Search
  • Follow NativePlanet
Share
» »ಹಿಂದುಗಳ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದೆನಿಸಿರುವ ತಿರುಪತಿ

ಹಿಂದುಗಳ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದೆನಿಸಿರುವ ತಿರುಪತಿ

ಪೂರ್ವದ ಘಟ್ಟಗಳ ತಪ್ಪಲಿನಲ್ಲಿರುವ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನೆಲೆಸಿರುವ ತಿರುಪತಿ ಪಟ್ಟಣವು ಭಾರತದ ಅತ್ಯಂತ ಶ್ರೀಮಂತ ಪಟ್ಟಣಗಳಲ್ಲೊಂದಾಗಿದೆ. ಇಲ್ಲಿ ನೆಲೆಸಿರುವ ತಿರುಪತಿ ದೇವಾಲಯದಿಂದಾಗಿ ಈ ಪಟ್ಟಣವನ್ನು ಅತ್ಯಂತ ಜನಪ್ರೀಯ ಯಾತ್ರಾಸ್ಥಳ ಹಾಗೂ ಪ್ರವಾಸಿಸ್ಥಳವನ್ನಾಗಿಸಿದೆ. ತಿರುಪತಿ ಪದದ ಅರ್ಥದ ಮೂಲವು ಸ್ಪಷ್ಟವಾಗಿಲ್ಲವಾದರೂ, ಈ ಪದವು "ತಿರು" ಮತ್ತು "ಪತಿ" ಎಂಬ ಎರಡು ಪದಗಳ ಸಮ್ಮಿಲನವಾಗಿದೆ ಎಂದು ವ್ಯಾಪಕವಾಗಿ ನಂಬಲಾಗಿದೆ. ತಮಿಳಿನಲ್ಲಿ ತಿರು ಎಂದರೆ ಗೌರವಾನ್ವಿತವೆಂದಾದರೆ, ಪತಿ ಎಂದರೆ ಗಂಡ. ಹೀಗಾಗಿ, ಪದವು ಅಕ್ಷರಶಃ "ಗೌರವಾನ್ವಿತ ಪತಿ" ಎಂದರ್ಥ. ನಗರದ ಮಧ್ಯಭಾಗಕ್ಕೆ ಸಮೀಪದಲ್ಲಿರುವ ತಿರುಮಲ ಬೆಟ್ಟಗಳು ಪ್ರಪಂಚದ ಅತ್ಯಂತ ಹಳೆಯ ಬಂಡೆ ಪರ್ವತಗಳಲ್ಲಿ ಎರಡನೇ ಸ್ಥಾನದಲ್ಲಿದೆ.

ತಿರುಪತಿ ದೇವಾಲಯವನ್ನು ಯಾರು ನಿರ್ಮಿಸಿದರು ಎಂಬುದಕ್ಕೆ ಸರಿಯಾದ ಪುರಾವೆಗಳಿಲ್ಲ ಆದರೆ ಈ ದೇವಾಲಯವನ್ನು 4 ನೇ ಶತಮಾನದಿಂದಲೂ ಹಲವಾರು ಆಡಳಿತಗಾರರ ಆಳ್ವಿಕೆಗೆ ಒಳಪಟ್ಟಿತ್ತು ಮತ್ತು ನವೀಕರಿಸಲಾಗಿದೆ. ಆದಾಗ್ಯೂ, ದೇವಾಲಯವು 14 ಮತ್ತು 15 ನೇ ಶತಮಾನದಲ್ಲಿ ಮುಸಲ್ಮಾನರ ಆಕ್ರಮಣವನ್ನು ಯಶಸ್ವಿಯಾಗಿ ವಿರೋಧಿಸಿ ದೇವಾಲಯಕ್ಕೆ ಯಾವುದೇ ಧಕ್ಕೆ ಬರದಂತೆ ಕಾಪಾಡಿಕೊಂಡಿದೆ.

