• Follow NativePlanet
Share
» »ಜಗತ್ ವಿಖ್ಯಾತಿ ತ್ರಿಶ್ಯೂರ್ ಪುರಂ ಉತ್ಸವ ಎಲ್ಲಿ ನಡೆಯುತ್ತದೆ ಗೊತ್ತ?

ಜಗತ್ ವಿಖ್ಯಾತಿ ತ್ರಿಶ್ಯೂರ್ ಪುರಂ ಉತ್ಸವ ಎಲ್ಲಿ ನಡೆಯುತ್ತದೆ ಗೊತ್ತ?

Written By:

ಹಬ್ಬಗಳು ಎಂದರೆ ಎಲ್ಲಿರಿಗೂ ಪ್ರಿಯವಾದುದು. ಅದರಲ್ಲೂ ಅವರವರ ಪ್ರಾಂತ್ಯಕ್ಕೆ ಅವರವರ ಧರ್ಮಕ್ಕೆ ಕೆಲವು ವಿಶೇಷವಾದ ಆಚರಣೆಗಳನ್ನು ಮಾಡುತ್ತಾ ಬರುತ್ತಿರುವುದನ್ನು ನಾವು ಕಾಣಬಹುದಾಗಿದೆ. ಅದರಲ್ಲೂ "ಗಾಡ್ಸ್ ಓನ್ ಕಂಟ್ರಿ" ಎಂದೇ ಖ್ಯಾತಿ ಪಡೆದಿರುವ ರಾಜ್ಯ ಕೇರಳ. ಇಲ್ಲಿ ಕೇರಳದ ಮಲಯಾಳಿಗಳು ಒಂದು ವಿಶೇಷವಾದ ಉತ್ಸವವನ್ನು ಮಾಡುತ್ತಾರೆ. ಅದನ್ನು ಅತಿ ಹೆಚ್ಚು ಸಂಭ್ರಮ-ಸಡಗರದಿಂದ ಆಚರಿಸುತ್ತಾರೆ. ಆ ಉತ್ಸವವನ್ನೇ ತ್ರಿಶ್ಯೂರ್ ಪುರಂ ಉತ್ಸವ ಎಂದು ಕರೆಯುತ್ತಾರೆ.

ಸಾಮಾನ್ಯವಾಗಿ ಕೇರಳದಲ್ಲಿ ನಡೆಯುವ ಉತ್ಸವಗಳಿಗೆ ಪೂರಂ ಎಂದೂ ಕರೆಯುತ್ತಾರೆ. ಈ ತ್ರಿಶ್ಯೂರ್ ಪೂರಂ ಕೇರಳದಲ್ಲಿಯೇ ಆಚರಿಸಲಾಗುವ ಅತ್ಯಂತ ದೊಡ್ಡ ಜಾತ್ರೆಯಾಗಿದೆ. ಈ ಆದ್ಭುತವಾದ ಉತ್ಸವಕ್ಕೆ ಪಾಲ್ಗೋಳ್ಳಲು ಲಕ್ಷಾಂತರ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಾರೆ.

ಈ ಜಾತ್ರೆಯು ಶಿವನಿಗೆ ಮುಡಿಪಾದ ತ್ರಿಶ್ಯೂರಿನ ಪ್ರಸಿದ್ಧ ವಡಕ್ಕುನಾಥನ್ ದೇವಾಲಯದಲ್ಲಿ ನಡೆಯುತ್ತದೆ. ಈ ಉತ್ಸವವು ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಿದೆ ಎಂದರೆ ನೀವು ನಂಬುತ್ತೀರಾ? ಹಾಗಾದರೆ ಲೇಖನದ ಮೂಲಕ ಸುಂದರವಾದ ಈ ಉತ್ಸವದ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತಿಳಿಯೋಣ.

