Search
  • Follow NativePlanet
Share
» »ಭಾರತದ 10 ಅದ್ಭುತ ರೋಮಾಂಚಕ ಸ್ಥಳಗಳು

ಭಾರತದ 10 ಅದ್ಭುತ ರೋಮಾಂಚಕ ಸ್ಥಳಗಳು

By Vijay

ಭಾರತ ಉಪಖಂಡವು ಹಲವಾರು ಮನಮೋಹಕ, ಮೈಮನ ಪುಳಕಿತಗೊಳ್ಳುವ, ರೋಮಾಂಚನ ಉಂಟಾಗುವ ರಮಣೀಯ ಪ್ರಾಕೃತಿಕ ದೃಶ್ಯಗಳನ್ನು ಒಳಗೊಂಡಿದೆ. ಕೆಲವು ನೋಡಿದ ತಕ್ಷಣವೆ ಆನಂದವನ್ನುಂಟು ಮಾಡಿದರೆ, ಇನ್ನೂ ಕೆಲವು ಭೇಟಿ ನೀಡಲೇಬೇಕೆಂಬ ಪ್ರಲೋಭನೆಯನ್ನು ಮನದಾಳದಲ್ಲಿ ಮೂಡಿಸುತ್ತವೆ. ಅದೇನೆ ಇರಲಿ ಇಂತಹ ಪ್ರಾಕೃತಿಕ ನೋಟಗಳು, ರಚನೆಗಳು, ಅಚ್ಚರಿಗಳು ನಮ್ಮನ್ನು ಪ್ರಕೃತಿಯೊಂದಿಗೆ ಮತ್ತಷ್ಟು ಗಾಢವಾಗಿ ಬೆಸೆಯಲು ಸೇತುವೆಗಳಂತೆ ಕಾರ್ಯನಿರ್ವಹಿಸುತ್ತವೆ. ಒತ್ತಡ, ಕಷ್ಟಗಳಿಂದ ಬಸವಳಿದ ದೇಹ ಮನಗಳಿಗೆ ಒಂದು ತೆರನಾದ ಫ್ರೆಶ್ ಭಾವನೆಯನ್ನು ಇಂತಹ ಆಕರ್ಷಣೆಗಳು ಒದಗಿಸುತ್ತವೆ.

ಈ ಲೇಖನವು ಭಾರತದಲ್ಲಿನ ಇಂತಹ 10 ಅದ್ಭುತ ತಾಣಗಳ (ಹುಡುಕಲು ಹೊರಟರೆ ಸಾಕಷ್ಟು ಇವೆ!) ಪರಿಚಯ ಮಾಡಲಿದೆ.

ಹಿಮಚ್ಛಾದಿತ ಶೃಂಗಗಳು, ಮುನ್ಶಿಯಾರಿ

ಹಿಮಚ್ಛಾದಿತ ಶೃಂಗಗಳು, ಮುನ್ಶಿಯಾರಿ

ಉತ್ತರಾಖಂಡ ರಾಜ್ಯದ ಪಿತೋರ್ಗಡ್ ಜಿಲ್ಲೆಯಲ್ಲಿರುವ ಹಿಮಚ್ಛಾದಿತ ಹಿಮಾಲಯ ಪರ್ವತ ಶೃಂಗಗಳು ನೋಡುಗರನ್ನು ಸ್ಥಂಬಿಭೂತರನ್ನಾಗಿ ಮಾಡುತ್ತದೆ. ಅಲ್ಲದೆ ಈ ಗಿರಿ ಪರ್ವತಗಳು ಸಾಹಸಮಯ ಟ್ರೆಕ್ ಕೈಗೊಳ್ಳಲು ಅತ್ಯುತ್ತಮ ಸ್ಥಳಗಳಾಗಿವೆ. ಮುನ್ಶಿಯಾರಿ ಇಂತಹ ಹಲವು ರೋಮಾಂಚಕ ಚಾರಣ ಪಥಗಳ ಆಧಾರ (ಬೇಸ್) ವಾಗಿ ಕಾರ್ಯ ನಿರ್ವಹಿಸುತ್ತದೆ. ಇಲ್ಲಿಂದ ಕಾಣಸಿಗುವ ಸುತ್ತಮುತ್ತಲಿನ ಪ್ರದೇಶಗಳ ನೋಟವು ವರ್ಣಿಸಲಸಾಧ್ಯ.

