India
Search
  • Follow NativePlanet
Share
» »ವಿಶ್ವದಲ್ಲಿ ಈ ತರಹದ ವಿಭಿನ್ನವಾದ ಸಾರಿಗೆ ವಿಧಾನಗಳೂ ಇವೆ!

ವಿಶ್ವದಲ್ಲಿ ಈ ತರಹದ ವಿಭಿನ್ನವಾದ ಸಾರಿಗೆ ವಿಧಾನಗಳೂ ಇವೆ!

ಪ್ರಪಂಚದಾದ್ಯಂತದ ಅಸಮಾನ್ಯವೆನ್ನುವಂತಹ ಸಾರಿಗೆ ವಿಧಾನಗಳ ಪಟ್ಟಿ

ಸಾರಿಗೆಯ ಪ್ರಪಂಚದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ತಲುಪಲು ಹಲವಾರಿ ವಿಧದ ವಾಹನಗಳನ್ನು ಬಳಸುವುದು ಹೊಸ ವಿಷಯವೇನಲ್ಲ. ಅದರಲ್ಲೂ ಕೆಲವರು ಗಗನದಲ್ಲಿ ಹಾರಾಡ ಬಯಸಿದರೆ ಇನ್ನುಕೆಲವು ಅಸಮಾನ್ಯ ವಿಧದ ಸಾರಿಗೆ ವಿಧಾನಗಳನ್ನು ಬಳಸುವುದನ್ನು ಆಯ್ಕೆ ಮಾಡುತ್ತಾರೆ.

ನೀವು ಪ್ರಪಂಚದಾದ್ಯಂತ ಪ್ರಯಾಣಿಸಲು ಮತ್ತು ಕೆಲವು ಆಸಕ್ತಿದಾಯಕ ಸ್ಥಳಗಳನ್ನು ಅನ್ವೇಷಿಸಲು ಸಾರಿಗೆ ಸಂಪರ್ಕದ ಹಲವಾರು ವಿಧಗಳಿವೆ. ಆದ್ದರಿಂದ ಅಂತಹ ವಿಶ್ವದ ಕೆಲವು ಅಸಮಾನ್ಯವಾದ ಮತ್ತು ಆಸಕ್ತಿದಾಯಕ ಸಾರಿಗೆ ವಿಧಾನಗಳ ಪಟ್ಟಿಯನ್ನು ನಿಮಗಾಗಿ ನೀಡುತ್ತಿದ್ದೇವೆ.

