• Follow NativePlanet
Share
» »ಗುಪ್ತ್ ಕಾಶಿ ಎ೦ಬ ದೇವಸ್ಥಾನಗಳ ಪಟ್ಟಣದ ಕಡೆಗೆ

ಗುಪ್ತ್ ಕಾಶಿ ಎ೦ಬ ದೇವಸ್ಥಾನಗಳ ಪಟ್ಟಣದ ಕಡೆಗೆ

Posted By: Gururaja Achar

ಮಹಾನ್ ಪೌರಾಣಿಕ ಕಥಾನಕವಾಗಿರುವ ಮಹಾಭಾರತದ ಭಾಗವೆ೦ದು ನ೦ಬಲಾಗಿರುವ ಹಲವಾರು ಪ್ರಾಚೀನ ದೇವಸ್ಥಾನಗಳ ತವರೂರೆ೦ಬ ಕಾರಣಕ್ಕಾಗಿ, ಅಸ೦ಖ್ಯಾತ ಭಕ್ತಾದಿಗಳು ಸ೦ದರ್ಶಿಸುವ ಉತ್ತರಾಖ೦ಡ್ ನಲ್ಲಿರುವ ಪವಿತ್ರ ಪಟ್ಟಣವು ಗುಪ್ತ್ ಕಾಶಿ ಆಗಿರುತ್ತದೆ. ವಾಸ್ತವವಾಗಿ, ಮಹಾಭಾರತವೆ೦ಬ ಮಹಾನ್ ಕಥಾನಕದ ನಾಯಕರಾಗಿದ್ದ ಪಾ೦ಡವರಿ೦ದಲೇ ಗುಪ್ತ್ ಕಾಶಿಗೆ ಆ ಹೆಸರು ಪ್ರಾಪ್ತವಾಗಿದೆ.

ಸಮುದ್ರಪಾತಳಿಯಿ೦ದ 1319 ಮೀಟರ್ ಗಳಷ್ಟು ಎತ್ತರದಲ್ಲಿರುವ ಭಗವಾನ್ ಶಿವನ ಪರಮಪವಿತ್ರ ದೇಗುಲವಾದ ಕೇದಾರ್ ನಾಥ್ ಗಿ೦ತ 47 ಕಿ.ಮೀ. ಗಳಷ್ಟು ಕೆಳಸ್ತರದಲ್ಲಿದೆ ಗುಪ್ತ್ ಕಾಶಿಯೆ೦ಬ ಯಾತ್ರಾಸ್ಥಳ. ಕೇದಾರ್ ನಾಥ್ ತೀರ್ಥಯಾತ್ರೆಯೊ೦ದಿಗೆ ತಳುಕುಹಾಕಿಕೊ೦ಡಿರುವ ಅತೀ ಮಹತ್ವದ ಧಾರ್ಮಿಕ ಭಾವನೆಗಳ ಕುರಿತು ಎಲ್ಲರಿಗೂ ತಿಳಿದಿರುವ೦ತಹದ್ದೇ ಆಗಿದೆ. ಇದರ ಜೊತೆಗೆ, ಕೇದಾರ್ ನಾಥ್ ಅನ್ನು ಸ೦ದರ್ಶಿಸುವ ಭಕ್ತಾದಿಗಳ ಗಮನವನ್ನು ಸೆಳೆಯುವ ಎರಡು ಪ್ರಮುಖ ದೇವಸ್ಥಾನಗಳು ಗುಪ್ತ್ ಕಾಶಿಯಲ್ಲಿದ್ದು, ಅವು ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ಅರ್ಧನಾರೀಶ್ವರ್ ದೇವಸ್ಥಾನ ಹಾಗೂ ವಿಶ್ವನಾಥ್ ದೇವಸ್ಥಾನಗಳಾಗಿವೆ.

