Search
  • Follow NativePlanet
Share
» »ಇಲ್ಲಿಗೆ ಹೋದ್ರೇ ಟಾಯ್ಲೆಟ್‌ ಕಾಮೋಡ್‌ನಲ್ಲಿ ಕೂತು ಟೀ ಕುಡಿ ಬೇಕಂತೆ

ಇಲ್ಲಿಗೆ ಹೋದ್ರೇ ಟಾಯ್ಲೆಟ್‌ ಕಾಮೋಡ್‌ನಲ್ಲಿ ಕೂತು ಟೀ ಕುಡಿ ಬೇಕಂತೆ

ನಾವಿಂದು ನಿಮಗೆ ಕೆಲವು ವಿಶೇಷ ಕೆಫೆಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಅಲ್ಲಿ ಹೋಗಿ ಟೀ ಕುಡಿದರೆ ನಿಮಗೂ ಖುಷಿ ಅನಿಸುತ್ತದೆ ಜೊತೆಗೆ ಒಂದು ಸಾಮಾಜಿಕ ಕಾರ್ಯದಲ್ಲಿ ನಾನೂ ಕೈ ಜೋಡಿಸಿದೆನಲ್ಲಾ ಎನ್ನುವ ನೆಮ್ಮದಿಯೂ ಇರುತ್ತದೆ.

ನೀವು ಎಷ್ಟೆಲ್ಲಾ ರೆಸ್ಟೊರೆಂಟ್‌ಗಳು, ಕೆಫೆಗಳಿಗೆ ಹೋಗಿ ಕಾಫಿ, ಟೀ ಕುಡಿದಿರುವಿರಿ ಸಾವಿರಾರು ರೂಪಾಯಿ ಬಿಲ್ ಪಾವತಿಸಿರುವಿರಿ. ಆದರೆ ನೀವು ಯಾವತ್ತಾದರೂ ಸಾಮಾಜಿಕ ಸಂದೇಶವನ್ನು ನೀಡುವ ರೆಸ್ಟೊರೆಂಟ್ ಅಥವಾ ಕೆಫೆಗಳಿಗೆ ಹೋಗಿದ್ದೀರಾ, ಕಾಫಿ ಕುಡಿದಿದ್ದೀರಾ? ಒಂದು ವೇಳೆ ಇಲ್ಲವೆಂದಾದಲ್ಲಿ ನಾವಿಂದು ನಿಮಗೆ ಕೆಲವು ವಿಶೇಷ ಕೆಫೆಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಅಲ್ಲಿ ಹೋಗಿ ಟೀ ಕುಡಿದರೆ ನಿಮಗೂ ಖುಷಿ ಅನಿಸುತ್ತದೆ ಜೊತೆಗೆ ಒಂದು ಸಾಮಾಜಿಕ ಕಾರ್ಯದಲ್ಲಿ ನಾನೂ ಕೈ ಜೋಡಿಸಿದೆನಲ್ಲಾ ಎನ್ನುವ ನೆಮ್ಮದಿಯೂ ಇರುತ್ತದೆ.

