Search
  • Follow NativePlanet
Share
» »ಈ ರಾಜ್ಯದಲ್ಲಿದೆ ಭಾರತದ ಅತಿ ಎತ್ತರದ ಅಣೆಕಟ್ಟು, ಇಲ್ಲಿ ವರ್ಷವಿಡೀ ಪ್ರವಾಸಿಗರ ದಂಡು

ಈ ರಾಜ್ಯದಲ್ಲಿದೆ ಭಾರತದ ಅತಿ ಎತ್ತರದ ಅಣೆಕಟ್ಟು, ಇಲ್ಲಿ ವರ್ಷವಿಡೀ ಪ್ರವಾಸಿಗರ ದಂಡು

India's Tehri Dam: ಸಾಮಾನ್ಯವಾಗಿ ಅಣೆಕಟ್ಟನ್ನು ನೀರಾವರಿ, ಜಲವಿದ್ಯುತ್ ಮತ್ತು ಪ್ರವಾಹ ತಡೆಗಟ್ಟುವಿಕೆಗೆ ಬಳಸಲಾಗುತ್ತದೆ. ಆದರೆ ಕೆಲವೇ ಕೆಲವು ಅಣೆಕಟ್ಟುಗಳು ಮಾತ್ರ ನಿರ್ಮಾಣದ ನಂತರ ಪ್ರವಾಸಿಗರಿಗೆ ಆಕರ್ಷಕ ಕೇಂದ್ರಗಳಾಗುತ್ತವೆ. ವರ್ಷವಿಡೀ ಇಲ್ಲಿ ಪ್ರವಾಸಿಗರ ಸಮೂಹವನ್ನು ಕಾಣಬಹುದು. ಹಾಗಾಗಿ ಇಂದಿನ ಲೇಖನದಲ್ಲಿ ಭಾರತದ ಅತಿ ಎತ್ತರದ ಅಣೆಕಟ್ಟಿನ ಬಗ್ಗೆ ತಿಳಿಯೋಣ. ಏಕೆಂದರೆ ಇದು ವರ್ಷವಿಡೀ ಪ್ರವಾಸಿಗರಿಂದ ತುಂಬಿತುಳುಕುತ್ತಿರುತ್ತದೆ. ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿರುವವರಿಗೆ, ದೇಶ ಸುತ್ತುವವರಿಗೆ, ವಿದ್ಯಾರ್ಥಿಗಳಿಗೆ ಭಾರತದ ಅತಿ ಎತ್ತರದ ಅಣೆಕಟ್ಟು ಯಾವುದು ಎಂದು ತಿಳಿದಿರುತ್ತದೆ. ಆದರೆ ಎಲ್ಲರಿಗೂ ಇದರ ಬಗ್ಗೆ ತಿಳಿಯಬೇಕಲ್ಲ. ಹಾಗಾಗಿ ಇಂದು ನಾವು ಭಾರತದ ಅತಿ ಎತ್ತರದ ಅಣೆಕಟ್ಟು ಯಾವುದು?, ಅದು ಎಲ್ಲಿದೆ? ಎಂಬುದನ್ನು ನೋಡೋಣ...

ವಿಶ್ವದ 8ನೇ ಅತಿ ಎತ್ತರದ ಅಣೆಕಟ್ಟು

ಭಾರತದ ಅತಿ ಎತ್ತರದ ಅಣೆಕಟ್ಟು ಉತ್ತರಾಖಂಡದಲ್ಲಿ ಇದೆ. ಇದನ್ನು ತೆಹ್ರಿ ಅಣೆಕಟ್ಟು ಎಂದು ಕರೆಯಲಾಗುತ್ತದೆ. ಇದು ಭಾರತ ಮಾತ್ರವಲ್ಲದೆ, ವಿಶ್ವದ 8ನೇ ಅತಿ ಎತ್ತರದ ಅಣೆಕಟ್ಟು. ಇದರ ಎತ್ತರ 260 ಮೀಟರ್, ಇದು 575 ಮೀಟರ್ ಉದ್ದ ಮತ್ತು 20 ಮೀಟರ್ ಅಗಲವಿದೆ. ಈ ಅಣೆಕಟ್ಟು 52 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿದೆ. ವಿಶ್ವದ ಪ್ರಮುಖ ಜಲವಿದ್ಯುತ್ ಯೋಜನೆ ಇಲ್ಲಿದೆ. ಇಲ್ಲಿ ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಇದನ್ನು ಸ್ವಾಮಿ ರಾಮತೀರ್ಥ ಅಣೆಕಟ್ಟು ಎಂದೂ ಕರೆಯುತ್ತಾರೆ. ವಾಸ್ತವವಾಗಿ, ಮಳೆಗಾಲದಲ್ಲಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳನ್ನು ರಕ್ಷಿಸಲು ಭಾಗೀರಥಿ ಮತ್ತು ಭಿಲಾಂಗನಾ ನದಿಯ ಮೇಲೆ ಇದನ್ನು ನಿರ್ಮಿಸಲಾಗಿದೆ.

