Search
  • Follow NativePlanet
Share
» »ವಿಶ್ವ ವನ್ಯಜೀವಿ ದಿನ 2022 ಕ್ಕೆ ಭಾರತದಲ್ಲಿನ ಟಾಪ್ 10 ಅತ್ಯುತ್ತಮ ವನ್ಯಜೀವಿ ಅಭಯಾರಣ್ಯಗಳು

ವಿಶ್ವ ವನ್ಯಜೀವಿ ದಿನ 2022 ಕ್ಕೆ ಭಾರತದಲ್ಲಿನ ಟಾಪ್ 10 ಅತ್ಯುತ್ತಮ ವನ್ಯಜೀವಿ ಅಭಯಾರಣ್ಯಗಳು

1. ಬಾಂಧವಘಡ ರಾಷ್ಟ್ರೀಯ ಉದ್ಯಾನವನ - ಮಧ್ಯಪ್ರದೇಶ

03-bandhavgarhnationalpark1

ಈ ಅಭಯಾರಣ್ಯವು ಅತ್ಯಧಿಕ ಸಂಖ್ಯೆಯಲ್ಲಿ ಬಂಗಾಳಿ ಹುಲಿಗಳು ,ಸುಮಾರು 45ಕ್ಕಿಂತಲೂ ಹೆಚ್ಚಿನ ತಳಿಯ ಪ್ರಾಣಿಗಳೂ ಮತ್ತು 250 ಕ್ಕಿಂತಲೂ ಹೆಚ್ಚಿನ ವಿವಿಧ ಜಾತಿಯ ಪಕ್ಷಿಗಳಿಗೆ ನೆಲೆಯಾಗಿದೆ. ಬಾಂಧವಘಡ ಅರಣ್ಯಪ್ರದೇಶವು ಒಂದು ಕಾಲದಲ್ಲಿ ಮಹಾರಾಜರುಗಳ ಬೇಟೆಯಾಡುವ ಪ್ರದೇಶವಾಗಿತ್ತು. ಲಾಂಗೂರ್, ಜಿಂಕೆ, ಕಾಡು ಜಿಂಕೆಗಳು, ಕಾಡುಹಂದಿ, ಭಾರತೀಯ ಕಾಡೆಮ್ಮೆ ಮತ್ತು ಸಾಂಬಾರ್ ಈ ರಾಷ್ಟ್ರೀಯ ಉದ್ಯಾನವನದ ವನ್ಯಜೀವಿಗಳ ಭಾಗವಾಗಿದೆ. ವನ್ಯಜೀವಿಗಳ ಜೊತೆಗೆ, ಬಾಂಧವಗಢ ರಾಷ್ಟ್ರೀಯ ಉದ್ಯಾನವನವು ಶ್ರೇಷ್ಠ ಹಿಂದೂ ಮಹಾಕಾವ್ಯ, ರಾಮಾಯಣ ಮತ್ತು ಹುಲಿಗಳ ಜೊತೆಗೆ ಸಂಪರ್ಕವನ್ನು ಹೊಂದಿತ್ತು ಎಂದು ತಿಳಿದುಬಂದಿದೆ. ಹೀಗಾಗಿ, ಇದು ಭಾರತದಲ್ಲಿ ಹೆಚ್ಚು ಭೇಟಿ ನೀಡುವ ವನ್ಯಜೀವಿ ಅಭಯಾರಣ್ಯಗಳಲ್ಲಿ ಒಂದಾಗಿದೆ.

2. ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನವನ, ಭರತ್‌ಪುರ, ರಾಜಸ್ಥಾನ

ಹಿಂದೆ ಭರತ್ ಪುರ ಪಕ್ಷಿಧಾಮ ಎಂದು ಹೆಸರು ಪಡೆದಿರುವ ಈ ರಾಷ್ಟ್ರೀಯ ಉದ್ಯಾನವನವು ವಲಸೆ ಬಂದಿರುವ ಸುಮಾರು 364 ಜಾತಿಯ ಪಕ್ಷಿಗಳಿಗೆ ನೆಲೆಯಾಗಿದೆ. ವಿಶ್ವ ಪರಂಪರೆಯ ತಾಣವಾಗಿರುವ ಈ ತಾಣವು ಪ್ರತೀ ವರ್ಷ ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಅಪರೂಪದ ಪಕ್ಷಿಗಳ ಚಲನವಲನಗಳನ್ನು ಅಧ್ಯಯನಮಾಡಲು ಅನೇಕ ವನ್ಯಜೀವಿ ಛಾಯಾಗ್ರಾಹಕರು ಮತ್ತು ಪಕ್ಷಿ ಪಕ್ಷಿವಿಜ್ಞಾನಿಗಳು ಈ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುತ್ತಾರೆ. ಸೈಬೀರಿಯನ್ ಕ್ರೇನ್‌ನಂತಹ ವಲಸೆ ಹಕ್ಕಿಗಳು ಶೀತ ತಿಂಗಳುಗಳಲ್ಲಿ ಇಲ್ಲಿ ಸೇರುತ್ತವೆ. ಹೀಗಾಗಿ, ಚಳಿಗಾಲವು ಉದ್ಯಾನವನಕ್ಕೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ.