ಟಾಯ್ಲೆಟ್‌ ಕೆಫೆ

ಟಾಯ್ಲೆಟ್‌ ಕೆಫೆ

ಪ್ರತಿದಿನ ಟಾಯ್ಲೆಟ್‌ಗೆ ಹೋದ್ರೆ ಏನೋ ಒಂಥರಾ ಸಮಾಧಾನ. ಹಾಗಂತ ಟಾಯ್ಲೆಟ್‌ ಮೇಲೆ ಪ್ರೀತಿ ಇದೇ ಅಂತಲ್ಲ. ಟಾಯ್ಲೆಟ್‌ಗೆ ಹೋಗಿಲ್ಲ ಅಂದ್ರೆ ಆರೋಗ್ಯನೇ ಸರಿ ಇರೋದಿಲ್ಲ. ಬಹಳಷ್ಟು ಜನರಿಗೆ ಟಾಯ್ಲೆಟ್‌ ಕಾಮೋಡ್‌ ಮೇಲೆ ಕೂತು ಪೇಪರ್‌ ಓದೋದು, ಮೊಬೈಲ್‌ ನೋಡುವ ಅಭ್ಯಾಸ ಇರುತ್ತದೆ. ಆದ್ರೆ ಟಾಯ್ಲೆಟ್‌ನಲ್ಲಿ ಕೂತು ಟೀ ಕುಡಿಯೋದನ್ನು, ತಿಂಡಿ ತಿನ್ನೋದನ್ನು ಯಾರೂ ಇಷ್ಟಪಡೋದಿಲ್ಲ. ಆದರೆ ಇಂದು ನಾವು ನಿಮಗೆ ಒಂದು ಸ್ಥಳದ ಬಗ್ಗೆ ತಿಳಿಸಲಿದ್ದೇವೆ. ಅಲ್ಲಿಗೆ ಹೋದರೆ ನೀವು ಕೂಡಾ ಟಾಯ್ಲೆಟ್‌ ಕಾಮೋಡ್‌ ಮೇಲೆ ಕೂತು ಟೀ ಕುಡಿಯೋಕೇ, ತಿಂಡಿ ತಿನ್ನೋಕೆ ಇಷ್ಟ ಪಡುತ್ತೀರಿ.

ಪ್ರಯಾಗ್‌ ರಾಜ್‌ನಲ್ಲಿದೆ

ಪ್ರಯಾಗ್‌ ರಾಜ್‌ನಲ್ಲಿದೆ

ಕುಂಬ ಮೇಳ ನಡೆಯುತ್ತಿರುವ ಪ್ರಯಾಗ್‌ ರಾಜ್‌ನಲ್ಲಿ ಒಂದು ಅದ್ಭುತ ಕೆಫೆ ಇದೆ. ಪರಮಾರ್ಥ್‌ ನಿಕೇತನ್‌ ಸಂಸ್ಥೆ ಸ್ಥಾಪಿಸಿರುವ ಈ ಕೆಫೆಯ ವಿಶೇಷತೆ ಎಂದರೆ ನೀವು ಕಾಮಡ್‌ ಮೇಲೆ ಕೂತು ಟೀ, ಕಾಫಿ ಕುಡಿಯಬೇಕು. ನೈರ್ಮಲ್ಯತೆಯೇ ಈ ಕೆಫೆಯ ಮೂಲ ಉದ್ದೇಶ. ಈ ಟಾಯ್ಲೆಟ್‌ ಕೆಫೆ ಮೂಲಕ ನಿಮ್ಮ ಅಡುಗೆ ಮನೆಯನ್ನು ಎಷ್ಟು ಶುಚಿಯಾಗಿಡುತ್ತೀರೋ , ಅಷ್ಟೇ ಶುಚಿಯಾಗಿ ನಿಮ್ಮ ಟಾಯ್ಲೆಟ್‌ನ್ನೂ ಇಟ್ಟುಕೊಳ್ಳಿ ಎನ್ನುವ ಸಂದೇಶವನ್ನು ನೀಡಲಾಗುತ್ತಿದೆ. ನಮ್ಮ ಆರೋಗ್ಯದ ದೃಷ್ಠಿಯಿಂದ ಟಾಯ್ಲೆಟ್ ಶುಚಿಯಾಗಿರುವುದು ಅತೀ ಮುಖ್ಯ.