1-1527328251-1663067978.jpg -Properties

ತಿರುಪತಿಯು ಬ್ರಿಟೀಷರ ದಾಳಿಯಿಂದಲೂ ಸುರಕ್ಷಿತವಾಗಿ ಉಳಿದಿದೆ ಆದ್ದರಿಂದ ಇದು ಇಂದಿನವರೆಗೂ ಪ್ರಪಂಚದ ಅತ್ಯಂತ ಸಂರಕ್ಷಿತವಾಗಿ ಉಳಿದಿರುವ ದೇವಾಲಯಗಳಲ್ಲೊಂದಾಗಿದೆ. ಮದ್ರಾಸ್ ಶಾಸಕಾಂಗವು 1933 ರಲ್ಲಿ ಕಾಯಿದೆಯನ್ನು ಅಂಗೀಕರಿಸಿತು, ಅದರ ಮೂಲಕ ತಿರುಮಲ ತಿರುಪತಿ ದೇವಸ್ಥಾನಂ ಸಮಿತಿಯು ಮದ್ರಾಸ್ ಸರ್ಕಾರವು ನೇಮಿಸಿದ ಕಮಿಷನರ್ ಮೂಲಕ ತಿರುಮಲ ತಿರುಪತಿ ದೇವಸ್ಥಾನದ ಎಸ್ಟೇಟ್‌ಗಳನ್ನು ನಿರ್ವಹಿಸುವ ಮತ್ತು ನಿಯಂತ್ರಿಸುವ ಅಧಿಕಾರವನ್ನು ನೀಡಿತು. ಅಲ್ಲದೆ, ಧಾರ್ಮಿಕ ವಿಷಯಗಳ ಕುರಿತು ಧಾರ್ಮಿಕ ಸಲಹಾ ಮಂಡಳಿಯು ತಿರುಮಲ ತಿರುಪತಿ ದೇವಸ್ಥಾನಕ್ಕೆ ಸಲಹೆ ನೀಡುತ್ತದೆ. ತಿರುಪತಿ ನಗರವು ಇಂದಿನ ಕೆಟಿ ರಸ್ತೆಯ ಕೊಟ್ಟೂರು ಬಳಿ ಇತ್ತು. ನಂತರ ಅದು ಗೋವಿಂದರಾಜ ಸ್ವಾಮಿ ದೇವಸ್ಥಾನದ ಬಳಿಯ ಪ್ರದೇಶಕ್ಕೆ ಸ್ಥಳಾಂತರಗೊಂಡಿತು. ಇಂದು ನಗರವು ನೆರೆಯ ಪ್ರದೇಶಗಳಿಗೆ ವಿಸ್ತರಿಸಿದೆ.

ತಿರುಪತಿಯಲ್ಲಿ ಅನ್ವೇಷಣೆ ಮಾಡಬಹುದಾದ ಆಕರ್ಷಣೆಗಳು - ತಿರುಪತಿ ಮತ್ತು ಅದರ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳು

ತಿರುಪತಿಯ ಜಗತ್ಪ್ರಸಿದ್ದ ಜನಪ್ರೀಯ ಬಾಲಾಜಿ ಅಥವಾ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ಕೊಡುವುದರ ಜೊತೆಗೆ ಇಲ್ಲಿರುವ ವರಾಹಸ್ವಾಮಿ ದೇವಾಲಯ, ತಿರುಚನೂರ್ ಪದ್ಮಾವತಿದೇವಿ ದೇವಾಲಯ, ಗೋವಿಂದರಾಜ ದೇವಲಯ, ಶ್ರೀನಿವಾಸ ಮಂಗಾಪುರಂ, ಅವನಾಕ್ಷಮ್ಮ ದೇವಾಲಯ, ತಿರುಪತಿ, ಇಸ್ಕಾನ್ ಕೃಷ್ಣ ದೇವಾಲಯ ಇತ್ಯಾದಿ ದೇವಾಲಯಗಳಿಗೂ ಭೇಟಿ ಕೊಡಬಹುದಾಗಿದೆ. ಕಪಿಲ ತೀರ್ಥಂ ಈ ಸ್ಥಳವು ಶಿವದೇವರಿಗೆ ಅರ್ಪಿತವಾಗಿದ್ದು ಇಲ್ಲಿ ಶಿವನನ್ನು ಪೂಜಿಸಲಾಗುತ್ತದೆ. ಗುಡಿಮಲ್ಲಂನ ಪರಶುರಾಮೇಶ್ವರ ದೇವಾಲಯ, ಕೋದಂಡರಾಮ ಸ್ವಾಮಿ ದೇವಾಲಯ ಇತ್ಯಾದಿಗಳೂ ಕೂಡಾ ತಿರುಪತಿಯ ಆಸುಪಾಸಿನಲ್ಲಿದ್ದಾಗ ಭೇಟಿ ಕೊಡಬಹುದಾದಂತಹ ಆಸಕ್ತಿದಾಯಕ ಸ್ಥಳಗಳಾಗಿವೆ.

