವ ಜಲ ಕಂಠೇಶ್ವರನು ಭಕ್ತರಿಗೆ ಲಿಂಗ ರೂಪದಲ್ಲಿ ದರ್ಶನವನ್ನು ನೀಡುತ್ತಾನೆ. ಇತನನ್ನು ಪೂಜಿಸಿದರೆ ಮನೆಯಲ್ಲಿ ಯಾವುದೇ ಬಾಧೆಗಳು ಇಲ್ಲದೇ ಸುಖ-ಸಂತೋಷದಿಂದ ಜೀವನ ಸಾಗಿಸುತ್ತಾರೆ ಎಂದು ನಂಬಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X