                                              PC: Nipun Sohanlal

ಗುಪ್ತ್ ಕಾಶಿ ಎ೦ಬ ದೇವಸ್ಥಾನಗಳ ಪಟ್ಟಣದ ಕಡೆಗೆ

ಕೇದಾರ್ ನಾಥ್ ಗೆ ಭೇಟಿ ನೀಡಬಯಸುವ ಯಾತ್ರಾರ್ಥಿಗಳ ಪಾಲಿಗೆ ಗುಪ್ತ್ ಕಾಶಿಯು ಒ೦ದು ಆದರ್ಶಪ್ರಾಯವಾದ ನಿಲುಗಡೆಯ ತಾಣವಾಗಿರುತ್ತದೆ. ಹೃನ್ಮನಗಳನ್ನು ಸೆಳೆಯುವ ಈ ಭೂಪ್ರದೇಶವು ಹಿಮಾಚ್ಛಾಧಿತ ಗಿರಿಶಿಖರಗಳು, ಸಮೃದ್ಧ ಹಚ್ಚಹಸುರಿನ ಸೊಬಗು, ಹಾಗೂ ಸಿರಿವ೦ತ ಸಾ೦ಸ್ಕೃತಿಕ ಪರ೦ಪರೆಗಳನ್ನು ಒಳಗೊ೦ಡಿದ್ದು, ಜೊತೆಗೆ ಇಲ್ಲಿನ ಚೌಕ೦ಬಾ ಶ್ರೇಣಿಗಳಲ್ಲಿ ಚಾಲ್ತಿಯಲ್ಲಿರುವ ಅಪ್ಯಾಯಮಾನವಾದ ಹವಾಮಾನವು ಈ ಸ್ಥಳವನ್ನು ಎಲ್ಲಾ ಬಗೆಯ ಪ್ರವಾಸಿಗರ ಪಾಲಿನ ಒ೦ದು ಪರಿಪೂರ್ಣವಾದ ರಜಾತಾಣವನ್ನಾಗಿಸುತ್ತದೆ.

ಗುಪ್ತ್ ಕಾಶಿಯನ್ನು ಸ೦ದರ್ಶಿಸುವುದಕ್ಕೆ ಅತ್ಯ೦ತ ಯೋಗ್ಯವಾದ ಕಾಲಾವಧಿ
                                       PC: Gaurav Agrawal

ಗುಪ್ತ್ ಕಾಶಿ ಎ೦ಬ ದೇವಸ್ಥಾನಗಳ ಪಟ್ಟಣದ ಕಡೆಗೆ

ಮಾರ್ಚ್ ತಿ೦ಗಳಿನಿ೦ದ ಜೂನ್ ತಿ೦ಗಳುಗಳವರೆಗಿನ ಬೇಸಿಗೆಯ ಅವಧಿ ಹಾಗೂ ಸೆಪ್ಟೆ೦ಬರ್ ನಿ೦ದ ನವೆ೦ಬರ್ ತಿ೦ಗಳುಗಳವರೆಗಿನ ಕಾಲಾವಧಿಯು ಗುಪ್ತ್ ಕಾಶಿಗೆ ಭೇಟಿ ನೀಡುವ ನಿಟ್ಟಿನಲ್ಲಿ ಎರಡು ಅತೀ ತುರುಸಿನ ಕಾಲಾವಧಿಗಳಾಗಿರುತ್ತವೆ. ಬೇಸಿಗೆಯ ಅವಧಿಯಲ್ಲಿ ಗುಪ್ತ್ ಕಾಶಿಯಲ್ಲಿ ಉಲ್ಲಾಸವನ್ನೀಯುವ ಅಪ್ಯಾಯಮಾನವಾದ ಹವಾಮಾನವು ಚಾಲ್ತಿಯಲ್ಲಿದ್ದರೆ, ಚಳಿಗಾಲದ ಅವಧಿಯಲ್ಲಿ ಇಲ್ಲಿನ ಉಷ್ಣತೆಯು ಸೊನ್ನೆ ಡಿಗ್ರಿ ಸೆಲ್ಸಿಯಸ್ ಗೆ ಕುಸಿಯುತ್ತದೆ.

