• Follow NativePlanet
Share
» »ಉಡುಪಿಯಲ್ಲಿನ ಶ್ರೀ ಕೃಷ್ಣ ಹೇಗೆ ಬಂದ ಗೊತ್ತ? ಇಲ್ಲಿದೆ ರೋಚಕ ಕಥೆ....

ಉಡುಪಿಯಲ್ಲಿನ ಶ್ರೀ ಕೃಷ್ಣ ಹೇಗೆ ಬಂದ ಗೊತ್ತ? ಇಲ್ಲಿದೆ ರೋಚಕ ಕಥೆ....

Written By:

ಉಡುಪಿ ನಮ್ಮ ಕರ್ನಾಟಕದ ರಾಜ್ಯದ ಅತ್ಯಂತ ಪವಿತ್ರವಾದ ದೇವಾಲಯ. ಉಡುಪಿ ಒಂದು ಶ್ರೀ ಕೃಷ್ಣನಿಗೆ ಸಮರ್ಪಿತವಾದ ದೇವಾಲಯವಾಗಿದೆ. ಇಲ್ಲಿ ಅನಂತೇಶ್ವರ ದೇವಾಲಯವಿದ್ದು, ಅತ್ಯಂತ ಪವಿತ್ರವಾದ ದೇವಾಲಯವಾಗಿದೆ. ಈ ದೇವಾಲಯಕ್ಕೆ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಈ ದೇವಾಲಯವು 100 ವರ್ಷಗಳಷ್ಟು ಹಳೆಯದಾಗಿದೆ. ಈ ದೇವಾಲಯವು ಅತ್ಯಂತ ಮಹಿಮಾನ್ವಿತವಾಗಿದ್ದು, ಉಡುಪಿಯಲ್ಲಿ ಸಾಮಾನ್ಯವಾಗಿ ಭೇಟಿ ನೀಡಬೇಕಾದ ಸ್ಥಳಗಳು ಸಾಕಷ್ಟಿವೆ.

ಉಡುಪಿಗೆ ಸಾಮಾನ್ಯವಾಗಿ ಶ್ರೀ ಕೃಷ್ಣನ ದರ್ಶನವನ್ನು ಪಡೆಯುವುದಕ್ಕೆ ಅಲ್ಲ ಅಲ್ಲಿನ ಸುಂದರವಾದ ಪ್ರವಾಸಿ ತಾಣಗಳಿಗೂ ಪ್ರವಾಸಿಗರು ಭೇಟಿ ನೀಡುತ್ತಾರೆ. ರಾಜ್ಯದ ಮೂಲೆ-ಮೂಲೆಯಿಂದಲೇ ಅಲ್ಲದೇ ಬೇರೆ ರಾಜ್ಯದಿಂದಲೂ ಉಡುಪಿಗೆ ಭೇಟಿ ನೀಡುತ್ತಾರೆ. ಅಸಲಿಗೆ ಉಡುಪಿ ಶ್ರೀ ಕೃಷ್ಣನ ದೇವಾಲಯದಲ್ಲಿನ ಕೃಷ್ಣನ ಮೂರ್ತಿಯನ್ನು ಪ್ರತಿಷ್ಟಾಪಿಸಿದವರು ಯಾರು? ಅದರ ಹಿಂದೆ ಇರುವ ರೋಚಕವಾದ ಕಥೆಯಾದರೂ ಏನು? ಎಂಬ ಹಲವಾರು ಪ್ರೆಶ್ನೆಗಳಿಗೆ ಉತ್ತರ ಲೇಖನದ ಮೂಲಕ ಪಡೆಯಿರಿ.

ಉಡುಪಿಯಲ್ಲಿನ ಶ್ರೀ ಕೃಷ್ಣ ಹೇಗೆ ಬಂದ ಗೊತ್ತ? ಇಲ್ಲಿದೆ ರೋಚಕ ಕಥೆ....

ಉಡುಪಿಯಲ್ಲಿನ ಶ್ರೀ ಕೃಷ್ಣ ಹೇಗೆ ಬಂದ ಗೊತ್ತ? ಇಲ್ಲಿದೆ ರೋಚಕ ಕಥೆ....