tehridam

ಹಲವು ರಾಜ್ಯಗಳನ್ನು ಬೆಳಗುತ್ತಿರುವ ಅಣೆಕಟ್ಟು

ತೆಹ್ರಿ ಅಣೆಕಟ್ಟು ಉತ್ತರಾಖಂಡ ಮಾತ್ರವಲ್ಲದೆ, ದೇಶದ ಹಲವು ರಾಜ್ಯಗಳನ್ನು ಬೆಳಗುತ್ತಿದೆ. ಅಣೆಕಟ್ಟಿನ ನೀರನ್ನು ದೆಹಲಿ ಮತ್ತು ಯುಪಿಯ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರು ಮತ್ತು ನೀರಾವರಿಗಾಗಿ ಬಳಸಲಾಗುತ್ತದೆ. ಭದ್ರತಾ ದೃಷ್ಟಿಯಿಂದಲೂ ಈ ಅಣೆಕಟ್ಟು ಅತ್ಯಂತ ಮಹತ್ವದ್ದಾಗಿದೆ. ಈ ಅಣೆಕಟ್ಟು ಅನೇಕ ಅನಾನುಕೂಲಗಳನ್ನು ಸಹ ಹೊಂದಿದೆ. ಹಲವು ಬಾರಿ ಅಪಾಯವೂ ಎದುರಾಗಿದೆ. 1972 ರಲ್ಲಿ ತೆಹ್ರಿ ಅಣೆಕಟ್ಟಿನ ನಿರ್ಮಾಣಕ್ಕೆ ಅನುಮೋದನೆ ನೀಡಲಾಯಿತು. ನಿರ್ಮಾಣ ಕಾರ್ಯವು 1977-78 ರಲ್ಲಿ ಪ್ರಾರಂಭವಾಯಿತು. ಅಕ್ಟೋಬರ್ 29, 2005 ರಂದು ಅಣೆಕಟ್ಟಿನ ಕೊನೆಯ ಸುರಂಗವನ್ನು ಮುಚ್ಚಲಾಯಿತು. ಜುಲೈ 2006 ರಲ್ಲಿ ತೆಹ್ರಿ ಅಣೆಕಟ್ಟಿನಿಂದ ವಿದ್ಯುತ್ ಉತ್ಪಾದನೆ ಪ್ರಾರಂಭವಾಯಿತು.

tehridam uttarkhand

ಕಲ್ಲು ಮತ್ತು ಮಣ್ಣಿನ ಗೋಡೆ

ತೆಹ್ರಿ ಜಿಲ್ಲೆಯು ಹೆಚ್ಚಿನ ತೀವ್ರತೆಯ ಭೂಕಂಪದ ಪ್ರದೇಶವಾಗಿರುವುದರಿಂದ, ಹಾನಿಯನ್ನು ತಡೆಯಲು ತೆಹ್ರಿ ಅಣೆಕಟ್ಟನ್ನು ನಿರ್ಮಾಣ ಮಾಡಲಾಗಿದೆ. ಅಣೆಕಟ್ಟಿನ ಗೋಡೆಯನ್ನು ಸಂಪೂರ್ಣವಾಗಿ ಕಲ್ಲು ಮತ್ತು ಮಣ್ಣಿನಿಂದ ತುಂಬಿಸಲಾಗಿದೆ. ಈ ಅಣೆಕಟ್ಟಿನಲ್ಲಿ ಭಾಗೀರಥಿ ಮತ್ತು ಭಿಲಾಂಗನಾ ನದಿಗಳ ನೀರು ಸಂಗ್ರಹವಾಗುತ್ತದೆ. ತೆಹ್ರಿ ಅಣೆಕಟ್ಟು ಮೂರು ಘಟಕಗಳನ್ನು ಹೊಂದಿದೆ. ಮೊದಲನೆಯದು 1000 MW ತೆಹ್ರಿ ಅಣೆಕಟ್ಟು ಘಟಕ, ಎರಡನೆಯದು 400 MW ಕೋಟೇಶ್ವರ ಜಲವಿದ್ಯುತ್ ಯೋಜನಾ ಘಟಕ ಮತ್ತು ಮೂರನೆಯದು 1000 MW ತೆಹ್ರಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ ಘಟಕ.

ಅಣೆಕಟ್ಟಿನ ಲಾಭಗಳು

2020 ರ ಅಂಕಿಅಂಶಗಳ ಪ್ರಕಾರ ಅಣೆಕಟ್ಟು ನಿರ್ಮಾಣದಿಂದ ಪ್ರತಿ ವರ್ಷ 2000 ಕೋಟಿ ಲಾಭವಿದೆ , ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಪ್ರವಾಹ ಕಡಿಮೆಯಾಗಿದೆ. ತೆಹ್ರಿ ಅಣೆಕಟ್ಟಿನ ವಿದ್ಯುತ್ ಉತ್ಪಾದನೆಯಿಂದ ದೇಶವು ಪ್ರತಿ ವರ್ಷ 2000 ಕೋಟಿ ರೂಪಾಯಿಗಳ ಲಾಭವನ್ನು ಪಡೆಯುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಈ ಅಣೆಕಟ್ಟನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ . ಈ ಅಣೆಕಟ್ಟು 8 ರಿಕ್ಟರ್ ಸ್ಕೇಲ್ ವರೆಗಿನ ಭೂಕಂಪವನ್ನು ತಡೆದುಕೊಳ್ಳುತ್ತದೆ ಎಂದು ಹೇಳಲಾಗುತ್ತದೆ, ಆದರೆ ಇದಕ್ಕಿಂತ ಹೆಚ್ಚಿನ ಭೂಕಂಪ ಸಂಭವಿಸಿದರೆ, ಪರಿಣಾಮಗಳು ಭೀಕರವಾಗಿರುತ್ತವೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+