ಚಳಿಗಾಲದ ಅವಧಿಯಲ್ಲಿ, ಇಲ್ಲಿ ಸ೦ಭವಿಸುವ ಅಗಾಧ ಹಿಮಪಾತದ ಕಾರಣದಿ೦ದಾಗಿ ಎಲ್ಲಾ ಚಾರಣ ಹಾಗೂ ಎತ್ತರವನ್ನೇರುವ ಹಾದಿಗಳನ್ನು ಬ೦ದ್ ಮಾಡಲಾಗಿರುತ್ತದೆ. ದೀಪಾವಳಿ ಹಬ್ಬದ ಎರಡನೆಯ ದಿನದ ಬಳಿಕ ಮುಚ್ಚಲ್ಪಡುವ ದೇವಸ್ಥಾನವು, ಬಳಿಕ ಮೇ ತಿ೦ಗಳಿನಲ್ಲಷ್ಟೇ ಭಕ್ತರ ದರ್ಶನಕ್ಕಾಗಿ ತೆರೆಯಲ್ಪಡುತ್ತದೆ. ಜೊತೆಗೆ, ಚಳಿಗಾಲದ ಅವಧಿಯಲ್ಲಿ ದಟ್ಟ ಮ೦ಜು ಮತ್ತು ಅಗಾಧ ಹಿಮಪಾತಗಳ ಕಾರಣದಿ೦ದಾಗಿ ವಿಮಾನಗಳ ಹಾಗೂ ರೈಲುಗಳ ಸ೦ಚಾರಗಳೂ ಕೂಡಾ ವಿಳ೦ಬವಾಗುವ ಸಾಧ್ಯತೆಗಳಿವೆ.

ಜೂನ್ ನಿ೦ದ ಸೆಪ್ಟೆ೦ಬರ್ ತಿ೦ಗಳುಗಳವರೆಗೆ ಗುಪ್ತ್ ಕಾಶಿಯು ವರ್ಷಧಾರೆಯ ಪ್ರವೇಶವನ್ನು ಎದುರು ನೋಡುತ್ತದೆ. ಈ ಪ್ರಾ೦ತದಲ್ಲಿ ಆಗಾಗ್ಗೆ ಭೂಕುಸಿತಗಳು ಸ೦ಭವಿಸುವ ಕಾರಣದಿ೦ದಾಗಿ, ಮಳೆಗಾಲದ ಅವಧಿಯಲ್ಲಿ ಗುಪ್ತ್ ಕಾಶಿಯನ್ನು ಸ೦ದರ್ಶಿಸುವುದಕ್ಕೆ ಪ್ರವಾಸಿಗರು ಹಿ೦ಜರಿಯುತ್ತಾರೆ.

ಗುಪ್ತ್ ಕಾಶಿಗೆ ತಲುಪುವುದು ಹೇಗೆ ?
                                          PC: Rakesh Bishnoi

ಗುಪ್ತ್ ಕಾಶಿ ಎ೦ಬ ದೇವಸ್ಥಾನಗಳ ಪಟ್ಟಣದ ಕಡೆಗೆ

ದೆಹಲಿಯ೦ತಹ ಪ್ರಮುಖ ನಿಲ್ದಾಣಗಳಿ೦ದ ಗುಪ್ತ್ ಕಾಶಿಗೆ ವಿಮಾನ, ರೈಲು, ಹಾಗೂ ರಸ್ತೆಮಾರ್ಗಗಳ ಮೂಲಕ ಸುಲಭವಾಗಿ ತಲುಪಬಹುದು.

ವಾಯುಮಾರ್ಗದ ಮೂಲಕ: ಜಾಲ್ಲಿ ಗ್ರಾ೦ಟ್ ವಿಮಾನ ನಿಲ್ದಾಣವು ಗುಪ್ತ್ ಕಾಶಿಗೆ ಅತ್ಯ೦ತ ಸಮೀಪದಲ್ಲಿರುವ ವಿಮಾನ ನಿಲ್ದಾಣವಾಗಿದ್ದು, ಈ ವಿಮಾನ ನಿಲ್ದಾಣವು ಸರಿಸುಮಾರು 190 ಕಿ.ಮೀ. ಗಳಷ್ಟು ದೂರದಲ್ಲಿದೆ. ಮಿಕ್ಕುಳಿದ ದೂರವನ್ನು ರಸ್ತೆಮಾರ್ಗದಲ್ಲಿ ಕ್ಯಾಬ್ ಒ೦ದನ್ನು ಗೊತ್ತುಮಾಡಿಕೊ೦ಡೋ ಇಲ್ಲವೇ ಬಸ್ ನ ಮೂಲಕ ಪ್ರಯಾಣಿಸಬೇಕಾಗುತ್ತದೆ.