ಉಡುಪಿ ನಗರವು ಧಾರ್ಮಿಕವಾದ ಕ್ಷೇತ್ರವಾಗಿದೆ. ಜನರ ನಂಬಿಕೆಗಳ ಪ್ರಕಾರ ಹಿಂದೆ ಈ ಪ್ರದೇಶದ ರಾಜನಾಗಿದ್ದ, ಪರಶುರಾಮರ ಭಕ್ತನಾಗಿದ್ದ ರಾಮಭೋಜನು ಅನಂತೇಶ್ವರನ ವಿಗ್ರಹವನ್ನು ಪ್ರತಿಷ್ಟಾಪನೆ ಮಾಡಿದ ಎಂದು ಹೇಳಲಾಗಿದೆ. ಈ ಸುಂದರವಾದ ಸ್ಥಳಕ್ಕೆ ಸ್ಥಳ ಪುರಾಣವು ಕೂಡ ಇದೆ. ಅದನೆಂದರೆ..

Ashok Prabhakaran

ಉಡುಪಿಯಲ್ಲಿನ ಶ್ರೀ ಕೃಷ್ಣ ಹೇಗೆ ಬಂದ ಗೊತ್ತ? ಇಲ್ಲಿದೆ ರೋಚಕ ಕಥೆ....

ಉಡುಪಿಯಲ್ಲಿನ ಶ್ರೀ ಕೃಷ್ಣ ಹೇಗೆ ಬಂದ ಗೊತ್ತ? ಇಲ್ಲಿದೆ ರೋಚಕ ಕಥೆ....

ದಕ್ಷ ಪ್ರಜಾಪತಿಯ ಶಾಪದಿಂದ ಮುಕ್ತಿ ಹೊಂದಲು ಚಂದ್ರನು ಇಲ್ಲಿರುವ ಒಂದು ಸ್ಥಳದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಿದನಂತೆ. ಆ ಸ್ಥಳವೇ ಇಂದು ಚಂದ್ರೇಶ್ವರ ದೇವಾಲಯವಾಗಿದೆ. ಚಂದ್ರನು ತಪಸ್ಸು ಮಾಡಿದ ಸ್ಥಳವೇ ಉಡುಪಿಯಾಗಿದೆ ಎಂದು ಇನ್ನು ಕೆಲವರು ಹೇಳುತ್ತಾರೆ. ಮೊದಲು ಉಡುಪ ಎಂಬುದು ಇಂದು ಉಡುಪಿಯಾಗಿದೆ.

Vinayaraj

ಉಡುಪಿಯಲ್ಲಿನ ಶ್ರೀ ಕೃಷ್ಣ ಹೇಗೆ ಬಂದ ಗೊತ್ತ? ಇಲ್ಲಿದೆ ರೋಚಕ ಕಥೆ....

ಉಡುಪಿಯಲ್ಲಿನ ಶ್ರೀ ಕೃಷ್ಣ ಹೇಗೆ ಬಂದ ಗೊತ್ತ? ಇಲ್ಲಿದೆ ರೋಚಕ ಕಥೆ....

ಉಡುಪಿಗೆ ಬರುವ ಅನೇಕ ಮಂದಿ ಭಕ್ತರು ಅನುಸರಿಸಿಕೊಂಡಿರುವ ಪದ್ಧತಿ ಏನೆಂದರೆ ಮೊದಲು ಅನಂತೇಶ್ವರ ಹಾಗು ಚಂದ್ರೇಶ್ವರ ದೇವಾಲಯಕ್ಕೆ ಭೇಟಿ ನೀಡಿ ನಂತರವೇ ಉಡುಪಿಯಲ್ಲಿನ ಶ್ರೀ ಕೃಷ್ಣ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇಲ್ಲಿ ಶ್ರೀ ಕೃಷ್ಣ ಹೇಗೆ ಬಂದು ನೆಲೆಸಿದ? ಶ್ರೀ ಕೃಷ್ಣನ ವಿಗ್ರಹವನ್ನು ಯಾರು ಪ್ರತಿಷ್ಟಾಪಿಸಿದರು? ಎಂಬ ಹಲವಾರು ಪ್ರೆಶ್ನೆಗೆ ಉತ್ತರ ಇಲ್ಲಿದೆ ಮಾಹಿತಿ...