ಚಿತ್ರಕೃಪೆ

ಝನ್ಸ್ಕಾರ್ ಕಣಿವೆ, ಲಡಾಖ್

ಝನ್ಸ್ಕಾರ್ ಕಣಿವೆ, ಲಡಾಖ್

ಭಾರತದ ಅತಿ ದೂರದ ಪ್ರದೇಶಗಳಲ್ಲಿ ಒಂದಾಗಿರುವ ಝನ್ಸ್ಕಾರ್ ಕಣಿವೆಯು ಲಡಾಖ್ ಪ್ರದೇಶದಲ್ಲಿ ಕಂಡುಬರುತ್ತದೆ. ಇದೊಂದು ಪರ್ವತ ಶ್ರೇಣಿಯಾಗಿದ್ದು ಸ್ಪಿತಿ ಹಾಗು ಲಡಾಖ್ ಪ್ರದೇಶಗಳನ್ನು ಒಂದಕ್ಕೊಂಡು ಬೇರ್ಪಡಿಸುತ್ತದೆ. ಹಿಮಾಚಲ ಪ್ರದೇಶದ ಅತಿ ಎತ್ತರದ ಗಿರಿ ಶಿಖರಗಳನ್ನು ಈ ಪರ್ವತ ಶ್ರೇಣಿಯಲ್ಲಿ ಕಾಣಬಹುದು.

ಚಿತ್ರಕೃಪೆ: Corto Maltese 1999

ಮರಳು ದಿಬ್ಬಗಳು, ಜೈಸಲ್ಮೇರ್

ಮರಳು ದಿಬ್ಬಗಳು, ಜೈಸಲ್ಮೇರ್

ರಾಜಸ್ಥಾನ ರಾಜ್ಯದ ರಾಜಧಾನಿಯಾದ ಜೈಪುರ್ ಬಳಿಯಿರುವ ಮತ್ತೊಂದು ಪ್ರಖ್ಯಾತ ಮರಳುಗಾಡು ಪ್ರದೇಶ ಜೈಸಲ್ಮೇರ್. ಇದನ್ನು ಮರಳುಗಾಡಿನ ರತ್ನವೆಂದೂ ಕೂಡ ಸಂಭೋದಿಸಲಾಗುತ್ತದೆ. ಇಲ್ಲಿ ಕಂಡುಬರುವ ಮರಳಿನ ದಿಬ್ಬಗಳು ವಿಶೀಷ್ಟವಾಗಿಯೂ, ಸುಂದರವಾಗಿಯೂ ಗೋಚರಿಸುತ್ತವೆ. ಇದರಲ್ಲಿ ಒಂಟೆ ಸಫಾರಿಯ ಅನುಭವವಂತೂ ಇನ್ನಷ್ಟು ಸುಮಧುರ.

ಚಿತ್ರಕೃಪೆ: sushmita balasubramani

ಮಾಥೇರಾನ್ ಗಿರಿಧಾಮ, ರಾಯಗಡ್

ಮಾಥೇರಾನ್ ಗಿರಿಧಾಮ, ರಾಯಗಡ್

ಮಹಾರಾಷ್ಟ್ರ ರಾಜ್ಯದ, ರಾಯಗಡ್ ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಮಾಥೇರಾನ್ ಭಾರತದಲ್ಲೆ ಅತಿ ಚಿಕ್ಕದಾದ ಗಿರಿಧಾಮವಾಗಿದೆ. ಬೇಸಿಗೆಯ ಸಮಯವನ್ನು ಹೊಡೆದೊಡಿಸಲು ಈ ಪ್ರದೇಶದಲ್ಲೆ ಈ ಗಿರಿಧಾಮವು ಅತಿ ಉತ್ತಮ ಪ್ರದೇಶವಾಗಿದೆ. ಅಲ್ಲದೆ ಭಾರತದಲ್ಲಿರುವ ಆರು ಮೌಂಟೆನ್ ರೈಲುಗಳ ಪೈಕಿ ಇಲ್ಲಿನ ರೈಲು ಕೂಡ ಒಂದು.

