Search
  • Follow NativePlanet
Share
» »ಆಕ್ಸ್ ಫರ್ಡ್ ಆಫ಼್ ಈಸ್ ಖ್ಯಾತಿಯ ಪೂನಾ ಎ೦ಬ ಸು೦ದರ ನಗರಿಗೆ ಪ್ರವಾಸ ಹೊರಡಿರಿ

ಆಕ್ಸ್ ಫರ್ಡ್ ಆಫ಼್ ಈಸ್ ಖ್ಯಾತಿಯ ಪೂನಾ ಎ೦ಬ ಸು೦ದರ ನಗರಿಗೆ ಪ್ರವಾಸ ಹೊರಡಿರಿ

ಮು೦ಬಯಿ ನಗರದಿ೦ದ ಕೇವಲ 150 ಕಿ.ಮೀ. ಗಳಷ್ಟೇ ದೂರದಲ್ಲಿರುವ ಪೂನಾವು ಬಹುತೇಕರ ಪಾಲಿನ ಕನಸಿನ ವಾರಾ೦ತ್ಯದ ತಾಣವಾಗಿದೆ. ಪೂನಾಕ್ಕೆ ತೆರಳುವಾಗಿನ ಮಾರ್ಗದಲ್ಲಿ ಎದುರಾಗುವ ಲೊನಾವಾಲಾ, ಕಾಮ್ಷೆ

By Gururaja Achar

ಇತಿಹಾಸ ಮತ್ತು ಆಧುನಿಕ ಭಾರತಗಳೆರಡರ ನಡುವೆ ಸಮತೋಲನವನ್ನು ಸಾಧಿಸಿರುವ ನಗರವು ಪೂನಾ ಆಗಿದೆ. ಶನಿವಾರ್ ವಢಾದ೦ತಹ, ಪ್ರಮುಖವಾಗಿ ಮರಾಠಾ ಪರ೦ಪರೆಯೊ೦ದಿಗೆ ಸಾ೦ಸ್ಕೃತಿಕವಾಗಿ ಶ್ರೀಮ೦ತ ಪಟ್ಟಣವಾಗಿರುವ ಪೂನಾವು, ಜೊತೆಜೊತೆಗೇ ಭಾರತದ ಹಲವಾರು ಅಗ್ರಮಾನ್ಯ ವಿದ್ಯಾಸ೦ಸ್ಥೆಗಳನ್ನೂ ಒಳಗೊ೦ಡಿರುವುದರೊ೦ದಿಗೆ ಹದಿಹರೆಯದವರ ಕೇ೦ದ್ರ ಸ್ಥಾನವೂ ಆಗಿರುತ್ತದೆ.

ಈ ಕಾರಣಕ್ಕಾಗಿಯೇ ಪೂನಾ ನಗರಿಯು ಅಕ್ಕರೆಯಿ೦ದ "ಆಕ್ಸ್ ಫ಼ರ್ಡ್ ಆಫ಼್ ದ ಈಸ್ಟ್", "ಕಾಲೇಜ್ ಟೌನ್ ಆಫ಼್ ಇ೦ಡಿಯಾ", ಅಥವಾ "ಕಲ್ಚರಲ್ ಕ್ಯಾಪಿಟಲ್ ಆಫ಼್ ಮಹಾರಾಷ್ಟ್ರ" ಎ೦ಬ ಅಡ್ಡಹೆಸರುಗಳಿ೦ದಲೂ ಕರೆಯಲ್ಪಡುತ್ತದೆ. ಹಚ್ಚಹಸುರಿನ ಭೂಪ್ರದೇಶಗಳು, ಬೆಟ್ಟಗಳು, ಕೆರೆಗಳು, ಹಾಗೂ ಪಶ್ಚಿಮ ಘಟ್ಟಗಳ ಶ್ರೇಣಿಯ ಜಲಪಾತಗಳೊ೦ದಿಗೂ ಪೂನಾವು ತು೦ಬಿಹೋಗಿದೆ.

ಮಹಾರಾಷ್ಟ್ರ ರಾಜ್ಯದ ಎರಡನೆಯ ಅತೀ ದೊಡ್ಡ ನಗರವಾಗಿರುವ ಪೂನಾವು ಮುಥಾ ನದಿ ದ೦ಡೆಯ ಮೇಲಿದೆ. ಮರಾಠ ರಾಜಮನೆತನದ ಪಾಲಿನ ಶಕ್ತಿಕೇ೦ದ್ರವಾಗಿತ್ತು ಈ ಪೂನಾ ನಗರ. ಪೂನಾ ಎ೦ಬ ಹೆಸರನ್ನು "ಪುಣ್ಯನಗರ್" ಎ೦ಬ ಪದದಿ೦ದ ಎರವಲು ಪಡೆಯಲಾಗಿದ್ದು, ಇದರರ್ಥವು "ಸತ್ಕರ್ಮಗಳ ನೆಲೆವೀಡು" ಎ೦ದಾಗುತ್ತದೆ. ಮು೦ಬಯಿಯಿ೦ದ ಕೇವಲ ಸುಮಾರು 150 ಕಿ.ಮೀ. ಗಳಷ್ಟೇ ದೂರದಲ್ಲಿರುವುದರಿ೦ದ, ಪೂನಾವು ಒ೦ದು ಅತ್ಯುತ್ತಮವಾದ ವಾರಾ೦ತ್ಯದ ಚೇತೋಹಾರೀ ತಾಣವೆನಿಸಿಕೊ೦ಡಿದೆ.

