Search
  • Follow NativePlanet
Share
» »ಹಸಿರು ಸಿರಿಯಲ್ಲಿ ಮನಸ್ಸು ಮೆರೆಯಲಿ

ಹಸಿರು ಸಿರಿಯಲ್ಲಿ ಮನಸ್ಸು ಮೆರೆಯಲಿ

ವಿಶಾಲವಾದ ಪ್ರದೇಶ. ಸುತ್ತ ಹಚ್ಚ ಹಸುರಿನ ವನ, ಶುದ್ಧವಾದ ಗಾಳಿ, ಹಾಲಿನ ನೊರೆಯಂತಹ ಝರಿಗಳಿಂದ ಯಾತ್ರಿಕನ ಸ್ವಾಗತಿಸುವ ತಾಣ ಮಲಂಪುಳಾ. ಪೂರ್ವ ಘಟ್ಟದ ಸಾಲಿನಲ್ಲಿ ಬರುವ ಕೇರಳ ರಾಜ್ಯದ ಪಲಕ್ಕದ ಜಿಲ್ಲೆಯಲ್ಲಿ ಮಲಂಪುಳಾ ಬರುತ್ತದೆ.

By Divya

ವಿಶಾಲವಾದ ಪ್ರದೇಶ. ಸುತ್ತ ಹಚ್ಚ ಹಸುರಿನ ವನ, ಶುದ್ಧವಾದ ಗಾಳಿ, ಹಾಲಿನ ನೊರೆಯಂತಹ ಝರಿಗಳಿಂದ ಯಾತ್ರಿಕನ ಸ್ವಾಗತಿಸುವ ತಾಣ ಮಲಂಪುಳಾ. ಪೂರ್ವ ಘಟ್ಟದ ಸಾಲಿನಲ್ಲಿ ಬರುವ ಕೇರಳ ರಾಜ್ಯದ ಪಲಕ್ಕದ ಜಿಲ್ಲೆಯಲ್ಲಿ ಮಲಂಪುಳಾ ಬರುತ್ತದೆ. ಕೇರಳದ ಪ್ರಕೃತಿ ಸೌಂದರ್ಯ ಪ್ರತಿಯೊಬ್ಬರನ್ನೂ ತನ್ನೆಡೆಗೆ ಸೆಳೆದುಕೊಳ್ಳುತ್ತದೆ. ಹೌದು, ಕಣ್ಣಿಗೆ ತಂಪು ನೀಡುವಂತಹ ಅದ್ಭುತ ಸ್ಥಳಗಳು ಇಲ್ಲಿವೆ. ಇದರ ಪರಿಚಯವನ್ನು ನಾವು ಮರೆಯದೇ ಮಾಡಿಕೊಳ್ಳಬೇಕು.

ಹಸಿರು ಸಿರಿಯಲ್ಲಿ ಮನಸ್ಸು ಮೆರೆಯಲಿ

PC: Jeganila

ಮಲಂಪುಳಾ ಅಣೆಕಟ್ಟು
1955ರಲ್ಲಿ ನಿರ್ಮಾಣಗೊಂಡ ಈ ಅಣೆಕಟ್ಟು ಕೇರಳದ ಅತಿದೊಡ್ಡ ನೀರಾವರಿ ವ್ಯವಸ್ಥೆಯನ್ನು ಒದಗಿಸುತ್ತದೆ. ಹಾಗೆಯೇ ಇದೊಂದು ಉತ್ತಮ ಪ್ರವಾಸ ಸ್ಥಳವೂ ಹೌದು. ಪೂರ್ವ ಘಟ್ಟಭಾಗದಲ್ಲಿ ಬರುವ ಈ ಅಣೆಕಟ್ಟಿನ ಬಳಿ ಹಿನ್ನೀರಿನ ಜಲಾಶಯವಿದೆ. ಇದರಲ್ಲಿ ಯಾತ್ರಿಕರು ಬೋಟಿಂಗ್ ಮಾಡಬಹುದು.