ಚಿತ್ರಕೃಪೆ: Omkar A Kamale

ದೂಧ್ ಸಾಗರ್ ಜಲಪಾತ, ಗೋವಾ

ದೂಧ್ ಸಾಗರ್ ಜಲಪಾತ, ಗೋವಾ

ಕರ್ನಾಟಕ ಹಾಗು ಗೋವ ಗಡಿಗಳಲ್ಲಿರುವ ಭಗವಾನ್ ಮಹಾವೀರ್ ಅಭಯಾರಣ್ಯ ಪ್ರದೇಶದಲ್ಲಿ ಈ ಅತ್ಯದ್ಭುತ ಜಲಪಾತ ಕಂಡುಬರುತ್ತದೆ. ಮಾಂಡೋವಿ ನದಿಯಿಂದುಂಟಾಗುವ ಈ ಜಲಪಾತವು ಪ್ರಕೃತಿಯ ಅತ್ಯದ್ಭುತ ಆಕರ್ಷಣೆಗಳಲ್ಲಿ ಒಂದಾಗಿ ನೋಡುವವರ ಮನಗೆಲ್ಲುತ್ತದೆ.

ಚಿತ್ರಕೃಪೆ: Purshi

ಹವಳದ ದಿಬ್ಬ/ಕೋರಲ್ ರೀಫ್, ಅಂಡಮಾನ್

ಹವಳದ ದಿಬ್ಬ/ಕೋರಲ್ ರೀಫ್, ಅಂಡಮಾನ್

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಭಾರತದ ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ಆಕರ್ಷಣೆಗಳ ಪೈಕಿ ಒಂದಾಗಿದೆ. ಇಲ್ಲಿರುವ ಕಡಲ ತೀರಗಳು ಒಂದು ಉತ್ತಮ ಬಗೆಯ ಅನುಭೂತಿಯನ್ನು ಪ್ರವಾಸಿಗರಿಗೆ ಕರುಣಿಸುತ್ತದೆ. ಇಲ್ಲಿನ ಸಮುದ್ರದಲ್ಲಿರುವ ಕೋರಲ್ ರೀಫ್ ಅಥವಾ ಹವಳದ ಬಂಡೆಗಳಂತೂ ಸಾಗರದಾಳದ ವೈಭೋಗದ ಜೀವನದ ಶೈಲಿಯನ್ನು ಪ್ರತಿಬಿಂಬಿಸುತ್ತದೆ.

ಚಿತ್ರಕೃಪೆ: Ritiks

ಧನುಷ್ಕೋಡಿ ಬೀಚ್, ರಾಮೇಶ್ವರಂ

ಧನುಷ್ಕೋಡಿ ಬೀಚ್, ರಾಮೇಶ್ವರಂ

ಭಾರತ ಹಾಗು ಶ್ರೀಲಂಕಾ ದೇಶಗಳ ಮಧ್ಯದಲ್ಲಿ ಸ್ವಾಭಾವಿಕ ಗಡಿಯಂತೆ ನೆಲೆ ನಿಂತಿದೆ ಈ ಕಡಲ ತೀರ. ಈ ಕಡಲ ತೀರದಲ್ಲಿ ಆಳವಾದ ಹಿಂದು ಮಹಾಸಾಗರದ ನೀರು, ಬಂಗಾಳ ಕೊಲ್ಲಿ ಸಮುದ್ರದೊಂದಿಗೆ ಸಮಾಗಮವಾಗುವ ಆಸಕ್ತಿಕರ ನೋಟವನ್ನು ಕಾಣಬಹುದು.