ಶೆರೋಸ್‌ ಹ್ಯಾಂಗ್‌ಔಟ್‌ ಕೆಫೆ

ಶೆರೋಸ್‌ ಹ್ಯಾಂಗ್‌ಔಟ್‌ ಕೆಫೆ

PC: Allison Barnett
ನೀವು ಆಗ್ರಾದಲ್ಲಿ ತಾಜ್‌ಮಹಲ್‌ನ್ನು ನೋಡಲು ಹೋದಾಗ ಅಲ್ಲಿನ ಶೆರೋಸ್‌ ಹ್ಯಾಂಗ್‌ಔಟ್‌ ಕೆಫೆಗೆ ಹೋಗೋದನ್ನು ಮಿಸ್‌ ಮಾಡಬೇಡಿ. ಯಾಕೆಂದರೆ ಈ ಕೆಫೆಯು ಉಳಿದೆಲ್ಲಾ ಕೆಫೆಗಿಂತ ಭಿನ್ನವಾಗಿದೆ. ಇಲ್ಲಿರುವ ವೈಟರ್‌ಗಳು ಉಳಿದ ಕೆಫೆಯ ವೈಟರ್‌ಗಳಂತೆಯೇ ಇದ್ದಾರೆ ಆದರೆ ಅವರು ಪುರುಷರಿಂದ ಶೋಷಣೆಗೊಳಗಾದ ಮಹಿಳೆಯರು. ಪುರುಷರಿಂದ ಆಸಿಡ್‌ ದಾಳಿಗೆ ಬಲಿಯಾದಂತಹ ಮಹಿಳೆಯರು. ಇಲ್ಲಿನ ಇನ್ನೊಂದು ವಿಶೇಷತೆ ಎಂದರೆ ಇಲ್ಲಿಗೆ ಬರುವ ಗ್ರಾಹಕರು ಟೀ, ಕಾಫಿಗೆ ಇಂತಿಷ್ಟೇ ಬಿಲ್‌ ಎಂದಿಲ್ಲ, ಗ್ರಾಹಕರು ಕಾಫಿ ಕುಡಿದು ತಮಗಿಷ್ಟ ಬಂದಷ್ಟು ಬಿಲ್ ನೀಡಿ ಹೋಗುತ್ತಾರೆ.

ಟೇಸ್ಟ್‌ ಆಫ್‌ ಡಾರ್ಕ್‌ನೆಸ್

ಟೇಸ್ಟ್‌ ಆಫ್‌ ಡಾರ್ಕ್‌ನೆಸ್

PC:Evoke Technologies
ಈ ಸ್ಥಳಕ್ಕೆ ಭೇಟಿ ನೀಡಿದರೆ ಇದು ನಿಮ್ಮ ದೃಷ್ಟಿಕೋನವನ್ನೇ ಬದಲಾಯಿಸಬಹುದು. ಈ ಕೆಫೆಯು ಸಂಪೂರ್ಣ ಕತ್ತಲೆಯಲ್ಲಿ ಕಾರ್ಯನಿರ್ವಹಿಸುತ್ತದೆ . ಇಲ್ಲಿ ನೀವು ಬರೀ ಆಹಾರದ ಸವಿಯನ್ನು ಸವಿಯ ಬಹುದೇ ಹೊರತು ಆ ಆಹಾರದ ರೂಪವನ್ನು ನೋಡಲು ಆಗೋದಿಲ್ಲ. ಯಾಕೆಂದರೆ ಇದು ದೃಷ್ಠಿಹೀನರಿಗಾಗಿಯೇ ನಡೆಸಲಾಗುತ್ತಿರುವಂತಹ ಕೆಫೆ. ಒಂದು ದೊಡ್ಡ ಕೊಠಡಿಯಲ್ಲಿ ಸುಮಾರು ೫೦ ಜನರು ಒಟ್ಟಿಗೆ ಕೂತು ಊಟ ಮಾಡಬಹುದಾಗಿದೆ. ಇಂತಹ ಒಂದು ವಿಶೇಷ ಕೆಫೆ ಹೈದರಾಬಾದ್‌ನಲ್ಲಿದೆ.