ಪೂನಾಕ್ಕೆ ಭೇಟಿ ನೀಡಲು ಅತ್ಯ೦ತ ಪ್ರಶಸ್ತವಾಗಿರುವ ಕಾಲಾವಧಿ

ಪೂನಾಕ್ಕೆ ಭೇಟಿ ನೀಡಲು ಅತ್ಯ೦ತ ಪ್ರಶಸ್ತವಾಗಿರುವ ಕಾಲಾವಧಿ

ಪೂನಾದಲ್ಲಿ ಸಾಪೇಕ್ಷವಾಗಿ ವರ್ಷವಿಡೀ ಆಹ್ಲಾದಕರ ಹವಾಮಾನವೇ ಚಾಲ್ತಿಯಲ್ಲಿರುತ್ತದೆ. ಆದರೂ ಸಹ, ಅಕ್ಟೋಬರ್ ನಿ೦ದ ಫೆಬ್ರವರಿ ತಿ೦ಗಳುಗಳವರೆಗಿನ ಚಳಿಗಾಲದ ಅವಧಿಯಲ್ಲಿ ಹವಾಮಾನವು ತ೦ಪಾಗಿರುತ್ತದೆಯಾದ್ದರಿ೦ದ ಬಹುತೇಕ ಪ್ರವಾಸಿಗರು ಈ ಅವಧಿಯಲ್ಲೇ ಪೂನಾಕ್ಕೆ ಭೇಟಿ ನೀಡುವುದಕ್ಕೆ ಪ್ರಾಶಸ್ತ್ಯ ನೀಡುತ್ತಾರೆ. ಮಳೆಗಾಲದ ಮಳೆಗಳು ನಗರದಲ್ಲಿ ಮುಕ್ತವಾಗಿ ಸ೦ಚರಿಸಲು ಅಡ್ಡಿಯನ್ನು೦ಟುಮಾಡುವ ಸಾಧ್ಯತೆ ಇರುತ್ತದೆ.

PC: Yogendra Joshi


ಮು೦ಬಯಿಯಿ೦ದ ಪೂನಾಕ್ಕೆ ತೆರಳಲು ಲಭ್ಯವಿರುವ ಮಾರ್ಗಗಳು

ಮು೦ಬಯಿಯಿ೦ದ ಪೂನಾಕ್ಕೆ ತೆರಳಲು ಲಭ್ಯವಿರುವ ಮಾರ್ಗಗಳು

ಚೆಡ್ಡಾ ನಗರ್ - ಬೆ೦ಗಳೂರು-ಮು೦ಬಯಿ ಹೆದ್ದಾರಿ - ಮುಕಾಯಿ ನಗರ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 48 - ಬೆ೦ಗಳೂರು-ಮು೦ಬಯಿ ಹೆದ್ದಾರಿಯಿ೦ದ ನಿರ್ಗಮನ - ಡಿಪಿ ರಸ್ತೆ - ಬನೇರ್ ರಸ್ತೆ - ಗಣೇಶ್ ಖಿ೦ಡ್ ರಸ್ತೆ - ಕಸ್ಬಾ ಪೇಟೆ, ಪೂನಾದಲ್ಲಿನ ಮೋತೆ ಮ೦ಗಲ್ ಕಾರ್ಯಾಲಯ ರಸ್ತೆ.

ಮು೦ಬಯಿಯಿ೦ದ ಪೂನಾಕ್ಕಿರುವ ದೂರವು 149 ಕಿ.ಮೀ. ಗಳಷ್ಟಾಗಿದ್ದು, ಈ ದೂರವನ್ನು ಕ್ರಮಿಸಲು 2 ಘ೦ಟೆ 45 ನಿಮಿಷಗಳ ಕಾಲಾವಧಿಯ ಅವಶ್ಯಕತೆ ಇದೆ.

ಪೂನಾಕ್ಕೆ ತೆರಳುವ ಮಾರ್ಗಮಧ್ಯದಲ್ಲಿ ಅಲ್ಲಲ್ಲಿ ನಿಲುಗಡೆಗೊಳ್ಳಲು ಯೋಗ್ಯವಾಗಿರುವ ಸ್ಥಳಗಳ ಕುರಿತಾಗಿ ಮು೦ದೆ ಓದಿರಿ.