ಹಲವಾರು ಜಾತಿಯ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ನೆಲೆಯಾಗಿರುವ ಶ್ರೀ ವೆಂಕಟೇಶ್ವರ ಝೂಲಾಜಿಕಲ್ ಪಾರ್ಕ್ ಅನ್ನು ಸಹ ಭೇಟಿ ಮಾಡಬಹುದು. ಸಿಲತೋರಣಂ ರಾಕ್ ಗಾರ್ಡನ್ ಅನ್ನೂ ಸಹ ಭೇಟಿ ನೀಡಬಹುದು. ಇಲ್ಲಿಯ ವಿಶೇಷವಾಗಿ ಪ್ರಸಾದದ ರೂಪದಲ್ಲಿ ನೀಡಲಾಗುವ ಅನ್ನದಿಂದ ತಯರಿಸಲಾದ ಸಿಹಿ ಪೊಂಗಲ್ ಮತ್ತು ಲಡ್ಡುವನ್ನು ಸವಿಯದೆ ಇದ್ದಲ್ಲಿ, ತಿರುಪತಿಗೆ ಭೇಟಿ ನೀಡುವುದು ಅಪೂರ್ಣವೇ ಸರಿ. ಮರದ ಕೆತ್ತನೆಗಳು, ಬಿಳಿಮರದ ಆಟಿಕೆಗಳು, ಕಲಾಂಕಾರಿ ಕಲೆ, ತಂಜೂರಿನ ಚಿನ್ನದ ಎಲೆಗಳ ಚಿತ್ರಕಲೆ ಮತ್ತು ಮುಖ್ಯವಾಗಿ ಚಂದನ ಗೊಂಬೆಗಳನ್ನು ಒಳಗೊಂಡಿರುವ ಸ್ಥಳೀಯ ಕರಕುಶಲ ವಸ್ತುಗಳನ್ನು ಸಹ ಇಲ್ಲಿ ನೋಡುವುದನ್ನು ತಪ್ಪಿಸಿಕೊಳ್ಳಬಾರದು.

photo-92-143353-3-1663067967.jpg -Properties

ಹಬ್ಬಗಳು ಮತ್ತು ಜಾತ್ರೆಗಳ ನಗರ

ತಿರುಪತಿಯು ಕೇವಲ ಧಾರ್ಮಿಕ ಕೇಂದ್ರಗಳನ್ನೊಳಗೊಂಡ ನಗರ ಮಾತ್ರವಲ್ಲದೆ ಇದು ಶ್ರೀಮಂತ ಸಂಸ್ಕ್ರೃತಿಯನ್ನೂ ಒಳಗೊಂಡ ನಗರವಾಗಿದೆ ಆದುದರಿಂದ ಇಲ್ಲಿ ಹಬ್ಬಗಳು ಮತ್ತು ಜಾತ್ರೆಗಳೂ ಸಹ ಅಷ್ಟೇ ಹೆಸರುಗಳಿಸಿವೆ. ಮೇ ತಿಂಗಳಲ್ಲಿ ನಡೆಯುವ ಗಂಗಮ್ಮ ಜಾತ್ರೆಯು ಇಲ್ಲಿಯ ಅತ್ಯಂತ ಜನಪ್ರಿಯ ಹಬ್ಬಗಳಲ್ಲೊಂದಾಗಿದೆ. ಈ ಹಬ್ಬವು ತನ್ನದೇ ಆದ ವಿಭಿನ್ನ ಶೈಲಿಯ ಆಚರಣೆಗೆ ಹೆಸರುವಾಸಿಯಾಗಿದೆ. ಈ ಹಬ್ಬದ ಸಮಯದಲ್ಲಿ ಭಕ್ತರು ತಮ್ಮ ಮುಖವನ್ನು ಮರೆಮಾಚಿಕೊಳ್ಳುತ್ತಾರೆ ಇದರಿಂದ ದುಷ್ಟ ಶಕ್ತಿಗಳು ದೂರವಾಗುತ್ತವೆ ಎಂಬ ನಂಬಿಕೆ ಇದು ಇದಾದ ನಂತರ ಶ್ರೀಗಂಧದ ಲೇಪನವನ್ನು ಮುಖದ ಮೇಲೆ ಲೇಪಿಸಿಕೊಂಡು ಮಲ್ಲಿಗೆಯಿಂದ ಮಾಡಿದ ಹಾರಗಳಿಂದ ತಲೆಯನ್ನು ಮಾರೆಮಾಚಿಕೊಂಡು ದೇವಾಲಯದ ಆವರಣಕ್ಕೆ ಪ್ರವೇಶಿಸುತ್ತಾರೆ. ನಂತರ ದೇವಿಯ ಮಣ್ಣಿನ ವಿಗ್ರಹವನ್ನು ಭಗ್ನಗೊಳಿಸುವುದರೊಂದಿಗೆ ಜಾತ್ರೆಯು ಕೊನೆಗೊಳ್ಳುತ್ತದೆ.