jimcorbet

3. ಜಿಮ್ ಕೋರ್ಬೆಟ್ ರಾಷ್ಟ್ರೀಯ ಉದ್ಯಾನವನ , ಉತ್ತರಾಖಂಡ್

ಬೆಂಗಾಳಿ ಹುಲಿಗಳಿಗೆ ಹೆಸರುವಾಸಿಯಾಗಿರುವ ಜಿಮ್ ಕೋರ್ಬೆಟ್ ರಾಷ್ಟ್ರೀಯ ಉದ್ಯಾನವನವು ಭಾರತದ ಅತ್ಯುತ್ತಮ ವನ್ಯಜೀವಿ ಅಭಯಾರಣ್ಯಗಳಲ್ಲಿ ಒಂದಾಗಿದೆ. ಸುಮಾರು 300 ಕಾಡಾನೆಗಳು ಮತ್ತು 200 ಹುಲಿಗಳು ಈ ರಾಷ್ಟ್ರೀಯ ಉದ್ಯಾವನದಲ್ಲಿ ತಿರುಗಾಡುವುದನ್ನು ಕಾಣಬಹುದಾಗಿದ್ದು, ಇದರ ಜೊತೆಗೆ ಅಪರೂಪದ ಜಾತಿಯ ಹಲವಾರು ಪಕ್ಷಿಗಳು ಮತ್ತು ಪ್ರಾಣಿಗಳಿಗೆ ಈ ಅಭಯಾರಣ್ಯವು ನೆಲೆಯಾಗಿದೆ. ಕೇವಲ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಮಾತ್ರ ಈ ಸ್ಥಳವು ನೆಲೆಯಾಗಿರುವುದಲ್ಲದೆ ಸುಮಾರು 488 ಜಾತಿಯ ಸಸ್ಯಗಳು ಹಾಗೂ ಗುಪ್ತ ಎಲೆಗಳ ನಿಧಿಗಳಿಗೆ ನೆಲೆಯಾಗಿದೆ. 1936 ರಲ್ಲಿ ಸ್ಥಾಪಿತವಾದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನವು ಭಾರತದ ಅತ್ಯಂತ ಹಳೆಯ ರಾಷ್ಟ್ರೀಯವಾಗಿದೆ.

ranathamborenationalpark

4. ರಣಥಂಬೂರ್ ರಾಷ್ಟ್ರೀಯ ಉದ್ಯಾನವನ , ಸವಾಯಿ ರಾಜಸ್ಥಾನ

ನಿಷ್ಕಲ್ಮಶವಾದ ಪ್ರಕೃತಿ, ಅಪರೂಪದ ವನ್ಯಜೀವಿಗಳು ಮತ್ತು ಇತಿಹಾಸಗಳನ್ನೊಳಗೊಂಡ ರಣಥಂಬೂರ್ ರಾಷ್ಟ್ರೀಯ ಉದ್ಯಾನವನವು ಇತಿಹಾಸಪ್ರಿಯರು ಮತ್ತು ವನ್ಯಜೀವಿ ಛಾಯಾಗ್ರಾಹಕರಿಗೆ ಆದರ್ಶಪ್ರಾಯವಾದ ಸ್ಥಳವಾಗಿದೆ.ರಣಥಂಬೋರ್ ರಾಷ್ಟ್ರೀಯ ಉದ್ಯಾನವನವು ಒಂದು ಕಾಲದಲ್ಲಿ ಮಹಾರಾಜರ ಬೇಟೆಯ ಮೀಸಲು ಪ್ರದೇಶವಾಗಿದ್ದ ಈ ಉದ್ಯಾನವನವು ಈಗ ಬೆರಳೆಣಿಕೆಯಷ್ಟು ಹುಲಿಗಳನ್ನು ಹೊಂದಿದೆ. ಅದ್ಭುತವಾದ ಅಭಯಾರಣ್ಯದ ಹೊರತಾಗಿ, ಇದು 10 ನೇ ಶತಮಾನದ ರಣಥಂಬೋರ್ ಕೋಟೆ, ಛತ್ರಿಗಳ ಅವಶೇಷಗಳು ಮತ್ತು ಪುರಾತನ ದೇವಾಲಯಕ್ಕೆ ನೆಲೆಯಾಗಿದೆ.