Paul Mannix

ಉಡುಪಿಯಲ್ಲಿನ ಶ್ರೀ ಕೃಷ್ಣ ಹೇಗೆ ಬಂದ ಗೊತ್ತ? ಇಲ್ಲಿದೆ ರೋಚಕ ಕಥೆ....

ಉಡುಪಿಯಲ್ಲಿನ ಶ್ರೀ ಕೃಷ್ಣ ಹೇಗೆ ಬಂದ ಗೊತ್ತ? ಇಲ್ಲಿದೆ ರೋಚಕ ಕಥೆ....

ಶ್ರೀ ಕೃಷ್ಣನು ದೊರಕಿದ ಬಗ್ಗೆ ಒಂದು ರೋಚಕವಾದ ಕಥೆ ಇದೆ. ಅದೆನೆಂದರೆ ಒಮ್ಮೆ ದ್ವಾರಕೆಯಲಲಿ ಕೃಷ್ಣನ ವಿಗ್ರಹವು ಗೋಪಿಚಂದನದಲ್ಲಿ ಮುಳುಗಿ ಹೋಗಿ ಕಾಣದಂತಾಯಿತು. ಗೋಪಿಚಂದನವನ್ನು ಯಾವುದೋ ಒಂದು ಪ್ರದೇಶಕ್ಕೆ ಸಾಗಿಸಬೇಕಾಗಿರುವುದರಿಂದ ದ್ವಾರಕೆಯಿಂದ ಅಂಬಿಗನು ದೋಣಿಯ ಮೂಖಾಂತರ ಸಮುದ್ರದಲ್ಲಿ ಪ್ರಯಾಣ ಬೆಳಸಿದನು.

Magiceye

ಉಡುಪಿಯಲ್ಲಿನ ಶ್ರೀ ಕೃಷ್ಣ ಹೇಗೆ ಬಂದ ಗೊತ್ತ? ಇಲ್ಲಿದೆ ರೋಚಕ ಕಥೆ....

ಉಡುಪಿಯಲ್ಲಿನ ಶ್ರೀ ಕೃಷ್ಣ ಹೇಗೆ ಬಂದ ಗೊತ್ತ? ಇಲ್ಲಿದೆ ರೋಚಕ ಕಥೆ....

ಶ್ರೀಕೃಷ್ಣನ ವಿಗ್ರಹವನ್ನು ತೆಗೆದುಕೊಂಡು ಬರುತ್ತಿದ್ದ ಅಂಬಿಗನು ಮಲ್ಪೆ ಬಳಿಯ ಕರಾವಳಿಯಲ್ಲಿ ಆ ದೋಣಿ ಬಂದಾಗ ಅನಿರೀಕ್ಷಿತವಾಗಿ ಬಿರುಗಾಳಿ ಪ್ರಾರಂಭವಾಯಿತು. ಆ ಸ್ಥಳಕ್ಕೆ ಬಂದ ದ್ವೈತ ಮತದ ಸಂಸ್ಥಾಪಕನಾದ ಶ್ರೀ ಮಧ್ವಾಚಾರ್ಯರು ತಮ್ಮ ದಿವ್ಯ ದೃಷ್ಟಿಯಿಂದ ಈ ವಿಷಯವನ್ನು ಅರಿತುಕೊಂಡರು.

Brunda Nagaraj

ಉಡುಪಿಯಲ್ಲಿನ ಶ್ರೀ ಕೃಷ್ಣ ಹೇಗೆ ಬಂದ ಗೊತ್ತ? ಇಲ್ಲಿದೆ ರೋಚಕ ಕಥೆ....

ಉಡುಪಿಯಲ್ಲಿನ ಶ್ರೀ ಕೃಷ್ಣ ಹೇಗೆ ಬಂದ ಗೊತ್ತ? ಇಲ್ಲಿದೆ ರೋಚಕ ಕಥೆ....

