• Follow NativePlanet
Share
Menu
» »ಮರುಳು ಮಾಡುವ ಶೃಂಗಾರ ಶಿಲ್ಪಕಲೆಗಳ ಬಳ್ಳಿಗಾವಿಯ ದೇವಾಲಯಗಳು

ಮರುಳು ಮಾಡುವ ಶೃಂಗಾರ ಶಿಲ್ಪಕಲೆಗಳ ಬಳ್ಳಿಗಾವಿಯ ದೇವಾಲಯಗಳು

Written By:

ನಾವು ಸಾಮಾನ್ಯವಾಗಿ ಪ್ರಾಚೀನವಾದ ದೇವಾಲಯಗಳಲ್ಲಿ ಹಲವಾರು ಶಿಲ್ಪಕಲೆಗಳನ್ನು ಕಾಣಬಹುದು. ಅದರಲ್ಲಿಯೂ ರತಿ ಹಾಗು ಮನ್ಮಥರ ಹಲವಾರು ಶಿಲ್ಪಕಲೆಗಳನ್ನು ನಾವು ಕಾಣಬಹುದು. ಈ ಶಿಲ್ಪಗಳು ಕೆಲವೊಮ್ಮೆ ದೇವಾಲಯಗಳ ಆಕರ್ಷಣೆಯಾಗುತ್ತದೆ. ಒಮ್ಮೆ ಇವೆಲ್ಲಾ ದೇವಾಲಯದ ಮೇಲೆ ಏಕೆ ಬೇಕು? ಎಂಬ ಪ್ರೆಶ್ನೆ ಉದ್ಭವಿಸುವುದು ಸಾಮಾನ್ಯವಾದುದು. ಆದರೆ ಇದೊಂದು ಸೃಷ್ಟಿ ನಿಯಮವಾದ್ದರಿಂದ ಇದು ಸರಿ ಎಂಬ ವಾದ ಕೆಲವರದ್ದು.

ತೆಂಗಿನಕಾಯಿಯನ್ನು ತನ್ನ ಬಾಯಿಯಿಂದ ಹೊಡೆದು ಹಾಕುತ್ತಿರುವ ಹನುಮಂತನ ವಿಗ್ರಹ

ಸುಮಾರು 10 ರಿಂದ 11 ನೇ ಶತಮಾನಗಳ ನಡುವೆ ನಿರ್ಮಾಣ ಮಾಡಲಾದ ತ್ರಿಪುರಾಂತಕೇಶ್ವರ ಮತ್ತು ಕೇದಾರೇಶ್ವರ ದೇವಾಲಯಗಳು ಕೂಡ ಇಂಥಹ ರತಿ ಮನ್ಮಥನ ಶಿಲ್ಪಕಲೆಗಳನ್ನು ಹೊಂದಿದೆ. ದೇವಾಲಯದ ಹೊರಭಾಗವು ಶೃಂಗಾರರಸವನ್ನು ಹೊಂದಿರುವ ಕಲಾತ್ಮಕ ಶಿಲ್ಪಗಳನ್ನು ಇಲ್ಲಿ ಕಾಣಬಹುದಾಗಿದೆ. ಈ ದೇವಾಲಯವನ್ನು ಮುಖ್ಯವಾಗಿ ಚಾಲುಕ್ಯರು ನಿರ್ಮಾಣ ಮಾಡಿದರು.

ಇಂಥಹ ದೇವಾಲಯದ ಶೃಂಗಾರರಸ ಬಗ್ಗೆ ಲೇಖನದಲ್ಲಿ ಮಾಹಿತಿಯನ್ನು ಪಡೆಯೋಣ.

ತ್ರಿಪುರಾಂತಕೇಶ್ವರ ದೇವಾಲಯ

ತ್ರಿಪುರಾಂತಕೇಶ್ವರ ದೇವಾಲಯ

ತ್ರಿಪುರಾಂತಕೇಶ್ವರ ದೇವಾಲಯದ ಪ್ರವೇಶದ ದ್ವಾರದ ಹೊರಭಾಗದಲ್ಲಿ ರತಿ ಸಮಾಗಮವನ್ನು ಬಿಂಬಿಸುವ ಶೃಂಗಾರ ರಸಗಳಿದ್ದು, ಇವುಗಳನ್ನು ಸೂಕ್ಷ್ಮವಾಗಿ ಕೆತ್ತಲಾಗಿದೆ. ಹಾಗಾಗಿ ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ಶಿಲ್ಪಕಲೆಗಳನ್ನು ಕಾಣಬಹುದಾಗಿದೆ.