bandipurnationalpark

5. ಬಂಡೀಪುರ ರಾಷ್ಟ್ರೀಯ ಉದ್ಯಾನವನ , ಕರ್ನಾಟಕ

ಶುಷ್ಕ ಮತ್ತು ತೇವಾಂಶವುಳ್ಳ ಡೆಸಿಡಿಯಸ್ ಅರಣ್ಯದಿಂದ ಸುತ್ತುವರಿದಿರುವ ಬಂಡಿಪುರ ರಾಷ್ಟ್ರೀಯ ಉದ್ಯಾಅನವನವು ಅಪರೂಪದ ಮತ್ತು ವಿಚಿತ್ರ ಜಾತಿಯ ಪಕ್ಷಿಗಳು ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ. ಈ ವನ್ಯಜೀವಿಗಳಿಗೆ ಕಬಿನಿ ನದಿಯು ನೀರಿನ ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ಆದುದರಿಂದ ಇದು ಪ್ರತೀದಿನ ಹೆಚ್ಚಿನ ಸಂಖ್ಯೆಯಲ್ಲಿ ವನ್ಯಜೀವಿಗಳನ್ನು ಆಕರ್ಷಿಸುತ್ತದೆ ಇದರ ಪರಿಣಾಮವಾಗಿ ಇಲ್ಲಿ ವನ್ಯಜೀವಿ ಛಾಯಾಗ್ರಾಹಕರು ಮತ್ತು ರೋಚಕ ಅನುಭವ ಪಡೆಯಲು ಇಚ್ಚಿಸುವಅನ್ವೇಷಕರಿಗೆ ಸಫಾರಿಗೆ ಹೋಗಲು ಮತ್ತು ಪ್ರಕೃತಿ ಮತ್ತು ಅರಣ್ಯದ ಮಾಂತ್ರಿಕತೆಯನ್ನು ಅನುಭವಿಸಲು ಇದು ಅತ್ಯುತ್ತಮ ಸ್ಥಳವಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಹೆಚ್ಚು ಬೇಡಿಕೆಯಿರುವ ವನ್ಯಜೀವಿ ಅಭಯಾರಣ್ಯಗಳಲ್ಲಿ ಒಂದಾಗಿದೆ ಮತ್ತು ಚಳಿಗಾಲದಲ್ಲಿ ಭಾರತದಲ್ಲಿ ಭೇಟಿ ನೀಡುವ ಜನಪ್ರಿಯ ಪ್ರವಾಸಿಗರ ಸ್ಥಳವಾಗಿದೆ.

6. ಕಾಜಿರಂಗ ರಾಷ್ಟ್ರೀಯ ಉದ್ಯಾನವನ, ಅಸ್ಸಾಂ

1905 ರಲ್ಲಿ ಸ್ಥಾಪಿಸಲಾದ ಮತ್ತು 2006 ರಲ್ಲಿ ಹುಲಿ ಸಂರಕ್ಷಿತ ಪ್ರದೇಶದ ಒಂದು ಭಾಗವಾಗಿರುವ ಈ ಅಭಯಾರಣ್ಯವು ವಿಶ್ವದ ಒಟ್ಟು ಘೇಂಡಾಮೃಗಗಳ ಪೈಕಿಯಲ್ಲಿ ಸುಮಾರು 2/3 ಭಾಗದಷ್ಟು ದೊಡ್ಡ ಒಂದು ಕೊಂಬಿನ ಘೇಂಡಾಮೃಗಗಳನ್ನು ಈ ಉದ್ಯಾನವನದಲ್ಲಿ ಹೊಂದಿರುವುದಕ್ಕೆ ಪ್ರಸಿದ್ದಿಯನ್ನು ಪಡೆದಿದೆ. . ಕಾಜಿರಂಗ ರಾಷ್ಟ್ರೀಯ ಉದ್ಯಾನವನವು ಭಾರತದಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ.ಹಾಗೂ ಉದ್ಯಾನವನವು ತನ್ನ ನೈಸರ್ಗಿಕ ದೃಶ್ಯಾವಳಿಗಳಿಂದಾಗಿ ಚಳಿಗಾಲದಲ್ಲಿ ಭಾರತದಲ್ಲಿ ಭೇಟಿ ನೀಡುವ ಹತ್ತು ವನ್ಯಜೀವಿ ಅಭಯಾರಣ್ಯಗಳಲ್ಲಿ ಒಂದಾಗಿದೆ. ನೀವು ಈಶಾನ್ಯ ಭಾರತಕ್ಕೆ ಪ್ರವಾಸವನ್ನು ಯೋಜಿಸುತ್ತಿದ್ದರೆ, ಈ ಉದ್ಯಾನವನವನ್ನು ನಿಮ್ಮ ಪ್ರವಾಸಕ್ಕೆ ಸೇರಿಸಲು ಮರೆಯಬೇಡಿ.

