Search
  • Follow NativePlanet
Share
» »ಇಲ್ಲಿನ ಸ್ವಾಮಿಯನ್ನು ದರ್ಶಿಸಿದರೆ ಶೀಘ್ರವೇ ಸಂತಾನಭಾಗ್ಯವಾಗುತ್ತದೆಯಂತೆ....

ಇಲ್ಲಿನ ಸ್ವಾಮಿಯನ್ನು ದರ್ಶಿಸಿದರೆ ಶೀಘ್ರವೇ ಸಂತಾನಭಾಗ್ಯವಾಗುತ್ತದೆಯಂತೆ....

ಭಾರತ ದೇಶದಲ್ಲಿನ ಕೆಲವು ದೇವಾಲಯಗಳು ಪುರಾಣಾತ್ಮಕವಾಗಿಯೇ ಅಲ್ಲದೇ ಚಾರಿತ್ರಿತ್ಮಾಕವಾಗಿಯೂ ಕೂಡ ಅನೇಕ ವಿಷಯಗಳನ್ನು ಅಡಗಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಚಿತ್ತೂರು ಜಿಲ್ಲೆಯಲ್ಲಿನ ನಾಗಲಾಪುರದಲ್ಲಿನ ವೇದನಾರಾಯಣಸ್ವಾಮಿ ದೇವಾಲಯ. ಬ್ರಹ್ಮದೇವ

By Sowmyabhai

ಭಾರತ ದೇಶದಲ್ಲಿನ ಕೆಲವು ದೇವಾಲಯಗಳು ಪುರಾಣಾತ್ಮಕವಾಗಿಯೇ ಅಲ್ಲದೇ ಚಾರಿತ್ರಿತ್ಮಾಕವಾಗಿಯೂ ಕೂಡ ಅನೇಕ ವಿಷಯಗಳನ್ನು ಅಡಗಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಚಿತ್ತೂರು ಜಿಲ್ಲೆಯಲ್ಲಿನ ನಾಗಲಾಪುರದಲ್ಲಿನ ವೇದನಾರಾಯಣಸ್ವಾಮಿ ದೇವಾಲಯ. ಬ್ರಹ್ಮದೇವನಿಂದ ಕದ್ದಕೊಂಡ ವೇದಗಳಿಗೆ ಆ ಶ್ರೀಮನ್ನಾರಾಯಣನು ರಕ್ಷಿಸಿದ ಪ್ರದೇಶ ಇದೆ ಎಂದು ಹೇಳಲಾಗುತ್ತದೆ. ಅದೇ ವಿಧವಾಗಿ ಈ ದೇವಾಲಯದಲ್ಲಿನ ಶಾಸನಗಳು ಶ್ರೀಕೃಷ್ಣ ದೇವಾರಾಯರ ದಕ್ಷಿಣ ದೇಶದ ಯಾತ್ರೆಯ ಬಗ್ಗೆ ಕೂಡ ತಿಳಿದುಕೊಳ್ಳಬಹುದು.

ಇಲ್ಲಿನ ದೇವಾಲಯದ ಸ್ವಾಮಿ ಶ್ರೀಮನ್ನಾರಯಣನು ಮತ್ಸ್ಯರೂಪದಲ್ಲಿ ವೇದವಲ್ಲಿ ಸಹಿತವಾಗಿ ನೆಲೆಸಿರುವ ಕಾರಣ ಸ್ವಾಮಿಯನ್ನು ದರ್ಶನ ಮಾಡಿದರೆ ಸಂತಾನ ಭಾಗ್ಯಯಾಗುತ್ತದೆ ಎಂದು ಪ್ರಜೆಗಳು ನಂಬುತ್ತಾರೆ. ಈ ಪುಣ್ಯಕ್ಷೇತ್ರದಲ್ಲಿ ಮಾರ್ಚ್ ತಿಂಗಳಲ್ಲಿ ನಡೆಯುವ ಸೂರ್ಯೋತ್ಸವ, ಏಪ್ರಿಲ್ ತಿಂಗಳಿನಲ್ಲಿ ನಡೆಯುವ ತೆಪ್ಪೋತ್ಸವಗಳು ನಡೆಯುತ್ತವೆ. ಕೇವಲ ಸ್ಥಳೀಯ ಜನರೇ ಅಲ್ಲದೇ ದೇಶ ವ್ಯಾಪಕವಾಗಿ ಭಕ್ತರು ಈ ಮಹಿಮಾನ್ವಿತವಾದ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ.

