Search
  • Follow NativePlanet
Share
» »ಮದುವೆ ಹಾಗು ವಿಚ್ಛೇದನ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಒದಗಿಸುವ ದೇವಾಲಯವಿದು...

ಮದುವೆ ಹಾಗು ವಿಚ್ಛೇದನ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಒದಗಿಸುವ ದೇವಾಲಯವಿದು...

ವಿವಾಹ ಎನ್ನವುದು ಪ್ರತಿಯೊಬ್ಬರ ಜೀವನದಲ್ಲಿಯೂ ಆಗತ್ಯವಾದುದು. ಆದರೆ ಕೆಲವು ವಿವಾಹಗಳು ಸಣ್ಣ-ಪುಟ್ಟ ವಿಷಯಗಳಿಗೆ ತಕರಾರು ಮಾಡಿಕೊಂಡು ಪವಿತ್ರವಾ ಬಂಧ ಎಂದು ಕರೆಯುವ ಮದುವೆ ಮೂರು ಗಂಟನ್ನು ಕೇವಲ ಒಂದು ಸಹಿಯ ಮೂಲಕ ಕೈತೊಳೆದುಕೊಳ್ಳುವ ಹಾಗೆ ಮಾರ್ಪ

ವಿವಾಹ ಎನ್ನವುದು ಪ್ರತಿಯೊಬ್ಬರ ಜೀವನದಲ್ಲಿಯೂ ಆಗತ್ಯವಾದುದು. ಆದರೆ ಕೆಲವು ವಿವಾಹಗಳು ಸಣ್ಣ-ಪುಟ್ಟ ವಿಷಯಗಳಿಗೆ ತಕರಾರು ಮಾಡಿಕೊಂಡು ಪವಿತ್ರವಾ ಬಂಧ ಎಂದು ಕರೆಯುವ ಮದುವೆ ಮೂರು ಗಂಟನ್ನು ಕೇವಲ ಒಂದು ಸಹಿಯ ಮೂಲಕ ಕೈತೊಳೆದುಕೊಳ್ಳುವ ಹಾಗೆ ಮಾರ್ಪಾಟಾಗಿದೆ. ಗಂಡು ಹೆಣ್ಣು ಎಂದಾಗ ಸಮಾನವಾದ ಮನಸ್ಥಿತಿಯಿಂದ ಜೀವನ ಸಾಗಿಸದರೆ ಮಾತ್ರ ಭಾಂದವ್ಯ ವೃದ್ಧಿಯಾಗುತ್ತದೆ. ಇಲ್ಲದೇ ಹೋದರೆ ಆ ಸಂಬಂಧ ನಶಿಸುತ್ತದೆ.

ಅದೆನೇ ಇರಲಿ ಜೀವನ ಎಂಬುದು ದೊಡ್ಡದು, ಆ ಜೀವನವು ನಿತ್ಯವು ಸುಖ-ಶಾಂತಿ-ನೆಮ್ಮದಿಯಿಂದ ಇದ್ದರೆ ಜೀವನದಲ್ಲಿ ಮತ್ತೇನೂ ಮಾನವನಿಗೆ ಅಗತ್ಯವಿರುವುದಿಲ್ಲ. ನಾನು ಹೇಳಲು ಬಯಸಿರುವ ಈ ದೇವಾಲಯವು ಅತ್ಯಂತ ಮಹಿಮಾನ್ವತವಾದ ದೇವಾಲಯವಾಗಿದೆ. ಈ ದೇವಾಲಯದಲ್ಲಿ ದೇವತೆಗಳಿಗೆ ದರ್ಶನ ಭಾಗ್ಯ ಪಡೆದರೆ ಸಕಲ ಸಮಸ್ಯೆಗಳು ತೊಲಗಿ, ವಿವಾಹದಲ್ಲಿ ಆಗುತ್ತಿರುವ ವಿಚ್ಛೇಧನ ಸಮಸ್ಯೆಗಳು ದೂರವಾಗಿ ಗಂಡ -ಹೆಂಡತಿ ಸುಖವಾಗಿ ಸಂಸಾರ ಮಾಡುತ್ತಾರೆ. ಇದಕ್ಕೆ ಹಲವರು ನಿರ್ದಶನಗಳಿವೆ.

ಹಾಗಾದರೆ ಆ ದೇವಾಲಯ ಯಾವುದು? ಅದು ಎಲ್ಲಿದೆ? ಆ ದೇವಾಲಯದ ಸ್ಥಳ ಪುರಾಣವೇನು? ಎಂಬ ಹಲವಾರು ಪ್ರೆಶ್ನೆಗೆ ಉತ್ತರ ಲೇಖನದ ಮೂಲಕ ತಿಳಿದುಕೊಳ್ಳಿ.