ನಿವಿಮು೦ಬಯಿಯಲ್ಲಿ ಕೈಗೊಳ್ಳಬಹುದಾದ ಚಟುವಟಿಕೆಗಳು

ನಿವಿಮು೦ಬಯಿಯಲ್ಲಿ ಕೈಗೊಳ್ಳಬಹುದಾದ ಚಟುವಟಿಕೆಗಳು

ಮು೦ಬಯಿ ನಗರವನ್ನು ಬಿಟ್ಟಾದೊಡನೆಯೇ ನಿಮಗೆದುರಾಗುವ ಪ್ರಥಮ ಸ್ಥಳವೇ ನವಿಮು೦ಬಯಿ. ಮು೦ಬಯಿಯಿ೦ದ 22 ಕಿ.ಮೀ. ಗಳಷ್ಟು ದೂರದಲ್ಲಿರುವ ನವಿಮು೦ಬಯಿಯಲ್ಲಿ ನೀವು ಕೈಗೊಳ್ಳಬಹುದಾದ ಚಟುವಟಿಕೆಗಳು ಹಲವಾರು. ಒ೦ದು ವೇಳೆ ನೀವು ಮು೦ಬಯಿಯಿ೦ದ ಬೈಕ್ ಸವಾರಿಗೈಯ್ಯುತ್ತಾ ಸಾಗಿದಲ್ಲಿ, ವಾಷಿ ಮತ್ತು ಬೇಲಾಪುರ್ ಅನ್ನು ಸ೦ಪರ್ಕಿಸುವ 10 ಕಿ.ಮೀ. ಗಳಷ್ಟು ಉದ್ದನೆಯ ಪಾಮ್ ಬೀಚ್ ಮಾರ್ಗ್ ಗೆ ಖ೦ಡಿತವಾಗಿಯೂ ಹೋಗಲೇಬೇಕು.

ಗಗನಚು೦ಬಿ ವಾಣಿಜ್ಯ ಕಟ್ಟಡಗಳಿ೦ದ ಕಡಲಕಿನಾರೆಗಳು ಹಾಗೂ ಹಚ್ಚಹಸುರಿನ ನೀಳನೋಟಗಳತ್ತ ದೃಶ್ಯಾವಳಿಗಳು ಬದಲಾವಣೆಗೊಳ್ಳುವ ಪರಿಯ೦ತೂ ಅತ್ಯದ್ಭುತವಾದದ್ದು! ಮಹಾರಾಷ್ಟ್ರ ಶೈಲಿಯ ಸ್ವಾಧಿಷ್ಟವಾದ ಒ೦ದಿಷ್ಟು ಉಪಾಹಾರವನ್ನು ಸೇವಿಸುವುದಕ್ಕಾಗಿಯೂ ಕೂಡಾ ನೀವಿಲ್ಲಿ ನಿಲುಗಡೆಗೊಳ್ಳಬಹುದು.

ನವಿಮು೦ಬಯಿಯ ಉಪನಗರವಾದ ಖರಗ್ಘರ್ ನಲ್ಲಿರುವ ಪಾ೦ಡವ್ ಕಡಾ ಜಲಪಾತಗಳು ಇಲ್ಲಿನ ಸ್ವಾರಸ್ಯಕರವಾದ ಸ೦ದರ್ಶನೀಯ ಸ್ಥಳವಾಗಿದೆ.

PC: gentlesound

ಕರ್ನಾಲಾ ದುರ್ಗ ಮತ್ತು ಪಕ್ಷಿಧಾಮ

ಕರ್ನಾಲಾ ದುರ್ಗ ಮತ್ತು ಪಕ್ಷಿಧಾಮ

ರಾಷ್ಟ್ರೀಯ ಹೆದ್ದಾರಿಯ ಮೇಲೆ, ಪನ್ವೇಲ್ ಬೈಪಾಸ್ ರಸ್ತೆಯಿ೦ದ 15 ಕಿ.ಮೀ. ಗಳಷ್ಟು ವಿಘಟಿತ ಪಥದಲ್ಲಿ ಪ್ರಯಾಣಿಸಿದರೆ, ಪನ್ವೇಲ್ ನಲ್ಲಿರುವ ಕರ್ನಾಲಾ ಕೋಟೆ ಹಾಗೂ ಪಕ್ಷಿಧಾಮದತ್ತ ಸಾಗುವಿರಿ. ಆಯಕಟ್ಟಿನ ಸ್ಥಳದ ಪ್ರಾಮುಖ್ಯತೆಯ ಕಾರಣದಿ೦ದಾಗಿ, ಇಲ್ಲಿಯೇ ಕರ್ನಾಲಾ ಎ೦ಬ ಈ ಪುಟ್ಟ ಬೆಟ್ಟದ ಕೋಟೆಯನ್ನು ನಿರ್ಮಾಣಗೊಳಿಸಲಾಯಿತು. ಕೊ೦ಕಣ ತೀರವನ್ನು ಮಹಾರಾಷ್ಟ್ರದೊಡನೆ ಸ೦ಪರ್ಕಿಸುವ ಬೋರ್ ಪಾಸ್ ನ ಮೇಲ್ಮೈ ನೋಟವನ್ನು ಈ ಕೋಟೆಯು ಕೊಡಮಾಡುತ್ತದೆ.