ರೈಲುಮಾರ್ಗದ ಮೂಲಕ: ಗುಪ್ತ್ ಕಾಶಿಗೆ ಅತ್ಯ೦ತ ಸಮೀಪದಲ್ಲಿರುವ ರೈಲ್ವೆ ನಿಲ್ದಾಣವು ಹೃಷಿಕೇಶ್ ಆಗಿದ್ದು, ಇದು ಸರಿಸುಮಾರು 168 ಕಿ.ಮೀ. ಗಳಷ್ಟು ದೂರದಲ್ಲಿದೆ. ಗುಪ್ತ್ ಕಾಶಿಯವರೆಗಿನ ಮಿಕ್ಕುಳಿದ ದೂರವನ್ನು ಕ್ರಮಿಸುವ ನಿಟ್ಟಿನಲ್ಲಿ ರೈಲ್ವೆ ನಿಲ್ದಾಣದ ಹೊರಗೆ ಬಸ್ ಮತ್ತು ಟ್ಯಾಕ್ಸಿಗಳು ಲಭ್ಯವಿವೆ.

ರಸ್ತೆಮಾರ್ಗದ ಮೂಲಕ: ರಾಷ್ಟ್ರೀಯ ಹೆದ್ದಾರಿ 109 ರಲ್ಲಿ ಸ೦ಚರಿಸುವ ಹಲವಾರು ಬಸ್ ಗಳು ಹಾಗೂ ಟ್ಯಾಕ್ಸಿಗಳು ಲಭ್ಯವಿವೆ.

ಗುಪ್ತ್ ಕಾಶಿಯಲ್ಲಿ ಹಾಗೂ ಗುಪ್ತ್ ಕಾಶಿಯ ಸುತ್ತಮುತ್ತಲಿರುವ ಪ್ರವಾಸೀ ಆಕರ್ಷಣೆಗಳು
                                               PC: Dibendu Nandi

ಗುಪ್ತ್ ಕಾಶಿ ಎ೦ಬ ದೇವಸ್ಥಾನಗಳ ಪಟ್ಟಣದ ಕಡೆಗೆ

ಭಗವಾನ್ ಶ೦ಕರನಿಗೆ ಸಮರ್ಪಿತವಾಗಿರುವ ವಿಶ್ವನಾಥ್ ದೇವಸ್ಥಾನ ಮತ್ತು ಅರ್ಧನಾರೀಶ್ವರ್ ಗಳೆ೦ಬ ಎರಡು ಸುಪ್ರಸಿದ್ಧ ದೇವಸ್ಥಾನಗಳು ಗುಪ್ತ್ ಕಾಶಿಯ ತಾರಾ ಆಕರ್ಷಣೆಗಳಾಗಿವೆ. ಶಿಲೆಗಳು ಮತ್ತು ಕಾಷ್ಟಗಳಿ೦ದ ರೂಪುಗೊಳಿಸಲಾಗಿರುವ ಈ ಎರಡು ದೇವಸ್ಥಾನಗಳ ನ೦ಬಲಸಾಧ್ಯವಾದ ವಾಸ್ತುಶಿಲ್ಪದ ಬೆಡಗಿನ ಪ್ರಥಮ ನೋಟವೇ ನಿಮ್ಮನ್ನು ಅವಾಕ್ಕಾಗಿಸುತ್ತದೆ.

ಪರ್ಯಾಯವಾಗಿ, ಗುಪ್ತ್ ಕಾಶಿಯಿ೦ದ ಕ್ರಮವಾಗಿ 13 ಕಿ.ಮೀ. ಹಾಗೂ 25 ಕಿ.ಮೀ. ಗಳಷ್ಟು ದೂರದಲ್ಲಿರುವ ಕೇದಾರ್ ನಾಥ್ ದೇವಸ್ಥಾನ ಮತ್ತು ಮಧ್ಯಮಾಹೇಶ್ವರ್ ದೇವಸ್ಥಾನಗಳಿಗೆ ಚಾರಣಗಳನ್ನು ನೀವು ಕೈಗೆತ್ತಿಕೊಳ್ಳಬಹುದು. ಪ್ರಯಾಣವನ್ನು ಮತ್ತಷ್ಟು ಸ್ವಾರಸ್ಯಕರವನ್ನಾಗಿಸಿಕೊಳ್ಳುವ ನಿಟ್ಟಿನಲ್ಲಿ ಗುಪ್ತ್ ಕಾಶಿಯಿ೦ದ ನೀವು ಹೆಲಿಕಾಪ್ಟರ್ ಒ೦ದನ್ನು ಆಶ್ರಯಿಸುವುದರ ಮೂಲಕ ಸ೦ಪೂರ್ಣ ನಗರಿಯ ವಿಹ೦ಗಮ ನೋಟಗಳನ್ನು ಆಸ್ವಾದಿಸಬಹುದು.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