ಕೋಕೋ ಟ್ಯಾಕ್ಸಿ, ಕ್ಯೂಬಾ

ಕೋಕೋ ಟ್ಯಾಕ್ಸಿ, ಕ್ಯೂಬಾ

ಮುದ್ದಾದ ಹಾಗೂ ಚಿಕ್ಕದಾದ ತೆಂಗಿನಕಾಯಿಗೆ ಹೋಲುವಂತಹ ಟ್ಯಾಕ್ಸಿಯು ಇದಾಗಿದ್ದು ಇದನ್ನು ಕ್ಯೂಬಾದಲ್ಲಿ ನೋಡಬಹುದಾಗಿದೆ. 1990 ರಿಂದ ಇವುಗಳನ್ನು ಟ್ಯಾಕ್ಸಿಗಳಾಗಿ ಮತ್ತು ಸಾರ್ವಜನಿಕ ಸಾರಿಗೆಯಾಗಿ ಬಳಸಲಾಗುತ್ತಿದೆ ಮತ್ತು ಅವು ಏಕಕಾಲದಲ್ಲಿ 2-3 ಜನರಿಗೆ ಪ್ರಯಾಣಿಸುವ ಅವಕಾಶ ಕಲ್ಪಿಸುತ್ತವೆ. ಹವಾನಾ, ಟ್ರಿನಿಡಾಡ್ ಮತ್ತು ವರಾಡೇರೊದಂತಹ ಸ್ಥಳಗಳಲ್ಲಿ ಈ ವಾಹನಗಳನ್ನು ಪ್ರಮುಖವಾಗಿ ಕಾಣಬಹುದಾಗಿದೆ. ಕೋಕೋ ಟ್ಯಾಕ್ಸಿಗಳು ಮೂರು ಚಕ್ರದ ಮೋಟಾರ್ ಸೈಕಲ್ ಗಳಾಗಿದ್ದು ಇವುಗಳನ್ನು ಹವಾನಾದ ಯಾವುದಾದರೂ ಹೋಟೇಲುಗಳು ಅಥವಾ ಅತಿಥಿ ಗೃಹಗಳಿಂದ ಬಾಡಿಗೆ ಪಡೆಯಬಹುದಾಗಿದೆ. ಈ ವಾಹನಗಳಲ್ಲಿ ಸವಾರಿಯು ವಿಭಿನ್ನ ಮೋಜು ನೀಡುವುದರಿಂದ ಇದು ಪ್ರವಾಸಿಗರಲ್ಲಿ ಹೆಚ್ಚು ಹೆಸರುವಾಸಿಯಾಗಿದೆ. ಕೋಕೋಟ್ಯಾಕ್ಸಿಗಳಲ್ಲಿ ಎರಡು ವಿಧಗಳಿದ್ದು ಒಂದು ಕಪ್ಪು ಬಣ್ಣದ್ದಾಗಿದ್ದು ಇದು ಸ್ಥಳೀಯರು ಬಳಸುತ್ತಾರೆ ಇನ್ನೊಂದು ಹಳದಿ ಬಣ್ಣದ್ದಾಗಿದ್ದು ಇದನ್ನು ಪ್ರವಾಸಿಗಳು ಸುಂದರ ನಗರದ ವೀಕ್ಷಣೆಗಾಗಿ ಬಳಸುತ್ತಾರೆ.

ಜೀಪ್ನಿ- ಮನಿಲಾ - ಪಿಲಿಪ್ಪೈನ್ಸ್

ಜೀಪ್ನಿ- ಮನಿಲಾ - ಪಿಲಿಪ್ಪೈನ್ಸ್

ಜೀಪ್ನಿಗಳು ಸಣ್ಣ ಹಾಗೂ ಡಬ್ಬ ಆಕಾರದಲ್ಲಿರುವ ವ್ಯಾನ್ ಗಳಾಗಿದ್ದು, ಇವುಗಳನ್ನು ಸಾರ್ವಜನಿಕ ಸಾರಿಗೆಯಾಗಿ 1950 ರಿಂದಲೂ ಪಿಲಿಪ್ಪೈನ್ಸ್ ನಲ್ಲಿ ಬಳಸಲಾಗುತ್ತಿದೆ. "ಜೀಪ್ನಿ" ಎಂಬ ಹೆಸರು ವಿಲ್ಲೀಸ್ ಎಂ ಬಿ ಅಥವಾ ಜೀಪ್ ಎಂದು ಕರೆಯಲ್ಪಡುವ ಮಿಲಿಟರಿ ವಾಹನದಿಂದ ಬಂದಿದ್ದಾಗಿದೆ. ಎರಡನೆಯ ಮಹಾಯುದ್ಧದ ನಂತರ ಫಿಲಿಪ್ಪೈನ್ಸ್ ಗೆ ಯುಎಸ್ ಮಿಲಿಟರಿ ಜೀಪ್‌ಗಳನ್ನು ನೀಡಿದಾಗ ಈ ಹೆಸರು ಜನಪ್ರಿಯವಾಯಿತು, ಅದನ್ನು ಅವರು "ಜೀಪ್ನಿಗಳು" ಎಂದು ಕರೆದರು. ಈ ವಾಹನಗಳು ವಿಶ್ವ ಸಮರ II ರ ಸಮಯದಲ್ಲಿ ಯುಎಸ್ ಮಿಲಿಟರಿಯು ಅವುಗಳನ್ನು ಫಿಲಿಪೈನ್ಸ್‌ಗೆ ತಂದಾಗಿನಿಂದ ಇವೆ.