PC:Dineshkannambadi

ಕಾಮಶಿಲ್ಪಕಲೆಗಳು

ಕಾಮಶಿಲ್ಪಕಲೆಗಳು

ಮಿಥುನಕಲೆ ಅಥವಾ ಕಾಮಕಲೆಯನ್ನು ಪ್ರಚಾರಪಡಿಸುವ ಈ ಕಲಾತ್ಮಕ ರಚನೆಗಳು ಸೂಕ್ಷ್ಮವಾಗಿ ಕೆತ್ತನೆ ಮಾಡಿದ್ದರು ಕೂಡ ಅಷ್ಟೆ ಚಿಕ್ಕದಾಗಿ ಸುಂದರವಾಗಿದೆ.

PC:Dineshkannambadi


80 ಕ್ಕೂ ಹೆಚ್ಚು ಶಾಸನಗಳು

80 ಕ್ಕೂ ಹೆಚ್ಚು ಶಾಸನಗಳು

ಮಧ್ಯಯುಗಕ್ಕೆ ಸಂಬಧಿಸಿದಂತೆ ಈ ದೇವಾಲಯದಲ್ಲಿ 80 ಕ್ಕೂ ಹೆಚ್ಚು ಶಾಸನಗಳನ್ನು ಬಳ್ಳಿಗಾವಿಯಲ್ಲಿ ಕಾಣಬಹುದಾಗಿದೆ. ಈ ಪಟ್ಟಣಕ್ಕೆ ಪೂರ್ವ ಕಾಲದಲ್ಲಿ ಇದ್ದ ಮಹತ್ವವನ್ನು ತಿಳಿಸುತ್ತದೆ ಆ ಶಾಸನಗಳು.

PC:Dineshkannambadi


ಸಂಕೀರ್ಣವಾದ ವಿನ್ಯಾಸ

ಸಂಕೀರ್ಣವಾದ ವಿನ್ಯಾಸ

ತ್ರಿಪುರಾಂತಕೇಶ್ವರ ದೇವಾಲಯದಲ್ಲಿ ಮತ್ತೊಂದು ವಿಶೇಷವಾಗಿ ಗಮನಿಸಬೇಕಾದ ಸಂಗತಿ ಎಂದರೆ ಅದ್ಭುತವಾದ ಕೆತ್ತನೆಯಿಂದ ಕಂಗೊಳಿಸುತ್ತಿರುವ ಕಿಟಕಿಗಳು ಮತ್ತು ಸಂಕೀರ್ಣವಾದ ವಿನ್ಯಾಸ.

PC:Dineshkannambadi

ಸುಂದರವಾದ ಕೆತ್ತನೆ

ಸುಂದರವಾದ ಕೆತ್ತನೆ

ತ್ರಿಪುರಾಂತಕ ದೇವಾಲಯದ ಅವರಣದಲ್ಲಿರುವ ಸುಂದರವಾದ ಕೆತ್ತನೆಗಳು ಇವು. ಇಲ್ಲಿನ ಸಿಂಹದ ಆಕೃತಿ, ಅದರ ಮೇಲೆ ರಾಜನ ಸಾಹಸ, ಆನೆ ಎಷ್ಟೊ ಮನೋಹರವಾಗಿದೆ. ಈ ದೃಶ್ಯ ಅಲ್ಲವೇ?

PC:Dineshkannambadi

ಚಾಲುಕ್ಯ ವಾಸ್ತುಶಿಲ್ಪ

ಚಾಲುಕ್ಯ ವಾಸ್ತುಶಿಲ್ಪ

ಈ ತ್ರಿಪುರಾಂತಕೇಶ್ವರ ದೇವಾಲಯವನ್ನು ಚಾಲುಕ್ಯರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣ ಮಾಡಿದ್ದಾರೆ. ದೇವಾಲಯದ ಪ್ರತಿಯೊಂದು ಸ್ತಂಭವು ಚಾಲುಕ್ಯರ ಕೆತ್ತನೆಯ ಶೈಲಿಯನ್ನು ಮತ್ತಷ್ಟು ಮೆರಗು ನೀಡುತ್ತದೆ.