ತ್ರಿಶ್ಯೂರ್ ಪುರಂ ಉತ್ಸವ

ತ್ರಿಶ್ಯೂರ್ ಪುರಂ ಉತ್ಸವ

ಈ ಉತ್ಸವದ ಹಿನ್ನೆಲೆ ಅತ್ಯಂತ ರೋಚಕವಾಗಿದೆ. ಅದೇನೆಂದರೆ ಹಿಂದೆ ಅರಟ್ಟಪುಳ ಪುರಂ ಎಂಬ ಉತ್ಸವವು ಕೇರಳದಲ್ಲಿ ನಡೆಯುತ್ತಿತ್ತು. ಈ ಉತ್ಸವವೇ ಕೇರಳದ ಅತಿ ದೊಡ್ಡದಾದ ಉತ್ಸವವಾಗಿತ್ತು. ಈ ದೇವಾಲಯಕ್ಕೆ ಇತರೆ ದೇವಾಲಯಗಳ ಜೊತೆ ಜೊತೆಗೆ ತ್ರಿಶ್ಯೂರ್‍ನಲ್ಲಿರುವ ಎಲ್ಲಾ ದೇವಾಲಯಗಳು ಕೂಡ ಭಾಗವಹಿಸುತ್ತಿದ್ದವು.

PC:Manojk

ತ್ರಿಶ್ಯೂರ್ ಪುರಂ ಉತ್ಸವ

ತ್ರಿಶ್ಯೂರ್ ಪುರಂ ಉತ್ಸವ

ಈ ಉತ್ಸವದ ಪ್ರಕಾರ ಎಲ್ಲಾ ದೇವಾಲಯದಲ್ಲಿನ ಮೂಲ ವಿಗ್ರಹವನ್ನು ಈ ಅರಟ್ಟಪುಳ ಉತ್ಸವಕ್ಕೆ ತರುವುದೇ ಆಗಿರುತ್ತದೆ. ಒಮ್ಮೆ ಆ ಉತ್ಸವಕ್ಕೆ ಭಾಗಿಯಾಗಲು ತೆರಳುತ್ತಿರುವ ವಿಗ್ರಹಗಳು ಅಪಾರ ಪ್ರಮಾಣದ ಮಳೆ, ಗಾಳಿಯಿಂದಾಗಿ ಉತ್ಸವಕ್ಕೆ ತಲುಪಲು ಸ್ವಲ್ಪ ತಡವಾಯಿತು.

PC:Rameshng

ತ್ರಿಶ್ಯೂರ್ ಪುರಂ ಉತ್ಸವ

ತ್ರಿಶ್ಯೂರ್ ಪುರಂ ಉತ್ಸವ

ಇದರಿಂದ ಕೋಪಗೊಂಡ ಅರಟ್ಟಪುಳ ಉತ್ಸವ ಮಂಡಳಿಯು ತ್ರಿಶ್ಯೂರಿ ದೇವಾಲಯಗಳಿಗೆ ಭಾಗವಹಿಸಲು ನಿರಾಕರಿಸಿದರು. ಇದರಿಂದ ಬೇಸರಗೊಂಡ ತ್ರಿಶ್ಯೂರ್ ದೇವಾಲಯದವರು ಕೊಚ್ಚಿಯ ಮಹಾರಾಜನಾದ ರಾಜ ರಾಮ ವರ್ಮನಿಗೆ ದೂರು ಹೇಳಿದರು.

PC:Rameshng

ತ್ರಿಶ್ಯೂರ್ ಪುರಂ ಉತ್ಸವ

ತ್ರಿಶ್ಯೂರ್ ಪುರಂ ಉತ್ಸವ

ಇದರಿಂದ ಬೇಸರ ವ್ಯಕ್ತ ಪಡಿಸಿದ ರಾಜ ತ್ರಿಶ್ಯೂರ್ ಉತ್ಸವವನ್ನು ತ್ರಿಶ್ಯೂರಿನ ವಡಕ್ಕುನಾಥನ್ ದೇವಾಲಯದಲ್ಲಿ ಪ್ರಾರಂಭಿಸಿದನು. ಹೀಗಾಗಿ ಅಂದಿನಿಂದ ಈ ದೇವಾಲಯದ ಉತ್ಸವಕ್ಕೆ ಹಲವಾರು ದೇವಾಲಯಗಳ ಮೂಲ ವಿರಾಟರು ಪಾಲ್ಗೋಳ್ಳುತ್ತಾರೆ.

PC:Manojk

ತ್ರಿಶ್ಯೂರ್ ಪುರಂ ಉತ್ಸವ

ತ್ರಿಶ್ಯೂರ್ ಪುರಂ ಉತ್ಸವ

ಈ ಉತ್ಸವವನ್ನು 2 ವಿಭಾಗಗಳಾಗಿ ವಿಂಗಂಡಿಸಲಾಗಿದೆ. ಒಂದು ಪರಮೇಕಾವು ಭಾಗ ಇನ್ನೊಂದು ತಿರುವಂಬಾಡಿ ಭಾಗ ಎಂದು ಕರೆಯುತ್ತಾರೆ.