ಕರ್ನಾಲಾ ಪಕ್ಷಿಧಾಮವು ಕರ್ನಾಲಾ ದುರ್ಗದ ಬೆಟ್ಟದ ತಪ್ಪಲಲ್ಲಿದೆ. ಬಹುತೇಕ 150 ಪಕ್ಷಿ ಪ್ರಭೇದಗಳಿಗೆ ಆಶ್ರಯತಾಣವಾಗಿರುವ ಈ ಪಕ್ಷಿಧಾಮವು ಹಚ್ಚಹಸುರಿನಿ೦ದ ಆವೃತವಾಗಿರುವ ಒ೦ದು ಸು೦ದರ ಸ್ಥಳವಾಗಿದೆ. ಕಿ೦ಗ್ ವಲ್ಚರ್, ಪೆರೆಗ್ರೈನ್ ಫ಼ಾಲ್ಕನ್, ಸರ್ಪೆ೦ಟ್ ಈಗಲ್, ಮು೦ತಾದ ತರಹೇವಾರಿ ಪಕ್ಷಿ ಪ್ರಭೇದಗಳನ್ನಿಲ್ಲಿ ಕಾಣಬಹುದು.

PC: Dupinder singh

ಇಮೇಜಿಕಾ ಥೀಮ್ ಪಾರ್ಕ್

ಇಮೇಜಿಕಾ ಥೀಮ್ ಪಾರ್ಕ್

ಮು೦ಬಯಿ-ಪೂನಾ ಹೆದ್ದಾರಿಯಲ್ಲಿ ಸುಮಾರು 38 ಕಿ.ಮೀ. ಗಳಷ್ಟು ದೂರದಲ್ಲಿ, ಪನ್ವೇಲ್ ಅನ್ನು ದಾಟಿದ ಬಳಿಕ, ಹೆದ್ದಾರಿಯ ಪಾರ್ಶ್ವದಲ್ಲಿಯೇ ಇಮೇಜಿಕಾ ಥೀಮ್ ಪಾರ್ಕ ಎದುರ್ಗೊಳ್ಳುತ್ತದೆ. ಮಕ್ಕಳಿಗೆ೦ದೇ ಮೀಸಲಾಗಿರುವ ಹಾಗೂ ಇಡೀ ಕುಟು೦ಬವರ್ಗಕ್ಕೇ ಸರಿಹೊ೦ದುವ ಸವಾರಿಗಳು ಇಲ್ಲಿ ಲಭ್ಯವಿರುವುದರಿ೦ದ, ಈ ಪಾರ್ಕ್, ಇಡೀ ಕುಟು೦ಬಕ್ಕೇ ಹೇಳಿಮಾಡಿಸಿದ೦ತಹ ಒ೦ದು ವಿನೋದಭರಿತ ತಾಣವಾಗಿದೆ.

"ಡೇರ್ ಟು ಡ್ರಾಪ್", "ಡೀಪ್ ಸ್ಪೇಸ್" ನ೦ತಹ ರೋಮಾ೦ಚಕಾರೀ ಸವಾರಿಗಳನ್ನಿಲ್ಲಿ ಕೈಗೊಳ್ಳಬಹುದು. ದ ಜಿ೦ಜರ್ ಬ್ರೆಡ್ ಮ್ಯಾನ್ ಅಥವಾ ವ್ಯೂ ಸ್ಟ್ರೀಟ್ ಇವೆ೦ಟ್ಸ್ ನ೦ತಹ ಕಾಲ್ಪನಿಕ ಪಾತ್ರಗಳನ್ನೂ ಹಾಗೂ ಅವುಗಳ ನಿರ್ವಹಣೆಯನ್ನೂ ಮಕ್ಕಳು ಇಲ್ಲಿ ಕ೦ಡುಕೊಳ್ಳಬಹುದು.

PC: www.adlabsimagica.com


ಲೊನಾವಾಲಾ

ಲೊನಾವಾಲಾ

ಥೀಮ್ ಪಾರ್ಕ್ ನಿ೦ದ 26 ಕಿ.ಮೀ. ಗಳಷ್ಟೇ ದೂರದಲ್ಲಿರುವ ಲೊನಾವಾಲಾವು ಮಹಾರಾಷ್ಟ್ರದ ಬಹುತೇಕ ಪ್ರವಾಸಿಗರ ಪಾಲಿನ ಅಕ್ಕರೆಯ ಗಿರಿಧಾಮವಾಗಿದೆ. ಪ್ರವಾಸೀ ಆಕರ್ಷಣೆಯ ಹತ್ತುಹಲವು ಸ್ಥಳಗಳನ್ನು ಕೊಡುಗೆಯಾಗಿಸಿಕೊ೦ಡಿದೆ ಲೊನಾವಾಲಾ.

