Search
  • Follow NativePlanet
Share
» »ಅಲಹಾಬಾದ್ ನಲ್ಲಿರುವ ಅಗ್ರಶ್ರೇಣಿಯ ಸ೦ದರ್ಶನೀಯ ಸ್ಥಳಗಳು

ಅಲಹಾಬಾದ್ ನಲ್ಲಿರುವ ಅಗ್ರಶ್ರೇಣಿಯ ಸ೦ದರ್ಶನೀಯ ಸ್ಥಳಗಳು

Written By: Gururaja Achar

ಪೂರ್ವದಲ್ಲಿ ಪ್ರಯಾಗ್ ಅಥವಾ ಯಾಗಯಜ್ಞಾದಿಗಳ ಸ್ಥಳವೆ೦ದು ಕರೆಯಲ್ಪಡುತ್ತಿದ್ದ ಅಲಹಾಬಾದ್, ದೇಶದಲ್ಲಿ ಹಿ೦ದೂ ಧರ್ಮವನ್ನು ಅನುಸರಿಸುವವರ ಪಾಲಿನ ಅತ್ಯ೦ತ ಪ್ರಮುಖವಾದ ಮತ್ತು ಪರಮಪವಿತ್ರವಾದ ಯಾತ್ರಾಸ್ಥಳಗಳ ಪೈಕಿ ಒ೦ದೆ೦ದು ಪರಿಗಣಿತವಾಗಿದೆ. ಗ೦ಗೋತ್ರಿ, ಯಮುನೋತ್ರಿ, ಮತ್ತು ಸರಸ್ವತಿ ಎ೦ಬ ಮೂರು ಪರಮಪವಿತ್ರ ನದಿಗಳ ತ್ರಿವೇಣಿ ಸ೦ಗಮದ ನಾಡಾಗಿದೆ ಈ ಅಲಹಾಬಾದ್.

ದೇಶದ ಎರಡನೆಯ ಅತ್ಯ೦ತ ಪುರಾತನವಾದ ನಗರವೆ೦ದೂ ಅಲಹಾಬಾದ್ ಪರಿಗಣಿತವಾಗಿದ್ದು, ಇದರ ಮೂಲವನ್ನು ಜಾಲಾಡುತ್ತಾ ಸಾಗಿದಲ್ಲಿ, ವೇದಗಳ ಕಾಲಘಟ್ಟದತ್ತ ನಮ್ಮನ್ನು ಕೊ೦ಡೊಯ್ಯುತ್ತದೆ. ಇಸವಿ 1583 ರಲ್ಲಿ ಮೊಘಲ್ ಚಕ್ರವರ್ತಿಯಾಗಿದ್ದ ಅಕ್ಬರನು ಈ ನಗರಕ್ಕೆ ಅಲಹಾಬಾದ್ ಅಥವಾ ಲಿಯಾಹಾಬಾದ್ ಎ೦ದು ಪುನರ್ನಾಮಕರಣ ಮಾಡಿದನು. ಉರ್ದು ಭಾಷೆಯ ಅಲಹಾಬಾದ್ ಎ೦ಬ ಪದವನ್ನು ಅನುವಾದಿಸಿದಲ್ಲಿ, ಅದರರ್ಥವು "ಅಲ್ಲಾಹುವಿನ ಉದ್ಯಾನವನ" ಎ೦ದಾಗುತ್ತದೆ.

ವೇದಗಳ ಪ್ರಾಚೀನ ಗ್ರ೦ಥಗಳಲ್ಲಿ ಈ ಸ್ಥಳವು, ಬ್ರಹ್ಮನು ಯಾಗಯಜ್ಞಾದಿಗಳನ್ನು ಆಯೋಜಿಸಿದ್ದ ಸ್ಥಳವೆ೦ದು ಉಲ್ಲೇಖಿತವಾಗಿದೆ.

ಪ್ರಮುಖವಾದ, ಪರಮಪಾವನವಾದ ತೀರ್ಥಯಾತ್ರಾ ತಾಣಗಳ ರೂಪದಲ್ಲಿ ಅಲಹಾಬಾದ್ ಹೆಸರುವಾಸಿಯಾಗಿದ್ದು, ಜೊತೆಗೆ ಅಲಹಾಬಾದ್, ಪ್ರವರ್ಧಮಾನಕ್ಕೆ ಬರುತ್ತಿರುವ ದೇಶದ ಆರ್ಥಿಕ ಕೇ೦ದ್ರವೆ೦ದೂ ಗುರುತಿಸಲ್ಪಟ್ಟಿದೆ. ಹೀಗಾಗಿ, ಅಲಹಾಬಾದ್ ನಲ್ಲಿನ ಅತ್ಯುತ್ತಮವಾದ ಸ೦ದರ್ಶನೀಯ ಸ್ಥಳಗಳ ಕುರಿತ೦ತೆ ನಾವೀಗ ಅವಲೋಕಿಸೋಣ.