ಈ ಉತ್ಸವದಲ್ಲಿ ಪಾಲ್ಗೊಳ್ಳಲು ದೂರದೂರುಗಳಿಂದ ಭಕ್ತರು ಆಗಮಿಸುತ್ತಾರೆ. ಬ್ರಹ್ಮೋತ್ಸವವು ತಿರುಪತಿಯ ಅತ್ಯಂತ ಪ್ರಸಿದ್ಧ ಮತ್ತು ದೊಡ್ಡ ಹಬ್ಬವಾಗಿದೆ. ದೇವಾಲಯದ ನಗರದ ಇತರ ಪ್ರಸಿದ್ಧ ಉತ್ಸವಗಳೆಂದರೆ ವಿಜಯನಗರ ಉತ್ಸವ, ಚಂದ್ರಗಿರಿ ಕೋಟೆಯಲ್ಲಿ ನಡೆಸುವ ಉತ್ಸವ ಮತ್ತು ರಾಯಲಸೀಮಾ ನೃತ್ಯ ಮತ್ತು ಆಹಾರ ಉತ್ಸವ ಇತ್ಯಾದಿಗಳನ್ನು ಇಲ್ಲಿ ಆಚರಿಸಲಾಗುತ್ತದೆ.

ತಿರುಪತಿಗೆ ಭೇಟಿ ಕೊಡಲು ಉತ್ತಮ ಸಮಯ

ತಿರುಪತಿಗೆ ಭೇಟಿ ಕೊಡಲು ಉತ್ತಮ ಸಮಯವೆಂದರೆ ಚಳಿಗಾಲವಾಗಿದ್ದು, ಅದು ಡಿಸೆಂಬರ್ ತಿಂಗಳಿನಿಂದ ಫೆಬ್ರವರಿವರೆಗೆ.