ಚಿತ್ರಕೃಪೆ

ಕ್ರೆಮ್ ಲಿಯತ್ ಪ್ರಾಹ್, ಜಯಂತಿಯಾ

ಕ್ರೆಮ್ ಲಿಯತ್ ಪ್ರಾಹ್, ಜಯಂತಿಯಾ

ಮೋಡಗಳ ಮರೆಯಲ್ಲಿ ನೆಲೆಸಿರುವ ಸುಂದರ ರಾಜ್ಯ ಮೇಘಾಲಯ. ಈ ಪ್ರದೇಶವು ತನ್ನಲ್ಲಿರುವ ಪ್ರಾಕೃತಿಕ ಗುಹೆಗಳಿಗೂ ಕೂಡ ಹೆಸರುವಾಸಿಯಾಗಿದೆ. ಆಷ್ಟೆ ಅಲ್ಲ ಇಲ್ಲಿನ ಕಾಡಿನಲ್ಲಿರುವ ಕೆಲವು ಗುಹೆಗಳು ವಿಶ್ವದಲ್ಲೆ ಆಳವಾದ ಗುಹೆಗಳ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪಡೆದಿವೆ. ಕ್ರೆಮ್ ಲಿಯತ್ ಪ್ರಾಹ್ ಗುಹೆಯು 31 ಕಿ.ಮೀ ಉದ್ದವಿದ್ದು, ಭಾರತ ಉಪಖಂಡದಲ್ಲೆ ಅತಿ ಉದ್ದನೆಯ ಗುಹೆ ಎಂಬ ಬಿರುದನ್ನು ಪಡೆದಿದೆ.

ಚಿತ್ರಕೃಪೆ: Biospeleologist

ಗಂಗಾ ನದಿಮುಖಜ ಭೂಮಿ (ಡೆಲ್ಟಾ), ಹಲ್ದಿಯಾ

ಗಂಗಾ ನದಿಮುಖಜ ಭೂಮಿ (ಡೆಲ್ಟಾ), ಹಲ್ದಿಯಾ

ಸುಂದರಬನ್ಸ್ ಮುಖಜ ಭೂಮಿ ಎಂತಲೂ ಕರೆಯಲ್ಪಡುವ ಇದು ಮುಖ್ಯವಾಗಿ ಗಂಗಾ ಹಾಗು ಬ್ರಹ್ಮಪುತ್ರ ನದಿಗಳ ವಿಶ್ವದ ಅತ್ಯಂತ ಬೃಹತ್ತಾದ ನದಿ ಮುಖಜ ಭೂಮಿ ಎಂಬ ಕೀರ್ತಿಗೆ ಭಾಜನವಾಗಿದೆ. ಗಂಗಾ ನದಿ ಮುಖಜ ಭೂಮಿಯು ಗಂಗಾ ನದಿ, ಬ್ರಹ್ಮಪುತ್ರ ನದಿ, ಪದ್ಮಾ, ಜಮುನಾ ಹಾಗು ಹೂಗ್ಲಿ ನದಿಗಳಿಂದ ನಿರ್ಮಾಣವಾಗಿದೆ.

ಚಿತ್ರಕೃಪೆ

ಮಾಜುಲಿ ದ್ವೀಪ, ಜೊರ್ಹತ್

ಮಾಜುಲಿ ದ್ವೀಪ, ಜೊರ್ಹತ್

ಅಸ್ಸಾಂ ರಾಜ್ಯದ ಬ್ರಹ್ಮಪುತ್ರ ನದಿಯಲ್ಲಿ ನಿರ್ಮಾಣವಾದ ಈ ದ್ವೀಪವು ಜಗತ್ತಿನಲ್ಲೆ ಅತಿ ದೊಡ್ಡದಾದ ನದಿ ದ್ವೀಪವಾಗಿದೆ. ಈ ಪ್ರದೇಶವನ್ನು ಜೊರ್ಹತ್ ನಗರದಿಂದ ದೋಣಿ ಹಾಗು ಫೆರ್‍ರಿಗಳ ಮೂಲಕವೆ ತಲುಪಬಹುದಾಗಿದೆ. ಶ್ರೀಮಂತವಾದ ಜಲರಾಶಿ ಹಾಗು ಸಸ್ಯ ಸಂಪತ್ತನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: Kalai Sukanta

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X