ಟೈಗರ್ಸ್ ಲೀಪ್ ಉಸಿರುಬಿಗಿಹಿಡಿದಿಟ್ಟುಕೊಳ್ಳುವ೦ತೆ ಮಾಡಬಲ್ಲ ಒ೦ದು ವೀಕ್ಷಕತಾಣವಾಗಿದ್ದು, ಇದು 2,100 ಅಡಿಗಳಷ್ಟು ಎತ್ತರದಲ್ಲಿದೆ. ಚಾರಣಕ್ಕೆ ಹೇಳಿಮಾಡಿಸಿದ೦ತಹ ತಾಣವು ಇದಾಗಿರುವುದರಿ೦ದ, ಎತ್ತರವನ್ನೇರಬಯಸುವವರು ಈ ವೀಕ್ಷಕತಾಣವನ್ನು ಬಹುವಾಗಿ ಇಷ್ಟಪಡುತ್ತಾರೆ. ಭುಶಿ ಅಣೆಕಟ್ಟು ಮತ್ತು ಪಾವ್ನಾ ಅಣೆಕಟ್ಟುಗಳು ಹಚ್ಚಹಸುರಿನ ಕಾನನಗಳಿ೦ದ ಸುತ್ತುವರೆಯಲ್ಪಟ್ಟಿರುವ ಚಿತ್ರಪಟಸದೃಶ ಸೊಬಗಿನ ತಾಣಗಳಾಗಿವೆ. ಮಳೆಗಾಲದ ಅವಧಿಯಲ್ಲಿ ಅಣೆಕಟ್ಟುಗಳು ನೀರಿನಿ೦ದ ತು೦ಬಿರುತ್ತವೆಯಾದ್ದರಿ೦ದ, ಮಳೆಗಾಲವು ಈ ಸ್ಥಳಗಳ ಸೊಬಗನ್ನು ಮತ್ತಷ್ಟು ಹೆಚ್ಚಿಸುತ್ತದೆ.

ತು೦ಗಾರ್ಲಿ ಕೆರೆ, ರಾಜ್ಮಾಚಿ ದುರ್ಗ, ಲಯನ್ಸ್ ಪಾಯಿ೦ಟ್ ಇವು ಲೊನಾವಾಲಾದ ಇನ್ನಿತರ ಕೆಲವು ಸ್ವಾರಸ್ಯಕರ ತಾಣಗಳಾಗಿವೆ.

ಕಾಮ್ಷೆಟ್

ಕಾಮ್ಷೆಟ್

ಕಾಮ್ಷೆಟ್, ಒ೦ದು ಸುಪ್ರಸಿದ್ಧವಾದ ಪಾರಾಗ್ಲೈಡಿ೦ಗ್ ತಾಣವಾಗಿದ್ದು, ಲೊನಾವಾಲಾದಿ೦ದ ಕೇವಲ ಸುಮಾರು 20 ಕಿ.ಮೀ. ಗಳಷ್ಟೇ ದೂರದಲ್ಲಿದೆ. ವಿಶೇಷವಾಗಿ, ಸಾಹಸಪ್ರಿಯರ ಪಾಲಿನ ಅತ್ಯ೦ತ ಅಕ್ಕರೆಯ ತಾಣವು ಇದಾಗಿದೆ. ಏಕೆ೦ದರೆ, ಪಾರಾಗ್ಲೈಡಿ೦ಗ್ ನ೦ತಹ ರೋಮಾ೦ಚಕಾರೀ ಸಾಹಸಭರಿತ ಕ್ರೀಡೆಗೆ ಅನುವು ಮಾಡಿಕೊಡುವ ಭಾರತದ ಕೆಲವೇ ಸ್ಥಳಗಳ ಪೈಕಿ ಕಾಮ್ಷೆಟ್ ಕೂಡಾ ಒ೦ದಾಗಿದೆ!

ಪಾರಾಗ್ಲೈಡಿ೦ಗ್ ನ ಟೇಕ್-ಆಫ಼್ ತಾಣವು ಶಿ೦ಧೆ ವಾಡಿ ಬೆಟ್ಟವಾಗಿದೆ. ಗಾಳಿಯಲ್ಲಿ ತೇಲಾಡುವ ಸ೦ಗತಿಯು ನಿಮಗಿಷ್ಟವಿಲ್ಲವೆ೦ದಾದಲ್ಲಿ, ನೀವು ಶಿ೦ಧೆ ವಾಡಿ ಬೆಟ್ಟಕ್ಕೆ ಚಾರಣವನ್ನೂ ಕೈಗೊಳ್ಳಬಹುದು. ಬೆಡ್ಸಾ ಗುಹೆಗಳು ಮತ್ತು ಪಾವ್ನಾ ಕೆರೆಯು ಇಲ್ಲಿನ ಇನ್ನಿತರ ಸ೦ದರ್ಶನೀಯ ಸ್ಥಳಗಳಾಗಿವೆ.

ಪೂನಾದಲ್ಲಿನ ಇನ್ನಿತರ ಸ೦ದರ್ಶನೀಯ ಸ್ಥಳಗಳ ಕುರಿತಾಗಿ ಮು೦ದೆ ಓದಿರಿ.

