Search
  • Follow NativePlanet
Share
» »ತರಂಗ ಹೊಮ್ಮಿಸುವ ಅಲೆಗಳ ನಾಡು

ತರಂಗ ಹೊಮ್ಮಿಸುವ ಅಲೆಗಳ ನಾಡು

By Vijay

ಕೆಲ ಸ್ಥಳಗಳು ವಿಶೇಷ ಗುಣ ಲಕ್ಷಣಗಳನ್ನು ಹೊಂದಿದ್ದು, ಆ ಲಕ್ಷಣಗಳ ಆಧಾರದ ಮೇಲೆಯೆ ಹೆಸರನ್ನು ಪಡೆದುಕೊಂಡಿರುತ್ತವೆ. ಅಂತಹ ಹೆಸರುಗಳನ್ನು ಪಟ್ಟಿ ಮಾಡುತ್ತ ಹೋದಾಗ ನಮಗೆ ಸಿಗುವುದು ತರಂಗಂಬಾಡಿ ಎಂಬ ಪುಟ್ಟ, ನಾದಮಯ ಕರಾವಳಿ ಹಳ್ಳಿ.

ತರಂಗಂಬಾಡಿಯನ್ನು ಕನ್ನಡದಲ್ಲಿ ಅರ್ಥೈಸಿದಾಗ "ತರಂಗಗಳು ಹಾಡಿದಾಗ" ಎಂದುಕೊಳ್ಳಬಹುದು. ಈ ಹಳ್ಳಿಯು ತಮಿಳುನಾಡು ರಾಜ್ಯದ ನಾಗಪಟ್ಟಿನಂ ಜಿಲ್ಲೆಯಲ್ಲಿರುವ ಒಂದು ಪಂಚಾಯತಿ ಪಟ್ಟಣವಾಗಿದೆ. ಆಂಗ್ಲದಲ್ಲಿ ಇದನ್ನು ಟ್ರಾಂಕ್ವೆಬಾರ್ ಎಂದು ಕರೆಯಲಾಗುತ್ತದೆ.

ಇಂದು ತರಂಗಂಬಾಡಿಯು ಅಗಾಧವಾದ ಸಮುದ್ರಕ್ಕೆ ಎದುರಾಭಿಮುಖವಾಗಿ ನೆಲೆಸಿದ್ದು, ಸಮುದ್ರದ ನೀರಿನ ನಿರಂತರ ಗಾನದ ಅಲೆಗಳ ನಡುವೆ ಸಮಯ ನಿಧಾನವಾಗಿ ಸರಿಯುತ್ತಿರುವಂತೆ ಭಾಸವಾಗುತ್ತದೆ. ತಮಿಳು ನಾಡಿನ ಈ ಸಮುದ್ರತೀರ ಪ್ರದೇಶ ಇನ್ನೂ ಹೆಚ್ಚು ಪ್ರಸಿದ್ಧಿಗೆ ಬಂದಿಲ್ಲ.

ತರಂಗಂಬಾಡಿ:

ತರಂಗಂಬಾಡಿ:

ಟ್ರಾನ್ಕ್ವಿಬಾರ್ 17 ರಿಂದ 19ನೇ ಶತಮಾನದ ಮಧ್ಯದವರೆಗೆ ಡ್ಯಾನಿಷ್ಷರ ಅಧೀನದಲ್ಲಿದ್ದ ಮುಖ್ಯ ಬಂದರಾಗಿತ್ತು. ಅದು ಇದರ ಸುವರ್ಣಯುಗವಾಗಿತ್ತು. ಯೂರೋಪಿನಲ್ಲಿ ನಡೆದ ನೆಪೋಲಿಯನ್ ಯುದ್ಧದ ಪರಿಣಾಮವಾಗಿ ಈ ಪ್ರದೇಶವು ಬ್ರೀಟೀಷ್ ಅಧೀನದಲ್ಲಿ 1808 ರಿಂದ 1814 ರ ವರೆಗಿತ್ತಾದರೂ ಕೀಯ್ಲ್ ಒಪ್ಪಂದದನ್ವಯ ಮತ್ತೆ ಡ್ಯಾನಿಷ್ಷರಿಗೆ ಮರಳಿಸಲಾಯಿತು.