photo-92-143357-6-1663067957.jpg -Properties

ತಿರುಪತಿಯಲ್ಲಿಯ ಹವಾಮಾನ

ತಿರುಪತಿಯಲ್ಲಿ ಬೇಸಿಗೆಯು ಅತ್ಯಂತ ತಾಪಮಾನದಿಂದ ಕೂಡಿದ್ದು ಅಹಿತವಾಗಿರುತ್ತದೆ ಆದ್ದರಿಂದ ಬೇಸಿಗೆಯಲ್ಲಿ ಇಲ್ಲಿಗೆ ಪ್ರಯಾಣಿಸುವುದು ಅಷ್ಟೊಂದು ಸೂಕ್ತವಲ್ಲ. ಮಳೆಗಾಲವು ಶಾಖದಿಂದ ಮುಕ್ತವಾಗಿರುತ್ತದೆ ಮತ್ತು ಲಘು ಮಾನ್ಸೂನ್ ಸಮಯವು ತಿರುಪತಿಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ತಿರುಪತಿಯು ಪ್ರಧಾನವಾಗಿ ದೇವಾಲಯದ ನಗರವಾಗಿರುವುದರಿಂದ ಮತ್ತು ಪವಿತ್ರವೆಂದು ಪರಿಗಣಿಸಲ್ಪಟ್ಟಿರುವುದರಿಂದ, ಪ್ರಯಾಣಿಕರು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಇಲ್ಲಿಗೆ ಭೇಟಿ ಕೊಡುವವರು ಸಾಂಪ್ರದಾಯಿಕ ಅಥವಾ ಸೂಕ್ತವಾದ ಬಟ್ಟೆಗಳನ್ನು ಧರಿಸಬೇಕು; ಟೋಪಿಗಳು ಅಥವಾ ಟೋಪಿಗಳಂತಹ ಶಿರಸ್ತ್ರಾಣವನ್ನು ಆದಷ್ಟು ತಪ್ಪಿಸಿ. ದೇವರಿಗೆ ಅರ್ಪಿಸಲೆಂದು ಮೀಸಲಾಗಿರುವ ಕೆಲವು ಹೂವುಗಳನ್ನು ಕೂದಲಿನ ಮೇಲೆ ಧರಿಸಬಾರದೆಂದು ಹೇಳಲಾಗುತ್ತದೆ.

ಮಾಂಸಾಹಾರಿ ಆಹಾರ ಮತ್ತು ಮದ್ಯವು ಸುಲಭವಾಗಿ ಲಭ್ಯವಿಲ್ಲ ಮತ್ತು ಅದರ ಸೇವನೆಯನ್ನು ನಿಷೇಧಿಸಲಾಗಿದೆ. ದೇವಾಲಯದ ಆವರಣದಲ್ಲಿ ಫೋನ್ ಮತ್ತು ಕ್ಯಾಮೆರಾಗಳಂತವುಗಳನ್ನೂ ಅನುಮತಿಸುವುದಿಲ್ಲ. ತಿರುಪತಿಯು ಧರ್ಮ ಮತ್ತು ಸಂಸ್ಕೃತಿಯಲ್ಲಿ ಆಸಕ್ತಿ ಹೊಂದಿರುವ ಪ್ರತಿಯೊಬ್ಬ ಭಕ್ತ ಮತ್ತು ಪ್ರವಾಸಿಗನೂ ಖಂಡಿತವಾಗಿಯೂ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ.

ತಿರುಪತಿಯನ್ನು ತಲುಪುವುದು ಹೇಗೆ?

ತಿರುಪತಿಗೆ ಪ್ರಯಾಣವು ಸುಲಭದ್ದಾಗಿದೆ. ತಿರುಪತಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ತಿರುಪತಿಯಿಂದ 15 ಕಿಮೀ ದೂರದಲ್ಲಿರುವ ರೇಣಿಗುಂಟಾ ನಿಲ್ದಾಣವಾಗಿದ್ದು ಇಲ್ಲಿಗೆ ದೆಹಲಿ, ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಿಂದ ನೇರ ವಿಮಾನಗಳಿವೆ. ತಿರುಪತಿಯು ಭಾರತದ ಎಲ್ಲಾ ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿರುವ ರೈಲು ನಿಲ್ದಾಣವನ್ನು ಸಹ ಹೊಂದಿದೆ.

ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು, ಚೆನ್ನೈ, ಬೆಂಗಳೂರು, ವೈಜಾಗ್ ಮತ್ತು

ಹೈದರಾಬಾದ್‌ನಂತಹ ನಗರಗಳಿಂದ ನಿಯಮಿತ ಮಧ್ಯಂತರದಲ್ಲಿ ಲಭ್ಯವಿವೆ. ಬಾಡಿಗೆ ಕಾರುಗಳು ಮತ್ತು ಬಸ್ಸುಗಳು ಸುಲಭವಾಗಿ ಲಭ್ಯವಿರುವುದರಿಂದ ನಗರದೊಳಗೆ ಪ್ರಯಾಣಿಸುವುದು ಸಹ ಸುಲಭವಾಗಿದೆ. ಟ್ಯಾಕ್ಸಿಗಳನ್ನು ಸಾಮಾನ್ಯ ದರದಲ್ಲಿ ಇಡೀ ದಿನಕ್ಕೆ ಬಾಡಿಗೆಗೆ ಪಡೆಯಬಹುದು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+