ನುಕ್ಕಡ್‌ ಟೀ ಕೆಫೆ

ನುಕ್ಕಡ್‌ ಟೀ ಕೆಫೆ

PC: Nukkad Tea Café
ಚತ್ತೀಸ್‌ಘಡ್‌ನ ರಾಜಧಾನಿಯಾಗಿರುವ ರಾಯ್‌ಪುರದಲ್ಲಿರುವ ಈ ಕೆಫೆಯ ವಿಶೇಷತೆ ಎಂದರೆ ಇಲ್ಲಿ ಬರೀ ಸಂಭಾಷಣೆಗಳು ಕೈ ಭಾಷೆಯ ಮೂಲಕ ನಡೆಯುತ್ತದೆ. ಇದು ವಿಶೇಷವಾಗಿ ಕಿವುಡರು ಹಾಗೂ ಮೂಕರಿಗಾಗಿ ನಿರ್ಮಿಸಲಾಗಿರುವ ಕೆಫೆ. ಕೆಫೆ ವಿಶಿಷ್ಟ ಭೋಜನದ ಅನುಭವವನ್ನು ಒದಗಿಸುವುದಲ್ಲದೆ, ಸಾಮಾನ್ಯ ವ್ಯಕ್ತಿಗಳಿಗೆ ಮೂಕರು, ಮಾತನಾಡಲು ಸಾಧ್ಯವಿಲ್ಲದವರ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅರ್ಥಮಾಡಿಸುತ್ತದೆ. ಇಲ್ಲಿಗೆ ಬರುವ ಗ್ರಾಹಕರು ತಮ್ಮ ಫೋನ್‌ನ್ನು ಕೌಂಟರ್‌ನಲ್ಲಿ ನೀಡಿ ಕೆಫೆಯೊಳಗೆ ಪ್ರವೇಶಿಸಿದರೆ ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತದೆ. ಬಹಳಷ್ಟು ಗ್ರಾಹಕರು ಕೆಫೆಯಲ್ಲಿ ಟೀಯನ್ನು ಎಂಜಾಯ್ ಮಾಡುವ ಬದಲು ಫೋನ್‌ನಲ್ಲಿ ಬ್ಯುಸಿ ಇರುತ್ತಾರೆ. ಚಾಟಿಂಗ್ ಮಾಡುತ್ತಾ ಇರುತ್ತಾರೆ. ಅವರಿಗೆ ತಮ್ಮ ಸಮಯ ವ್ಯರ್ಥ ಮಾಡುತ್ತಿರುವ ಬಗ್ಗೆ ಅರಿವೇ ಇರುವುದಿಲ್ಲ. ಇಲ್ಲಿಗೆ ಬಂದ ಗ್ರಾಹಕರು ಕೆಫೆಯಲ್ಲಿರುವ ಪುಸ್ತಕಗಳನ್ನು ಓದುತ್ತಾ, ಟೀಯ ರುಚಿಯನ್ನು ಎಂಜಾಯ್ ಮಾಡುವುದೇ ಇದರ ಉದ್ದೇಶ. ಪ್ರಿಯಾಂಕ ಪಟೇಲ್ ಎನ್ನುವವರು ಈ ಕೆಫೆಯನ್ನು ನಡೆಸುತ್ತಿದ್ದಾರೆ.