ಚಿತ್ರಕೃಪೆ: Joseph Jayanth

ತರಂಗಂಬಾಡಿ:

ತರಂಗಂಬಾಡಿ:

ಕೊನೆಗೆ 1845 ರಲ್ಲಿ ಇದನ್ನು ಸಂಪೂರ್ಣವಾಗಿ ಬ್ರಿಟೀಷರಿಗೆ ಮಾರಲಾಯಿತು. ನಾಗಪಟ್ಟಣಂಗೆ ರೈಲು ಬಂದ ನಂತರ ಈ ಬಂದರಿನ ಮಹತ್ವ ಇನ್ನಷ್ಟು ಕಡಿಮೆಯಾಯಿತು.

ಚಿತ್ರಕೃಪೆ: Joseph Jayanth

ತರಂಗಂಬಾಡಿ:

ತರಂಗಂಬಾಡಿ:

ಡ್ಯಾನಿಷ್ ವಾಸ್ತುಶಿಲ್ಪ ಕಲೆಯನ್ನು ತಿಳಿಯಲು ಇಲ್ಲಿಗೆ ಭೇಟಿ ನೀಡಬೇಕು. ಇಲ್ಲಿನ ಡ್ಯಾನಿಷ್ ಕೋಟೆ ಇದಕ್ಕೆ ಉತ್ತಮ ಉದಾಹರಣೆ. ಇದು ಭಾರತದ ಉಳಿದ ಭಾಗಗಳಲ್ಲಿ ನೋಡಲು ಸಿಗುವುದು ವಿರಳ.

ಚಿತ್ರಕೃಪೆ: Sankara Subramanian

ತರಂಗಂಬಾಡಿ:

ತರಂಗಂಬಾಡಿ:

ಹಲವು ಕ್ರೈಸ್ತ ಮಿಷನರಿಗಳು ಟ್ರಾನ್ಕ್ವಿಬಾರ್ನಲ್ಲಿ ತಳ ಊರಿದ ಪರಿಣಾಮವಾಗಿ ಇಲ್ಲಿ ಚರ್ಚುಗಳಿವೆ. ಇಲ್ಲಿನ ಇತರ ಆಕರ್ಷಣೆಗಳೆಂದರೆ ಡೆನಿಷ್ ಮ್ಯೂಸಿಯಂ ಮತ್ತು ಟ್ರಾನ್ಕ್ವಿಬಾರ್ ಸಮುದ್ರತೀರ.

ಚಿತ್ರಕೃಪೆ: Sankara Subramanian

ತರಂಗಂಬಾಡಿ:

ತರಂಗಂಬಾಡಿ:

ತರಂಗಂಬಾಡಿಯು ಪಾಂಡಿಚೆರಿಯಲ್ಲಿ ಬರುವ ಕಾರೈಕಾಲ್ ಪಟ್ಟಣಕ್ಕೆ ಕೇವಲ 15 ಕಿ.ಮೀ ಗಳಷ್ಟು ದೂರದಲ್ಲಿದೆ. ಅಲ್ಲದೆ ಕಾರೈಕಾಲ್, ಚೆನ್ನೈ, ತಂಜಾವೂರು, ಪಾಂಡಿಚೆರಿ ಮುಂತಾದ ಪಟ್ಟಣಗಳಿಂದ ತರಂಗಂಬಾಡಿಗೆ ತೆರಳಲು ಸಾಕಷ್ಟು ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: Joseph Jayanth

ತರಂಗಂಬಾಡಿ:

ತರಂಗಂಬಾಡಿ:

ಚಿದಂಬರಂ ಹಾಗೂ ನಾಗಪಟ್ಟಿನಂ ತರಂಗಂಬಾಡಿಗೆ ಹತ್ತಿರದಲ್ಲಿರುವ ರೈಲು ನಿಲ್ದಾಣಗಳಾಗಿವೆ. ಈ ಎರಡೂ ಪಟ್ಟಣಗಳು ರಾಜ್ಯದ ಸಾಕಷ್ಟು ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಸಾಧಿಸುತ್ತವೆ.

ಚಿತ್ರಕೃಪೆ: Joseph Jayanth

ತರಂಗಂಬಾಡಿ:

ತರಂಗಂಬಾಡಿ:

ತರಂಗಂಬಾಡಿಗೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣವೆಂದರೆ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಇಲ್ಲಿಂದ ಟ್ಯಾಕ್ಸಿ ಹಾಗೂ ಬಸ್ಸುಗಳು ತರಂಗಂಬಾಡಿಗೆ ತೆರಳಲು ದೊರೆಯುತ್ತವೆ.