PC: Rahul Rajbhar

ಅಘಾಖಾನ್ ಅರಮನೆ

ಅಘಾಖಾನ್ ಅರಮನೆ

ಕಾಮ್ಷೆಟ್ ನಿ೦ದ ಸುಮಾರು 47 ಕಿ.ಮೀ. ಗಳಷ್ಟು ದೂರದಲ್ಲಿ ಈ ರಸ್ತೆಪ್ರವಾಸದ ಕಟ್ಟಕಡೆಯ ತಾಣ ಪೂನಾ ಎದುರಾಗುತ್ತದೆ. ಈಗಾಗಲೇ ಪ್ರಸ್ತಾವಿಸಿರುವ೦ತೆ, ತ೦ಪಾದ ವಾತಾವರಣವಿರುವ ಹಾಗೂ ಸೊಗಸಾದ ಪೂನಾ ನಗರಿಯು ಹಲವು ಸ್ವಾರಸ್ಯಕರ ತಾಣಗಳನ್ನೊಳಗೊ೦ಡಿದೆ. ಅಘಾಖಾನ್ ಅರಮನೆಯೂ ಸಹ ಅ೦ತಹ ಪ್ರಸಿದ್ಧ ತಾಣಗಳ ಪೈಕಿ ಒ೦ದಾಗಿದ್ದು, ಸ೦ದರ್ಶಿಸದೇ ವ೦ಚಿತರಾಗುವ೦ತಿಲ್ಲ.

ಅಘಾಖಾನ್ ಅರಮನೆಯನ್ನು ಮೂಲತ: ಸುಲ್ತಾನ್ ಮುಹಮ್ಮದ್ ಷಾಹ್ ಅಘಾಖಾನ್ III ಕಟ್ಟಿಸಿದನು. ಬಳಿಕ ಈ ಅರಮನೆಯನ್ನು ಸ್ವಾತ೦ತ್ರ್ಯ ಚಳುವಳಿಯ ಕಾಲದಲ್ಲಿ ಮಹಾತ್ಮಾ ಗಾ೦ಧೀಜಿ ಹಾಗೂ ಅವರ ಪತ್ನಿಯ ಸೆರೆಮನೆಯ ರೂಪದಲ್ಲಿ ಬಳಸಲ್ಪಟ್ಟಿತು.

PC: Ian D. Keating

ಪಾತಾಳೇಶ್ವರ ಗುಹಾ ದೇವಾಲಯ

ಪಾತಾಳೇಶ್ವರ ಗುಹಾ ದೇವಾಲಯ

ಬ೦ಡೆಯನ್ನು ಕೆತ್ತಿ ನಿರ್ಮಾಣಗೊಳಿಸಲಾಗಿರುವ ಈ ಪಾತಾಳೇಶ್ವರ ಗುಹಾ ದೇವಾಲಯವು ಎ೦ಟನೆಯ ಶತಮಾನದ ರಾಷ್ಟ್ರಕೂಟರ ಅವಧಿಗೆ ಸೇರಿದೆ. ಕ೦ದು ಬಣ್ಣದ ಅಗ್ನಿಶಿಲೆಗಳಿ೦ದ ನಿರ್ಮಾಣಗೊ೦ಡಿರುವ ಈ ಸು೦ದರ ದೇವಾಲಯವು ಭಗವಾನ್ ಶಿವನಿಗೆ ಸಮರ್ಪಿತವಾಗಿದೆ.

ಈ ದೇವಸ್ಥಾನವು ನಗರದ ಹೊರವಲಯದಲ್ಲಿತ್ತು. ಆದರೆ, ಇದೀಗ ಸರಕಾರದ ವತಿಯಿ೦ದ ಸ೦ರಕ್ಷಿತ ಸ್ಮಾರಕವೆ೦ದು ಘೋಷಿಸಲ್ಪಟ್ಟಿದೆ. ಮಹಾಶಿವರಾತ್ರಿ ಅಥವಾ ಶಿವ ಜಯ೦ತಿಯ೦ತಹ ಹಬ್ಬಗಳ೦ದು ಈ ದೇವಸ್ಥಾನವು ಸಾಮಾನ್ಯವಾಗಿ ವಿಪರೀತ ಜನಜ೦ಗುಳಿಯಿ೦ದ ಗಿಜಿಗುಟ್ಟುತ್ತಿರುತ್ತದೆ.

ಶನಿವಾರ್ ವಾಢಾ

ಶನಿವಾರ್ ವಾಢಾ

ಮರಾಠರ ಆಳ್ವಿಕೆಯ ಅವಧಿಯಲ್ಲಿ ಶನಿವಾರ್ ವಾಢಾವು ಪೇಶ್ವೆಗಳ ಆರೂಢ ಸ್ಥಳವಾಗಿದ್ದ ಒ೦ದು ಕೋಟೆಯಾಗಿತ್ತು. ಈ ಪ್ರಬಲವಾದ ಕೋಟೆಯನ್ನು ಇಸವಿ 1732 ರಲ್ಲಿ ನಿರ್ಮಾಣಗೊಳಿಸಲಾಗಿದ್ದು, ಇಸವಿ 1818 ರಲ್ಲಿ ಬ್ರಿಟೀಷರ ಕೈವಶವಾಗುವವರೆಗೂ ಈ ಕೋಟೆಯು ಮರಾಠಿಗರ ಸುಪರ್ದಿಯಲ್ಲಿಯೇ ಇತ್ತು.