PC:Challiyan

ತ್ರಿಶ್ಯೂರ್ ಪುರಂ ಉತ್ಸವ

ತ್ರಿಶ್ಯೂರ್ ಪುರಂ ಉತ್ಸವ

ಈ ಉತ್ಸವದ ಮುಖ್ಯ ಉದ್ದೇಶ ಎಲ್ಲಾ ದೇವರು ಹಾಗು ದೇವತೆಯರ ಬೃಹತ್ ಮೆರವಣಿಗೆಯ ಮೂಲಕ ತ್ರಿಶ್ಯೂರಿನ ವಡಕ್ಕುನಾಥನ್ ದೇವಾಲಯವನ್ನು ದರ್ಶಿಸಿ ಶಿವನಿಗೆ ಗೌರವ ವಂದನೆಯನ್ನು ಸಲ್ಲಿಸುವುದೇ ಆಗಿದೆ. ಇಲ್ಲಿನ ಆನೆಗಳ ವೈಭವ ಕಾಣಲು 2 ಕಣ್ಣು ಸಾಲದು.

PC:Manojk

ತ್ರಿಶ್ಯೂರ್ ಪುರಂ ಉತ್ಸವ

ತ್ರಿಶ್ಯೂರ್ ಪುರಂ ಉತ್ಸವ

ಇಲ್ಲಿ 7 ದಿನಗಳ ಮುಂಚೆಯೇ ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಇಲ್ಲಿ ಮೊದಲು ಕೊಡೆಯಟ್ಟಂ ಅಂದರೆ ಪೂರಂ ಉತ್ಸವದ ಸಂಕೇತವಾದ ಧ್ವಜವನ್ನು ಹಾರಿಸುವುದರ ಮೂಲಕ ತಿಳಿಸಲಾಗುತ್ತದೆ.

PC:Manojk

ತ್ರಿಶ್ಯೂರ್ ಪುರಂ ಉತ್ಸವ

ತ್ರಿಶ್ಯೂರ್ ಪುರಂ ಉತ್ಸವ

ಧ್ವಜರೋಹಣದ 4 ನೇ ದಿನದಂದು ವೆಡಿಕೆಟ್ಟುವನ್ನು ಆಚರಿಸಲಾಗುತ್ತದೆ. ವೆರಿಕೆಟ್ಟು ಎಂದರೆ ಪಟಾಕಿ, ಸಿಡಿ ಮದ್ದುಗಳನ್ನು ಪ್ರದರ್ಶನವೇ ಆಗಿದೆ. ಇದೊಂದು ದೊಡ್ಡ ಪ್ರದರ್ಶನವೇ ಸರಿ.

PC:Manojk

ತ್ರಿಶ್ಯೂರ್ ಪುರಂ ಉತ್ಸವ

ತ್ರಿಶ್ಯೂರ್ ಪುರಂ ಉತ್ಸವ

ಇದಾದ 5 ನೇ ದಿನದಂದು ಆನೆಗಳ ಪ್ರದರ್ಶನವಿರುತ್ತದೆ. ಅದು ಹೇಗೆ ಎಂದರೆ ಆನೆಗಳಿಗೆ ಹೊದಿಸಲಾಗುವ ಶೃಂಗಾರದ ಧರಿಸುಗಳು, ಅಲಂಕರಿಕ ವಸ್ತುಗಳು, ಒಡವೆಗಳು, ನವಿಲುಗರಿಗಳಿಂದ ಶೃಂಗಾರಗೊಂಡ ನವ ವಧು-ವರರಂತೆ ಕಾಣುವ ಅದ್ಭುತವಾದ ಆನೆಗಳ ರಾಜ ವೈಭವವನ್ನು ಕಣ್ಣುತುಂಬಿಕೊಳ್ಳಬಹುದಾಗಿದೆ.