sundarbans

7. ಸುಂದರ್ಬನ್ಸ್ ರಾಷ್ಟ್ರೀಯ ಉದ್ಯಾನವನ, ಪಶ್ಚಿಮ ಬಂಗಾಳ

ಯುನೆಸ್ಕೋ ವಿಶ್ವಪರಂಪರೆಯ ತಾಣವೆನಿಸಿರುವ ಸುಂದರ್ಬನ್ಸ್ ರಾಷ್ಟ್ರೀಯ ಉದ್ಯಾನವನವು ವಿವಿಧ ಜಲಮೂಲಗಳನ್ನು ಹೊಂದಿರುವ ಜೌಗು ಅರಣ್ಯಪ್ರದೇಶವಾಗಿದೆ. ಈ ಉದ್ಯಾನವನವು ಗಣನೀಯ ಸಂಖ್ಯೆಯ ರಾಯಲ್ ಬೆಂಗಾಲ್ ಹುಲಿಗಳು ಮತ್ತು ಚುಕ್ಕೆಯುಳ್ಳ ಜಿಂಕೆಗಳಿಗೆ ನೆಲೆಯಾಗಿದೆ. ಇಲ್ಲಿರುವ ಹುಲಿಗಳು ನರಭಕ್ಷಕ ಹುಲಿಗಳು ಎಂದು ಹೇಳಲಾಗುತ್ತದೆ, ಆದರೆ ಅವುಗಳ ಆಕರ್ಷಣೆಯು ದೂರದ ದೇಶಗಳಿಂದ ಪ್ರಾಣಿ ಪ್ರಿಯರನ್ನು ಸೆಳೆಯುತ್ತದೆ. ಈ ರಾಷ್ಟ್ರೀಯ ಉದ್ಯಾನವನವು ತನ್ನಲ್ಲಿ ಅಪಾರವಾದ ಸಸ್ಯವರ್ಗ, ಪಕ್ಷಿಸಂಕುಲ, ಸರೀಸೃಪಗಳು ಮತ್ತು ಸಮುದ್ರ ಜೀವಿಗಳಿಂದ ಕೂಡಿದ್ದು ಸಮೃದ್ದವಾಗಿದೆ.

8. ಗಿರ್ ರಾಷ್ಟ್ರೀಯ ಉದ್ಯಾನವನ, ಗುಜರಾತ್

ಗಿರ್ ರಾಷ್ಟ್ರೀಯ ಉದ್ಯಾನವನವು ಅಳಿವಿನಂಚಿನಲ್ಲಿರುವ ಏಷ್ಯಾದ ಸಿಂಹಗಳು ಮತ್ತು ಕತ್ತೆಗಳನ್ನು ಹೊಂದಿರುವ ಏಕೈಕ ಸ್ಥಳವಾಗಿದೆ. ಸೋಮನಾಥ್ ಮತ್ತು ಜುನಾಗಢ್‌ನಂತಹ ಜನಪ್ರಿಯ ಸ್ಥಳಗಳಿಗೆ ಹತ್ತಿರವಿರುವ ಈ ಉದ್ಯಾನವನವು ಜುನಾಗಢದ ನವಾಬರ ಹಿಂದಿನ ಬೇಟೆಯ ಸ್ಥಳವಾಗಿತ್ತು. ಚಳಿಗಾಲದಲ್ಲಿ ಭಾರತದಲ್ಲಿ ಭೇಟಿ ನೀಡಲು ಅತ್ಯುತ್ತಮವಾದ ವನ್ಯಜೀವಿ ತಾಣಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಈ ಉದ್ಯಾನವನವು ಶ್ರೀಮಂತವಾದ ಪ್ರಾಣಿ ಸಂಪತ್ತನ್ನು ಹೊಂದಿದ್ದು, ಸುಮಾರು ಮುನ್ನೂರು ಅವಿಫೌನಾ ಪ್ರಭೇದಗಳು, 38 ಜಾತಿಯ ಸಸ್ತನಿಗಳು, 37 ರೀತಿಯ ಸರೀಸೃಪಗಳು ಮತ್ತು 2000 ಕ್ಕೂ ಹೆಚ್ಚು ಕೀಟ ಜಾತಿಗೆ ಸೇರಿದ ಪ್ರಭೇದಗಳ ಜೀವಿಗಳಿಗೆ ಇದು ನೆಲೆಯಾಗಿದೆ.