ಪಾರ್ಟಿ ಬೈಕ್ - ಆಮ್ಸ್ಟರ್ಡ್ಯಾಮ್, ನೆದರ್ಲ್ಯಾಂಡ್ಸ್

ಪಾರ್ಟಿ ಬೈಕ್ - ಆಮ್ಸ್ಟರ್ಡ್ಯಾಮ್, ನೆದರ್ಲ್ಯಾಂಡ್ಸ್

ಜಗತ್ತಿನ ಅತ್ಯಂತ ವಿಶೇಷವಾದ ಅಥವಾ ಅಸಮಾನ್ಯವಾದ ಸಾರಿಗೆ ವಾಹನವೆಂದರೆ ಅದು ಪಾರ್ಟಿ ಬೈಕ್ ಆಗಿದೆ. ಇದರ ನಿಜವಾದ ಉದ್ದೇಶ ಸಾರಿಗೆಯಾಗಿಲ್ಲದಿದ್ದರೂ ಸಹ ಪಾರ್ಟಿ ಬೈಕ್ ಆಮ್ಸ್ಟರ್ಡ್ಯಾಮ್ ಅನ್ನು ಸುತ್ತಲು ಇರುವ ಒಂದು ವಿಭಿನ್ನ ವಾಹನವಾಗಿದೆ. ಈ ಸವಾರಿಯಲ್ಲಿ ನೀವು ಮದ್ಯವನ್ನು ಪಡೆಯಬಹುದು ಮತ್ತು ಅಪರಿಚಿತರೊಂದಿಗೆ ಅಥವಾ ನಿಮ್ಮ ಸ್ನೇಹಿತರೊಂದಿಗೆ ಅದನ್ನು ಆನಂದಿಸಬಹುದು. ಇದು ಎಲ್ಲರ ಮುಂದೆ ಅಥವಾ ನಿಮ್ಮ ಸ್ನೇಹಿತರೊಂದಿಗೆ ಒಂದು ಸಣ್ಣ ಪಾರ್ಟಿಯಂತೆ ಇರುತ್ತದೆ. ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಪಾರ್ಟಿ ಬೈಕ್‌ಗಳ ಪರಿಕಲ್ಪನೆಯ ನಂತರ, ಯುಎಸ್ ಎ, ಜರ್ಮನಿ ಮತ್ತು ನ್ಯೂಜಿಲೆಂಡ್‌ನಂತಹ ಅನೇಕ ಇತರ ದೇಶಗಳು ಸಹ ಅಂತಹ ಬೈಕುಗಳನ್ನು ತಮ್ಮ ದೇಶಗಳಲ್ಲಿ ಇರಿಸಿಕೊಳ್ಳಲು ಆಸಕ್ತಿ ತೋರಿಸಿದವು.

ಟೊಬೊಗ್ಗನ್ ರನ್ - ಮಡೈರಾ, ಪೋರ್ಚುಗಲ್

ಟೊಬೊಗ್ಗನ್ ರನ್ - ಮಡೈರಾ, ಪೋರ್ಚುಗಲ್

ಮಡೈರಾನ್ ಮಾಂಟೆಯಿಂದ ಲಿವ್ರಮೆಂಟೊಗೆ 2 ಕಿಮೀ ಇಳಿಜಾರಿನಲ್ಲಿ ಪ್ರಯಾಣಿಸಲು, ಫಂಚಲ್ ಈ ವಿಶಿಷ್ಟ ಸಾರಿಗೆ ವಿಧಾನವು 19 ನೇ ಶತಮಾನದಲ್ಲಿ ಹುಟ್ಟಿಕೊಂಡಿತು. ಇದು ಬಂಡಿ ತರಹದ ವಾಹನವಾಗಿದ್ದು ಹಿಂಬದಿಯಿಂದ ಕುಳಿತು ಇಬ್ಬರು ಚಾಲಕರಿಂದ ಇದನ್ನು ಓಡಿಸಲಾಗುತ್ತದೆ. ನಾವು ಹೊಸ ಯುಗದಲ್ಲಿ ಅಭಿವೃದ್ದಿ ಹೊಂದುತ್ತಿದ್ದಂತೆಯೇ ಇವುಗಳ ತಂತ್ರಜ್ಞಾನ ದಲ್ಲಿಯೂ ಅಭಿವೃದ್ದಿಯಾಯಿತು. ಇಂದು ಈ ತರಹದ ಸವಾರಿಯು ಪ್ರಮುಖವಾದ ಪ್ರವಾಸಿ ಆಕರ್ಷಣೆಯಾಗಿದ್ದು, ಇದರಲ್ಲಿ ನೀವು ಮಡೈರಾನ್ ಮಾಂಟೆಯಿಂದ ಫಂಚಲ್‌ನ ಲಿವ್ರಮೆಂಟೊಗೆ ದೂರದಲ್ಲಿ 10 ನಿಮಿಷಗಳ ಕಾಲ ಈ ಅನನ್ಯ ಸವಾರಿಯಲ್ಲಿ ಕುಳಿತು ಅದರ ಆನಂದವನ್ನು ಅನುಭವಿಸಬಹುದು.