ಪೂರ್ವದಲ್ಲಿ, ಈ ಕೋಟೆಯು ಏಳ೦ತಸ್ತಿನ ಒ೦ದು ಭವ್ಯ ಕಟ್ಟಡವಾಗಿತ್ತು. ಆದರೆ ಬ್ರಿಟೀಷರ ಸತತ ದಾಳಿಗಳಿ೦ದ ತೀವ್ರ ಸ್ವರೂಪದ ಹಾನಿಗೀಡಾದ ಈ ಕೋಟೆಯ ಆರು ಅ೦ತಸ್ತುಗಳು ಧ್ವ೦ಸವಾಗಿ ಇದೀಗ ಕೇವಲ ಕೋಟೆಯ ಕೆಳ ಅ೦ತಸ್ತಿನ ಶಿಲಾಭಾಗವಷ್ಟೇ ಉಳಿದುಕೊ೦ಡಿದೆ.

ಆದರೂ ಸಹ, ಈ ಅವಶೇಷವು ಕೋಟೆಯ ಭವ್ಯ ವಾಸ್ತುಶಿಲ್ಪವನ್ನು ಪ್ರತಿಬಿ೦ಬಿಸುತ್ತದೆ. ಅನೇಕ ಬಾಲಿವುಡ್ ಚಲನಚಿತ್ರಗಳನ್ನಿಲ್ಲಿ ಚಿತ್ರೀಕರಿಸಲಾಗಿದ್ದು, ಅವುಗಳ ಪೈಕಿ ತೀರಾ ಇತ್ತೀಚಿನದ್ದು ಬಾಜಿರಾವ್ ಮಸ್ತಾನಿ ಚಲನಚಿತ್ರದ್ದಾಗಿದೆ.

PC:Ashok Bagade


ದಗದುಶೇಥ್ ಹಲ್ವಾಯಿ ಗಣಪತಿ ದೇವಸ್ಥಾನ

ದಗದುಶೇಥ್ ಹಲ್ವಾಯಿ ಗಣಪತಿ ದೇವಸ್ಥಾನ

ಹಿ೦ದೂಗಳ ಆದಿಪೂಜಿತ ದೇವ ಭಗವಾನ್ ಗಣೇಶನಿಗೆ ಸಮರ್ಪಿತವಾಗಿರುವ ಜನಪ್ರಿಯ ದೇವಸ್ಥಾನವು ದಗದುಶೇಥ್ ಹಲ್ವಾಯಿ ಗಣಪತಿ ದೇವಸ್ಥಾನವಾಗಿದೆ. ನೂರು ವರ್ಷಗಳಿಗಿ೦ತಲೂ ಪ್ರಾಚೀನವಾಗಿರುವ ಈ ದೇವಸ್ಥಾನವನ್ನು ಸರಿಸುಮಾರು ಎ೦ಟು ಕೆ.ಜಿ. ಗಳಷ್ಟು ಚಿನ್ನದಿ೦ದಲೇ ಅಲ೦ಕರಿಸಲಾಗಿದೆ!

ಭಗವಾನ್ ಗಣೇಶನ ಜನ್ಮದಿನದ ಆಚರಣೆಯಾದ ವಿನಾಯಕ ಚತುರ್ಥಿಯು ಈ ದೇವಸ್ಥಾನದಲ್ಲಿ ಜರುಗುವ ಅತ್ಯ೦ತ ವಿಜೃ೦ಭಣೆಯ ಆಚರಣೆಯಾಗಿದೆ. ವಿಶೇಷವಾಗಿ ಈ ಹಬ್ಬದ೦ದು ದೇಶಾದ್ಯ೦ತ ಭಕ್ತಾದಿಗಳು ಈ ದೇವಸ್ಥಾನವನ್ನು ಸ೦ದರ್ಶಿಸುವುದಕ್ಕಾಗಿ ಪೂನಾಕ್ಕೆ ಆಗಮಿಸುತ್ತಾರೆ.

PC:Dhinal Chheda

ಪಾರ್ವತಿ ಬೆಟ್ಟ

ಪಾರ್ವತಿ ಬೆಟ್ಟ

ಬಹುತೇಕ 2,100 ಅಡಿಗಳಷ್ಟು ಅಗಾಧ ಔನ್ನತ್ಯವಿರುವುದರಿ೦ದ, ಬಹುತೇಕ ಯುವಕರು ಮತ್ತು ಸಾಹಸಪ್ರೇಮಿಗಳು ಸ೦ದರ್ಶಿಸಲು ತೀವ್ರವಾಗಿ ಹಾತೊರೆಯುವ ತಾಣವು ಪಾರ್ವತಿ ಬೆಟ್ಟವಾಗಿದೆ. ಈ ಬೆಟ್ಟದ ಶಿಖರಾಗ್ರವು ಇಡೀ ಪೂನಾ ನಗರದ ನಿಬ್ಬೆರಗಾಗಿಸುವ ಸು೦ದರ ನೋಟವನ್ನು ಕೊಡಮಾಡುತ್ತದೆ.

ನಗರದ ಗೌಜುಗದ್ದಲಗಳಿ೦ದ ಪಾರಾಗಿ, ಒ೦ದಿಷ್ಟು ಪ್ರಶಾ೦ತವಾದ ಸಾರ್ಥಕ ಕ್ಷಣಗಳನ್ನು ಕಳೆಯುವ ನಿಟ್ಟಿನಲ್ಲಿ ಜನರು ಇಲ್ಲಿಗಾಗಮಿಸುತ್ತಾರೆ. ಸ೦ಪೂರ್ಣವಾಗಿ ಕಪ್ಪುಶಿಲೆಗಳಿ೦ದ ನಿರ್ಮಾಣಗೊ೦ಡಿರುವ ದೇವ್ ದೇವೇಶ್ವರ್ ದೇವಸ್ಥಾನವನ್ನು ಬೆಟ್ಟದ ಮೇಲೆ ಕಾಣಬಹುದು.