ತಕ್ಷಣ ಮಲ್ಪೆಯ ಬಳಿ ಬಂದು ತಮ್ಮ ಶಕ್ತಿಯಿಂದ ಬಿರುಗಾಳಿಯನ್ನು ಶಾಂತಿಗೊಳಿಸಿದರು. ದೋಣಿಯನ್ನು ಸುರಕ್ಷಿತವಾದ ಸ್ಥಳಕ್ಕೆ ಬರುವಂತೆ ಮಾಡಿದರು. ಇದರಿಂದ ಸಂತಸಗೊಂಡ ಅಂಬಿಗನು ಮಧ್ವಾಚಾರ್ಯರು ಮಾಡಿದ ಈ ದೊಡ್ಡ ಉಪಕಾರಕ್ಕೆ ದೋಣಿಯಲ್ಲಿರುವ ವಸ್ತುಗಳಲ್ಲಿ ತಮಗೆ ಇಷ್ಟವಾದ ವಸ್ತುವನ್ನು ತೆಗೆದುಕೊಳ್ಳಲು ವಿನಂತಿ ಮಾಡಿಕೊಂಡ.

wikicommons

ಉಡುಪಿಯಲ್ಲಿನ ಶ್ರೀ ಕೃಷ್ಣ ಹೇಗೆ ಬಂದ ಗೊತ್ತ? ಇಲ್ಲಿದೆ ರೋಚಕ ಕಥೆ....

ಉಡುಪಿಯಲ್ಲಿನ ಶ್ರೀ ಕೃಷ್ಣ ಹೇಗೆ ಬಂದ ಗೊತ್ತ? ಇಲ್ಲಿದೆ ರೋಚಕ ಕಥೆ....

ಅಂಬಿಗನ ಮಾತಿಗೆ ಒಪ್ಪಿದ ಮಧ್ವಾಚಾರ್ಯರು ದೋಣಿಯಲ್ಲಿದ್ದ ವಸ್ತುಗಳಲ್ಲಿ ಕೃಷ್ಣನ ವಿಗ್ರಹವಿದ್ದ ಗೋಪಿ ಚಂದನವನ್ನು ತೆಗೆದುಕೊಂಡು ಕೊಳದಲ್ಲಿ ಶುದ್ಧೀಕರಿಸಿದ ನಂತರ ಕೃಷ್ಣನ ವಿಗ್ರಹವನ್ನು ಮಧ್ವಾಚಾರ್ಯರೇ ಪ್ರತಿಷ್ಟಾಪಿಸಿದರು ಎನ್ನಲಾಗಿದೆ. ಶ್ರೀ ಕೃಷ್ಣನ ವಿಗ್ರಹವನ್ನು ಶುದ್ಧೀಕರಿಸಿದ ಕೆರೆಗೆ ಇಂದು ಮಾಧ್ವ ಸರೋವರ ಎಂದೇ ಕರೆಯಲಾಗುತ್ತಿದೆ.

Shiju Balagopal

ಉಡುಪಿಯಲ್ಲಿನ ಶ್ರೀ ಕೃಷ್ಣ ಹೇಗೆ ಬಂದ ಗೊತ್ತ? ಇಲ್ಲಿದೆ ರೋಚಕ ಕಥೆ....

ಉಡುಪಿಯಲ್ಲಿನ ಶ್ರೀ ಕೃಷ್ಣ ಹೇಗೆ ಬಂದ ಗೊತ್ತ? ಇಲ್ಲಿದೆ ರೋಚಕ ಕಥೆ....

ಉಡುಪಿ ಎಂದಾಕ್ಷಣ ನಮಗೆ ಮೊಟ್ಟ ಮೊದಲಿಗೆ ನೆನಪಾಗುವುದೇ ಕನಕದಾಸರು. 16 ನೇ ಶತಮಾನದಲ್ಲಿ ವಾದಿರಾಜರ ಆಡಳಿವಿದ್ದ ಕಾಲದಲ್ಲಿ ಕೆಳ ಜಾತಿಗೆ ಸೇರಿದ ಕನಕದಾಸರನ್ನು ಶ್ರೀ ಕೃಷ್ಣನ ದೇವಾಲಯಕ್ಕೆ ಪ್ರವೇಶವನ್ನು ನೀಡಲಿಲ್ಲ. ಕಾರಣ ಅವರು ಕೆಳಜಾತಿ ಎಂದೇ ಆಗಿತ್ತು. ದೇವಾಲಯದಲ್ಲಿನ ಪಂಡಿತರು ಅವರಿಗೆ ಹೊರದಬ್ಬಿದರು.