PC:Dineshkannambadi

ಗಂಡ ಬೇರುಂಡ

ಗಂಡ ಬೇರುಂಡ

ಅತ್ಯಂತ ವಿರಳ ಶಿಲ್ಪ ಎನ್ನಬಹುದಾದ, ಅದ್ಭುತವಾದ ಶಕ್ತಿ ಸಾಮಾಥ್ರ್ಯವನ್ನು ಪ್ರತಿನಿಧಿಸುವ ಗಂಡಬೇರುಂಡ ಸ್ತಂಭವನ್ನು ಈ ತ್ರಿಪುರಾಂತಕೇಶ್ವರ ದೇವಾಲಯದ ಅವರಣದಲ್ಲಿ ಕಾಣಬಹುದಾಗಿದೆ. ಈ ಶಿಲ್ಪವು ಮಾನವನ ದೇಹ, 2 ಪಕ್ಷಿಯ ಮುಖಗಳು, ಆನೆಯನ್ನೇ ತಿಂದುಹಾಕುವ ಶಕ್ತಿ ಶಾಲಿ ಬೇರುಂಡನ ಶಿಲ್ಪವನ್ನು ಇಲ್ಲಿ ಅತ್ಯಂತ ಸುಂದರವಾಗಿದೆ.

PC:Dineshkannambadi

ಕೇದಾರೇಶ್ವರ ದೇವಾಲಯ

ಕೇದಾರೇಶ್ವರ ದೇವಾಲಯ

ತ್ರಿಕೂಟಕ ದೇವಾಲಯ ಎಂದರೆ ಮೂರು ಗೋಪುರಗಳುಳ್ಳ ದೇವಾಲಯಕ್ಕೆ ಇದೊಂದು ನಿದರ್ಶನವಾಗಿದೆ. ಈ ದೇವಾಲಯದ ವಾಸ್ತು ಶಿಲ್ಪ ಕೂಡ ನೋಡಲು ಆಕರ್ಷಕವಾಗಿದ್ದು, ಕಲಾಪ್ರಿಯರನ್ನು ಆಕರ್ಷಿಸುತ್ತದೆ.

PC:Dineshkannambadi

ಕೇದಾರೇಶ್ವರ ದೇವಾಲಯ

ಕೇದಾರೇಶ್ವರ ದೇವಾಲಯ

ಈ ಕೇದಾರೇಶ್ವರ ದೇವಾಲಯಕ್ಕೆ ಒಂದು ಸ್ವಾರಸ್ಯಕರವಾದ ದಂತಕಥೆ ಇದೆ. ಅದೆನೆಂದರೆ ಬಳ್ಳಿಗಾವಿತು ಹಿಂದೆ ಒಬ್ಬ ಅಸುರನ ರಾಜಧಾನಿಯಾಗಿತ್ತು. ಈ ಸ್ಥಳವನ್ನು ಈತನ ಕಾಲದಲ್ಲಿ ಬಲಿಪುರ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಮಹಾಭಾರತದ ಕಾಲದಲ್ಲಿ ಪಾಂಡವರು ವನವಾಸದಲ್ಲಿದ್ದಾಗ ಈ ಸ್ಥಳಕ್ಕೆ ಭೇಟಿ ನೀಡಿದ್ದರಂತೆ.

PC:Dineshkannambadi

ಕೇದಾರೇಶ್ವರ ದೇವಾಲಯ

ಕೇದಾರೇಶ್ವರ ದೇವಾಲಯ

ಪಾಂಡವರು ಈ ಸ್ಥಳದಲ್ಲಿ ಕೆಲವು ಕಾಲ ನೆಲೆಸಿ ಶಿವನ ಆರಾಧನೆಗಾಗಿ ಪಂಚಲಿಂಗೇಶ್ವರನನ್ನು ಪ್ರತಿಷ್ಟಾಪನೆ ಮಾಡಿದರಂತೆ. ಕ್ರಿ.ಶ 685 ರ ಸಮಯದಲ್ಲಿ ಬಾದಾಮಿ ಚಾಲುಕ್ಯರ ಶಾಸನಗಳಲ್ಲಿ ಬಳ್ಳಿಗಾವಿಯ ಕುರಿತು ಉಲ್ಲೇಖಿಸಲಾಗಿರುವುದನ್ನು ಇಲ್ಲಿ ಕಾಣಬಹುದು.