ಥೆನುಕುರುಸ್ಸಿ
ಮಲಂಪುಳಾದಿಂದ 25 ಕಿ.ಮೀ. ದೂರದಲ್ಲಿರುವ ಒಂದು ಚಿಕ್ಕ ಹಳ್ಳಿ ಥೆನುಕುರುಸ್ಸಿ. ಪುಟ್ಟ ಹಳ್ಳಿಯಾದರೂ ಥಯಾಂಕವು ದೇಗುಲ, ಶಿವನ ದೇವಾವಸ್ಥಾನ, ಎಲಮಾನ್ನಮ್ ಶಂಕರನಾರಾಯಣ ದೇಗುಲಗಳಿರುವುದನ್ನು ನೋಡಬಹುದು.

ಹಸಿರು ಸಿರಿಯಲ್ಲಿ ಮನಸ್ಸು ಮೆರೆಯಲಿ

PC: Ranjithsiji

ಸ್ನೇಕ್ ಪಾರ್ಕ್
ಮಲಂಪುಳಾ ಹಾಗೂ ಮಲಂಪುಳಾ ಪಾರ್ಕ್ ಹತ್ತಿರವೇ ಸ್ನೇಕ್ ಪಾರ್ಕ್ ಇದೆ. ಇದನ್ನು ಹಾವುಗಳ ಪುನರ್ವಸತಿ ಕೇಂದ್ರ ಎಂತಲೂ ಕರೆಯುತ್ತಾರೆ. ಇದರ ನಿರ್ವಹಣಾ ಕಾರ್ಯವನ್ನು ಕೇರಳ ಸರ್ಕಾರವೇ ನೋಡಿಕೊಳ್ಳುತ್ತದೆ. ವಿಭಿನ್ನ ಬಗೆಯ ಹಾವುಗಳನ್ನು ಹಾಗೂ ಮೊಸಳೆಗಳಿರುವುದನ್ನು ಇಲ್ಲಿ ನೋಡಬಹುದು. ಈ ಪಾರ್ಕ್ ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ ತೆರೆದಿರುತ್ತದೆ.

ಹಸಿರು ಸಿರಿಯಲ್ಲಿ ಮನಸ್ಸು ಮೆರೆಯಲಿ

PC: Neon

ಮಲಂಪುಳಾ ಉದ್ಯಾನವನ
ಸುಮಧುರ ಪರಿಮಳ ಬೀರುವ ಹೂಗಳ ರಾಶಿಯಿಂದ ತುಂಬಿರುವ ಈ ಉದ್ಯಾನವನ ವಿಶಾಲವಾದ ಜಾಗದಲ್ಲಿ ಪಸರಿಸಿಕೊಂಡಿದೆ. ಸುಂದರವಾದ ನೀರಿನ ಕೊಳ, ಅದರಲ್ಲಿ ನೀರಿನ ಕಾರಂಜಿ ನೃತ್ಯ, ಯಕ್ಷಿ ಮೂರ್ತಿ, ರಾಕ್ ಗಾರ್ಡನ್, ರೋಸ್ ಗಾರ್ಡನ್‍ಗಳನ್ನು ಒಳಗೊಂಡಿದೆ. ಒಮ್ಮೆ ನೋಡಲೇ ಬೇಕಾದ ಈ ಗಾರ್ಡನ್ ಬೆಳಗ್ಗೆ 10 ರಿಂದ ಸಂಜೆ 6 ಘಂ. ವರೆಗೆ ತೆರೆದಿರುತ್ತದೆ. ವಾರದ ರಜೆ ಹಾಗೂ ಉಳಿದ ಸರ್ಕಾರಿ ರಜದ ದಿನದಲ್ಲಿ ಮಾತ್ರ ರಾತ್ರಿ 8 ಘಂ. ವರೆಗೆ ತೆರೆದಿರುತ್ತದೆ.

ಹೋಗುವ ದಾರಿ
ಮಲಂಪುಳಾ ಕೇರಳ ಮತ್ತು ತಮಿಳು ನಾಡಿನ ಗಡಿ ಪ್ರದೇಶದಲ್ಲಿ ಬರುವುದರಿಂದ ಈ ಎರಡು ರಾಜ್ಯಗಳ ಮಾರ್ಗದಿಂದಲೂ ಬರಬಹುದು. ಬೆಂಗಳೂರಿನಿಂದ ಮಲಂಪುಳಾಕ್ಕೆ 412 ಕಿ.ಮೀ ಇರುವುದರಿಂದ ರಸ್ತೆ ಮಾರ್ಗದಿಂದಲೇ ಪಲಕ್ಕದ ಊರಿಗೆ ತಲುಪಬಹುದು.

Read more about: kerala
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X