ನೋರೀ (ಬಿದಿರಿನ ರೈಲು) ಕ್ಯಾಂಬೋಡಿಯಾ

ನೋರೀ (ಬಿದಿರಿನ ರೈಲು) ಕ್ಯಾಂಬೋಡಿಯಾ

ಹಲವಾರು ಶತಮಾನಗಳವರೆಗೂ ಕ್ಯಾಂಬೋಡಿಯನ್ನರು ನೋರೀ ಯ ಮೂಲಕ ಪ್ರಯಾಣಿಸುತ್ತಿದ್ದರು, ಇದು ಒಂದು ಬಿದಿರಿನ ರೈಲಾಗಿದ್ದು, ಬಿದಿರಿನ ತುಂಡುಗಳನ್ನು ಒಟ್ಟಿಗೆ ಜೋಡಿಸಿ ಚಕ್ರಗಳ ಮೇಲೆ ವೇದಿಕೆಯಾಗಿ ಇರಿಸಲಾಗುವ ಒಂದು ವೇದಿಕೆಯಾಗಿದೆ. ಸಣ್ಣ ಯಂತ್ರಗಳಿಗೆ ಧನ್ಯವಾದಗಳನ್ನು ಹೇಳಬೇಕು ಏಕೆಂದರೆ ಮೊದಲು ಈ ಜನರು ಈ ರೈಲು ಮಾದರಿಯ ವಾಹನವನ್ನು ಅವರ ಕೈಯಾರೆ ಮುಂದಕ್ಕೆ ತಳ್ಳುತ್ತಿದ್ದರು. ಯಂತ್ರದ ರೈಲುಗಳು ಅನಿಯಮಿತವಾಗಿದ್ದರಿಂದ ಸ್ಥಳೀಯರಲ್ಲಿ ಬಿದಿರಿನ ರೈಲುಗಳು ಜನಪ್ರಿಯವಾಗಿದೆ. ರೈಲ್ವೇಗಳಂತೆಯೇ ಇದು ಇದರದ್ದೇ ಮಾರ್ಗವನ್ನು ಹೊಂದಿದೆ. ಈ ಬಿದಿರಿನ ರೈಲುಗಳ ವೇಗವು ತುಂಬಾ ನಿಧಾನವಾಗಿದ್ದರೂ, ಪ್ರವಾಸಿಗರಾಗಿ ಇದು ನಿಮಗೆ ಜೀವಿತಾವಧಿಯಲ್ಲಿ ಒಮ್ಮೆ ರೋಚಕ ಅನುಭವವನ್ನು ನೀಡುತ್ತದೆ.