PC:Technophilo

ಕೇದಾರೇಶ್ವರ ದೇವಾಲಯ

ಕೇದಾರೇಶ್ವರ ದೇವಾಲಯ

ಆದರೆ ಇತಿಹಾಸ ತಜ್ಞರ ಪ್ರಕಾರ, ಇದು ಶಾತವಾಹನ-ಕದಂಬರ ಕಾಲದಲ್ಲೂ ಇದ್ದಿತೆಂಬ ಅಭಿಪ್ರಾಯವಿದೆ. ಕಾರಣ ಇವರ ಆಡಳಿತ ಸಂದರ್ಭದಲ್ಲಿ ವಿಶೇಷವಾಗಿ ನಿರ್ಮಿಸಲ್ಪಡುತ್ತಿದ್ದ ಚರ್ತುಮುಖ ಲಿಂಗಗಳು ಇಲ್ಲಿಯೂ ಸಹ ದೊರೆತಿರುವುದು.

PC:Pawaskar Vinayak


ಕೇದಾರೇಶ್ವರ ದೇವಾಲಯ

ಕೇದಾರೇಶ್ವರ ದೇವಾಲಯ

ಕೇದಾರೇಶ್ವರ ದೇವಾಲಯದ ಶಿಖರವು ಅತ್ಯಂತ ಆಕರ್ಷಣೆಯುತವಾಗಿ ಕೂಡಿದೆ. ಇದರ ವಿನ್ಯಾಸ ಅತ್ಯಂತ ಸೂಕ್ಷ್ಮವಾದ ಕೆತ್ತನೆಗಳಿಂದ ಕಂಗೊಳಿಸುತ್ತಿದೆ.

PC:Pawaskar Vinayak

ಕೇದಾರೇಶ್ವರ ದೇವಾಲಯ

ಕೇದಾರೇಶ್ವರ ದೇವಾಲಯ

ಹೊಯ್ಸಳರ ಕಾಲದಲ್ಲಿಯೂ ಕೂಡ ಈ ದೇವಾಲಯಗಳು ಸಾಕಷ್ಟು ನವೀಕರಣಗೊಂಡಿತ್ತೆನ್ನಲಾಗಿದೆ.

PC:Dineshkannambadi


ಕೇದಾರೇಶ್ವರ ದೇವಾಲಯ

ಕೇದಾರೇಶ್ವರ ದೇವಾಲಯ

ಇದು ಕೇದಾರೇಶ್ವರ ದೇವಾಲಯದ ಒಳ ಛಾವಣಿಯ ಒಳಭಾಗದಲ್ಲಿರುವ ಸೂಕ್ಷ್ಮವಾದ ಕೆತ್ತನೆಗಳ ವಿಸ್ತಾರವನ್ನು ಒಮ್ಮೆ ಕಣ್ಣು ತುಂಬಿಕೊಳ್ಳಿ.

PC:Dineshkannambadi


ಕೇದಾರೇಶ್ವರ ದೇವಾಲಯ

ಕೇದಾರೇಶ್ವರ ದೇವಾಲಯ

ಇದು ಕೇದಾರೇಶ್ವರ ದೇವಾಲಯದಲ್ಲಿರುವ ವೀರಗಲ್ಲು.

PC:Dineshkannambadi

ಕೇದಾರೇಶ್ವರ ದೇವಾಲಯ

ಕೇದಾರೇಶ್ವರ ದೇವಾಲಯ

ಕೇದಾರೇಶ್ವರ ದೇವಾಲಯದ ಇತಿಹಾಸಕ್ಕೆ ಸಂಬಂಧಿಸಿದಂತೆ ಇಲ್ಲಿ ವಸ್ತು ಸಂಗ್ರಹಾಲವು ಕೂಡ ಇದೆ. ಇಲ್ಲಿ ಪ್ರವಾಸಿಗರು ಭೇಟಿ ನೀಡಬಹುದಾಗಿದೆ.

PC:Pawaskar Vinayak

ಕೇದಾರೇಶ್ವರ ದೇವಾಲಯ

ಕೇದಾರೇಶ್ವರ ದೇವಾಲಯ

ಈ 2 ವಿಶೇಷವಾದ ದೇವಾಲಯಗಳನ್ನು ಹೊಂದಿರುವ ಬಳ್ಳಿಗಾವಿಯು ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿದೆ. ನಗರದಿಂದ 72 ಕಿ,ಮೀ ಗಳಷ್ಟು ದೂರವಿದ್ದರೆ, ತಾಲ್ಲೂಕು ಕೇಂದ್ರ ಶಿಕಾರಿಪುರದಿಂದ ಕೇವಲ 21 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಸುಲಭವಾಗಿ ಬಸ್ಸುಗಳು ಅಥವಾ ಟ್ಯಾಕ್ಸಿಯ ಮೂಲಕ ತೆರಳಬಹುದಾಗಿದೆ.

PC:Dineshkannambadi

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