» »ಇದು ಟಿಪ್ಪುವಿನ ಶೌರ್ಯದ ಕೋಟೆ

ಇದು ಟಿಪ್ಪುವಿನ ಶೌರ್ಯದ ಕೋಟೆ

By: Divya

ಸುಂದರ ಇತಿಹಾಸ, ಪರಂಪರೆ, ಸಂಸ್ಕೃತಿಗೆ ನೆಲೆನೀಡಿದ ತಾಣ ಕೇರಳ. ಇಲ್ಲಿಯ ಪ್ರತಿಯೊಂದು ಪ್ರದೇಶವು ಅದ್ಭುತ ಕಲೆ ಸಂಪ್ರದಾಯವನ್ನು ಒಳಗೊಂಡದೆ. ಈ ನಾಡಿನ ಐತಿಹಾಸಿಕ ಸ್ಮಾರಕಗಳು ಹಾಗೂ ವೈಭವದಿಂದ ಕೂಡಿರುವ ದೇವಾಲಯಗಳು ನಮ್ಮನ್ನು ಪುರಾತನ ಕಾಲಕ್ಕೆ ಕರೆದೊಯ್ಯುತ್ತವೆ. ಅಪರೂಪದ ಹಿನ್ನೆಲೆ ಹೊಂದಿರುವ ಕೋಟೆಯೊಂದು ಕೇರಳದ ಹಿರಿಮೆಯನ್ನು ಹೆಚ್ಚಿಸುತ್ತದೆ. ಅದೇ ಪಾಲಕ್ಕಾಡ್ ಕೋಟೆ.

Kerala Tour

PC: wikipedia.org

ಇದನ್ನು ಟಿಪ್ಪುವಿನ ಕೋಟೆ ಎಂತಲೂ ಕರೆಯುತ್ತಾರೆ. ಪ್ರಸಿದ್ಧ ಪಾರಂಪರಿಕ ಕಟ್ಟಡವಾದ ಇದನ್ನು 1766ರಲ್ಲಿ ಮೈಸೂರಿನ ಹೈದರಾಲಿಯು ನಿರ್ಮಿಸಿದ್ದ ಎನ್ನಲಾಗುತ್ತದೆ. ಭಾರತದ ಪುರಾತತ್ವ ಇಲಾಖೆ ಕೋಟೆಯನ್ನು ಉತ್ತಮ ರೀತಿಯಲ್ಲಿ ಇರುವಂತೆ ಕಾಳಜಿ ವಹಿಸಿದೆ. ಟಿಪ್ಪುವಿನ ಧೈರ್ಯ ಹಾಗೂ ಶೌರ್ಯಕ್ಕೆ ಈ ಕೋಟೆಯು ಪ್ರತೀಕವಾಗಿತ್ತು. ಬ್ರಿಟಿಷರೊಡನೆ ಹೋರಾಡುವಾಗ ಟಿಪ್ಪು ಮರಣ ಹೊಂದಿದನು. ಅದಾದ ನಂತರವೂ ಟಿಪ್ಪುವಿನ ಸೇನಾ ಮುಖ್ಯಸ್ಥರು ಇಲ್ಲಿದ್ದರು ಎನ್ನಲಾಗುತ್ತದೆ. ವಸಾಹತು ಕಾಲದಲ್ಲಿ ಅನೇಕ ದಾಳಿಕೋರರು ಕೋಟೆಯನ್ನು ವಶಪಡಿಸಿಕೊಂಡರು ಎನ್ನುವ ಇತಿಹಾಸವಿದೆ.

ಪಾಲಕ್ಕಾಡ್ ಕೋಟೆಯ ವಿನ್ಯಾಸ
ಈ ಕೋಟೆಯು ಚೌಕಾಕೃತಿಯನ್ನು ಹೊಂದಿದೆ. ಈ ಕೋಟೆಯ ನಾಲ್ಕು ಕಡೆಯಿಂದಲೂ ಬಹಳ ಎತ್ತರವಾದ ಗೋಡೆಯನ್ನು ನಿರ್ಮಿಸಲಾಗಿದೆ. ಕೋಟೆಯ ಪ್ರವೇಶಕ್ಕೆ ಒಂದು ಸೇತುವೆಯಿದೆ. ಇದು ಆಕಾಲದ ತಾತ್ಕಾಲಿಕ ಸಂದರ್ಭದಲ್ಲಿ ಹೋಗಲು ಬಳಸುತ್ತಿದ್ದ ಸೇತುವೆಯಾಗಿತ್ತು ಎನ್ನಲಾಗುತ್ತದೆ.