ಭಾರತೀಯ ಕೊರಾಕಲ್, ಭಾರತ

ಭಾರತೀಯ ಕೊರಾಕಲ್, ಭಾರತ

ಕೊರಾಕಲ್ ಬೋಟ್ ಗಳು ಒಂದು ವಿಭಿನ್ನ ರೀತಿಯ ದುಂಡಗಿನ ಆಕೃತಿಯ ಬೋಟ್ ಗಳಾಗಿದ್ದು ಇದನ್ನು ಹಲವಾರು ಶತಮಾನಗಳಿಂದ ಹಾಗೂ ಯುಗಗಳಿಂದ ಜಗತ್ತಿನ ಕೆಲವು ಭಾಗಗಳಲ್ಲಿ ಉಪಯೋಗಿಸಲಾಗುತ್ತಿದೆ. ಅವುಗಳಲ್ಲಿ ಯುನೈಟೆಡ್ ಕಿಂಗ್ಡಮ್, ಐರ್ಲ್ಯಾಂಡ್, ವಿಯೆಟ್ನಾಂ ಮತ್ತು ಭಾರತ ಪ್ರಮುಖವಾದವುಗಳು. ಭಾರತದಲ್ಲಿ ಈ ತರಹದ ದೋಣಿಗಳನ್ನು ಎಲ್ಲಾ ಕಡೆಗಳಲ್ಲೂ ಕಾಣ ಸಿಗುವುದಿಲ್ಲ ಹಂಪೆ, ಕೊಯಂಬತ್ತೂರು, ಹೊಗೆನಿಕ್ಕಲ್ ಮುಂತಾದ ಸ್ಥಳಗಳಲ್ಲಿ ಮಾತ್ರ ಕಾಣಸಿಗುತ್ತವೆ. ಈ ದೋಣಿಗಳನ್ನು ಮೂಲತಃವಾಗಿ ಕಡಿಮೆದರದಲ್ಲಿ ಹಾಗೂ ಉಪಯೋಗಿಸಲು ಸುಲಭವಾಗುವಂತೆ ಭಾರತದ ಮೀನುಗಾರರಿಗಾಗಿ ವಿನ್ಯಾಸಗೊಳಿಸಲಾಯಿತು. ನಂತರ ಈ ದೋಣಿಗಳು್ ಕಡಿಮೆ ವೆಚ್ಚದ್ದಾಗಿದ್ದು, ಇದನ್ನು ಖರೀದಿಸಲು ಚಿಂತಿಸಬೇಕಾಗಿಲ್ಲ ಆದುದರಿಂದ ಇತರ ಕಡೆಯಲ್ಲೂ ಇವುಗಳು ಮಾನ್ಯತೆಯನ್ನು ಪಡೆದು ಜನರು ಉಪಯೋಗಿಸಲು ಪ್ರಾರಂಭಿಸಿದರು

ಬಾರ್ಕೊ ಡಿ ಟೊಟೊರಾ - ಲೇಕ್ ಟಿಟಿಕಾಕಾ, ಪೆರು

ಬಾರ್ಕೊ ಡಿ ಟೊಟೊರಾ - ಲೇಕ್ ಟಿಟಿಕಾಕಾ, ಪೆರು

ಪೆರುವಿನ ಟಿಟಿಕಾಕಾ ಸರೋವರದಲ್ಲಿ ಈ ಬಾರ್ಕೋಡಿ ಟೊಟೊರಾವನ್ನು ಕಾಣಬಹುದಾಗಿದೆ. ಇದು ಒಂದು ಸಾಂಪ್ರದಾಯಿಕ ದೋಣಿಯಾಗಿದ್ದು ಇದನ್ನು ಟಿಟಿಕಕಾದ ಸ್ಥಳೀಯರು ವಸ್ತುಗಳನ್ನು ಸರೋವರದ ಒಂದು ದಡದಿಂದ ಇನ್ನೊಂದು ದಡಕ್ಕೆ ಸಾಗಿಸಲು ಉಪಯೋಗಿಸುತ್ತಿದ್ದರು. ದೋಣಿಗಳನ್ನು ಸರೋವರದಲ್ಲಿ ಬೆಳೆಯುವ ಟೊಟೊರಾ ರೀಡ್‌ನಿಂದ ತಯಾರಿಸಲಾಗುತ್ತದೆ. ದೋಣಿಗಳು 10 ಮೀಟರ್ ಉದ್ದವಿರುತ್ತವೆ ಮತ್ತು ಒಮ್ಮೆಗೆ 20 ಜನರನ್ನು ಸಾಗಿಸಬಹುದು. ದೋಣಿಯನ್ನು ಮೂಲತಃ ಸರೋವರದ ಮೇಲೆ ಮೀನುಗಾರಿಕೆ ಮತ್ತು ಸಾರಿಗೆಗಾಗಿ ಬಳಸಲಾಗುತ್ತಿತ್ತು. ಆದರೆ ಇಂದು ಇದನ್ನು ಪ್ರವಾಸಿ ಆಕರ್ಷಣೆಯಾಗಿಯೂ ಬಳಸಲಾಗುತ್ತಿದೆ.