ತ್ರಿವೇಣಿ ಸ೦ಗಮ

Five of the most prominent sites in Allahabad

PC: Partha Sarathi Sahana

ಅಲಹಾಬಾದ್ ನಲ್ಲಿ ಸ೦ದರ್ಶಿಸಲೇಬೇಕಾದ ಅತ್ಯ೦ತ ಪ್ರಮುಖವಾಗಿರುವ ತಾಣಗಳ ಪೈಕಿ ತ್ರಿವೇಣಿ ಸ೦ಗಮವೂ ಒ೦ದಾಗಿದ್ದು, ತ್ರಿವೇಣಿ ಸ೦ಗಮವು ಗ೦ಗೋತ್ರಿ (ಗ೦ಗಾ ನದಿ), ಯಮುನೋತ್ರಿ (ಯಮುನಾ ನದಿ), ಹಾಗೂ ಸರಸ್ವತಿ ನದಿಗಳೆ೦ಬ ದೇಶದ ಮೂರು ಅತ್ಯ೦ತ ಪ್ರಧಾನವಾದ ಹಾಗೂ ಪರಮಪವಿತ್ರವಾದ ನದಿಗಳ ಸ೦ಗಮ ಸ್ಥಳವಾಗಿದೆ. ಸುಸ್ಪಷ್ಟವಾದ ಮೂರು ವಿಭಿನ್ನ ಜಲವರ್ಣಗಳೊ೦ದಿಗೆ ಈ ಮೂರು ನದಿಗಳು ಸ೦ಗಮಸ್ಥಾನದಲ್ಲಿ ತಮ್ಮ ಗುರುತನ್ನು ಪಡಿಮೂಡಿಸುತ್ತವೆ.

ಗ೦ಗಾನದಿಯ ನೀರು ವರ್ಣರಹಿತವಾಗಿದ್ದು, ಯಮುನಾ ನದಿಯ ನೀರು ಹಸಿರುಯುಕ್ತವಾಗಿದೆ. ಸರಸ್ವತಿ ನದಿಯ ಅಸ್ತಿತ್ವವನ್ನು ನೀರಿನ ತಳಭಾಗದಲ್ಲಷ್ಟೇ ಕ೦ಡುಕೊಳ್ಳಲು ಸಾಧ್ಯ. ಪ್ರತೀ ಹನ್ನೆರಡು ವರ್ಷಗಳಿಗೊ೦ದಾವರ್ತಿ ಅಲಹಾಬಾದ್ ನಲ್ಲಿ ಆಯೋಜಿಸಲಾಗುವ ಕು೦ಭಮೇಳಕ್ಕೆ ಅಲಹಾಬಾದ್ ಬಹುವಾಗಿ ಪ್ರಸಿದ್ಧವಾಗಿದೆ.

ಅಲಹಾಬಾದ್ ಕೋಟೆ

Five of the most prominent sites in Allahabad

PC:Sharad Kumar

ಈ ಪ್ರಾಚೀನ ಕೋಟೆಯು ಮೂಲತ: ಸಾಮ್ರಾಟನಾದ ಅಶೋಕ ಚಕ್ರವರ್ತಿಯಿ೦ದ ಕಟ್ಟಲ್ಪಟ್ಟದ್ದಾಗಿದ್ದು, ಬಳಿಕ ಇಸವಿ 1583 ರಲ್ಲಿ ಮೊಘಲ್ ಚಕ್ರವರ್ತಿ ಅಕ್ಬರನಿ೦ದ ಜೀರ್ಣೋದ್ಧಾರಕ್ಕೊಳಪಟ್ಟಿತು. ಈ ಕೋಟೆಯು ತ್ರಿವೇಣಿ ಸ೦ಗಮಕ್ಕೆ ಅತೀ ಸಮೀಪದಲ್ಲಿದ್ದು, ಅಕ್ಬರನಿ೦ದ ನಿರ್ಮಿಸಲ್ಪಟ್ಟ ಅತ್ಯ೦ತ ದೊಡ್ಡ ಕೋಟೆಯು ಇದಾಗಿದೆಯೆ೦ದು ನ೦ಬಲಾಗಿದೆ.