PC:Manojk

ತ್ರಿಶ್ಯೂರ್ ಪುರಂ ಉತ್ಸವ

ತ್ರಿಶ್ಯೂರ್ ಪುರಂ ಉತ್ಸವ

ಉತ್ಸವದ ದಿನದಂದು ತಿರುವಂಬಾಡಿ ದೇವಾಲಯಕ್ಕೆ ತೆರಳಿ ಗರ್ಭಗುಡಿಯಲ್ಲಿ ನೆಲೆಸಿರುವ ಪರಮಶಿವನನ್ನು ದರ್ಶನ ಮಾಡಿ ದೇವಾಲಯದ ಅವರಣದಲ್ಲಿ ಬಂದು ಸೇರುತ್ತಾರೆ. ನಂತರ ವಾದ್ಯಗಳನ್ನು ನುಡಿಸಿ ವಿಜೃಂಬಣೆಯಿಂದ ಹಬ್ಬವನ್ನು ಆಚರಿಸುತ್ತಾರೆ.

PC:Manojk

ತ್ರಿಶ್ಯೂರ್ ಪುರಂ ಉತ್ಸವ

ತ್ರಿಶ್ಯೂರ್ ಪುರಂ ಉತ್ಸವ

ಈ ಸುಂದರವಾದ ದೃಶ್ಯವನ್ನು ಕಾಣಲು ದೇಶದ ಮೂಲೆ, ಮೂಲೆಗಳಿಂದ ಈ ಉತ್ಸವಕ್ಕೆ ಬಂದು ಸೇರುತ್ತಾರೆ. ಇಲ್ಲಿ ನುಡಿಸುವ ವೈವಿಧ್ಯಮಯವಾದ ವಾದ್ಯಗಳು ನಮ್ಮ ಮನವನ್ನು ಪುಳಕಿತಗೊಳಿಸುತ್ತದೆ.

PC:Manojk

ತ್ರಿಶ್ಯೂರ್ ಪುರಂ ಉತ್ಸವ

ತ್ರಿಶ್ಯೂರ್ ಪುರಂ ಉತ್ಸವ

ಆಶ್ಚರ್ಯ ಏನೆಂದರೆ ಈ ದೇವಾಲಯದಲ್ಲಿ ಯಾವುದೇ ಜಾತಿ, ಧರ್ಮದ ಬೇಧ-ಭಾವವನ್ನು ಮಾಡುವುದಿಲ್ಲ. ಬೇಕಾದ ಮಂಟಪವನ್ನು ಇಲ್ಲಿ ಮುಸ್ಲಿಂ ಸಮುದಾಯಕರು ವ್ಯವಸ್ಥೆ ಮಾಡಿದರೆ, ಕೊಡೆಗಳ ವೈವಿಧ್ಯಮಯವಾದ ಅಲಂಕಾರಕ್ಕಾಗಿ ಚರ್ಚ್‍ಗಳಿಂದ ಪಡೆಯಲಾಗುತ್ತದೆ.

PC:Manojk

ತ್ರಿಶ್ಯೂರ್ ಪುರಂ ಉತ್ಸವ

ತ್ರಿಶ್ಯೂರ್ ಪುರಂ ಉತ್ಸವ

ಒಟ್ಟಾರೆ ಪಟಾಕಿ ಪ್ರದರ್ಶನ ಈ ಉತ್ಸವದ ಸಂದರ್ಭದಲ್ಲಿ 4 ಬಾರಿಯಾದರೂ ನಸುಕಿನಲ್ಲಿ ನಡೆಯುವ ಆಕರ್ಷಕ ಪ್ರರ್ದನವಾಗಿದೆ. ಇದು ಒಂದು ಗಂಟೆಯ ಕಾಲ ನಡೆಯುತ್ತದೆ.

PC:Rameshng


ತ್ರಿಶ್ಯೂರ್ ಪುರಂ ಉತ್ಸವ

ತ್ರಿಶ್ಯೂರ್ ಪುರಂ ಉತ್ಸವ

ಏಳನೆ ದಿನ ಪೂರಂ ಉತ್ಸವದ ಸಮಾಪ್ತಿ ದಿನವಾಗಿದ್ದು, ಕೊನೆಯ ಬಾರಿಗೆ ಸ್ವರಾಜ್‍ನಲ್ಲಿ ಉತ್ಸವವನ್ನು ಹೃದಯಪೂರ್ವಕವಾಗಿ ಬೀಳ್ಗೊಡಲು ಜನರು ಜಮಾಯಿಸುತ್ತಾರೆ.

PC:Manojk

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more