Shiju Balagopal

ಉಡುಪಿಯಲ್ಲಿನ ಶ್ರೀ ಕೃಷ್ಣ ಹೇಗೆ ಬಂದ ಗೊತ್ತ? ಇಲ್ಲಿದೆ ರೋಚಕ ಕಥೆ....

ಉಡುಪಿಯಲ್ಲಿನ ಶ್ರೀ ಕೃಷ್ಣ ಹೇಗೆ ಬಂದ ಗೊತ್ತ? ಇಲ್ಲಿದೆ ರೋಚಕ ಕಥೆ....

ಇದರಿಂದ ನೊಂದ ಕನಕದಾಸರು ಗರ್ಭಗುಡಿಯ ಹಿಂಭಾಗದ ಗೋಡೆಯಲ್ಲಿ ನಿಂತು ಆ ಶ್ರೀ ಕೃಷ್ಣನನ್ನು ಭಕ್ತಿಯಿಂದ ಪ್ರಾರ್ಥನೆ ಮಾಡಿದರು. ದೇವರಿಗೆ ಕುಲ, ಧರ್ಮ ಎಂಬ ಭೇದ ಭಾವವಿದೆಯೇ? ಆತನಿಗೆ ಬೇಕಾಗಿರುವುದು ಭಕ್ತಿ ಮಾತ್ರವೇ. ಇದರಿಂದ ಸಂತುಷ್ಟನಾದ ಶ್ರೀ ಕೃಷ್ಣನು ದೇವಾಲಯದ ಹಿಂಭಾಗಕ್ಕೆ ತಿರುಗಿ ಕನಕದಾಸರಿಗೆ ದರ್ಶನ ಭಾಗ್ಯವನ್ನು ನೀಡಿದನು.

Wikipedia

ಉಡುಪಿಯಲ್ಲಿನ ಶ್ರೀ ಕೃಷ್ಣ ಹೇಗೆ ಬಂದ ಗೊತ್ತ? ಇಲ್ಲಿದೆ ರೋಚಕ ಕಥೆ....

ಉಡುಪಿಯಲ್ಲಿನ ಶ್ರೀ ಕೃಷ್ಣ ಹೇಗೆ ಬಂದ ಗೊತ್ತ? ಇಲ್ಲಿದೆ ರೋಚಕ ಕಥೆ....

ಅದೇ ಇಂದು ಕನಕನ ಕಿಂಡಿಯಾಗಿದೆ. ಈ ರೀತಿಯಾಗಿ ದ್ವಾರಕೆಯಿಂದ ಸ್ವತಃ ಶ್ರೀ ಕೃಷ್ಣನೇ ಇಲ್ಲಿ ಆಗಮಿಸಿದ ಎಂದು ನಂಬಲಾಗಿದೆ. ದಕ್ಷಿಣ ಭಾರತದ ವಿವಿದೆಡೆಯಿಂದ ಉಡುಪಿಯ ಶ್ರೀ ಕೃಷ್ಣನ ದರ್ಶನ ಮಾಡಲು ಭೇಟಿ ನೀಡುತ್ತಾರೆ.

Trimurthykulkarni

ತಲುಪುವ ಬಗೆ ಹೇಗೆ?

ತಲುಪುವ ಬಗೆ ಹೇಗೆ?

ಉಡುಪಿಯು ಬೆಂಗಳೂರಿನಿಂದ ಸುಮಾರು 405 ಕಿ.ಮೀ ದೂರದಲ್ಲಿದೆ. ಹಾಗೆಯೇ ಮಂಗಳೂರಿನಿಂದ ಸುಮಾರು 56 ಕಿ.ಮೀಗಳಷ್ಟು ದೂರದಲ್ಲಿದೆ. ಸರ್ಕಾರಿ ಹಾಗು ಖಾಸಗಿ ಬಸ್ಸುಗಳ ವ್ಯವಸ್ಥೆಯು ಕೂಡ ಇಲ್ಲಿದೆ. ಮಂಗಳೂರಿನಿಂದ ಹಾಗು ಬೆಂಗಳೂರಿನಿಂದ ಸಾಕಷ್ಟು ರೈಲುಗಳು ಕೂಡ ದೊರೆಯುತ್ತವೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