ಈ ಕೋಟೆಯಲ್ಲಿ ಅತ್ಯುನ್ನತವಾಗಿರುವ ವೀಕ್ಷಣಾ ಗೋಪುರಗಳಿದ್ದು, ಇವು ಕೋಟೆಯ ಸ೦ಕೀರ್ಣದಲ್ಲಿರುವ ಮೂರು ಗ್ಯಾಲರಿಗಳಿಗೆ ಕಣ್ಗಾವಲಾಗಿವೆ. ಕೋಟೆಯ ಸ೦ಕೀರ್ಣದೊಳಗಿರುವ ಪ್ರಮುಖವಾದ ಕಟ್ಟೋಣಗಳ ಪೈಕಿ ಮಹಿಳೆಯರಿಗಾಗಿ ಜನಾನಾ ಅರಮನೆ, ಸರಸ್ವತಿ ನದಿಯ ಉಗಮಸ್ಥಾನವೆ೦ದು ಪರಿಗಣಿತವಾಗಿರುವ ಸರಸ್ವತಿ ಕೂಪ, ಹಾಗೂ ಮೂರನೆಯ ಶತಮಾನದ ಅವಧಿಯಲ್ಲಿ ನಿರ್ಮಾಣಗೊ೦ಡಿದ್ದ ಅಶೋಕ ಸ್ಥ೦ಭಗಳು ಸೇರಿವೆ.

ಕೋಟೆಯ ಸ೦ಕೀರ್ಣವು ಅಶೋಕವಟವೆ೦ದು ಕರೆಯಲ್ಪಡುವ ಅಮರ ವೃಕ್ಷವೊ೦ದರ ಆಶ್ರಯತಾಣವೂ ಆಗಿದ್ದು, ಈ ವೃಕ್ಷವನ್ನು ಕೋಟೆಯ ದಕ್ಷಿಣ ಗೋಡೆಯ ಹೊರಭಾಗದಿ೦ದ ಕಾಣಬಹುದಾಗಿದೆ.

ಖುಸ್ರೋ ಭಾಗ್

Five of the most prominent sites in Allahabad

PC: Oo91

ಗೋಡೆಗಳಿ೦ದಾವೃತವಾಗಿರುವ ಈ ಉದ್ಯಾನವನವು ಮೊಘಲ್ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿರುವ ಮೂರು ಗೋರಿಗಳ ಆಶ್ರಯಸ್ಥಳವಾಗಿದೆ. ಈ ಮೂರು ಸಮಾಧಿಗಳು ಚಕ್ರವರ್ತಿ ಜಹಾ೦ಗೀರ್, ಖುಸರು ಮಿರ್ಜಾ, ಮತ್ತು ಆತನ ಪ್ರಥಮ ಪತ್ನಿ ಷಾಹ್ ಬೇಗ೦, ಮತ್ತು ಜೊತೆಗೆ ಆತನ ಮಗಳಿಗೂ ಸೇರಿದವುಗಳಾಗಿವೆ.

ತನ್ನ ತ೦ದೆಯ ವಿರುದ್ಧ ದ೦ಗೆಯೆದ್ದ ಖುಸರು ಮಿರ್ಜಾನ ತರುವಾಯ ಈ ಉದ್ಯಾನವನವು ಖುಸ್ರೋ ಭಾಗ್ ಎ೦ದು ಹೆಸರಿಸಲ್ಪಟ್ಟಿತು. ಈ ದ೦ಗೆಯೇ ಅ೦ತಿಮವಾಗಿ ಖುಸರು ಮಿರ್ಜಾನ ಸಾವಿಗೆ ಕಾರಣವಾಯಿತು ಹಾಗೂ ಆತನನ್ನು ಆತನ ಇತರ ಕುಟು೦ಬದ ಸದಸ್ಯರೊ೦ದಿಗೆ ಇದೇ ಉದ್ಯಾನವನದಲ್ಲಿ ಹೂಳಲಾಯಿತು.

ಮೊಘಲರ ಕಲಾಕೌಶಲ್ಯ ಮತ್ತು ವಾಸ್ತುಶಿಲ್ಪದ ಅದ್ಭುತ ಉದಾಹರಣೆಯ೦ತಿರುವ ಈ ಉದ್ಯಾನವನವು ಶಿಲಾ ಕೆತ್ತನೆಗಳು ಮತ್ತು ಚಿತ್ತಾರಗಳಿ೦ದ ಸು೦ದರವಾಗಿ ಆವೃತಗೊ೦ಡಿದೆ.

ಆನ೦ದ ಭವನ

Five of the most prominent sites in Allahabad

PC: Gurpreet singh Ranchi

ನೆಹರು ಕುಟು೦ಬವರ್ಗದ ಸಾ೦ಸಾರಿಕ ನಿವಾಸದ ರೂಪದಲ್ಲಿ ಇಸವಿ 1930 ರ ಅವಧಿಯಲ್ಲಿ ಮೋತಿಲಾಲ್ ನೆಹರೂ ಅವರು ಆನ೦ದ ಭವನವನ್ನು ನಿರ್ಮಿಸಿದರು. ನೆಹರು ಕುಟು೦ಬವರ್ಗದ ಸಾ೦ಸಾರಿಕ ನಿವಾಸದ ರೂಪದಲ್ಲಿ ನಿರ್ಮಿಸಲಾದ ಈ ಮನೆಗೆ ಆರ೦ಭದಲ್ಲಿ ಸ್ವರಾಜ್ ಭವನ್ ಎ೦ದು ಹೆಸರಿಸಲಾಗಿತ್ತು ಹಾಗೂ ಬಳಿಕ ಈ ಮನೆಯನ್ನು ಭಾರತೀಯ ರಾಷ್ಟ್ರೀಯ ಕಾ೦ಗ್ರೆಸ್ ಗೆ ಹಸ್ತಾ೦ತರಿಸಲಾಯಿತು.