ಪ್ರಸ್ತುತ ತಿರುಮಲ, ತಿರುಪತಿ ದೇವಾಲಯದ ಅಧೀನದಲ್ಲಿನ ಈ ದೇವಾಲಯಕ್ಕೆ ಚಿತ್ತೂರಿನ ಜೊತೆ ತಿರುಪತಿಯಿಂದ ನಿತ್ಯವು ಬಸ್ಸುಗಳು ಸಂಪರ್ಕ ಸಾಧಿಸುತ್ತದೆ.

1.ಸೋಮಕಾಸುರನೆಂಬ ರಾಕ್ಷಸ

1.ಸೋಮಕಾಸುರನೆಂಬ ರಾಕ್ಷಸ

PC:YOUTUBE

ಬ್ರಹ್ಮದೇವನ ಸಮೀಪದಲ್ಲಿರುವ ವೇದಗಳನ್ನು ಸೋಮಕಾಸುರನೆಂಬ ರಾಕ್ಷಸನು ಕದಿಯುತ್ತಾನೆ. ಆ ಪವಿತ್ರವಾದ ವೇದಗಳನ್ನು ಸಮುದ್ರದ ಗರ್ಭದಲ್ಲಿ ಅಡಗಿಸಿ ಇಡುತ್ತಾನೆ. ಇದರಿಂದಾಗಿ ಸೃಷ್ಟಿಕಾರ್ಯಕ್ಕೆ ಅಡ್ಡಿ ಏರ್ಪಟ್ಟು, ಮೂರು ಲೋಕವು ಅಲ್ಲೊಲಕಲ್ಲೋಲವಾಗುತ್ತದೆ. ದೇವತೆಗಳು, ಋಷಿಗಳು ಎಲ್ಲರೂ ಸೇರಿ ಮಹಾವಿಷ್ಣುವನ್ನು ಭೇಟಿ ಮಾಡಿ ಈ ಗಂಡಾತರದಿಂದ ಪಾರು ಮಾಡುವಂತೆ ಪ್ರಾರ್ಥಿಸಿಕೊಳ್ಳುತ್ತಾರೆ.

2.ಮತ್ಸ್ಯಾವತರ

2.ಮತ್ಸ್ಯಾವತರ

PC:YOUTUBE

ಇದರಿಂದಾಗಿ ಆ ಮಹಾವಿಷ್ಣುವು ಮತ್ಸ್ಯಾವತರವನ್ನು ಹೊಂದಿ ಸಮುದ್ರ ಗರ್ಭದಲ್ಲಿ ಒಳಗೆ ತೆರಳಿ ಸೋಮಕಾಸುರನ್ನು ಸಂಹಾರ ಮಾಡಿ ನಾಲ್ಕು ವೇದಗಳನ್ನು ಭೂಮಿಯ ಮೇಲೆ ತೆಗೆದುಕೊಂಡು ಬರುತ್ತಾನೆ. ಹೀಗೆ ನಾರಾಯಣನು ಭೂಮಿಯ ಮೇಲೆ ವೇದಗಳನ್ನು ತೆಗೆದುಕೊಂಡು ಬಂದ ಪ್ರದೇಶವಾದ್ದರಿಂದ ಇದನ್ನು ವೇದಪುರಿ ಎಂದೂ ವೇದರಾಣ್ಯಕ್ಷೇತ್ರವೆಂದು ಕೂಡ ಕರೆಯುತ್ತಾರೆ.

3.ನಾಗಲಾಪುರ

3.ನಾಗಲಾಪುರ

PC:YOUTUBE

ಈ ಕ್ಷೇತ್ರವನ್ನು ಹಾರಿಕಂಫೂಪುರ ಎಂದೂ ಕೂಡ ಕರೆಯುತ್ತಾರೆ ಎಂದು ಪುರಾಣಗಳಿಂದ ತಿಳಿಯಬಹುದು. ಹಾಗೆ ಮಹಾವಿಷ್ಣುವು ಸಮುದ್ರದಿಂದ ಭೂಮಿಯ ಮೇಲಿನ ಭಾಗಕ್ಕೆ ಬಂದ ಪ್ರದೇಶವೇ ಚಿತ್ತೂರು ಜಿಲ್ಲೆಯ ನಾಗರಾಲಪುರ. ಇಲ್ಲಿ ಮಹಾವಿಷ್ಣುವು ಮತ್ಸ್ಯ ರೂಪದಲ್ಲಿ ನೆಲೆಸಿರುತ್ತಾನೆ.