9. ಕನ್ಹಾ ರಾಷ್ಟ್ರೀಯ ಉದ್ಯಾನವನ ಮಧ್ಯಪ್ರದೇಶ

ಈ ಉದ್ಯಾನವನದಲ್ಲಿ ರಾಯಲ್ ಬಂಗಾಳಿ ಹುಲಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗುರುತಿಸಬಹುದಾಗಿದೆ. ಕನ್ಹಾ ರಾಷ್ಟ್ರೀಯ ಉದ್ಯಾನವನವು ರಾಜ್ಯದ ಅತಿದೊಡ್ಡ ರಾಷ್ಟ್ರೀಯ ಉದ್ಯಾನವನವಾಗಿದೆ ಮತ್ತು ಏಷ್ಯಾದಲ್ಲಿ ಅತ್ಯುತ್ತಮವಾಗಿ ಸಂರಕ್ಷಿಸಲ್ಪಟ್ಟ ಉದ್ಯಾನಗಳಲ್ಲೊಂದಾಗಿದೆ. 'ದೊಡ್ಡ ಬೆಕ್ಕು'ಗಳನ್ನು ವಿಶಾಲ ಸಂಖ್ಯೆಯಲ್ಲಿ ಹೊಂದಿರುವ ಕಾರಣ, ಉದ್ಯಾನವನವು ಪ್ರಾಜೆಕ್ಟ್ ಟೈಗರ್‌ನ ಒಂದು ಭಾಗವಾಗಿದೆ. ಅಲ್ಲದೆ ಇಲ್ಲಿ 1000 ಕ್ಕೂ ಹೆಚ್ಚು ರೀತಿಯ ಹೂವಿನ ಸಸ್ಯಗಳನ್ನು ಹೊಂದಿರುವುದರಿಂದ ಪ್ರಕೃತಿ ಪ್ರಿಯರಿಗೆ ಭಾರತದಲ್ಲಿ ಭೇಟಿ ನೀಡಲು ಇದು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ.

10. ಪೆಂಚ್ ರಾಷ್ಟ್ರೀಯ ಉದ್ಯಾನವನ ಮಧ್ಯಪ್ರದೇಶ

ಈ ಉದ್ಯಾನವನವು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಚಿರತೆಗಳಿಗೆ ನೆಲೆಯಾಗಿದೆ, ಪೆಂಚ್ ರಾಷ್ಟ್ರೀಯ ಉದ್ಯಾನವನವು 285 ಕ್ಕೂ ಹೆಚ್ಚು ನಿವಾಸಿಗಳು ಮತ್ತು ವಲಸೆ ಹಕ್ಕಿಗಳನ್ನು ಹೊಂದಿದೆ. ಉದ್ಯಾನವನದಲ್ಲಿರುವ ಅವಿಫೌನಾ ಪ್ರಭೇದಗಳು ನಾಲ್ಕು ಅಳಿವಿನಂಚಿನಲ್ಲಿರುವ ರಣಹದ್ದುಗಳನ್ನು ಒಳಗೊಂಡಿದೆ. ರಾಷ್ಟ್ರೀಯ ಉದ್ಯಾನವನವು ಎಷ್ಟು ಆಕರ್ಷಕವಾಗಿದೆ ಎಂದರೆ ಇದು ರುಡ್ಯಾರ್ಡ್ ಕಿಪ್ಲಿಂಗ್‌ನ ಪ್ರಸಿದ್ಧ ಜಂಗಲ್ ಬುಕ್‌ನ ಹಿಂದಿನ ಸ್ಫೂರ್ತಿಯಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X