ಸಸ್ಪೆನ್ಷನ್ ರೈಲ್ವೆ- ವುಪ್ಪರ್ಟಲ್, ಜರ್ಮನಿ

ಸಸ್ಪೆನ್ಷನ್ ರೈಲ್ವೆ- ವುಪ್ಪರ್ಟಲ್, ಜರ್ಮನಿ

ಜಗತ್ತಿನ ಅತ್ಯಂತ ಹಳೆಯ ವಿದ್ಯುತ್ ಚಾಲಿತ ರೈಲ್ವೇ ಆಗಿರುವ ವುಪ್ಪರ್ಟಲ್ ಸಸ್ಪೆನ್ಷನ್ ರೈಲ್ವೆಯು ಕೇಬಲ್ ನಿಂದ ಚಲಾಯಿಸಲ್ಪಡುವ ಫ್ಯೂನಿಕ್ಯುಲರ್ ರೈಲ್ವೇ ಮಾದರಿಯಾಗಿದೆ. ಇದು ನೇತಾಡುವ ಕಾರುಗಳು / ರೈಲುಗಳನ್ನು ಹೊಂಡಿದೆ ಮತ್ತು ಜರ್ಮನಿಯ ವುಪ್ಪರ್ಟಲ್ ನಗರದ ಮೂಲಕ ಚಲಿಸುತ್ತದೆ. ಇದನ್ನು 1901 ರಲ್ಲಿ ತೆರೆಯಲಾಯಿತು ಇದರಲ್ಲಿ ಇನ್ನೂ ಸುಮಾರು 70,000 ಸ್ಥಳೀಯರು ಆ ಪ್ರದೇಶದಲ್ಲಿ ತಮ್ಮ ದೈನಂದಿನ ಪ್ರಯಾಣಕ್ಕಾಗಿ ಇದನ್ನು ಬಳಸುತ್ತಾರೆ. ಇದು ಸುಂದರವಾದ ನಗರ ದೃಶ್ಯಗಳನ್ನು ನೀಡುತ್ತದೆ.

ಪ್ರಪಂಚದಾದ್ಯಂತ, ಜನರಿಗೆ ತಮ್ಮ ಅಗತ್ಯತೆಗಳಿಗಾಗಿ ಮತ್ತು ತಮಗೆ ಹೊಂದಿಕೆಯಾಗುವ ಒಂದು ಸ್ಥಳದಿಂದ ಇನ್ನೊಂದಕ್ಕೆ ಪ್ರಯಾಣಿಸಲು ಕೆಲವು ರೀತಿಯ ಸಾರಿಗೆಯ ಅಗತ್ಯವಿರುತ್ತದೆ. ಅವರು ತಮ್ಮ ಜೀವನವನ್ನು ಸುಲಭಗೊಳಿಸಲು ವಿಶಿಷ್ಟವಾದ ಸಾರಿಗೆ ವಿಧಾನಗಳನ್ನು ಹೊಂದಿದ್ದಾರೆ. ಈ ವಿಶಿಷ್ಟ ಸಾರಿಗೆ ವಿಧಾನಗಳು ಸ್ಥಳಗಳು ಮತ್ತು ಬೇರೆ ಗಾಡಿಗಳಂತೆ ಪ್ರಸಿದ್ಧವಾಗಿಲ್ಲ ಆದರೆ ಇಂದಿಗೂ ತಮ್ಮ ಉದ್ದೇಶವನ್ನು ಪೂರೈಸುತ್ತವೆ ಮತ್ತು ಸ್ಥಳೀಯರು ಅವುಗಳನ್ನು ಬಳಸಲು ಇಷ್ಟಪಡುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X