4.ಶಂಖ, ಚಕ್ರಗಳು

4.ಶಂಖ, ಚಕ್ರಗಳು

PC:YOUTUBE

ಮೂಲ ವಿಗ್ರಹದ ಸೊಂಟದಿಂದ ಪಾದದವರೆಗೆ ಮತ್ಸ್ಯರೂಪದಲ್ಲಿ ಇದ್ದರೆ ಮೇಲಿನ ಭಾಗದಲ್ಲಿ ಮಾತ್ರ ವಿಷ್ಣುವು ರೂಪದಲ್ಲಿರುತ್ತದೆ. ಇಲ್ಲಿನ ಸ್ವಾಮಿಯು ಶಂಖ, ಚಕ್ರಗಳನ್ನು ಧರಿಸಿರುತ್ತಾರೆ. ಗರ್ಭಾಲಯದ ಸುತ್ತ ಅನೇಕ ಉಪ ದೇವಾಲಯಗಳಿಗೂ ಕೂಡ ದರ್ಶಿಸಬಹುದು.

5.ಉತ್ತರ ದ್ವಾರದಲ್ಲಿನ ಶಾಸನಗಳು

5.ಉತ್ತರ ದ್ವಾರದಲ್ಲಿನ ಶಾಸನಗಳು

PC:YOUTUBE

ಈ ಪ್ರದೇಶವು ಪುರಾಣಾತ್ಮಕವಾಗಿಯೇ ಅಲ್ಲದೇ ಚಾರಿತ್ರಿತ್ಮಕವಾಗಿ ಕೂಡ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಈ ದೇವಾಲಯದಲ್ಲಿ ಉತ್ತರ ದ್ವಾರದಲ್ಲಿರುವ ಶಾಸನದ ಮೂಲಕ ಈ ದೇವಾಲಯಕ್ಕೆ ಸಂಬಂಧಿಸಿದ ಅನೇಕ ವಿಷಯಗಳು ಬೆಳಕಿಗೆ ಬಂದಿತು.

6.ಶ್ರೀಕೃಷ್ಣ ದೇವರಾಯ

6.ಶ್ರೀಕೃಷ್ಣ ದೇವರಾಯ

PC:YOUTUBE

ಮೊದಲು ಈ ದೇವಾಲಯವನ್ನು ಪಲ್ಲವರು ನಿರ್ಮಾಣ ಮಾಡಿದರು. ಆಗಿನ ಕಾಲದಲ್ಲಿ ಈ ದೇವಾಲಯವನ್ನು ಶ್ರೀ ಕರಿಯ ಮಾಣಿಕ್ಯ ಪೆರುಮಾಳ್ ಎಂದು ಅಭಿವೃದ್ಧಿ ಮಾಡುತ್ತಿದ್ದರು. ಅಷ್ಟೇಅಲ್ಲದೇ, ಈ ದೇವಾಲಯವು ಚಿಕ್ಕದಾಗಿತ್ತು. ದಕ್ಷಿಣ ದೇಶದ ಪ್ರವಾಸದ ಭಾಗವಾಗಿ ಶ್ರೀಕೃಷ್ಣ ದೇವರಾಯರು ಈ ಪ್ರದೇಶಕ್ಕೆ ಭೇಟಿ ನೀಡಿದ್ದರು.