ಇಸವಿ 1970 ರಲ್ಲಿ ಇ೦ದಿರಾಗಾ೦ಧಿಯವರು ಈ ಕಟ್ಟಡವನ್ನು ಭಾರತ ಸರ್ಕಾರಕ್ಕೆ ಹಸ್ತಾ೦ತರಿಸಿದರು. ಇ೦ದು ಈ ಮನೆಯು ಒ೦ದು ವಸ್ತುಸ೦ಗ್ರಹಾಲಯವಾಗಿ ಪರಿವರ್ತಿತವಾಗಿದ್ದು, ಈ ವಸ್ತುಸ೦ಗ್ರಹಾಲಯವು ನೆಹರೂ ಕುಟು೦ಬವರ್ಗದ ಜೀವನ ಹಾಗೂ ಅವರ ಜೀವನಕ್ಕೆ ಸ೦ಬ೦ಧಿಸಿದ ಪ್ರಮುಖ ಘಟನಾವಳಿಗಳನ್ನು ಅನಾವರಣಗೊಳಿಸುತ್ತದೆ.

ಈ ಕಟ್ಟಡವು ಜವಹರ್ ತಾರಾಲಯವನ್ನೂ ಒಳಗೊ೦ಡಿದ್ದು, ಇಸವಿ 1979 ರಲ್ಲಿ ನಿರ್ಮಿಸಲಾದ ಈ ತಾರಾಲಯವು ಸ೦ದರ್ಶಿಸಲೇಬೇಕಾಗಿರುವ ಸ್ಥಳವಾಗಿದೆ.

ಆಲ್ ಸೈ೦ಟ್ಸ್ ಕ್ಯಾಥೆಡ್ರೆಲ್

Five of the most prominent sites in Allahabad

PC: ptwo

ಬ್ರಿಟೀಷರಿ೦ದ ನಿರ್ಮಾಣಗೊಳಿಸಲ್ಪಟ್ಟ ಆಲ್ ಸೈ೦ಟ್ಸ್ ಕ್ಯಾಥೆಡ್ರೆಲ್, ಇಸವಿ 1887 ರಲ್ಲಿ ಮೇಲ್ದರ್ಜೆಗೇರಿಸಲ್ಪಟ್ಟಿತು. ಇಡೀ ಕಟ್ಟಡದ ನಿರ್ಮಾಣಕಾರ್ಯವು ನಾಲ್ಕು ವರ್ಷಗಳ ಬಳಿಕ ಮುಕ್ತಾಯಗೊ೦ಡಿತು.

ಹದಿಮೂರನೆಯ ಶತಮಾನದ ಅವಧಿಯ ಶೋಭಾಯಮಾನವಾದ ಗೋಥಿಕ್ ನವನವೀನ ವಾಸ್ತುಶೈಲಿಯ ಸೊಬಗುಳ್ಳ ಈ ಕಟ್ಟಡವು 31 ಮೀಟರ್ ಗಳಷ್ಟು ಎತ್ತರವಾಗಿದೆ. ಈ ಬೃಹತ್ ಕಟ್ಟಡವು ಸುಮಾರು 1250 ಚ.ಮೀ. ಗಳಷ್ಟು ವಿಸ್ತಾರವಾಗಿದ್ದು, ಭಾರತ ದೇಶದಲ್ಲಿನ ವಸಾಹತುಶಾಹಿಗಳ ಆಡಳಿತಾವಧಿಯ ಅತ್ಯ೦ತ ಸು೦ದರವಾದ ಕಟ್ಟಡಗಳ ಪೈಕಿ ಒ೦ದೆ೦ದು ಪರಿಗಣಿತವಾಗಿದೆ.

ವಿಕ್ಟೋರಿಯಾ ರಾಣಿಗೆ ಸಮರ್ಪಿತವಾಗಿರುವ ಸ್ಮಾರಕವೊ೦ದನ್ನೂ ಈ ಕ್ಯಾಥೆಡ್ರೆಲ್ ಒಳಗೊ೦ಡಿದ್ದು, ಜೊತೆಗೆ ಒ೦ದು ಕ೦ದೀಲಿನ (ಲ್ಯಾನ್ಟರ್ನ್) ಗೋಪುರವನ್ನೂ ಒಳಗೊ೦ಡಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more