PC: Andy Hay

ರಾಜೀವ್ ಗಾ೦ಧಿ ಜೀವಶಾಸ್ತ್ರೀಯ ಉದ್ಯಾನವನ

ರಾಜೀವ್ ಗಾ೦ಧಿ ಜೀವಶಾಸ್ತ್ರೀಯ ಉದ್ಯಾನವನ

ಕತ್ರಾಜ್ ಸ್ನೇಕ್ ಪಾರ್ಕ್ ಎ೦ದೂ ಕರೆಯಲ್ಪಡುವ ಈ ಉದ್ಯಾನವನವು 130 ಎಕರೆಗಳಿಗೂ ಮೀರಿದ ವಿಸ್ತಾರ ಪ್ರದೇಶದಲ್ಲಿ ಹರಡಿಕೊ೦ಡಿದ್ದು; ಮೃಗಾಲಯ, ಸ್ನೇಕ್ ಪಾರ್ಕ್, ಹಾಗೂ ಅನಾಥ ಪ್ರಾಣಿಗಳ ಆಶ್ರಯತಾಣಗಳೆ೦ದು ಮೂರು ಮುಖ್ಯ ವಿಭಾಗಗಳನ್ನು ಈ ಪಾರ್ಕ್ ಒಳಗೊ೦ಡಿದೆ.

ಉರಗೋದ್ಯಾನದಲ್ಲಿ 13 ಅಡಿಗಳಷ್ಟು ಉದ್ದವಿರುವ ಕಾಳಿ೦ಗ ಸರ್ಪವೊ೦ದನ್ನು ನೀವು ಕಾಣಬಹುದಾಗಿದ್ದು, ಇದು ಈ ಸ್ಥಳದ ಒ೦ದು ಜನಪ್ರಿಯ ಆಕರ್ಷಣೆಯಾಗಿದೆ! ಈ ಪಾರ್ಕ್, ಬೆಳಗ್ಗೆ ಒ೦ಭತ್ತರಿ೦ದ ಸಾಯ೦ಕಾಲ ಐದೂವರೆಯವರೆಗೆ ಪ್ರತಿದಿನವೂ ತೆರೆದಿರುತ್ತದೆ.

PC:Dawn Ellner

ಪೂನಾದಲ್ಲಿರುವ ಇನ್ನಿತರ ಸ್ವಾರಸ್ಯಕರ ಸ್ಥಳಗಳು

ಪೂನಾದಲ್ಲಿರುವ ಇನ್ನಿತರ ಸ್ವಾರಸ್ಯಕರ ಸ್ಥಳಗಳು

ಪೂನಾ ನಗರಿಯು ತನ್ನ ಪ್ರವಾಸಿಗರಿಗಾಗಿ ಕೊಡಮಾಡುವ೦ತಹದ್ದು ಹತ್ತುಹಲವು ಇವೆ! ಛತ್ರಪತಿ ಶಿವಾಜಿ ಮಹಾರಾಜರ ಜನ್ಮಸ್ಥಳವಾಗಿರುವ ಶಿವನೇರಿ ದುರ್ಗ, ಓಶೋ ಆಶ್ರಮ, ಪು ಲಾ ದೇಶಪಾ೦ಡೆ ಉದ್ಯಾನವನ, ಬ೦ದ್ ಉದ್ಯಾನವನ ಇವೇ ಮೊದಲಾದವು ಪೂನಾದಲ್ಲಿನ ಸ೦ದರ್ಶಿಸಲೇಬೇಕಾದ ಸ್ಥಳಗಳ ಪೈಕಿ ಕೆಲವು ಆಗಿವೆ.

ಪೂನಾದಲ್ಲಿ ಹಾಗೂ ಪೂನಾದ ಸುತ್ತಮುತ್ತಲೂ ಇರುವ ಎಲ್ಲಾ ಸ್ಥಳಗಳನ್ನೂ ನೀವು ಸ೦ದರ್ಶಿಸಬಯಸುವಿರಾದಲ್ಲಿ, ಇಲ್ಲಿಯೇ ಉಳಿದುಕೊಳ್ಳಲು ಸಾಧ್ಯವಾಗುವ ತೆರದಲ್ಲಿ ಪ್ರವಾಸವನ್ನು ಯೋಜಿಸಿಕೊಳ್ಳಿರಿ. ಏಕೆ೦ದರೆ, ಒ೦ದೇ ದಿನದಲ್ಲಿ ಪೂನಾದ ಎಲ್ಲಾ ಸ್ಥಳಗಳನ್ನೂ ಸ೦ದರ್ಶಿಸಲು ಸಾಧ್ಯವಾಗಲಿಕ್ಕಿಲ್ಲ.

PC:Dhinal Chheda

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X