ಕ್ಯಾಟ್‌ ಸ್ಟೂಡಿಯೋ ಕೆಫೆ

ಕ್ಯಾಟ್‌ ಸ್ಟೂಡಿಯೋ ಕೆಫೆ

PC:Cat Café Studio
ಮುಂಬಯಿಯಲ್ಲಿರುವ ಕ್ಯಾಟ್‌ ಸ್ಟೂಡಿಯೋ ಕೆಫೆ ಕಾಫಿ, ಟೀ ಯನ್ನು ಸರ್ವ್‌ ಮಾಡುತ್ತಾ ಒಂದು ಸಮುಧಾಯ ಭವನವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಬದಲಾಗಿ ಇಲ್ಲಿ ಅನೇಕ ರಕ್ಷಿತ ಬೆಕ್ಕುಗಳನ್ನೂ ಕಾಣಬಹುದು. ಗ್ರಾಹಕರು ಇಲ್ಲಿ ಬೆಕ್ಕಿನ ಜೊತೆ ಆಟವಾಡಬಹುದು. ಅವುಗಳನ್ನು ದತ್ತೂ ತೆಗೆದುಕೊಳ್ಳಬಹುದು. ಈ ಕೆಫೆಯನ್ನು ನಡೆಸುತ್ತಿರುವ ಆಡಳಿತ ಮಂಡಳಿಯು ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ವಸ್ತು ಪ್ರದರ್ಶನ, ಆರ್ಟ್‌, ನಾಟಕಗಳನ್ನು ನಡೆಸುತ್ತದೆ. ಇಲ್ಲಿ ನಡೆಯುವ ಯಾವುದೇ ಕಾರ್ಯಕ್ರಮದ ೧೫% ಇಲ್ಲಿರುವ ಬೆಕ್ಕು ಹಾಗೂ ನಾಯಿಯ ಅಭೀವೃದ್ಧೀಗಾಗಿ ಬಳಸಲಾಗುತ್ತದೆ.

ತಿಹಾರ್ ಜೈಲು

ತಿಹಾರ್ ಜೈಲು

ತಿಹಾರ್ ಜೈಲು ಆಗ್ನೇಯ ಏಷ್ಯಾದಲ್ಲೇ ಅತ್ಯಂತ ದೊಡ್ಡ ಜೈಲುಗಳಲ್ಲಿ ಒಂದಾಗಿದೆ. ಅದರ ಕಠಿಣ ನಿಯಮಗಳು ಶಿಸ್ತಿನ ಜೈಲರ್‌ಗಳಿಗೂ ಪ್ರಸಿದ್ಧವಾಗಿದೆ. ಈ ಜೈಲಿನ ಅಧಿಕಾರಿಗಳು ಖೈದಿಗಳಿಗೆ ಎರಡನೇ ಜೀವನ ನೀಡಲು ಪ್ರಯತ್ನಿಸುತ್ತಿದ್ದಾರೆ. ಉತ್ತಮ ನಡವಳಿಕೆಗೆ ಪ್ರತಿಫಲ ನೀಡಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕೆಫೆಯನ್ನು ಸ್ಥಾಪಿಸುವುದು ಈ ದಿಕ್ಕಿನಲ್ಲಿ ಮತ್ತೊಂದು ಹಂತವಾಗಿದೆ. ಅಪರಾಧಿಗಳು ಈ ರೆಸ್ಟಾರೆಂಟ್ನಲ್ಲಿ ಮಾಣಿಗಳು ಮತ್ತು ಸಿಬ್ಬಂದಿಯಾಗಿ ನೇಮಕಗೊಂಡಿದ್ದಾರೆ ಮತ್ತು ಲಾಭೋದ್ದೇಶವಿಲ್ಲದ ರೆಸ್ಟಾರೆಂಟ್‌ನಿಂದ ಬರುವ ಆದಾಯವನ್ನು ಖೈದಿಗಳ ಕಲ್ಯಾಣ ಮತ್ತು ವೃತ್ತಿ ತರಬೇತಿಗಾಗಿ ಮೀಸಲಿಡಲಾಗಿದೆ. ಈ ಕೆಫೆಯಲ್ಲಿ ಕೆಲಸ ಮಾಡಲು ಅರ್ಹತೆ ಪಡೆಯಲು, ಖೈದಿಯು ಕನಿಷ್ಠ 12 ವರ್ಷಗಳ ಜೈಲು ಮತ್ತು ಕನಿಷ್ಠ ಒಂದು ಪ್ರೌಢಶಾಲಾ ಶಿಕ್ಷಣದ ವನ್ನು ಪಡೆದಿರಬೇಕು.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X