ಮದುವೆ ಹಾಗು ವಿಚ್ಛೇದನ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಒದಗಿಸುವ ದೇವಾಲಯವಿದು...

ಮದುವೆ ಹಾಗು ವಿಚ್ಛೇದನ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಒದಗಿಸುವ ದೇವಾಲಯವಿದು...

ಭಾಂದವ್ಯ ವೃದ್ಧಿಗೆ ಸೂಕ್ತವಾದ ಹಾಗು ಶಕ್ತಿವಂತ ದೇವಾಲಯವೆಂದರೆ ಅದು ತಿರುಮಾನಂಚೇರಿ ದೇವಾಲಯವಾಗಿದೆ. ಈ ದೇವಾಲಯಕ್ಕೆ ಹಲವಾರು ಸ್ಥಳಗಳಿಂದ ಬಂದು ದೇವತೆಗಳ ಆಶೀರ್ವಾದವನ್ನು ಪಡೆಯಲು ಬರುತ್ತಾರೆ.

ಮದುವೆ ಹಾಗು ವಿಚ್ಛೇದನ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಒದಗಿಸುವ ದೇವಾಲಯವಿದು...

ಮದುವೆ ಹಾಗು ವಿಚ್ಛೇದನ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಒದಗಿಸುವ ದೇವಾಲಯವಿದು...

ಈ ದೇವಾಲಯವು ನಾಗಪಟ್ಟಿಣಂ ಎಂಬ ಜಿಲ್ಲೆಯಲ್ಲಿದ್ದು, ಕಾವೇರಿ ನದಿಯ ಮೇಲೆ ಈ ದೇವಾಲಯವಿದೆ. ಇಲ್ಲಿ ಮಹಾಶಿವನು ನೆಲೆಸಿದ್ದಾನೆ. ಇಲ್ಲಿಯೇ ಆ ಮಹಾಶಿವನು ಪಾರ್ವತಿ ದೇವಿಯನ್ನು ವಿವಾಹವಾದನು ಎಂದು ನಂಬಲಾಗಿದೆ. ಹಾಗಾಗಿಯೇ ಅವರೇ ಇಲ್ಲಿ ಉತ್ತಮವಾದ ಭಾಂದವ್ಯ ವೃದ್ಧಿಗೆ ಆಶೀರ್ವಾದ ನೀಡುತ್ತಾರೆ ಎನ್ನಲಾಗಿದೆ.

ಮದುವೆ ಹಾಗು ವಿಚ್ಛೇದನ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಒದಗಿಸುವ ದೇವಾಲಯವಿದು...

ಮದುವೆ ಹಾಗು ವಿಚ್ಛೇದನ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಒದಗಿಸುವ ದೇವಾಲಯವಿದು...

ವಿವಾಹದ ಸಂಬಂಧದಿಂದ ಬೆಸತ್ತು ವಿವಾಹ ವಿಚ್ಛೇಧನವನ್ನು ಪಡೆಯಬೇಕು ಎಂದು ಅಂದುಕೊಂಡಿರುವವರು, ಈ ದೇವಾಲಯಕ್ಕೆ ಬಂದರೆ ಅವರ ಸಂಬಂಧ ಉತ್ತಮವಾಗಿ ಮಾರ್ಪಾಟಾಗಿ ಸುಖ ಸಂಸಾರವನ್ನು ನಡೆಸುತ್ತಾರೆ ಎಂಬ ಪ್ರತೀತಿ ಇದೆ.

ಮದುವೆ ಹಾಗು ವಿಚ್ಛೇದನ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಒದಗಿಸುವ ದೇವಾಲಯವಿದು...

ಮದುವೆ ಹಾಗು ವಿಚ್ಛೇದನ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಒದಗಿಸುವ ದೇವಾಲಯವಿದು...

ಈ ದೇವಾಲಯಕ್ಕೆ ಬಂದವರು ಹಲವರ ಸಂಸಾರಗಳು ಒಳ್ಳೆಯದಾಗಿದೆಯಂತೆ. ಅನುಮಾನವಿದ್ದರೆ ಒಮ್ಮೆ ಭೇಟಿ ನೀಡಿ ಬನ್ನಿ. ಏಕೆಂದರೆ ಶಿವಪಾರ್ವತಿ ಇಬ್ಬರು ಪ್ರೇಮ ವಿವಾಹವಾದ್ದರಿಂದ ಅವರ ಭಾಂದವ್ಯ ದೇವತೆಗಳಲ್ಲಿಯೇ ಅತ್ಯಂತ ಉತ್ತಮವಾದು ಎಂದೇ ಹೇಳಬಹುದು.

ಮದುವೆ ಹಾಗು ವಿಚ್ಛೇದನ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಒದಗಿಸುವ ದೇವಾಲಯವಿದು...

ಮದುವೆ ಹಾಗು ವಿಚ್ಛೇದನ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಒದಗಿಸುವ ದೇವಾಲಯವಿದು...