7.ಪಂಚ ಪ್ರಾಕಾರಗಳು, ಸಪ್ತ ದ್ವಾರಗಳು

7.ಪಂಚ ಪ್ರಾಕಾರಗಳು, ಸಪ್ತ ದ್ವಾರಗಳು

PC:YOUTUBE

ಆ ಕಾಲದಲ್ಲಿಯೇ ಕೆಲವು ಭಾಗ ಶಿಥಿಲಾವಸ್ಥೆಯಲ್ಲಿದ್ದ ದೇವಾಲಯವನ್ನು ಅಭಿವೃದ್ಧಿ ಮಾಡುವುದಕ್ಕೆ ಸುಮಾರು ನೂರಾರು ಎಕರೆಗಳಷ್ಟು ಭೂಮಿಯನ್ನು ದಾನವಾಗಿ ನೀಡಿದರಂತೆ. ಈ ದೇವಾಲಯವು ಪಂಚ ಪ್ರಾಕಾರಗಳಿಂದ ಹಾಗು ಸಪ್ತದ್ವಾರಗಳಿಂದ ಅತ್ಯಂತ ಕಲಾತ್ಮಕವಾಗಿ ಅಭಿವೃದ್ಧಿಗೊಳಿಸಿದ್ದಾರೆ.

8.ತನ್ನ ತಾಯಿಯ ಹೆಸರಿನ ಮೇಲೆ ನಾಮಕರಣ

8.ತನ್ನ ತಾಯಿಯ ಹೆಸರಿನ ಮೇಲೆ ನಾಮಕರಣ

PC:YOUTUBE

ಶ್ರೀಕೃಷ್ಣ ದೇವರಾಯರು ತನ್ನ ತಾಯಿಯ ಹೆಸರಿನ ಮೇಲೆ ಈ ಪ್ರದೇಶಕ್ಕೆ ನಾಗಲಾಪುರವೆಂದು ನಾಮಕರಣ ಮಾಡಿದಹಾಗೆ ಶಾಸನದ ಮೂಲಕ ತಿಳಿದುಬರುತ್ತದೆ. ಪ್ರತಿ ವರ್ಷದ ಮಾರ್ಚ್ ತಿಂಗಳಿನಲ್ಲಿ, 25, 26, 27 ಅಥವಾ 26, 27, 28 ದಿನಾಂಕದ ಸಾಯಂಕಾಲದಲ್ಲಿ ಮೂಲವಿಗ್ರಹವು 630 ಅಡಿ ದೂರದಲ್ಲಿರುವ ರಾಜಗೋಪುರದಿಂದ ಸೂರ್ಯ ಕಿರಣಗಳು ಸ್ವಾಮಿಯ ಪಾದಗಳನ್ನು ಮುಟ್ಟುತ್ತದೆ.

9.ಇದಕ್ಕೆ ಕಾರಣ

9.ಇದಕ್ಕೆ ಕಾರಣ

PC:YOUTUBE

ಸತತ 2 ದಿನಗಳು ಆ ಕಿರಣಗಳು ಸ್ವಾಮಿಯ ಹೊಕ್ಕಳ ಭಾಗವನ್ನು, ಮೂರು ದಿನಗಳು ಸ್ವಾಮಿಯವರ ಮುಖವನ್ನು ತಾಕುವುದು ಈ ದೇವಾಲಯದ ವಿಶೇಷತೆ. ಇದಕ್ಕೆ ಇರುವ ಕಾರಣಗಳು ಮಾತ್ರ ಇಂದಿಗೂ ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನು ಆ ಮೂರು ದಿನಗಳು ಸ್ವಾಮಿಗೆ ಸೂರ್ಯ ಪೂಜೋತ್ಸವದ ಹೆಸರಿನಿಂದ ವಿಶೇಷವಾದ ಪೂಜೆಗಳನ್ನು ಹಾಗು ಉತ್ಸವಗಳನ್ನು ನಡೆಸುತ್ತಾರೆ.

10.ಬ್ರಹ್ಮೋತ್ಸವ

10.ಬ್ರಹ್ಮೋತ್ಸವ

PC:YOUTUBE

ಈ ಉತ್ಸವಗಳಿಗೆ ದೇಶದಲ್ಲಿನ ವಿವಿಧ ಪ್ರದೇಶಗಳಿಂದ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಅದೇ ವಿಧವಾಗಿ ಏಪ್ರಿಲ್‍ನಲ್ಲಿ ಬರುವ ಹುಣ್ಣಿಮೆಯಿಂದ 10 ದಿನಗಳ ಕಾಲ ಇಲ್ಲಿ ಬ್ರಹ್ಮೋತ್ಸವಗಳು ಅತ್ಯಂತ ಸಂಭ್ರಮ-ಸಡಗರದಿಂದ ಆಚರಿಸುತ್ತಾರೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+