ಚಿತ್ರಕೃಪೆ: Joseph Jayanth

ತರಂಗಂಬಾಡಿ:

ತರಂಗಂಬಾಡಿ:

ತರಂಗಂಬಾಡಿ ಕಡಲ ಹಳ್ಳಿಯನ್ನು ವಿಶ್ಲೇಷಿಸುವ ಕೆಲವು ಅಮೋಘವಾದ ಚಿತ್ರಗಳು.

ಚಿತ್ರಕೃಪೆ: Sankara Subramanian

ತರಂಗಂಬಾಡಿ:

ತರಂಗಂಬಾಡಿ:

ತರಂಗಂಬಾಡಿ ಕಡಲ ಹಳ್ಳಿಯನ್ನು ವಿಶ್ಲೇಷಿಸುವ ಕೆಲವು ಅಮೋಘವಾದ ಚಿತ್ರಗಳು.

ಚಿತ್ರಕೃಪೆ: Sankara Subramanian

ತರಂಗಂಬಾಡಿ:

ತರಂಗಂಬಾಡಿ:

ತರಂಗಂಬಾಡಿ ಕಡಲ ಹಳ್ಳಿಯನ್ನು ವಿಶ್ಲೇಷಿಸುವ ಕೆಲವು ಅಮೋಘವಾದ ಚಿತ್ರಗಳು.

ಚಿತ್ರಕೃಪೆ: Sankara Subramanian

ತರಂಗಂಬಾಡಿ:

ತರಂಗಂಬಾಡಿ:

ತರಂಗಂಬಾಡಿ ಕಡಲ ಹಳ್ಳಿಯನ್ನು ವಿಶ್ಲೇಷಿಸುವ ಕೆಲವು ಅಮೋಘವಾದ ಚಿತ್ರಗಳು.

ಚಿತ್ರಕೃಪೆ: Sankara Subramanian

ತರಂಗಂಬಾಡಿ:

ತರಂಗಂಬಾಡಿ:

ತರಂಗಂಬಾಡಿ ಕಡಲ ಹಳ್ಳಿಯನ್ನು ವಿಶ್ಲೇಷಿಸುವ ಕೆಲವು ಅಮೋಘವಾದ ಚಿತ್ರಗಳು.

ಚಿತ್ರಕೃಪೆ: Sankara Subramanian

ತರಂಗಂಬಾಡಿ:

ತರಂಗಂಬಾಡಿ:

ತರಂಗಂಬಾಡಿ ಕಡಲ ಹಳ್ಳಿಯನ್ನು ವಿಶ್ಲೇಷಿಸುವ ಕೆಲವು ಅಮೋಘವಾದ ಚಿತ್ರಗಳು.

ಚಿತ್ರಕೃಪೆ: Joseph Jayanth

ತರಂಗಂಬಾಡಿ:

ತರಂಗಂಬಾಡಿ:

ತರಂಗಂಬಾಡಿ ಕಡಲ ಹಳ್ಳಿಯನ್ನು ವಿಶ್ಲೇಷಿಸುವ ಕೆಲವು ಅಮೋಘವಾದ ಚಿತ್ರಗಳು.

ಚಿತ್ರಕೃಪೆ: Theresa Schönheit

ತರಂಗಂಬಾಡಿ:

ತರಂಗಂಬಾಡಿ:

ತರಂಗಂಬಾಡಿ ಕಡಲ ಹಳ್ಳಿಯನ್ನು ವಿಶ್ಲೇಷಿಸುವ ಕೆಲವು ಅಮೋಘವಾದ ಚಿತ್ರಗಳು.

ಚಿತ್ರಕೃಪೆ: Vijay S

ತರಂಗಂಬಾಡಿ:

ತರಂಗಂಬಾಡಿ:

ತರಂಗಂಬಾಡಿ ಕಡಲ ಹಳ್ಳಿಯನ್ನು ವಿಶ್ಲೇಷಿಸುವ ಕೆಲವು ಅಮೋಘವಾದ ಚಿತ್ರಗಳು.

ಚಿತ್ರಕೃಪೆ: Theresa Schönheit

ತರಂಗಂಬಾಡಿ:

ತರಂಗಂಬಾಡಿ:

ತರಂಗಂಬಾಡಿಯ ಪ್ರಮುಖ ಡ್ಯಾನ್ಸ್ಬರ್ಗ್ ಕೋಟೆ.

ಚಿತ್ರಕೃಪೆ: Joelsuganth

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X