Kerala Tour

pc: wikipedia.org

ಕೋಟೆಯ ಆಕರ್ಷಣೆಗಳು
ಭಾರತದ ಅರಸರು, ನಾಯಕರು ಹಾಗೂ ಬ್ರಿಟಿಷರ ನಡುವೆ ನಡೆದ ಕದನಗಳಿಗೆ ಸಾಕ್ಷಿಯಾಗಿ ಈ ಕೋಟೆ ನಿಲ್ಲುತ್ತದೆ. ಕೋಟೆಯ ಮಧ್ಯೆ ಇರುವ ವಿಶಾಲವಾದ ಮೈದಾನದಲ್ಲಿ ಟಿಪ್ಪುವಿನ ಸೈನಿಕರು ಕುರಿ ಮತ್ತು ಜಾನುವಾರಗಳನ್ನು ಬಿಡುತ್ತಿದ್ದರು ಎನ್ನಲಾಗುತ್ತದೆ. ಇಂದು ಈ ಸ್ಥಳ ಸಾರ್ವಜನಿಕರ ಆಟದ ಮೈದಾನ, ಸಾಮಾಜಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿದೆ.

ಕೋಟೆಯ ಸಮೀಪದಲ್ಲೇ ಒಂದು ಆಂಜನೇಯ ಗುಡಿಯಿದೆ. ರಪ್ಪಡಿ ಎನ್ನುವ ಬಯಲು ಸಭಾಂಗಣ ಹಾಗೂ ಬಂಧಿಕೋಣೆ ಇರುವುದನ್ನು ಕಾಣಬಹುದು. ಇದರೊಟ್ಟಿಗೆ ಕೋಟೆಯ ಒಂದು ಭಾಗದಲ್ಲಿ ಮಕ್ಕಳಿಗಾಗಿ ವಿಶೇಷವಾದ ಉದ್ಯಾನವಿದೆ. ಕೋಟೆಯ ವಾಸ್ತುಶಿಲ್ಪ ಹಾಗೂ ಇತಿಹಾಸ ಪ್ರಿಯರಿಗೆ ಒಂದು ಸುಂದರ ತಾಣ. ಕುಟುಂಬದವರೊಡನೆ ಒಂದು ದಿನ ಪ್ರವಾಸಕ್ಕೆ ಇಲ್ಲಿಗೆ ಬರಬಹುದು.

Kerala Tour

PC: wikipedia.org

ಮಾರ್ಗದ ವಿವರ
ಪಾಲಕ್ಕಾಡ್ ರೈಲ್ವೆ ನಿಲ್ದಾಣಕ್ಕೆ ಕೋಟೆಯು ಬಹಳ ಸಮೀಪದಲ್ಲಿಯೇ ಇದೆ. ಒಮ್ಮೆ ಪಾಲಕ್ಕಾಡಿಗೆ ಬಂದ ಮೇಲೆ ಆಟೋ ಅಥವಾ ಟ್ಯಾಕ್ಸಿಯ ಮೂಲಕ ಇಲ್ಲಿಗೆ ಬರಬಹುದು. ಬೆಂಗಳೂರಿನಿಂದ 410.3 ಕಿ.ಮೀ. ಇರುವ ಈ ತಾಣಕ್ಕೆ 6-7 ತಾಸುಗಳ ಪ್ರಯಾಣ ಬೆಳೆಸಬೇಕು.

ಹತ್ತಿರದ ಆಕರ್ಷಣೆ
ಇಲ್ಲಿಗೆ ಹತ್ತಿರ ಇರುವ ಪ್ರವಾಸ ತಾಣಗಳೆಂದರೆ ಕಲ್ಪದೈ ದೇವಾಲಯ, ಪರಾಂಬಿಕುಲಂ ವನ್ಯಜೀವಿಗಳ ಅಭಯಾರಣ್ಯ, ಜೈನ ಬಸದಿ, ಧೋನಿ ಜಲಪಾತ, ಕಂಜಿರಪುಳ.

Read more about: kerala
Please Wait while comments are loading...