ಪ್ರೀತಿ, ಪ್ರೇಮ ಎಂದರೆ ಮೊದಲಿಗೆ ನೆನಪಾಗುವುದೇ ಶಿವಪಾರ್ವತಿ ಹಾಗು ಶ್ರೀ ಕೃಷ್ಣ. ಈ ದೇವಾಲಯಕ್ಕೆ ಭೇಟಿ ನೀಡುವ ಹಲವಾರು ಭಕ್ತರು ವಿಶೇಷವಾದ ಪೂಜೆಗಳನ್ನು ಮಾಡಿಸುತ್ತಾರೆ. ಇದರಿಂದಾಗಿ ತಮಗೆ ಉತ್ತಮವಾದ ವಧು ಅಥವಾ ವರ ದೊರಕಲಿ ಎಂದೇ ಆಗಿದೆ.

ಮದುವೆ ಹಾಗು ವಿಚ್ಛೇದನ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಒದಗಿಸುವ ದೇವಾಲಯವಿದು...

ಮದುವೆ ಹಾಗು ವಿಚ್ಛೇದನ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಒದಗಿಸುವ ದೇವಾಲಯವಿದು...

ವಿವಾಹವಾದ ನಂತರ ನವ ವಧು-ವರರು ಈ ದೇವಾಲಯಕ್ಕೆ ಭೇಟಿ ನೀಡಿ, ಕಾಣಿಕೆಯನ್ನು ಅರ್ಪಣೆ ಮಾಡಿ ನಮಿಸುತ್ತಾರೆ. ಈ ಶಿವಾಲಯವು ಅತ್ಯಂತ ಮಹಿಮಾನ್ವಿತವಾದ ದೇವಾಲಯಗಳಲ್ಲಿ ಒಂದಾಗಿದೆ. ಈ ಕ್ಷೇತ್ರವನ್ನು ತಿರುವನ್‍ಚೇರಿ ಉಗವಂಗತರ್ ದೇವಾಲಯ ಎಂದೂ ಕೂಡ ಕರೆಯುತ್ತಾರೆ.

ಮದುವೆ ಹಾಗು ವಿಚ್ಛೇದನ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಒದಗಿಸುವ ದೇವಾಲಯವಿದು...

ಮದುವೆ ಹಾಗು ವಿಚ್ಛೇದನ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಒದಗಿಸುವ ದೇವಾಲಯವಿದು...

ಈ ದೇವಾಲಯದ ಸಮೀಪ ಹಲವಾರು ಸುಂದರವಾದ ದೇವಾಲಯಗಳು ಇವೆ. ಈ ಶಕ್ತಿವಂತ ದೇವಾಲಯವು ಬೆಳಗ್ಗೆ 7:30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗು ಮಧ್ಯಾಹ್ನ 3:30 ರಿಂದ ರಾತ್ರಿ 8 ಗಂಟೆಯವರೆಗೆ ಈ ದೇವಾಲಯಕ್ಕೆ ಪ್ರವೇಶವನ್ನು ಭಕ್ತರು ಮಾಡಬಹುದು.

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ತಿರುಮಾಂನ್‍ಚೇರಿ ಕುತಲಮ್ ಹತ್ತಿರವಿರುವ ಮೈಲಾಡುತುರೈ ತಾಲ್ಲೂಕಿನ ನಾಗಿ ಎಂಬ ಜಿಲ್ಲೆಯಲ್ಲಿದೆ. ಇದು ಕುಂಭಕೋಣಂ ಮತ್ತು ಮೈಲಾಡುತುರೈಗೆ ಸಮೀಪದಲ್ಲಿದೆ.

ರೈಲು ಮಾರ್ಗದ ಮೂಲಕ:ಈ ದೇವಾಲಯಕ್ಕೆ ತೆರಳಲು ಸಮೀಪವಾದ ರೈಲ್ವೆ ನಿಲ್ದಾಣವೆಂದರೆ ಅದು ಕುಂಭಕೋಣಂ ಮತ್ತು ಮೈಲಾಡುತುರೈ ಆಗಿದೆ.

ರಸ್ತೆ ಮಾರ್ಗದ ಮೂಲಕ: ಚೆನ್ನೈನಿಂದ-ಪಾಂಡಿಚೇರಿ-ಕಡಲೂರು-ಚಿದಂಬರಂ-ಮೈಲಾಡುತುರೈ-ಕುಟ್ಟಲಂ-ತಿರುಮನ್‍ಚೇರಿ ಈ ಮಾರ್ಗದ ಮೂಖಾಂತರ ಸುಲಭವಾಗಿ ಈ ಮಾಹಿಮಾನ್ವತವಾದ ದೇವಾಲಯಕ್ಕೆ ತೆರಳಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X